#ತೀವ್ರ_ಚಳಿ
ಲ್ಯಾನಿನೋ ಸ್ಥಿತಿಯಿಂದ ಚಳಿ ಪ್ರಮಾಣ ತೀವ್ರಗೊಳ್ಳಲಿದೆ.
ಇವತ್ತು ರಾತ್ರಿ ಕನಿಷ್ಟ ತಾಪಮಾನಕ್ಕೆ ತಲುಪುವ ಸಾಧ್ಯತೆ.
ನಿನ್ನೆ ರಾತ್ರಿ 13 ಡಿಗ್ರಿಗೆ ಉಷ್ಣಾಂಶ ಇಳಿದಿತ್ತು.
ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಚಳಿ ಹೆಚ್ಚಾಗಲಿದೆ.
ಚಳಿಯಿಂದ ಪಾರಾಗಲು ಎಚ್ಚರ ವಹಿಸಿ.
ಈ ವರ್ಷದ ಚಳಿ ಹವಾಮಾನ ಮಾರ್ಚ್ ತಿಂಗಳ ತನಕ ಮುಂದುವರಿಯುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಅಂದಾಜಿಸಿದೆ.
#winterseason #winter #coldwave #ಚಳಿ #ಚಳಿಗಾಲ #shivamogga #sagar #malenadu #temperaturedrop #lyanino
ಲ್ಯಾನಿನೋ ಸ್ಥಿತಿಯಿಂದಾಗಿ ರಾಜ್ಯದಲ್ಲಿ ಚಳಿ ಪ್ರಮಾಣ ತೀವ್ರಗೊಳ್ಳಲಿದೆ. ಫೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವ ಮುನ್ಸೂಚನೆ ಇದ್ದು, ಈ ಪ್ರಕ್ರಿಯೆಯನ್ನೇ ಲ್ಯಾನಿನೋ ಎನ್ನಲಾಗುತ್ತದೆ.
ಸಾಮಾನ್ಯವಾಗಿ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಈ ಲ್ಯಾನಿನೋ ಪರಿಸ್ಥಿತಿ ಉಂಟಾಗಲಿದ್ದು, ಇದು ಮುಂದಿನ ಜನವರಿ ಹಾಗೂ ಮಾರ್ಚ್ ತನಕ ಮುಂದುವರಿಯಲಿದೆ.
ಹಾಗಾಗಿ ಲ್ಯಾನಿನೋ ಪ್ರಭಾವ ಬೀರುವುದರಿಂದ ರಾಜ್ಯದಾದ್ಯಂತ ತಾಪಮಾನ ಕಡಿಮೆಯಾಗಲಿದೆ. ಮತ್ತೊಂದೆಡೆ ಉತ್ತರ ಭಾರತದಿಂದಲೂ ಒಣ ಹಾಗೂ ತಣ್ಣನೆಯ ಗಾಳಿ ಬೀಸುವುದರಿಂದ ಕನಿಷ್ಠ ಉಷ್ಣಾಂಶ ಕ್ರಮೇಣ ತಗ್ಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
[
Comments
Post a Comment