Skip to main content

Blog number 3339.. ಹಾವು ಗೊಲ್ಲರ ಕತ್ತೆ ಪುರಾಣ

#ಹಾವುಗೊಲ್ಲರು

ನನ್ನ_ಹಾವುಗೊಲ್ಲರ_ಪುರಾಣ_ಎಂಬ_ಕಥೆಯ_ಕಥಾನಾಯಕ_ಕೃಷ್ಣಪ್ಪ​.

......ಅದಕ್ಕೆ ಅವರೆಲ್ಲರ ಸಮರ್ಥನೆ ಏನೆಂದರೆ ಬೇರೆ ಕತ್ತೆ ಆಗಿದ್ದರೆ ಅದು ರಾಮಸ್ವಾಮಿಗೆ ಹೊಟ್ಟೆ ಸವರಲು ಯಾವ ಕಾರಣಕ್ಕೂ ಬಿಡುತ್ತಿರಲಿಲ್ಲ ಲಾತಾ ಕೊಟ್ಟು ರಾಮಸ್ವಾಮಿ ಹಲ್ಲು ಉದುರಿಸುತ್ತಿತ್ತು ಅಂದರು....

.....ಒಂದೆರೆಡು ದಿನದಲ್ಲಿ ಈ ಕತ್ತೆಯ ಅಸಲಿ ಮಾಲಿಕ ಬಂದು "ಸ್ವಾಮಿ ನನ್ನ ಕತ್ತೆ ರಾಮಸ್ವಾಮಿ ಕಟ್ಟಿಹಾಕಿದ್ದಾನೆ " ಅಂತ ದೂರಿದಾಗಲೇ  ನಾನು ಸಾಧ್ಯನೇ ಇಲ್ಲ ಅದು ನನ್ನ ಕತ್ತೆ ಅಂದೆ.." "ಸ್ವಾಮಿ ನಿನ್ನ ಕತ್ತೆ ತಿರುಗಲು ಹೋಗಿದ್ದು ವಾಪಾಸ್ ರಾಮ ಸ್ವಾಮಿ ಮನೇಗೆ ನಿನ್ನೆ ಬಂದಿದೆ ಅಲ್ಲಿ ಎರಡು ಕತ್ತೆ ಇದೆ" ಅಂದಾಗ ನಿಜಕ್ಕೂ ನನಗೆ ಗಾಭರಿ ಆಯಿತು....

....ಅವತ್ತು ರಾಮಸ್ವಾಮಿ ನಮ್ಮದಲ್ಲದ ಬೇರೆ ಕತ್ತೆ ಹೊಟ್ಟೆ ಒಳಗೆಲ್ಲ ಸವರಿನೂ ಹಲ್ಲು ಮುರಿಸಿಕೊಂಡಿಲ್ಲಲ್ಲ ಅಂತ !?....


#snakerescue #snakes #election #shiravanthe #halugudde #ripponpet #hosanagara #sagar #shivamogga #congressgovernment #nagaprathishte #nagaradane #Anandapuram #hebbodi #bilalibilli #SmallStories 

   ಸುಮಾರು ವರ್ಷದ ನಂತರ ರಿಪ್ಪನ್ ಪೇಟೆ ಸಮೀಪದ ಹಾಲುಗುಡ್ಡೆ ಹಾವುಗೊಲ್ಲರ ಕ್ಯಾಂಪಿನ ಕೃಷ್ಣಪ್ಪ ಅವತ್ತು ಸಿಕ್ಕಿದ್ದು ಇಬ್ಬರಿಗೂ ಸಂತೋಷ ಆಯಿತು.

  1990ರ ದಶಕದ ತನಕ ಇವರೆಲ್ಲರದ್ದು ಅಲೆಮಾರಿ ಜೀವನ, ಹೊಟ್ಟೆಪಾಡಿಗೆ ಹಾವು ಹಿಡಿಯುವುದು, ಹಾವು ಆಡಿಸಿ ಬಿಕ್ಷೆ ಬೇಡುವುದು ಇವರ ನಿತ್ಯ ಕಾಯಕ ಆಗಿತ್ತು.
  
