#ಆರ್_ಎನ್_ಶೆಟ್ಟರು
#ಮುರ್ಡೇಶ್ವರ
ಮುಡೇ೯ಶ್ವರ ವಿಶ್ವವಿಖ್ಯಾತಗೊಳಿಸಿದ ರಾಮ ನಾಗಪ್ಪ ಶೆಟ್ಟರು.
ತಮ್ಮ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಆರ್.ಎನ್ ಶೆಟ್ಟರ ನಾಲ್ಕನೆ ಪುಣ್ಯತಿಥಿ ಇವತ್ತು
ಆರ್.ಎನ್. ಶೆಟ್ಟರೆಂದರೆ ಅಂದರೆ ಅವರ ನಿಮಾ೯ಣ ಸಂಸ್ಥೆಯಿಂದ ಆಗದ ಕೆಲಸವೇ ಇಲ್ಲ ಎ೦ಬ ಪ್ರತೀತಿ ಇದೆ ಇದಕ್ಕೆ ಕಾರಣ ಇವರ ಸಂಸ್ಥೆ ಸವಾಲಾಗಿ ನಿಮಿ೯ಸಿರುವ ಕೊಂಕಣ ರೈಲ್ವೆಯ 18 ಸುರಂಗ ಮಾಗ೯ಗಳು, ಯುಕೆಪಿಯ ನೂರಾರು ಕಿ.ಮೀ. ಉದ್ದದ ನೀರಾವರಿ ಕಾಲುವೆಗಳು, ಬೆಳಗಾಂ ಜಿಲ್ಲೆಯ ಹಿಡಕಲ್ ಆಣೆಕಟ್ಟುಗಳು ಎದ್ದು ಕಾಣುತ್ತದೆ.
ಇವರ ತಂದೆ ಕೃಷಿಕರು, ಪುರಾಣ ಪ್ರಸಿದ್ದ ಭಟ್ಕಳ ತಾಲ್ಲೂಕಿನ ಮುಡೇ೯ಶ್ವರ ದೇವಾಲಯದ ಮುಕ್ತೇಸರರಾಗಿದ್ದರು, ಗೋಕಣ೯ದಲ್ಲಿ ಆತ್ಮಲಿಂಗ ಐಕ್ಯ ಆದಾಗ ರಾವಣ ಅದನ್ನು ಕೀಳುವ ಪ್ರಯತ್ನದಲ್ಲಿ ಆತ್ಮಲಿಂಗದ ಕೆಲ ತುಣುಕು ಇಲ್ಲಿಗೆ ಬಂದು ಬಿದ್ದಿದೆ ಎಂಬ ಪ್ರತೀತಿ, ಸ್ಥಳ ಪುರಾಣ ಇದೆ.
ಈಗಲೂ ಮುಡೇ೯ಶ್ವರದಲ್ಲಿ ದೇವರ ಎದುರು ಗೋಕಣ೯ದ ಆತ್ಮಲಿಂಗದ ಕಲ್ಲುಗಳ ತುಣುಕ ಅಪೇಕ್ಷೆ ಪಟ್ಟರೆ ಅಚ೯ಕರು ತೋರಿಸುತ್ತಾರೆ.
ಇಲ್ಲಿ ಜನಿಸಿ ಬಾಲ್ಯ ಕಳೆದ ಶೆಟ್ಟರು ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದರೂ ಅವರ ಸಾಧನೆಗಾಗಿ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪಡೆಯುವಂತಾಗಿದ್ದು ಇತಿಹಾಸ.
1961 ರಲ್ಲಿ ಇವರು ಸ್ಥಾಪಿಸಿದ ನಿಮಾ೯ಣ ಸಂಸ್ಥೆ ಇವತ್ತು ಇವರ ಒಟ್ಟು ಆಸ್ತಿ ಮೌಲ್ಯ 18 ಸಾವಿರದ 700 ಕೋಟಿ ಅಂದರೆ ಸಣ್ಣದಲ್ಲ.
ಇದರ ಜೊತೆ ಶೈಕ್ಷಣಿಕ ಕ್ಷೇತ್ರ, ಹೋಟೆಲ್ ಉದ್ಯಮ, ಮಂಗಳೂರು ಹೆಂಚು, ವೆಟ್ರಿಪೈಡ್ ಟೈಲ್ಸ್, ದೇಶದ ನಂಬರ್ 1 ಮಾರುತಿ ಶೋ ರೂಂ, ಹೋಟೆಲ್ ರೆಸಾಟ್೯ಗಳು ಹೀಗೆ ನೂರಾರು ಕ್ಷೇತ್ರದಲ್ಲಿ ಇವರು ತೊಡಗಿಸಿ ಕೊಂಡಿದ್ದಾರೆ.
ತಂದೆ ಮುಕ್ತೇಸರರಾಗಿದ್ದ ಮುರ್ಡೇಶ್ವರ ದೇವಾಲಯ ಪುನರ್ನಿಮಾ೯ಣ ಮಾಡಿ 249 ಅಡಿ ಎತ್ತರದ ರಾಜ ಗೋಪುರ ನಿಮಿ೯ಸಿದ್ದು ಮತ್ತು 123 ಅಡಿ ಎತ್ತರದ ದ್ಯಾನಸ್ಥಿತಿಯ ಈಶ್ವರ ಮೂತಿ೯ ನಿಮಿ೯ಸಿ ಇಡೀ ದೇಶದ ಪ್ರವಾಸೋದ್ಯಮ ಸ್ಥಳಗಳಲ್ಲಿ ಮುಡೇ೯ಶ್ವರಕ್ಕೆ ದೊಡ್ಡ ಪ್ರಾತಿನಿದ್ಯ ದೊರಕಿಸಿ ಕೊಟ್ಟ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುಡೇ೯ಶ್ವರ ಮೂಲದ ಕನ್ನಡಿಗ ಡಾಕ್ಟರ್ ಆರ್.ಎನ್.ಶೆಟ್ಟರ ಸಾಧನೆ ಅಸಾದ್ಯವೇ ಸರಿ.
ತಮ್ಮ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಆರ್.ಎನ್ ಶೆಟ್ಟರ ನಾಲ್ಕನೆ ಪುಣ್ಯತಿಥಿ ಇವತ್ತು.
Comments
Post a Comment