https://www.facebook.com/share/p/15fDezGavp/
*#ಆರ್_ಟಿ_ವಿಠಲಮೂರ್ತಿ*
*ನನ್ನ ಬಗ್ಗೆ ಬರೆದಿದ್ದಾರೆ ನೋಡಿ....*
*....ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ನನ್ನ ಸ್ನೇಹಿತರಾಗಿರುವ ಅರುಣ್ ಪ್ರಸಾದ್ ಅವರದು ಹೋರಾಟದ ಬದುಕು....*
.*...ಅವತ್ತು ಭೈರೇಗೌಡರು ಸುಮಾರು ಒಂದು ಡಜನ್ ಅಧಿಕಾರಿಗಳನ್ನು ಸಾಗರದ ಜೈಲಿಗೆ ಕಳಿಸಿ ಅಮಾನತು ಮಾಡಿ,* *ಭೂಸಾರ ಸಂರಕ್ಷಣ ಇಲಾಖೆಯನ್ನೇ ಕೃಷಿ ಇಲಾಖೆಯಲ್ಲಿ ವಿಲೀನ ಮಾಡಿ ತನಿಖೆಗೆ ಆದೇಶಿಸಿದಾಗ ಇಡೀ ರಾಜ್ಯ ಅದನ್ನು ಬೆರಗುಗಣ್ಣಿನಿಂದ ನೋಡಿತು.....*
*ನಮ್ಮ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆರ್.ಟಿ. ವಿಠಲ ಮೂರ್ತಿ ರಾಜ್ಯದ ರಾಜದಾನಿ ಬೆಂಗಳೂರಿನ ವಿಧಾನ ಸೌದದಲ್ಲಿ ಈಗ ಹಿರಿಯ ಪತ್ರಕರ್ತರು, ರವಿ ಬೆಳಗೆರೆ ಅವರ ಆತ್ಮೀಯ ಗೆಳೆಯರಾಗಿದ್ದವರು.*
*ಅವರು ನನ್ನ ಕಥಾ ಸಂಕಲನ ಓದಿ ಬರೆದ ಅಭಿಪ್ರಾಯಗಳು ಇಲ್ಲಿದೆ.*
*ನನ್ನ ಹೋರಾಟದ ಜೀವನದಲ್ಲಿ ಅವರ ಉಪಕಾರ ಮರೆಯಲು ಸಾಧ್ಯವೇ ಇಲ್ಲ.*
*ನನ್ನ ಹೋರಾಟವಾದ ಸಾಗರ ತಾಲ್ಲೂಕಿನ ಕೃಷಿ ಇಲಾಖೆಯ ಭ್ರಷ್ಟಾಚಾರ ಬಯಲು ಮಾಡಲು ಅಂದು ಅವರು 17 - ಸೆಪ್ಟೆಂಬರ್-1995ರಲ್ಲಿ ವೈಕುಂಠರಾಜು ಅವರ #ವಾರಪತ್ರಿಕೆ ಯಲ್ಲಿ ಬರೆದ ವರದಿ ದಿನಾಂಕ 6 - ಡಿಸೆಂಬರ್-1995ರಲ್ಲಿ ಆಗಿನ ಕೃಷಿ ಸಚಿವ ಬೈರೇಗೌಡರೆ ಸ್ವತಃ ಬಂದು ತನಿಖೆ ಮಾಡಿ ಅನೇಕ ಅಧಿಕಾರಿಗಳನ್ನು ಅವತ್ತೇ ಜೈಲಿಗೆ ಕಳಿಸಿದ್ದು ನನ್ನ ಹೋರಾಟದ ಗೆಲುವಿಗೆ ಕಾರಣವಾಗಿತ್ತು.*
*ಅವರು ಬರೆದ ಕೃತಿ ವಿಮರ್ಶೆ ಓದಿ....*
