*#viralvedeo*
https://m.youtube.com/shorts/LmvAQLj_r6E
*#ಕಾಡಾನೆಗಳನ್ನು_ರಾಷ್ಟ್ರೀಯ_ಹೆದ್ದಾರಿ_ವಾಹನ_ಸಂಚಾರ_ನಿರ್ಬಂಧಿಸಿ*
*#ರಸ್ತೆ_ದಾಟಿಸಿದ_ಅಪರೂಪದ_ವಿಡಿಯೊ*
*ಕಳೆದ ವರ್ಷದ 25 - ಡಿಸೆಂಬರ್- 2023ರ ವಿಡಿಯೋ ನೋಡಿ.*
*ಆನಂದಪುರಂ ಭಾಗದಲ್ಲಿ ಕಳೆದ ವರ್ಷ ಮೊದಲ ಬಾರಿಗೆ ಕಾಣಿಸಿಕೊಂಡ ಕಾಡಾನೆಗಳು*
*ಕಾಡಾನೆಗಳು 80 ದಿನಗಳ ನಂತರ ಭದ್ರಾ ಅಭಯಾರಣ್ಯಕ್ಕೆ ಕಳಿಸುವ ಪ್ರಯತ್ನದಲ್ಲಿ.*
*ಆನಂದಪುರಂ ಸಮೀಪದ ಪತ್ರೆಹೊಂಡ ಮತ್ತು ಗಿಳಾಲಗುಂಡಿ ಮಧ್ಯದ ಶಿವಮೊಗ್ಗ ಸಾಗರ ರಾಷ್ಟ್ರೀಯ ಹೆದ್ದಾರಿ 69 ದಾಟಿಸಲು ನಡೆದ ಹರಸಾಹಸ.*
*ತುಪ್ಪೂರಿನಿಂದ ಗಿಳಾಲಗುಂಡಿ ತನಕ ಮೂರು ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರ ತಡೆಯಲಾಗಿತ್ತು.*
*ಇದು ಅವತ್ತಿನ ಸಂತೋಷದ ಸುದ್ದಿ ಆಗಿತ್ತು.*
*ಮುಂದೆ ಅಯನೂರು ರಿಪ್ಪನಪೇಟೆ ರಸ್ತೆ ದಾಟಿಸಿ ಈ ಕಾಡಾನೆಗಳನ್ನ ಅವುಗಳ ಮೂಲ ನೆಲೆ ತಲುಪಿಸುವ ಕಾರ್ಯಯೋಜನೆ.*
*ದಿನಾಂಕ 28-ಡಿಸೆಂಬರ್- 2023 ರ ಬೆಳಗಿನ ಜಾವ ಅರಸಾಳು ರಿಪ್ಪನಪೇಟಿ ರಾಜ್ಯ ಹೆದ್ದಾರಿಯ 9ನೇ ಮೈಲಿಕಲ್ಲಿನಲ್ಲಿ ಆನಂದಪುರಂ ಭಾಗದಿಂದ ರಸ್ತೆ ದಾಟಿ ಭದ್ರಾ ಅಭಯಾರಣ್ಯದ ಕಡೆ ದಾಟಿ ಹೋಗಿದ್ದವು.*
*ದೀರ್ಘಾವದಿ ದಾರಿ ತಪ್ಪಿದ ಕಾಡಾನೆಗಳಿಗೆ ಹ್ಯಾಪಿ ಜರ್ನಿ... ಬೈ ಬೈ.... ಅಂತ ಸುಖಾಂತ್ಯವಾದ ಪ್ರಕರಣ ಪುನಃ ಈ ವರ್ಷ ಮರುಕಳಿಸುವ ಸಾಧ್ಯತೆ.*
*ವಿಳಂಭವಾದರೂ ಅಂತಿಮವಾಗಿ 80 ದಿನಗಳ ನಂತರ ಭದ್ರಾ ಅಭಯಾರಣ್ಯದಿಂದ ಅರಸಾಳು- ಕೆ೦ಚನಾಲ- ಕೆರೆಹಿತ್ತಲು - ಗಿಳಾಲಗುಂಡಿ - ಪತ್ರೆಹೊಂಡ-ಚೊರಡಿ - ಕುಂಸಿ - ಅಯನೂರು - ಅಂಬ್ಲಿಗೋಳ - ಬೈರಾಪುರ ಭಾಗದಲ್ಲಿ ದಾರಿ ತಪ್ಪಿ ಸಂಚರಿಸುತ್ತಿದ್ದ ಕಾಡಾನೆಗಳನ್ನು ಅವುಗಳು ಮಾನವ ಸಂಘರ್ಷ ಮಾಡುವ ಮೊದಲೇ ಅವುಗಳ ಮೂಲ ನೆಲೆ ಭದ್ರಾ ಅಭಯಾರಣ್ಯ ತಲುಪಿಸುವ ಕೆಲಸ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಮಾಡಿತ್ತು.*
*ಇಲ್ಲದಿದ್ದರೆ ಈ ಭಾಗದ ಜನರ ಜೀವ ಮತ್ತು ಕಾಡಾನೆಗಳ ಜೀವಕ್ಕೆ ಆಪತ್ತು ಎಂದು ಸುದ್ದಿ ಆಗಿತ್ತು.*
