https://www.facebook.com/share/p/18AzftsbvP/
*#ಕಾಡಾನೆಗಳು*
*ಹೊಸ ಆನೆ ಕಾರಿಡಾರ್ ನಿರ್ಮಾಣವಾಯಿತಾ?*
*ಈ ವರ್ಷವೂ ಈ ಪ್ರದೇಶದ ಸುತ್ತಮುತ್ತ ಕಾಡಾನೆ ಬರುವ ಸಾಧ್ಯತೆ ಇದೆಯೇ?*
*ಕಳೆದ ವರ್ಷ ನಮ್ಮ ಆನಂದಪುರಂನ ಈ ಪ್ರದೇಶದಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದವು.*
*ಅರಸಾಳು -ಕೆಂಚನಾಲ- ಕೆರೆಹಿತ್ತಲು - ಗಿಳಾಲಗುಂಡಿ - ಪತ್ರೆಹೊಂಡ- ಕೊಲ್ಲಿಬಚ್ಚಲು ಡ್ಯಾಮ್ - -ಉದನೂರು-ಕಣ್ಣೂರು- ಬೈರಾಪುರ-ಅಂಬ್ಲಿಗೋಳ ಡ್ಯಾಮ್*
*ಕಳೆದ ವರ್ಷ 62 ದಿನ ಕಾಡಾನೆ ಸಂಚರಿಸುತ್ತಿದ್ದ ಪ್ರದೇಶವಾಗಿತ್ತು.*
#elephant #wildelephants #elephantcarridor
#badrawildlife #ambligoladam #kollibachaludam #Anandapuram #ripponpet #sagar #hosanagara #shivamogga #choradi #achapura #gilalagundi #kenchanala #ForestDepartment #DC #govtofkarnataka
*ಇವತ್ತು ಚೋರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಕೆರೆ, ಶಾಂತಿಕೆರೆ ಭಾಗದಲ್ಲಿ ಮತ್ತು ಸೂಡೂರು ಗೇಟ್ ಬಳಿ ಮೂರು ಕಾಡಾನೆಗಳು ಸಂಚರಿಸುತ್ತಿರುವ ಸುದ್ದಿ ಇದೆ.*
*ಆನೆ ಪ್ರವೇಶ ನಿರ್ಬಂಧಿಸಲು ಪಸಲು ರಕ್ಷಣೆ ಮಾಡಲು ಬೇಲಿಗಳಿಗೆ ವಿದ್ಯುತ್ ನೀಡುವ ತಪ್ಪು ಕೆಲಸ ಮಾತ್ರ ಈ ಭಾಗದಲ್ಲಿ ಯಾರೂ ರೈತರು ಮಾಡಬಾರದಾಗಿ ವಿನಂತಿ.*
*ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಯಮಗಳು ದೊಡ್ಡ ಶಿಕ್ಷೆಗೆ ಕಾರಣವಾಗಲಿದೆ ಇದನ್ನು ಈ ಪ್ರದೇಶದ ವಾಸಿಗಳಿಗೆ ರೈತರಿಗೆ ಹೆಚ್ಚು ಶೇರ್ ಮಾಡಲು ವಿನಂತಿ.*