*#ಭಟ್ಟರ_ಬೋಂಡಾದ_ಬಾಂಡ್ಲಿಯಲ್ಲಿ_ಬಿಲಾಲಿ_ಬಿಲ್ಲಿಯ_ಅಭ್ಯಂಜನ*
*ಕೆ.ಅರುಣ್ ಪ್ರಸಾದರ ಸಣ್ಣ ಕಥೆಗಳ ಕಥಾ ಸಂಕಲನ.*
*ಇಲ್ಲಿನ ಎಲ್ಲ ಕತೆಗಳ ಒಳ ಹೊಕ್ಕರೆ,ಅವುಗಳ ಮೈ ತಡವುತ್ತಿದ್ದರೆ,ಅವುಗಳ ಎದೆಬಡಿತವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.*
*ಇದು ಕಥಾನಾಯಕನ ಕತೆ.*
*ಇತ್ತೀಚಿನ ದಿನಗಳಲ್ಲಿ ತಮ್ಮ ಬರಹಗಳ ಮೂಲಕ ನಾಡಿನ ಗಮನ ಸೆಳೆಯುತ್ತಿರುವ ಅರುಣ್ ಪ್ರಸಾದ್ ಅವರ ಈ ಕಥಾಸಂಕಲನ ನನ್ನನ್ನು ಬಿಟ್ಟು ಬಿಡದಂತೆ ಕಾಡಿದ್ದು ಅದರಲ್ಲಿನ ಜೀವನ ಪ್ರೀತಿಗಾಗಿ.*
*ಇಲ್ಲಿರುವ ಕತೆಗಳಲ್ಲಿ ಸಾಮಾನ್ಯ ಜನರೇ ನಾಯಕರು,ಅವರ ಪ್ರೀತಿ,ಮೋಸ,ವಂಚನೆ,ತಂಟೆ,ತಕರಾರು,ಅಮಾಯಕತೆಯ ರೂಪಗಳನ್ನು ಅರುಣ್ ಪ್ರಸಾದ್ ಎಷ್ಟು ಆಪ್ತವಾಗಿ ಹೇಳುತ್ತಾರೆಂದರೆ,ಆ ಕತೆಗಳಲ್ಲಿ ನಾವೂ ಒಂದು ಪಾತ್ರವಾಗಿ ಬೆರೆತು ಹೋಗಿ ಹೋಗಿ ಬಿಡುತ್ತೇವೆ.*
*ಚುನಾವಣೆ ಮತ್ತು ರಮ್ಜಾದಳ ಟಿವಿ ಕತೆಯಲ್ಲಿ ಗಂಡನಿಲ್ಲದ ಹೆಣ್ಣಿನ ಬದುಕು ಎಷ್ಟು ಕಷ್ಟಕರ ಎಂದು ಹೇಳುತ್ತಲೇ ವಿಧವೆ ರಮ್ಜಾದಳ ಖಾಸಗಿ ಬದುಕಿನ ಕತೆ ಪಡೆಯುವ ತಿರುವುಗಳು ನಿಬ್ಬೆರಗು ಮೂಡಿಸುತ್ತವೆ.*
*ರಮ್ಜಾದ್ ಮತ್ತು ಡ್ರೈವರ್ ನಡುವಿನ ಖಾಸಗಿ ಘಟನೆಯೊಂದು ಆಚಾರಿಯ ಬಾಯಲ್ಲಿ ಡಬಲ್ ಮೀನಿಂಗ್ ಪದಗಳಾಗಿ ಹೊರಹೊಮ್ಮುವುದು,ಕೆರಳಿದ ರಮ್ಜಾದ್ ಅತನಿಗೆ ಬಾರಿಸುವುದು ಊರ ಮಧ್ಯೆ ಏನೇನೋ ರೂಪ ಪಡೆದು ಕಾಂಗ್ರೆಸ್-ಬಿಜೆಪಿಯ ಮಧ್ಯೆ ನಡೆದ ಗಲಾಟೆ ಎಂಬಂತೆ ಬಣ್ಣನೆಯಾಗುತ್ತಾ,ಊರ ಜನರ ಬಾಯಿಗೆ ತಾಂಬೂಲವಾಗುತ್ತದೆ.*