   ಒಂದೂರಿಂದ ಇನ್ನೊಂದು ಊರಿಗೆ ಇವರ ಕ್ಯಾಂಪ್ ಹೋಗಲು ಕತ್ತೆಗಳೇ ಇವರಿಗೆ ವಾಹನ, ಹೆಚ್ಚು ಕತ್ತೆ ಹೊಂದಿದವ ಶ್ರೀಮಂತ ಅಂತ ನಂಬಿಕೆಯು ಇವರಲ್ಲಿ ಇತ್ತು.

 ಇವರನ್ನೆಲ್ಲ ಕಾಗೋಡು ತಿಮ್ಮಪ್ಪನವರು ಮಂತ್ರಿಗಳಾಗಿದ್ದಾಗ  ಹೊಸನಗರ ತಾಲ್ಲೂಕಿನ ಹಾಲುಗುಡ್ಡೆ ಮತ್ತು ಸಾಗರ ತಾಲ್ಲೂಕಿನ ಶಿರವಂತೆ ಎಂಬ ಊರುಗಳಲ್ಲಿ ಇವರಿಗೆ ಜಾಗ ನೀಡಿ ಮನೆ ಮಾಡಿಸಿದ್ದರಿಂದ ಈಗ ಇವರ ಜೀವನ ಶೈಲಿ ಬದಲಾಗುತ್ತಿದೆ.

  ಹಾವು ಹಿಡಿಯುವುದು ಇವರೆಲ್ಲ ಈಗ  ಬಿಟ್ಟಿದ್ದಾರೆ (ಕೆಲವೇ ಕೆಲವರು ಮಾತ್ರ ಮುಂದುವರಿಸಿದ್ದಾರೆ) ಹಾವು ನೋಡಿದರೆ ಇವರ ಈಗಿನ ಕಾಲದ ಮಕ್ಕಳು ಹೆದರಿ ಓಡುತ್ತಾರೆ ಅಂತ ಕೃಷ್ಣಪ್ಪ ಹೇಳುತ್ತಿದ್ದ.

     ಇನ್ನೊಂದು ಆಶ್ಚಯ೯ ಅಂದರೆ ಈಗ ಇವರ ಕ್ಯಾಂಪಿನಲ್ಲಿ ನಾಗ ದೇವರ ಪ್ರತಿಷ್ಠಾಪನೆ ಮಾಡಿಸಿದ್ದಾರಂತೆ ತಲೆತಲಾಂತರದಿಂದ ಹಾವು ಗೊಲ್ಲರಿಗೆ ಬಂದಿಯವ ನಾಗ ಶಾಪ ಕಳೆದು ಕೊಳ್ಳಲಿಕ್ಕಾಗಿ!?.

   ಕೃಷ್ಣಪ್ಪ ಮತ್ತು ಇವನ ಬಾವನೆಂಟ ವೆಂಕಟೇಶ ನನಗೆ ಒತ್ತಾಯ ಮಾಡಿ ಒಂದು ಕತ್ತೆ ಮಾರಿದ್ದರು (ಅವರಿಗೆ ಹಣಕಾಸಿನ ತುರ್ತು ಇದ್ದಿರ ಬೇಕು) ಅದನ್ನ ನಮ್ಮ ಜಮೀನಿನಲ್ಲಿ ಸಾಕಲು ಕಳಿಸಿದೆ.

    ಅದೇ ದಿನ ಸಂಜೆಯೇ ಅಲ್ಲಿನ ಉಸ್ತುವಾರಿ ತಂಗಚ್ಚನ್ ಕುಟುಂಬ ಕುಂಟು ನೆಪ ಹೇಳಿ ಕೆಲಸ ಬಿಟ್ಟು ಹೋಗಿದ್ದ.
  
   ಅವನಿಗೆ ಅವನು ಆರಾದಿಸುವ ಅವರ ದೇವರು ಏಸು ಕ್ರಿಸ್ತ ಮತ್ತು ಕತ್ತೆ ಕಥೆ ಹೇಳಿದರೂ ನನ್ನ ಮಾತು ಕೇಳಲಿಲ್ಲ.

