https://www.facebook.com/share/p/15ppqHt8Pd/
*#ಕಾಡಾನೆ_ವರ್ಷ_ವರ್ಷ_ಈ_ಮಾರ್ಗದಲ್ಲಿ_ಸಂಚರಿಸಿದರೆ_ನಾವೇನು_ಮಾಡೋಣ?*
*ಕಾಡಾನೆ ಓಡಿಸುವುದು ಸ್ಥಳಾಂತರ ಮಾಡುವುದು ಮಾತ ಪರಿಹಾರವಾ?*
*ಹೊಸ ಹೊಸ ಆನೆ ಕಾರಿಡಾರ್ ಆದರೆ ಏನು ಮಾಡುವುದು? ಆ ಭಾಗಗಳಲ್ಲಿ ಮಾನವ - ಆನೆ ಸಂಘರ್ಷ ನಡೆಯದೇ ಇರುವುದಿಲ್ಲ!!*
*ಮೈಸೂರಿನ ನೇಚರ್ ಕನ್ಸರ್ವೇಷನ್ ಫೌಂಡೇಷನ್ ಅಧ್ಯಯನ ಓದಿ.*
*ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮಾನವ-ಆನೆ ಸಂಘರ್ಷದ ಪರಿಹಾರವಾಗಿ ಇದು ಉಪಯೋಗಕ್ಕೆ ಬಂದೀತು.*
#humanelephantcoexistence #corridor #widelephant #malenadu #westernghatsofindia
#elephant #elephantresearch #wildlife
*ಪಶ್ಚಿಮಘಟ್ಟ ಪ್ರದೇಶದಲ್ಲಿ ಹೆಚ್ಚಿನ ಕಾಡಾನೆಗಳು ಕಂಡುಬರುತ್ತವೆ. ಮಾನವ– ಆನೆ ಸಂಘರ್ಷವು ಕರ್ನಾಟಕದಲ್ಲಿ ಮಾತ್ರವಲ್ಲದೆ ಪಕ್ಕದ ತಮಿಳುನಾಡಿನಲ್ಲೂ ಇತ್ತು.*
*ಅಲ್ಲಿಯೂ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸುವ ಪರಿಪಾಟವಿತ್ತು.*
*ಆಗ ತಮಿಳುನಾಡಿನ ನೆರವಿಗೆ ಹೋಗಿದ್ದು ಮೈಸೂರಿನ ನೇಚರ್ ಕನ್ಸರ್ವೇಷನ್ ಫೌಂಡೇಷನ್ ಎಂಬ ಸ್ವಯಂಸೇವಾ ಸಂಸ್ಥೆ ಎಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ, ಅವು ನಡೆದಾಡುವ ಪಥ ಯಾವುದು, *ಕಾಡಾನೆಗಳ ಗುಂಪು ಯಾವ ಸಮಯದಲ್ಲಿ ಯಾವ ಭಾಗದಲ್ಲಿ*
*ಇರುತ್ತದೆ ಎಂಬ ಬಗ್ಗೆ* *ಕೂಲಂಕಷವಾಗಿ ಅಧ್ಯಯನ ನಡೆಸಿ, ತಮಿಳುನಾಡಿನ ವಾಲ್ಪರೈ ಪ್ರಸ್ಥಭೂಮಿ ವ್ಯಾಪ್ತಿಯ 102* *ಹಳ್ಳಿಗಳ ನಿವಾಸಿಗಳಿಗೆ ಹಾಗೂ ಅತಿಹೆಚ್ಚು ಸಂಘರ್ಷಕ್ಕೆ ಗುರಿಯಾಗುವ ಪ್ರದೇಶಗಳಲ್ಲಿನ ಜನರಿಗೆ ಕಾಡಾನೆಗಳ* *ಚಲನವಲನದ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡುವ ಹೊಸ ಹಾಗೂ ಸುಲಭವಾದ ಪದ್ಧತಿಯನ್ನು ಸಂಸ್ಥೆಯು ಪರಿಚಯಿಸಿತು.*
*ಈ ವಿಧಾನ ಬಹಳ ಯಶಸ್ವಿ ಆಗಿದ್ದು, ಹಿಂದಿನ ಇಪ್ಪತ್ತು ವರ್ಷಗಳಲ್ಲಿ ಕಾಡಾನೆಯ ದಾಳಿಗೆ ಒಬ್ಬ ವ್ಯಕ್ತಿ ಮಾತ್ರ ಬಲಿಯಾಗಿದ್ದಾನೆ.*