*ಆ ಊರಲ್ಲೊಂದು ಶಾಂತಿ ಸಭೆ ಕತೆಯಲ್ಲಿ ಬಲಿಷ್ಟರು ಸೇರಿ ಬಹುಸಂಖ್ಯಾತ ಬಡವರನ್ನು ಹೇಗೆ ಶೋಷಿಸುತ್ತಾರೆ ಎಂಬುದಕ್ಕೆ ಭಾಷಾ ಘಟನೆ ಉದಾಹರಣೆಯಾಗುತ್ತದೆ.*
*ಹೊಳೆ ಆಚೆಗಿನವರ ಜಾತ್ರಾ ಪ್ರಸಂಗ ಕತೆಯಲ್ಲಿ, ಬದುಕಬೇಕಾದ ಬಡವರು ನಾಲ್ಕು ದಿನದ ಮೋಜಿಗಾಗಿ ಇರುವುದನ್ನು ಮಾರಿಕೊಳ್ಳುವ ಘಟನೆ ಹೃದಯ ತಲ್ಲಣಗೊಳ್ಳುವಂತೆ ಮಾಡುತ್ತದೆ.*
*"ಆಹಾ ಅವನೆಂತಹ ಯುವಕ" ಕತೆಯ ನಾಯಕ ಬಹುತೇಕ ಎಲ್ಲ ಊರುಗಳಲ್ಲಿ ಕಾಣಲು ಸಿಗುತ್ತಾನೆ ಆತನಿಗೆ ತಕ್ಷಣದ ಹಿರಿಮೆ ಬೇಕು ಅದಕ್ಕಾಗಿ ಆತ ಹಾಕುವ ಸೋಗು ಹೊಸಬರನ್ನು ಪಿಗ್ಗಿ ಬೀಳಿಸುವುದೂ ಹೌದು ಆದ್ರೆ ಕಾಲ ಕ್ರಮೇಣ ಈ ಆದರ್ಶದ ಮುಖವಾಡ ಕಳಚಿ ಎದುರಿಗಿದ್ದವರಿಗೆ ಭ್ರಮನಿರಸನ ಉಂಟು ಮಾಡುವುದೂ ಹೌದು.*
*ಸಿಗಂದೂರು ಶ್ರೀ ದೇವಿ ಕತೆ ಎಷ್ಟು ಢಾಳಾಗಿ ಹೃದಯಕ್ಕೆ ರಾಚುತ್ತದೆ ಎಂದರೆ ಜನರ ಭಕ್ತಿಯನ್ನು ಭಯವಾಗಿ ಪರಿವರ್ತಿಸಿ ಲಾಭ ಪಡೆಯುವವರು ಯಾರು?ಅಂತ ಹೇಳಿಬಿಡುತ್ತದೆ ವಾಸ್ತವವಾಗಿ ಇದು ಭಕ್ತಿಯ ಲೋಲಕಕ್ಕೆ ಅಂಟಿಕೊಂಡವರ ಬಿಡುಗಡೆಗೆ ದಾರಿ ತೋರುವ ಕತೆ ಎಂಬುದು ನಿಸ್ಸಂಶಯ.*
*ಆಳವಾಗಿ ನೋಡಿದರೆ ಅರುಣ್ ಪ್ರಸಾದ್ ಅವರು ಕನ್ನಡದ ಕಥನ ಪರಂಪರೆಯ ಸಾಲಿನಲ್ಲಿ ಮೈಲುಗಲ್ಲುಗಳಾಗಿ ಉಳಿದ ಪಿ.ಲಂಕೇಶ್ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಕಸಿಗೊಂಡ ರೂಪ ಅನ್ನಿಸುತ್ತಾರೆ.*
*ಅವರ ಕತೆಯ ಪಾತ್ರಗಳನ್ನೇ ನೋಡಿ ಬಡ್ಡಿ ದುಡ್ಡಿಗಾಗಿ ಹಪಹಪಿಸುವ ಶೀನಿ,ರಾಮಿಯಿಂದ ಹಿಡಿದು ಎಲ್ಲರೂ ಸರಳ,ಸಾಮಾನ್ಯರು.*
*ತೇಜಸ್ವಿ ಹಾಗೂ ಲಂಕೇಶರ ಕಥೆಗಳಲ್ಲೂ ಇಂತವರೇ ನಾಯಕರು ಹೀಗಾಗಿ ಇಲ್ಲಿನ ಕಥನಗಳು ಓದುಗನನ್ನು ತನ್ನ ವ್ಯಾಪ್ತಿಗೆ ಎಳೆದುಕೊಂಡು ಹೃದಯಕ್ಕೆ ಹತ್ತಿರವಾಗಿ ಬಿಡುತ್ತವೆ.*