   ಕತ್ತೆ ಇರುವ ಜಾಗದಲ್ಲಿ ತಾನು ತನ್ನ ಕುಟುಂಬ ಇರಲು ಸಾಧ್ಯವೇ ಇಲ್ಲ ಇದು ಅವರ ಕುಟುಂಬದ ರಿವಾಜು ಅಂತ ಕೆಲಸ ಬಿಟ್ಟು ನಾಪತ್ತೆ ಆದ ಇದಕ್ಕೆ ಅವನು ನನ್ನಿಂದ ಹೆಚ್ಚು ಅಡ್ವಾನ್ಸ್  ತಗೊಂಡಿದ್ದೂ ಒಂದು ಕಾರಣವಾಗಿತ್ತು ಈ ಕಾರಣದಿಂದ ಅದು ಮನ್ನಾ ಆಯಿತು.

ನಂತರ ಆ ಕತ್ತೆಯನ್ನು ಕಷ್ಟ ಪಟ್ಟು ಗೆಳೆಯ ಹೆಬ್ಬೋಡಿ ರಾಮಸ್ವಾಮಿ ಮನೇಲಿ ಆಶ್ರಯ ನೀಡಲು ಒಪ್ಪಿಸಿದ್ದೆ.

  ಅಲ್ಲಿ೦ದಲೂ ಒಂದು ದಿನ ನನ್ನ ಕತ್ತೆ ನಾಪತ್ತೆ ಆಗಿತ್ತು ಕೆಲ ದಿನಗಳಾದರೂ ವಾಪಾಸು ಬರಲೇ ಇಲ್ಲ, ನಾನು ಕೂಡ ಕತ್ತೆ ಕಳೆದು ಹೋಯಿತೆಂದು ತೀರ್ಮಾನಿಸಿ ಬಿಟ್ಟಿದ್ದೆ.

   ಒ0ದು ದಿನ ನಮ್ಮ ಊರಲ್ಲಿ ಪ್ರತಿಭಟನಾ ಮೆರವಣಿಗೆ ಇಟ್ಟುಕೊಂಡಾಗ ನನ್ನ ಕಳೆದು ಹೋಗಿದ್ದ ಕತ್ತೆ ಅದು ಎಲ್ಲಿಗೋ ಹೋಗಿದ್ದು ವಾಪಾಸು ಬಂತು ಅಂತ ನನ್ನ ಶಿಷ್ಯರು ಮತ್ತು ಅದನ್ನು ತಾತ್ಕಾಲಿಕವಾಗಿ ಸಾಕಿದ್ದ ಗೆಳೆಯ ರಾಮಸ್ವಾಮಿ ನನ್ನ ಮನೆ ಎದರು ತಂದು ಕಟ್ಟಿ ಹಾಕಿದ್ದರು.

ಅವತ್ತಿನ ಪ್ರತಿಭಟನಾ ಮೆರವಣಿಗೆ ಮತ್ತು ಸಭೆ ಮುಗಿಯುವ ತರಾತುರಿಯಲ್ಲಿ ಕತ್ತೆ ಬಗ್ಗೆ ಯೋಚಿಸಲು ನಮಗಾರಿಗೂ ಸಮಯ ಇರಲಿಲ್ಲ.

  ನನ್ನ ಮಗ ಚಿಕ್ಕವನಿದ್ದ ಅವನು ಇದು ನಮ್ಮ ಕತ್ತೆ ಅಲ್ಲ ಅಂತ ಅನುಮಾನ ಪಟ್ಟಿದ್ದಕ್ಕೆ ಸ್ವಲ್ಪ ಚಾಜ್೯ ಆಗಿದ್ದ ರಾಮಸ್ವಾಮಿ ಈ ಮಾತು ಒಪ್ಪಲಿಲ್ಲ... ನಮ್ಮದೇ ಕತ್ತೆ ಅಂತ ಹಸುವಿನ ಕೆಚ್ಚಲು ಸವರುವಂತೆ ಆ ಕತ್ತೆ ಹೊಟ್ಟೆ ಅಡಿ ಕೈಸವರಿದಾಗ ನೆರೆದವರೆಲ್ಲ ಇದು ಅಣ್ಣನವರದ್ದೇ ಕತ್ತೆ ಅಂತ ದೃಡೀಕರಿಸಿ ಬಿಟ್ಟರು.