*ಕಾಫಿ, ಟೀ ತೋಟಗಳಿಗೆ ಸೋಲಾರ್ ಆಧಾರಿತ ವಿದ್ಯುತ್ ತಂತಿಬೇಲಿ ನಿರ್ಮಿಸಿರುವುದರಿಂದ ತಿರುಗಾಡಲು ಆನೆಗಳು ಅನಿವಾರ್ಯವಾಗಿ ಮಾನವರು ಬಳಸುವ ರಸ್ತೆಗಳನ್ನೇ ಬಳಸುತ್ತಿವೆ. ಈ ಅಂಶವೂ ಸಂಘರ್ಷ ಹೆಚ್ಚಳಕ್ಕೆ ಕಾರಣವಾಗಿದೆ. ವಿಜ್ಞಾನಿಗಳ ಅಧ್ಯಯನದ ಪ್ರಕಾರ, ಬೆಳಗಿನ 6ರಿಂದ 10 ಗಂಟೆ ಹಾಗೂ ಸಂಜೆಯ 4ರಿಂದ 8 ಗಂಟೆಯ ಸಮಯದಲ್ಲೇ ಅತಿಹೆಚ್ಚು ಸಂಘರ್ಷಗಳು ಉಂಟಾಗಿವೆ. 2010ರಿಂದ 2022ರ ಅವಧಿಯಲ್ಲಿ ಹಾಸನ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು 54 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರದೇಶದಲ್ಲಿ ಆನೆಗಳಿವೆ ಎಂಬುದೇ ಅನೇಕರಿಗೆ ತಿಳಿದಿರಲಿಲ್ಲ. ಬೆಳಗಿನ ಸಮಯದಲ್ಲಿ ಕೂಲಿಗಾಗಿಯೋ ಬೇರೆ ಯಾವುದೋ ಕೆಲಸದ ನಿಮಿತ್ತ ಹೋಗುವಾಗ ಮತ್ತು ಸಂಜೆ ತಿರುಗಿ ಬರುವ ಹೊತ್ತಿನಲ್ಲೇ ಆನೆಗಳು ಸಂಚರಿಸುತ್ತವೆ. ತನ್ನ ಪಥದಲ್ಲಿ ಮನುಷ್ಯನನ್ನು ಕಂಡ ಅವು ರೊಚ್ಚಿಗೇಳುತ್ತವೆ*
*140 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಅತಿಹೆಚ್ಚು ಜೀವಿವೈವಿಧ್ಯಗಳಿರುವ ಅಪೂರ್ವ ದೇಶವಾಗಿದೆ. 1975ರಿಂದ ಈಚೆಗೆ ಪಶ್ಚಿಮಘಟ್ಟಗಳ ಶೇ 40ರಷ್ಟು ಪ್ರದೇಶ ಮಾನವ ಅತಿಕ್ರಮಣಕ್ಕೆ ಒಳಗಾಗಿದೆ ಎಂದು ಅಂಕಿಅಂಶ ಹೇಳುತ್ತದೆ. ಆದರೂ ಆನೆಗಳಂತಹ ಬೃಹತ್ ಜೀವಿಗಳು ಬದಲಾದ ಸನ್ನಿವೇಶಕ್ಕೆ ಹೊಂದಿಕೊಂಡು ಬದುಕುವುದನ್ನು ರೂಢಿಸಿಕೊಂಡಿವೆ. ಮನುಷ್ಯ ಮತ್ತು ವನ್ಯಜೀವಿಗಳ ನಡುವೆ ಸಹಬಾಳ್ವೆ ಸಾಧ್ಯ ಎಂಬುದು ಅನೇಕ ಬಾರಿ ಸಾಬೀತಾಗಿರುವ ವಿಚಾರ. ವೈವಿಧ್ಯಮಯವಾದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಾನವ ಮತ್ತು ಆನೆಗಳು ಹೊಂದಿಕೊಂಡು ಬದುಕುವುದು ಅನಿವಾರ್ಯ.*
*ವಾಲ್ಪರೈ ಭಾಗದಲ್ಲಿ ವಾಸಿಸುತ್ತಿರುವ ಜನರಿಗೆ ಈಗ ಆನೆಗಳನ್ನು ಕಂಡರೆ ರೇಜಿಗೆ ಎನಿಸುವುದಿಲ್ಲ. ಆನೆಗಳನ್ನು ಅಲ್ಲಿ ಆರಾಧನಾ ಭಾವದಿಂದ ನೋಡಲಾಗುತ್ತದೆ. ಹಿಂಡಿನ ಅಥವಾ ಒಂಟಿ ಸಲಗಗಳ ಚಲನವಲನದ ಮೇಲೆ ತೀವ್ರ ನಿಗಾ ಇಡುವ ವ್ಯವಸ್ಥೆಯನ್ನು ಅಲ್ಲಿ ಕಲ್ಪಿಸಿಕೊಳ್ಳಲಾಗಿದೆ. ಆನೆ ಹಿಂಡು ಬೀಡುಬಿಟ್ಟಿರುವ ಹತ್ತಿರದ ಹಳ್ಳಿಗರಿಗೆ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅವುಗಳ ಇರವನ್ನು ಮೊದಲೇ ತಿಳಿಸಲಾಗುತ್ತದೆ. ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವವರಿಗೆ ಈ ಅಂಶ ವರದಾನವಾಗಿದೆ. ಆದ್ದರಿಂದ, ಅಲ್ಲಿ ಸಂಘರ್ಷದ ಪ್ರಮಾಣ ಶೂನ್ಯದ ಸಮೀಪ ಬಂದಿದೆ.*
Comments
Post a Comment