*ಅಂದ ಹಾಗೆ ನನಗನ್ನಿಸುವ ಪ್ರಕಾರ ಇಂತಹ ಸಶಕ್ತ ಪಾತ್ರಗಳನ್ನು ಸೃಷ್ಟಿಸಲು ಅರುಣ್ ಪ್ರಸಾದ್ ಯಾರ ಮೊರೆ ಹೋಗುವ ಅಗತ್ಯವೇ ಇಲ್ಲ ಯಾಕೆಂದರೆ ಅವರ ಹೋರಾಟದ ಬದುಕೇ ಇಂತಹ ಪಾತ್ರಗಳನ್ನು ಅವರ ಮನೋಭೂಮಿಕೆಯ ಮೇಲೆ ತಂದು ನಿಲ್ಲಿಸಿದೆ.*
*ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ನನ್ನ ಸ್ನೇಹಿತರಾಗಿರುವ ಅರುಣ್ ಪ್ರಸಾದ್ ಅವರದು ಹೋರಾಟದ ಬದುಕು.*
*ನಾನು ಬೆಂಗಳೂರಿಗೆ ಬಂದು ಪತ್ರಿಕೋದ್ಯಮದ ತಿರುಗಣಿಯಲ್ಲಿ ರಣರಣ ಅಂತ ಸುತ್ತುತ್ತಿದ್ದ ಕಾಲದಲ್ಲಿ ಅರುಣ್ ಪ್ರಸಾದ್ ತಮ್ಮೂರು ಆನಂದಪುರವನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಜನರ ನಡುವೆ ಬಡಿದಾಡುತ್ತಿದ್ದರು.*
*ಅಗವರು ಜಿಲ್ಲಾಪಂಚಾಯ್ತಿ ಸದಸ್ಯರಾಗಿ ಹೋರಾಡಿದ್ದನ್ನು ಬರೆದರೆ ಅದೇ ಒಂದು ಸಾಹಸ ಗಾಥೆ.*
*ಒಂದು ಸಲ ಕೃಷಿ ಹೊಂಡ, ನೀರಾವರಿ ಪಿಕ್ ಅಪ್ ನಿರ್ಮಾಣದ ಹೆಸರಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಿದ್ದರು.*
*ಪುಸ್ತಕದಲ್ಲೇನೋ ಕೃಷಿಹೊಂಡಗಳನ್ನು ತೆರೆದ, ಪಿಕ್ ಅಪ್ ನಿರ್ಮಿಸಿದ ಲೆಕ್ಕವಿತ್ತು ಆದರೆ ವಾಸ್ತವದಲ್ಲಿ ಕಾಮಗಾರಿ ಮಾಡಿರಲೇ ಇಲ್ಲ.*
*ಕೃಷಿ ಅಧಿಕಾರಿಗಳ ಈ ವಂಚನೆಯ ವಿರುದ್ಧ ಹೋರಾಟ ಆರಂಭಿಸಿದ ಅರುಣ್ ಪ್ರಸಾದ್ ನನ್ನನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಸತ್ಯ ದರ್ಶನ ಮಾಡಿಸಿದರು ನಾನೂ ಹೋಗಿ ಬಂದು ವೈಕುಂಠ ರಾಜು ರವರ ವಾರಪತ್ರಿಕೆಯಲ್ಲಿ ಅದನ್ನು ವರದಿ ಮಾಡಿದೆ.*