   ಅದಕ್ಕೆ ಅವರೆಲ್ಲರ ಸಮರ್ಥನೆ ಏನೆಂದರೆ ಬೇರೆ ಕತ್ತೆ ಆಗಿದ್ದರೆ ಅದು ರಾಮಸ್ವಾಮಿಗೆ ಹೊಟ್ಟೆ ಸವರಲು ಯಾವ ಕಾರಣಕ್ಕೂ ಬಿಡುತ್ತಿರಲಿಲ್ಲ ಲಾತಾ ಕೊಟ್ಟು ರಾಮಸ್ವಾಮಿ ಹಲ್ಲು ಉದುರಿಸುತ್ತಿತ್ತು ಅಂದರು.

 ಅವರೆಲ್ಲ ಅವತ್ತಿನ ಮೆರವಣಿಗೆ ಮತ್ತು ಸಭೆಯ ಹೋರಾಟಗಾರರು ಆದ್ದರಿಂದ ಯಾರೂ ವಿರೋದ ನುಡಿಯಲಿಲ್ಲ.

ನಂತರ ನನ್ನ ಕತ್ತೆ ರಾಮಸ್ವಾಮಿ ಮನೆಗೆ ಕರೆದು ಕೊಂಡು ಹೋದ.

  ಒಂದೆರೆಡು ದಿನದಲ್ಲಿ ಈ ಕತ್ತೆಯ ಅಸಲಿ ಮಾಲಿಕ ಬಂದು "ಸ್ವಾಮಿ ನನ್ನ ಕತ್ತೆ ರಾಮಸ್ವಾಮಿ ಕಟ್ಟಿಹಾಕಿದ್ದಾನೆ " ಅಂತ ದೂರಿದಾಗಲೇ  ನಾನು ಸಾಧ್ಯನೇ ಇಲ್ಲ ಅದು ನನ್ನ ಕತ್ತೆ ಅಂದೆ.." "ಸ್ವಾಮಿ ನಿನ್ನ ಕತ್ತೆ ತಿರುಗಲು ಹೋಗಿದ್ದು ವಾಪಾಸ್ ರಾಮ ಸ್ವಾಮಿ ಮನೇಗೆ ನಿನ್ನೆ ಬಂದಿದೆ ಅಲ್ಲಿ ಎರಡು ಕತ್ತೆ ಇದೆ" ಅಂದಾಗ ನಿಜಕ್ಕೂ ನನಗೆ ಗಾಭರಿ ಆಯಿತು.

 ಅವತ್ತು ರಾಮಸ್ವಾಮಿ ನಮ್ಮದಲ್ಲದ ಬೇರೆ ಕತ್ತೆ ಹೊಟ್ಟೆ ಒಳಗೆಲ್ಲ ಸವರಿನೂ ಹಲ್ಲು ಮುರಿಸಿಕೊಂಡಿಲ್ಲಲ್ಲ ಅಂತ !?....

   ನಂತರ ನಾನು ನನ್ನ ಈ ಕತ್ತೆಯನ್ನ ಕೃಷ್ಣಪ್ಪ ಮತ್ತು ಅವನ ಬಾವನೆಂಟನಿಗೆ ಸಾಕಲು ವಾಪಾಸ್ ಕೊಟ್ಟೆ.

 ನಂತರ ವರದಕ್ಷಿಣೆ ಆಗಿ ನನ್ನ ಕತ್ತೆ ಇವನ ಹೊಸ ಅಳಿಯನಿಗೆ  ಕೊಟ್ಟು ನನಗೆ ನಿಮ್ಮ ಕತ್ತೆ ಸತ್ತು ಹೋಯಿತು ಅಂತ ಕತೆ ಕಟ್ಟಿ ಹೇಳಿದ್ದರು.

