https://www.facebook.com/share/p/15gBMp4RV2/
*#ಮಾದಲಿ*
*ಉತ್ತರ ಕನಾ೯ಟಕದ ಸರಳ* *ರೆಸಿಪಿಯ ಉತ್ಕೃಷ್ಟ_*
*ಸಿಹಿ.*
*ಇದನ್ನು ಕಾಸಿದ ತುಪ್ಪದಲ್ಲಿ ಮಿಶ್ರ ಮಾಡಿ ತಿಂದರೆ ಒ0ದು ರುಚಿ, ಹಾಲಿನ ಜೊತೆ ತಿಂದರೆ ಇನ್ನೊಂದು ರುಚಿ ಹಾಗೆ ಹಾಲು ತುಪ್ಪ ಸೇರಿಸಿದರೆ ವಿಶೇಷ ರುಚಿಯ ಸಿಹಿ ತಿಂಡಿ ಆಗುತ್ತದೆ.*
*ಮಾಜಿ ಮುಖ್ಯಮಂತ್ರಿ ದಿವಂಗತ*
*J.H.ಪಟೇಲ್ ಅವರ ಅಚ್ಚುಮೆಚ್ಚಿನ ಖಾದ್ಯ ಈ "ಮಾದಲಿ" ನಿತ್ಯ ಒಂದು ಚಿಕ್ಕ*
*ಬಟ್ಟಲಿನಲ್ಲಿ ಹಾಲು -ತುಪ್ಪದ*
*ಮಿಶ್ರಣದೊಂದಿಗೆ "ಮಾದಲಿ" ಅವರಿಗೆ*
*ಬೇಕೇ ಬೇಕಿತ್ತು.*
#MADALI #madalisweet #uttarakarnataka #JHPatel #desisweet #desi #easyrecipes #milkshake #ghee #bayaluseeme
*ಮಲೆನಾಡಿನಲ್ಲಿ ಇದು ಪ್ರಚಲಿತವಲ್ಲದ ಸಿಹಿ ತಿಂಡಿ ಶಿವಮೊಗ್ಗ ಜಿಲ್ಲೆಯ ನ್ಯಾಮತಿ ನಂತರ ಇದು ಹೆಚ್ಚು ಪರಿಚಿತ ಆದರೆ ಇದರ ಹೆಸರು ಕೇಳಿದ್ದು ಬಿಟ್ಟರೆ ನನಗೆ ಇದು ನನಗೆ ಸಿಕ್ಕಿರಲಿಲ್ಲ.*
*ಇತ್ತೀಚಿಗೆ ಇದರ ವಿಚಾರ ಮಾತಾಡುವಾಗ ಹೊಸನಗರ ತಾಲ್ಲೂಕಿನ ಲಾರಿ ಮಾಲಿಕರ ಸಂಘದ ಉಪಾಧ್ಯಕ್ಷರಾದ ಪಾಪುಗೌಡರು "ಹೌದು ಇದು ಉತ್ತರ ಕನ್ನಡ ಜಿಲ್ಲೆಯ ಸಿಹಿ ಈಗೀಗ ಮಲೆನಾಡಿನಲ್ಲಿ ಕೂಡ ಮಾಡುತ್ತಾರೆ " ಅಂದಿದ್ದವರು ಮೊನ್ನೆ ಒಂದು ಡಬ್ಬ ಮಾದಲಿ ಕಳಿಸಿದ್ದಾರೆ.*
*ಇದನ್ನು ಕಾಸಿದ ತುಪ್ಪದಲ್ಲಿ ಮಿಶ್ರ ಮಾಡಿ ತಿಂದರೆ ಒ0ದು ರುಚಿ, ಹಾಲಿನ ಜೊತೆ ತಿಂದರೆ ಇನ್ನೊಂದು ರುಚಿ ಹಾಗೆ ಹಾಲು ತುಪ್ಪ ಸೇರಿಸಿದರೆ ವಿಶೇಷ ರುಚಿಯ ಸಿಹಿ ತಿಂಡಿ ಆಗುತ್ತದೆ.*
*#ಮಾದಲಿ_ರೆಸಿಪಿ_ಪಾಪು_ಗೌಡರು_ತಿಳಿಸಿದ್ದು*
*ಇದರ ರೆಸಿಪಿ ಸರಳ 250 ಗ್ರಾಂ ಗೋದಿ ತರಿ ತರಿಯಾಗಿ ಹಿಟ್ಟು ಮಾಡಿಕೊಂಡು ತುಪ್ಪದಲ್ಲಿ ಹುರಿಯುತ್ತಾ ಇದಕ್ಕೆ 1 ಟೇಬಲ್ ಸ್ಪೂನ್ ಕಡಲೆ ಹಿಟ್ಟು, 1 ಟೇಬಲ್ ಸ್ಪೂನ್ ಗಸಗಸೆ, ಅದ೯ ಕಪ್ ಬೆಲ್ಲದ ಪುಡಿ, 2 ಟೇಬಲ್ ಸ್ಪೂನ್ ಕೊಬ್ಬರಿ ಪುಡಿ, 2 ಟೇಬಲ್ ಸ್ಪೂನ್ ಬೆಳಗಡಲೆ, 2 ಏಲಕ್ಕಿ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಿ ಹುರಿದರೆ ಉತ್ತರ ಕನ್ನಡದ ಸಿಹಿ ತಿಂಡಿ ಮಾದಲಿ ತಯಾರು.*