*ಕಳೆದ ವರ್ಷ ಅಕ್ಟೋಬರ್ 15 ರಲ್ಲಿ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೆಂಚನಾಲದಲ್ಲಿ ಕಾಡಾನೆಗಳು ಕಾಣಿಸಿಕೊಂಡಿತ್ತು.*
*ಕಳೆದ ವಷ೯ ಡಿಸೆಂಬರ್ 16ರಂದು ಅನಂದಪುರಂ ಸಮೀಪದ ಆಚಾಪುರ ಗ್ರಾಮ ಪಂಚಾಯಿತಿಯ ಗಿಳಾಲಗುಂಡಿ ಮತ್ತು ಪತ್ರೆಹೊಂಡ ಭಾಗದಲ್ಲಿ ಹೆಚ್ಚು ಸಂಚರಿಸಿತು.*
*ಕಳೆದ ವಷ೯ ಡಿಸೆಂಬರ್ 22 ರಲ್ಲಿ ಈ ಕಾಡಾನೆಗಳು ಸಾಗರ ತಾಲೂಕಿನ ಆನಂದಪುರಂ ಸಮೀಪದ ಗಿಳಾಲಗುಂಡಿ,ಕೆರೆಹಿತ್ತಲು, ಕಣ್ಣೂರು, ಹಿರಿಯರಕ, ಬೈರಾಪುರ ಅಲ್ಲೆಲ್ಲ ಸಂಚರಿಸಿ ಶಿಕಾರಿಪುರ ತಾಲ್ಲೂಕಿನ ಅಂಚಿನ ಅಂಬ್ಲಿಗೋಳ ಡ್ಯಾಮಿನ ಹಿನ್ನೀರಿನ ತನಕ ಸಾಗಿದ್ದವು.*
*ಕಳೆದ ವರ್ಷಗಿಳಾಲಗುಂಡಿ ಸಮೀಪದ ಕೊಲ್ಲಿ ಬಚ್ಚಲು ಡ್ಯಾಮ್ ಹಿಂಭಾಗದಲ್ಲಿ ಕೆಲವು ದಿನ ತಂಗಿದ್ದವು.*
*ನಮ್ಮ ಊರು ಆನಂದಪುರಂ ಗೆ ಅತಿ ಸಮೀಪದಲ್ಲಿ ಸುಮಾರು 62 ದಿನಗಳು ಈ ಕಾಡಿನ ಆನೆಗಳು ವಾಪಸು ಹೋಗಲು ಸುರಕ್ಷಿತ ಮಾರ್ಗವಿಲ್ಲದೆ ಇಲ್ಲೇ ಉಳಿದಿದ್ದವು.*
*ವಾಪಾಸು ಹೋಗುವ ಮಾರ್ಗದಲ್ಲಿ ರೈತರು ತಮ್ಮ ಸುಗ್ಗಿ ಕಾಲದ ಫಸಲು ರಕ್ಷಣೆಗಾಗಿ ಪಟಾಕಿಗಳನ್ನು ಸಿಡಿಸಿದ್ದರಿಂದ ಇವುಗಳಿಗೆ ವಾಪಸಾತಿಗೆ ತಡೆ ಉಂಟಾಗಿತ್ತು.*
*ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ಪ್ರಾರಂಭಿಸಿದ್ದರು ಅದರ ಫಲವಾಗಿ ಕಳೆದ ವರ್ಷ 28 ಡಿಸೆಂಬರ್ 2023ರ ಬೆಳಗಿನ ಜಾವ ಅಯನೂರು- ರಿಪ್ಪನಪೇಟೆ ಮಾರ್ಗ ಮಧ್ಯದ ಒಂಬತ್ತನೇ ಮೈಲಿಕಲ್ಲಿನಲ್ಲಿ ಆನಂದಪುರಂ ಭಾಗದಲ್ಲಿ ದೀರ್ಘಕಾಲ ಉಳಿದಿದ್ದ ಕಾಡಾನೆಗಳು ರಸ್ತೆ ದಾಟಿ ಭದ್ರಾ ಅಭಯಾರಣ್ಯದ ಕಡೆ ಸಾಗಿದ ಸುದ್ದಿ ಬಂದಿತ್ತು.*
*ಬಹುಷ್ಯ ಕಳೆದ ವರ್ಷ ಕಾಡಾನೆಗಳು ಓಡಾಡಿದ ಮಾರ್ಗದಲ್ಲೇ ಈ ವರ್ಷವೂ ಬರುವ ಸಾಧ್ಯತೆಗಳು ಇದೆ ಈ ಮೂಲಕ ಈ ಮಾರ್ಗ ಹೊಸ ಆನೆ ಕಾರಿಡಾರ್ ಆಗುವ ಸಾಧ್ಯತೆ ಇದೆ ಈ ಭಾಗದ ಜನ ವಸತಿ ಕೇಂದ್ರಗಳಲ್ಲಿ ಮತ್ತು ರೈತರ ಕೃಷಿ ಭೂಮಿಗಳಲ್ಲಿ ವಾಸಿಸುವ ಜನರು ಜಾಗೃತರಾಗಿರಬೇಕು.*
