Blog number 3334. ಪಾನ್ ಪರಾಗ್ ಗುಟ್ಕಾ ಕಂಪನಿ ಸ್ಥಾಪಕ ಎಂ.ಎಂ. ಕೊಠಾರಿ ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ನೀನಾಸಂ ಕೆ.ವಿ.ಸುಬ್ಬಣ್ಣ ಬಹಿರಂಗ ಪತ್ರ
#ಅಡಿಕೆ_ಬೆಳೆಗಾರರ_ಸಮಾವೇಶ
ಸಾಗರದಲ್ಲಿ ಇದೇ 6 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-10.
#ಕೆ_ವಿ_ಸುಬ್ಬಣ್ಣ
ಕೆ.ವಿ. ಸುಬ್ಬಣ್ಣ 1997ರಲ್ಲೇ ಗುಟ್ಕಾ ವಿರೋದಿಸಿದ್ದರು ಮತ್ತು ಸಂಪ್ರದಾಯಿಕ ಅಡಿಕೆಗೆ ಬರುವ ಅಪಾಯದ ಬಗ್ಗೆ ಎಚ್ಚರಿಸಿದ್ದರು.
16 ಫೆಬ್ರುವರಿ 1997 ರಂದು ಸಾಗರ ತಾಲೂಕಿನ ಹೆಗ್ಗೋಡಿನ ಮ್ಯಾಗ್ಸೆಸ್ಸೇ ಗೌರವ ಪ್ರಶಸ್ತಿಗೆ ಬಾಜನರಾದ ನೀನಾಸಂ ಸ್ಥಾಪಕ ಕೆ. ವಿ ಸುಬ್ಬಣ್ಣ ಪಾನ್ ಪರಾಗ್ ಗುಟ್ಕಾ ಕಂಪನಿಯ ಸ್ಥಾಪಕರಾದ ಎಮ್. ಎಮ್. ಕೊಠಾರಿ ಅವರಿಗೆ ಬರೆದ ಬಹಿರಂಗ ಪತ್ರ ಇದು.
ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರು ಗುಟ್ಕಾ ಕಂಪನಿಯ ಮಾಲೀಕರಿಗೆ ಸನ್ಮಾನ ಸಮಾರಂಭ ನಡೆಸಿದ ಸಂದರ್ಭದಲ್ಲಿನ ಪತ್ರ ಇದು.
ಆಗ ಅಡಿಕೆ ವ್ಯಾಪಾರಿಗಳು ಗುಟ್ಕಾ ಕಂಪನಿಗಳು ಇರುವುದರಿಂದಲೇ ಮತ್ತು ಜನ ಗುಟ್ಕಾ ತಿನ್ನುವುದರಿಂದಲೇ ಅಡಿಕೆಗೆ ಬೆಲ ಇರುವುದು ಎಂಬ ರೀತಿ ಗುಟ್ಕಾ ಪರವಾಗಿ ಅಡಿಕೆ ಬೆಳೆಗಾರರ ಮನ ಪರಿವರ್ತಿಸಿದ್ದರು.
ನಂತರ ಗುಟ್ಕಾ 2012-13ರಲ್ಲಿ ರದ್ದು ಆಯ್ತು.
ಈಗ ಅಡಿಕೆ ಏನಾಗುತ್ತದೆ ಗೊತ್ತಿಲ್ಲ ಈ ಬಗ್ಗೆ 6-ಡಿಸೆಂಬರ್ -2024 ರಂದು ಸಾಗರದಲ್ಲಿ ಅಡಿಕೆ ಬೆಳೆಗಾರರ ಸಮಾವೇಶ ನಡೆಯಲಿದೆ.
ಕೆ. ವಿ. ಸುಬ್ಬಣ್ಣನವರ ದೂರ ದೃಷ್ಟಿಯ ಈ ಪತ್ರ ಸರ್ವಕಾಲಿಕ ಆಗಿದೆ ಒಮ್ಮೆ ಓದಿ ನೋಡಿ.
ಅಡಿಕೆ ಉಳಿಯಬೇಕು ಆದರೆ ಗುಟ್ಕಾ ಮಾತ್ರ ರದ್ದಾಗಬೇಕೆಂದು ಕೆ.ವಿ.ಸುಬ್ಬಣ್ಣ ಒಬ್ಬರೆ 1997 ರಲ್ಲಿ ಧ್ವನಿ ಎತ್ತಿದರು.
27 ವರ್ಷಗಳ ನಂತರ ಕೆ.ವಿ.ಸುಬ್ಬಣರ ವಿಚಾರ ಸರಿ ಎನ್ನುವ ತೀರ್ಮಾನಕ್ಕೆ ಸಮಾಜ ಬಂದಿದೆ, ಅವತ್ತು ಯಾವುದೇ ಮುಲಾಜಿಲ್ಲದೆ ಸತ್ಯ ಹೇಳಿದ ಕೆ.ವಿ.ಸುಬ್ಬಣ್ಣರ ದೈರ್ಯ ಮೆಚ್ಚಲೇ ಬೇಕು.
Comments
Post a Comment