*ಇದನ್ನು ಸುರಕ್ಷಿತವಾಗಿ ಡಬ್ಬಿಯಲ್ಲಿಟ್ಟರೆ ಎರೆಡು ತಿಂಗಳಾದರೂ ಹಾಳಾಗುವುದಿಲ್ಲ ಎನ್ನುತ್ತಾರೆ ಮನೆಗೆ ದಿಡೀರ್ ಅತಿಥಿಗಳು ಬಂದರೆ ಹಾಲು ತುಪ್ಪದಲ್ಲಿ ಬಡಿಸಿದರೆ ವಿಶೇಷ ಅತಿಥ್ಯ ಆಗುವುದು.*
*ಹಿರಿಯ ಪತ್ರಕತ೯ ಮಿತ್ರರಾದ ದೋಣಿಹಳ್ಳಿ ಗುರುಮೂತಿ೯ಯವರು ಮಾದಲಿಯನ್ನು ಸಂಪ್ರದಾಯಿಕವಾಗಿ ತಯಾರಿಸುವ ಇನ್ನೊಂದು ವಿಧಾನ ತಿಳಿಸಿದ್ದಾರೆ ಜೊತೆಗೆ ಮುಖ್ಯಮಂತ್ರಿಗಳಾಗಿದ್ದ ಜೆ ಹೆಚ್ ಪಟೇಲರು ಪ್ರತಿನಿತ್ಯ ಮಾದಲಿಯನ್ನು ಹಾಲು ತುಪ್ಪದ ಜೊತೆ ಸವಿಯುತ್ತಿದ್ದರೆಂಬ ಮಾಹಿತಿ ಕೂಡ ನೀಡಿದ್ದಾರೆ.*
*#ದೊಣೆಹಳ್ಳಿ_ಗುರುಮೂತಿ೯ಯವರ_ರೆಸಿಪಿ*
*Arun sir, ನೀವು ವಿವರಿಸಿರುವ* *"ಮಾದಲಿ"instant ಶೈಲಿಯದು.*
*ನಮ್ಮ ಮದ್ಯ ಕರ್ನಾಟಕ ಸೇರಿದಂತೆ. ಉತ್ತರ ಕರ್ನಾಟಕ*
*ಕಡೆಯಲ್ಲೆಲ್ಲಾ ಮಾದಲಿ ಮಾಡುವ ವಿಧಾನ ವಿಭಿನ್ನ, ಅದು ಹೆಚ್ಚು ರುಚಿಕರವೂ ಹೌದು !!*
*ವಿಧಾನ : ಜವೆ ಗೋಧಿಯನ್ನು* *ಗಿರಣಿಯಲ್ಲಿ.. ಹಿಟ್ಟು ಮಾಡಿಸಿ,*
*ಚಪಾತಿ ಮಾಡಿ.. ಆ ಚಪಾತಿ* *ಯನ್ನು.. ಜರಡಿಯ ಬೆನ್ನ ಮೇಲೆ*
*ಉಜ್ಜುತ್ತಾ ಹೋದರೆ ಚಪಾತಿ* *ಹುಡಿ.. ಹುಡಿಯಾಗಿ..* *ಉದುರುತ್ತದೆ. ಉದುರಿದ ಚಪಾತಿ ಉಡಿ.. ಉಡಿಯಯನ್ನುಒರಳಲ್ಲಿ ಹಾಕಿ.. ಒನಕೆ ಯಿಂದ ಕುಟ್ಟುತ್ತಾ..*
*ಜೊತೆಗೆ clean ಬೆಲ್ಲದ* *ತುಂಡುಗಳನ್ನು ಸೇರಿಸುತ್ತಾ..*
*ಜೊತೆಗೆ.. ಗಸಗಸೆ.. ಬಿಳಿಎಳ್ಳು*
*ಸೇರಿಸುತ್ತಾ.. ಏಲಕ್ಕಿ.. ಜಾಕಾಯಿ*
*ಶುಂಠಿ ಪುಡಿಯನ್ನು* *ಉದುರಿಸುತ್ತಾ.. ಧ್ಯಾನಸ್ಥರಾಗಿ*
*ಈ ಕ್ರಿಯೆ ನಡೆದಾಗ.. "ಜವಾರಿ ಶೈಲಿ" ಯ ಮಾದಲಿ ಸವಿಯಲುಸಿದ್ದ.*
*ಈ "ಮಾದಲಿ"ಗೆ ಹಾಲು -ಹಾಲು ಹಾಕಿ ಸವಿದರೆ ಮೈ ಮನಸ್ಸು ಪರಿಶುದ್ಧ !!*
*ಮರೆತ ಮಾತು :ನಿಮ್ಮ ಈ* *ಹಿಂದಿನ ಮಲೆನಾಡು ಜಿಲ್ಲೆಯ* *ಮಾಜಿ ಮುಖ್ಯಮಂತ್ರಿ ದಿವಂಗತ*
*J.H.ಪಟೇಲ್ ಅವರ ಅಚ್ಚುಮೆಚ್ಚಿನ* *ಖಾದ್ಯ ಈ "ಮಾದಲಿ" ನಿತ್ಯ ಒಂದು* *ಚಿಕ್ಕ*
*ಬಟ್ಟಲಿನಲ್ಲಿ ಹಾಲು -ತುಪ್ಪದ*
*ಮಿಶ್ರಣದೊಂದಿಗೆ "ಮಾದಲಿ"*
*ಬೇಕೇ ಬೇಕಿತ್ತು*
*ನಿಮ್ಮ ಸವಿ-ಸವಿ ಮಾಹಿತಿಗಾಗಿ..*
Comments
Post a Comment