  ಏನಾದರೂ ಹಾವುಗೊಲ್ಲರದ್ದು ಮತ್ತು ನನ್ನದು ಅವಿನಾಭಾವ ಸಂಬಂದ, ಅವರ ಹತ್ತಾರು ಕುಟುಂಬದ ಗ್ರೂಪ್ ಪೋಟೋ 90 ರ ದಶಕದಲ್ಲಿ ನನ್ನ ರೈಸ್ ಮಿಲ್ ನಲ್ಲಿ ತೆಗೆದದ್ದು ಸವಿ ನೆನಪಾಗಿ ಉಳಿದಿದೆ.

 ಅವರ ಒಂದು ಕೂಲಿಂಗ್ ಗ್ಲಾಸ್ ಮತ್ತು ಹಳೇ ಕೋಟ್ ಒಂದು ಮಾತ್ರ ಅವರ ಪ್ರತಿ ಕುಟುಂಬದ ಪೋಟೋದಲ್ಲಿ ಆ ಕುಟುಂಬದ  ಯಜಮಾನ ಧರಿಸಲು ಕಾಸ್ಟ್ಯೂಮ್ ಆಗಿತ್ತು.

 ಪ್ರತಿ ವಷ೯ ಹಾವು ಗೊಲ್ಲರ ಕ್ಯಾಂಪಿನಿಂದ ಕಾಡು ಗೆಣುಸು ತಂದು ಕೊಡುತ್ತಾರೆ.
  
   ಈ ಎಲ್ಲಾ ನೆನಪು ಸೇರಿ ನಾನು ಬರೆದ ಹಾವುಗೊಲ್ಲರ ಕತ್ತೆ ಪುರಾಣ ಕಥೆಯ ಕಥಾನಾಯಕ ಕೃಷ್ಣಪ್ಪನ  ದಶ೯ನಕ್ಕೆ ಅವತ್ತು ನೂರು ರೂಪಾಯಿ ಭಕ್ಷೀಸು ಕೊಡುವಂತಾಯಿತು.

    ಕೃಷ್ಣಪ್ಪನಿಗೆ ವಯಸ್ಸಾಗಿದೆ, ಅಪಘಾತದಲ್ಲಿ ಕಾಲು ಊನ ಆಗಿದೆ, ಹೆಂಡತಿ ಈತನ ಮಾತು ಕೇಳುತ್ತಿಲ್ಲ ದೂರದ ಕುಂದಾಪುರದಲ್ಲಿ ಬಿಕ್ಷೆ ಬೇಡಿ ಜೀವನ ಮಾಡುತ್ತಿರುವುದಾಗಿ ನೋವಿನಿಂದ ಹೇಳಿದ, ಆ ವರ್ಷದ ಮುಂದಿನ ವಾರದಲ್ಲಿ ನಡೆಯುವ ಗ್ರಾಮ ಪಂಚಾಯತ್ ಚುನಾವಣೆಗೆ ಪತ್ನಿ ಬರಬಹುದೆಂಬ ನಿರೀಕ್ಷೆ ಕೃಷ್ಣಪ್ಪನದ್ದು.

  ಕೃಷ್ಣಪ್ಪನ ಊರಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿಂತ ಇಬ್ಬರೂ ಅಭ್ಯಥಿ೯ಯಿಂದ ಹಣ -ಕೋಳಿ -ಮಾಂಸ - ಬ್ರಾಂಡಿ ಪಡೆದೂ ಇಬ್ಬರಿಗೂ ಇವರ ಕ್ಯಾಂಪಿನ ಓಟು ಹೇಗೆ ಪಾಲು ಮಾಡಿ ನೀಡಬೇಕೆಂದು ಇವರ ಕ್ಯಾಂಪಿನಲ್ಲಿ ನಿದಾ೯ರ ಆಗಿದೆ ಎಂದು ಈ ಉದ್ದೇಶದ  ಹಿಂದೆ ಪಡೆದ ಹಣಕ್ಕೆ ಮೋಸ ಮಾಡಬಾರದೆಂಬ ಕಾಳಜಿಯನ್ನ ವಿವರಿಸಿದ ವಿಡಿಯೋ ಲಿಂಕ್ ಕೆಳಗಿದೆ ಕ್ಲಿಕ್ ಮಾಡಿ ನೋಡಿ.

https://youtu.be/Y0yNSAprCbs?si=xECruIpLtUYQsb-d

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...