*ಅರಸಾಳು ಕೆಂಚನಾಲ ಭಾಗದಲ್ಲಿ ಕಳೆದ ವರ್ಷ ಕಾಡಾನೆ ಸಾಗಿ ಬಂದ ಮಾರ್ಗ ಈಗ ಹೆಚ್ಚು ಜಾಗೃತಿಯಿಂದ ಕಾಯುವ ಮೂಲಕ ಈ ಮಾರ್ಗ ಪ್ರವೇಶಿಸದಂತೆ ಅಲ್ಲಿಯೇ ದಿಗ್ಬಂದನ ಹಾಕಿದರೆ ಆನೆಗಳು ಆನಂದಪುರಂ ಭಾಗಕ್ಕೆ ಸಾಗುವುದಿಲ್ಲ, ಇದನ್ನು ಅರಣ್ಯ ಇಲಾಖೆ ಹೆಚ್ಚು ಗಮನಿಸಬೇಕು.*
*ಒಂದೊಮ್ಮೆ ಕಾಡಾನೆಗಳು ಕಳೆದ ವರ್ಷದಂತೆ ಈ ಭಾಗಕ್ಕೆ ಬಂದರೆ ಪುನಃ ಬಂದ ದಾರಿಯಲ್ಲಿ ವಾಪಸು ಸಾಗಲು ಈ ಪ್ರದೇಶದ ರೈತರು ಅವಕಾಶ ಮಾಡಿಕೊಡಬೇಕಾಗುತ್ತದೆ, ವಾಪಸು ಹೋಗುವ ಸಂದರ್ಭದಲ್ಲಿ ವಾಪಾಸು ಹೋಗುವ ಮಾರ್ಗದಲ್ಲಿ ಪಟಾಕಿಗಳನ್ನು ಸಿಡಿಸಿದರೆ ಅವುಗಳು ಭಯದಿಂದ ವಾಪಸ್ ಆಗದೆ ಇಲ್ಲೇ ಉಳಿಯುವ ಸಾಧ್ಯತೆ ಹೆಚ್ಚು.*
*ಸಹಜವಾಗಿ ರೈತರು ಸುಗ್ಗಿ ಕಾಲ ತಮ್ಮ ಪಸಲು ರಕ್ಷಣೆಗಾಗಿ ತಮ್ಮ ಅಡಿಕೆ ತೆಂಗು ತೋಟಗಳ ಸಂರಕ್ಷಣೆಗಾಗಿ ಆನೆಗಳ ಪ್ರವೇಶ ನಿರ್ಬಂಧಿಸಲು ಪಟಾಕಿ ಸಿಡಿಸುವುದು ಒಂದೇ ಪರಿಹಾರ ಆಗಿದ್ದರೂ ಈ ಕಾಡಾನೆಗಳನ್ನ ಅವುಗಳ ಮೂಲಸ್ಥಾನ ಅಭಯಾರಣ್ಯಕ್ಕೆ ಹೋಗಲು ಅನುವು ಮಾಡದಿದ್ದರೆ ಅವುಗಳು ಮನುಷ್ಯನ ಜೊತೆ ಸಂಘರ್ಷಕ್ಕೆ ಮುಂದಾದರೆ ದೊಡ್ಡ ಅಪಾಯವೇ ಮುಂದಿನ ದಿನದಲ್ಲಿ ಎದುರಿಸಬೇಕಾದೀತು.*
*ಆನೆ ಪ್ರವೇಶ ನಿರ್ಬಂಧಿಸಲು ಪಸಲು ರಕ್ಷಣೆ ಮಾಡಲು ಬೇಲಿಗಳಿಗೆ ವಿದ್ಯುತ್ ನೀಡುವ ತಪ್ಪು ಕೆಲಸ ಮಾತ್ರ ಈ ಭಾಗದಲ್ಲಿ ಯಾರೂ ರೈತರು ಮಾಡಬಾರದಾಗಿ ವಿನಂತಿ.*
*ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಯಮಗಳು ದೊಡ್ಡ ಶಿಕ್ಷೆಗೆ ಕಾರಣವಾಗಲಿದೆ ಇದನ್ನು ಈ ಪ್ರದೇಶದ ವಾಸಿಗಳಿಗೆ ರೈತರಿಗೆ ಹೆಚ್ಚು ಶೇರ್ ಮಾಡಲು ವಿನಂತಿ.*
Comments
Post a Comment