https://www.facebook.com/share/p/19MCzPNvVa/
*ಕಾಡಾನೆಗಳು ಎಲ್ಲಿದೆ?*
*ಅನೇಕರು ಈ ಪ್ರಶ್ನೆ ಕೇಳುತ್ತಿದ್ದಾರೆ.*
*ನಿನ್ನೆ ಬೆಳಿಗ್ಗೆ ಬಂದ ಸುದ್ದಿ ಈ ಕಾಡಾನೆಗಳು ಎರಡು ಇರಬೇಕು ಅಥವ ಮೂರು ಎಂದು ಅನುಮಾನಿಸಿದ್ದಾರೆ.*
*ಇಲ್ಲಿ ಗಮನಿಸಬೇಕಾದ ಅಂಶ ಈ ಕಾಡಾನೆಗಳು ಪ್ರವೇಶ ಮಾಡುವ ಕಮದೂರಿನ ಕಾಡು ಸಿದ್ದೇಶ್ವರ ಗುಡಿ ಮೇಲ್ಬಾಗದ #ತೋಟದಕೆರೆ ಪ್ರದೇಶವೇ ಈ ಕಾಡಾನೆಗಳ ಪ್ರವೇಶದ ಹೆಬ್ಬಾಗಿಲಾಗಿದೆ.*
#wildelephant #shivamogga #Anandapuram
#sagar #hosanagara #badrawildlife #corridor
#humanelephantcoexistence #arasalu #kumsi #tuppur #choradi #dam
*ಏಕೆಂದರೆ ಅರಸಾಳು ಅರಣ್ಯ ವಲಯದ ಸರ್ವೇ ನಂಬರ್ 116ರ ಅರಸಾಳು ಗ್ರಾಮಪಂಚಾಯಿತಿಯ ಕಮದೂರು ಸಮೀಪದ ಕಾಡು ಸಿದ್ದೇಶ್ವರ ಗುಡಿಯ ಮೇಲಿರುವ ದಟ್ಟ ಕಾಡಿನ #ತೋಟದಕೆರೆಗೆ ಬಾನುವಾರ ಬೆಳಿಗಿನ ಜಾವ (8- ಡಿಸೆಂಬರ್- 2024) ಬಂದಿರುವ ಸುದ್ದಿ.*
*ಅಲ್ಲಿರುವ ಏಕೈಕ ಮನೆ ಭೋಜಪ್ಪ ಗೌಡರ ಮಗ ಲಿಂಗರಾಜರ ಮನೆಯ ಜಮೀನಿನಲ್ಲಿ ಎರಡು ಆನೆ ಹೆಜ್ಜೆಗಳನ್ನು ಗಮನಿಸಿದ್ದಾರೆ.*
*ನಂತರ 24 ಗಂಟೆ ಅಂದರೆ ಇವತ್ತಿನ ಬೆಳಿಗಿನ ತನಕ ಕಾಡಾನೆಯ ಸಂಚಾರದ ಯಾವುದೇ ಸುದ್ದಿ ಈವರೆಗೆ ಬಂದಿಲ್ಲ.*
*ಭವಿಷ್ಯ ಆ ಕಾಡನೆಗಳು*
*ಸಾಗರ ತಾಲೂಕಿನ ಗಿಳಾಲಗುಂಡಿ ಕೊಲ್ಲಿಬಚ್ಚಲು ಡ್ಯಾಮಿನ ಮಾರ್ಗದಲ್ಲಿನ ಕಾಡಿನಲ್ಲಿ ಸಂಚರಿಸಿರಬಹುದು ಮತ್ತು ಅಲ್ಲೆಲ್ಲೊ ವಿಶ್ರಾಂತಿಯಲ್ಲಿ ಇರಬಹುದು.*
*ಅರಸಾಳು ಅರಣ್ಯ ವಲಯದ ಸರ್ವೇ ನಂಬರ್ 16 ರ ತೋಟದ ಕೆರೆ ಆಲವಳ್ಳಿ - ಕಮದೂರು ಹತ್ತಿರ ಇದೆ.*
*ಕಳೆದ ವರ್ಷವೂ ಆನೆಗಳು ಇದೆ ಕೆರೆಗೆ ಬಂದಿತ್ತು, ಅರಣ್ಯ ಮಧ್ಯದಲ್ಲಿರುವ ಈ ಕೆರೆಯಲ್ಲಿ ವರ್ಷಪೂರ್ತಿ ನೀರಿರುತ್ತದೆ.*
*ಇದನ್ನು ಬಿಟ್ಟರೆ ಇನ್ನು ಸಾಗರ ತಾಲೂಕಿನ ಗಿಳಾಲಗುಂಡಿ ಸಮೀಪದ ಕೊಲ್ಲಿಬಚ್ಚಲು ಡ್ಯಾಮಿಗೆ ಆನೆಗಳು ಹೋಗಬೇಕು.*
*ಅದರ ನಂತರದ ನೀರಿನ ಪಾಯಿಂಟ್ ಅಂಬ್ಲಿಗೋಳ ಡ್ಯಾಮಿನ ಹಿನ್ನೀರು.*
*ಇಲ್ಲಿ ಗಮನಿಸಬೇಕಾದ ಅಂಶ ಈ ಕಾಡಾನೆಗಳು ಪ್ರವೇಶ ಮಾಡುವ ಕಮದೂರಿನ ಕಾಡು ಸಿದ್ದೇಶ್ವರ ಗುಡಿ ಮೇಲ್ಬಾಗದ #ತೋಟದಕೆರೆ ಪ್ರದೇಶವೇ ಈ ಕಾಡಾನೆಗಳ ಪ್ರವೇಶದ ಹೆಬ್ಬಾಗಿಲಾಗಿದೆ.*
*ಈ ಪ್ರದೇಶವನ್ನು ಲಾಲಿಕೆ ಅಥವಾ ಪನಲ್ (Funnel ) ಎಂದು ಪರಿಗಣಿಸಿದರೆ ಈ ಮೂಲಕವೇ ಆನೆಗಳು ಹೊಸ ಆನಂದಪುರಂ ಆನೆ ಕಾರಿಡಾರ್ ಪ್ರವೇಶದ ಸ್ಥಳವಾಗಿದೆ.*
*ಈ ಆನೆಗಳು ಮುಂದಿನ ದಿನದಲ್ಲಿ ಕಾಣಿಸಿಕೊಳ್ಳಬಹುದಾದ ಪ್ರದೇಶಗಳು ಸಾಗರ ತಾಲೂಕಿನ ಗಿಳಾಲುಗುಂಡಿ, ಪತ್ರೆಹೊಂಡ, ಕೊಲ್ಲಿ ಬಚ್ಚಲು ಆಣೆಕಟ್ಟು, ತಂಗಳವಾಡಿ, ಹೊಸಕೊಪ್ಪ, ಕಣ್ಣೂರು, ಉದನೂರು, ಹಿರಿಯರಕ, ಬೈರಾಪುರ,ಡ್ಯಾಮ್ ಹೊಸೂರು ಮತ್ತು ಅಂಬ್ಲಿಗೋಳ ಡ್ಯಾಮಿನ ಹಿನ್ನೀರು ಪ್ರದೇಶ ಆಗಿರಬಹುದು.*
*ಕಾಡಾನೆಗಳ ಬಗ್ಗೆ ಯಾವುದೇ ಮಾಹಿತಿ ಬಂದರೆ ಮತ್ತೆ ಸುದ್ದಿ ಕೊಡುತ್ತೇನೆ.*
Comments
Post a Comment