*ಅಷ್ಟೇ ಅಲ್ಲ,ಆಗ ಕೃಷಿ ಸಚಿವರಾಗಿದ್ದ ಸಿ.ಭೈರೇಗೌಡರ ಗಮನಕ್ಕೂ ತಂದೆ ಅವರು ತಡ ಮಾಡದೆ ಸ್ಥಳಕ್ಕೆ ಭೇಟಿ ನೀಡಿದರು.*
*ಎಲ್ಲಿದೆ ಕೃಷಿ ಇಲಾಖೆ ಮಾಡಿದ ಕಾಮಗಾರಿ ಅಂತ ಅವರು ಗುಡುಗಿದಾಗ ಅಧಿಕಾರಿಗಳು ಸುಸ್ತು.*
*ಅವತ್ತು ಭೈರೇಗೌಡರು ಸುಮಾರು ಒಂದು ಡಜನ್ ಅಧಿಕಾರಿಗಳನ್ನು ಸಾಗರದ ಜೈಲಿಗೆ ಕಳಿಸಿ ಅಮಾನತು ಮಾಡಿ, ಭೂಸಾರ ಸಂರಕ್ಷಣ ಇಲಾಖೆಯನ್ನೇ ಕೃಷಿ ಇಲಾಖೆಯಲ್ಲಿ ವಿಲೀನ ಮಾಡಿ ತನಿಖೆಗೆ ಆದೇಶಿಸಿದಾಗ ಇಡೀ ರಾಜ್ಯ ಅದನ್ನು ಬೆರಗುಗಣ್ಣಿನಿಂದ ನೋಡಿತು.*
*ಆ ಮೂಲಕ ಭ್ರಷ್ಟಾಚಾರದ ವಿರುದ್ಧದ ಅರುಣ್ ಪ್ರಸಾದ್ ಹೋರಾಟ ಯಶಸ್ವಿಯಾಗಿತ್ತು.*
*ಈ ಹೋರಾಟದ ಬದುಕೇನಿದೆ?ಇದೇ ಕತೆಗಾರ ಅರುಣ್ ಪ್ರಸಾದ್ ಅವರಿಗೆ ನಿಕ್ಷೇಪವಾಗಿ ದಕ್ಕಿದೆ.*
*ಹೀಗಾಗಿಯೇ ಒಂದು ಕತೆ ಹೇಳಲು ಹೊರಟಾಗ ಮನಸ್ಸಿನಲ್ಲುಳಿಯುವ ಪಾತ್ರಗಳನ್ನು ಸೃಷ್ಟಿಸಲು ಅವರಿಗೆ ಸಾಧ್ಯವಾಗಿದೆ.*
*ಹೋರಾಟಗಾರ-ಕತೆಗಾರ ಬೇರೆ-ಬೇರೆಯಲ್ಲದ ಕಾರಣಕ್ಕಾಗಿ ಇಲ್ಲಿರುವ ಎಲ್ಲ ಕತೆಗಳು ನಮ್ಮನಡುವೆಯೇ ನಡೆದಂತೆ ಭಾಸವಾಗುತ್ತಾ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಡುತ್ತವೆ ಮತ್ತು ಬಹುಕಾಲ ಕಾಡುತ್ತವೆ.*
*ಕತೆಗಾರರಾಗಿ ಹೋರಾಟಗಾರ ಅರುಣ್ ಪ್ರಸಾದ್ ಗೆದ್ದಿರುವುದು ಈ ಕಾರಣಕ್ಕಾಗಿ ಇದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.*
*ಅಂದ ಹಾಗೆ ಈ ಪುಸ್ತಕ ಖರೀದಿಸಬಯಸುವವರು ಅರುಣ್ ಪ್ರಸಾದ್ ಅವರನ್ನು ವ್ಯಾಟ್ಸ್ ಅಪ್ ಮೂಲಕ (9449253788) ಸಂಪರ್ಕಿಸಬಹುದು.*
*ಆರ್.ಟಿ.ವಿಠ್ಠಲಮೂರ್ತಿ*
Comments
Post a Comment