*ಮೂರು ಆನೆ ಮತ್ತು ಒಂದು ಮರಿ ಆನೆ ಈ ಭಾಗದಲ್ಲಿ ಸಂಚರಿಸುತ್ತಿತ್ತು, ಕಳೆದ ವರ್ಷ ಡಿಸೆಂಬರ್ ತಿಂಗಳು ಪೂರ್ತಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ದಾರಿ ತಪ್ಪಿದ ಕಾಡಾನೆಗಳನ್ನು ಭದ್ರಾ ಅಭಯಾರಣ್ಯ ಸೇರಿಸುವ ಕೆಲಸವೇ ಆಗಿತ್ತು.*
*ಅವತ್ತು ಮಧ್ಯಾಹ್ನ ರಾ.ಹೆದ್ದಾರಿ 69ರ ಶಿವಮೊಗ್ಗ ಸಾಗರ ಮಾರ್ಗದಲ್ಲಿ ತುಪ್ಪೂರಿನಿಂದ ಗಿಳಾಲಗುಂಡಿ ತನಕ ಸಂಪೂರ್ಣವಾಹನ ಸಂಚಾರ ನಿರ್ಬಂದಿಸಲಾಗಿತ್ತು.*
*ಅರಣ್ಯ ಇಲಾಖೆಯ ಪರಿಶ್ರಮದಿಂದ ಆನಂದಪುರಂ ಸಮೀಪದ ಗಿಳಾಲಗುಂಡಿ ಸಮೀಪ ಎರೆಡು ಕಾಡಾನೆಗಳು ರಾಷ್ಟ್ರೀಯ ಹೆದ್ದಾರಿ ದಾಟಿದ ವಿಡಿಯೋ ಇದು.*
*ಇಲ್ಲಿಂದ ಪತ್ರೆಹೊಂಡ, ಗಿಳಾಲಗುಂಡಿ, ಕೆರೆಹಿತ್ತಲು, ಲಕ್ಕವಳ್ಳಿ, ಮಾದಾಪುರ, ಕೆಂಚನಾಲ ದಾಟಿ ಅಯನೂರು - ರಿಪ್ಪನಪೇಟೆ ಮಾರ್ಗದ ರಾಜ್ಯ ಹೆದ್ದಾರಿ ದಾಟಬೇಕಾದ ಈ ಕಾಡಾನೆಗಳು ಇದೇ ಮಾರ್ಗದಲ್ಲಿ ಇಲ್ಲಿಗೆ ಬಂದಿದ್ದವು.*
*ಅರಸಾಳು ರಿಪ್ಪನಪೇಟಿ ಹೆದ್ದಾರಿ ದಾಟಿಸಿ ಬಿಟ್ಟರೆ ಭದ್ರಾ ಅಭಯಾರಣ್ಯ ಸೇರುತ್ತದೆ.*
*ಮಾರ್ಗ ಮದ್ಯದಲ್ಲಿ ಈ ಆನೆಗಳಿಗೆ ಕಾಯುತ್ತಿರುವ ಇದರ ಗುಂಪಿನ ತಾಯಿ ಮತ್ತು ಮಗು ಆನೆ ಕೂಡ ಈ ಗುಂಪಿಗೆ ಸೇರಿಕೊಳ್ಳಲಿದೆ ಎನ್ನಲಾಗಿತ್ತು.*
*ಇದರಿಂದ ಈ ಕಾಡಾನೆಗಳು ತಮ್ಮ 80 ದಿನಗಳ ದೀರ್ಘಾವದಿ ಅತಂತ್ರದ ದಾರಿ ತಪ್ಪಿದ ಕಷ್ಟದ ಜೀವನ ಕೊನೆಗೊಳ್ಳಲಿದೆ ಎಂಬ ಆಶಾ ಭಾವನೆ ಈ ಭಾಗದ ಜನರದ್ದು.*
*ಆದರೆ ಈ ರಾಷ್ಟ್ರೀಯ ಹೆದ್ದಾರಿ ದಾಟಿದ ಕಾಡಾನೆಗಳು ಮರುದಿನ ಮತ್ತೆ ವಾಪಾಸು ರಾಷ್ಟ್ರೀಯ ಹೆದ್ದಾರಿ ದಾಟಿ ಕುಣೇಹೊಸೂರು ಕಾಡಲ್ಲಿ ಕಾಣಿಸಿಕೊಂಡಿತ್ತು.*
*ದಿನಾಂಕ 28-ಡಿಸೆಂಬರ್- 2023 ರ ಬೆಳಗಿನ ಜಾವ ಅರಸಾಳು ರಿಪ್ಪನಪೇಟಿ ರಾಜ್ಯ ಹೆದ್ದಾರಿಯ 9ನೇ ಮೈಲಿಕಲ್ಲಿನಲ್ಲಿ ಆನಂದಪುರಂ ಭಾಗದಿಂದ ರಸ್ತೆ ದಾಟಿ ಭದ್ರಾ ಅಭಯಾರಣ್ಯದ ಕಡೆ ದಾಟಿ ಹೋಗಿದ್ದವು.*
*ಆದರೆ ಕಾಡಾನೆಗಳು ಮುಂದಿನ ವರ್ಷ ಇದೇ ಮಾರ್ಗದಲ್ಲಿ ಬರುವ ಸಾಧ್ಯತೆ ಇದೆ ಅಂತಲೂ ಹಾಗೂ ಕಾಡಾನೆಗಳು ಹೊಸದಾಗಿ ಕಾರಿಡಾರ್ ಗುರುತಿಸಿ ಕೊಳ್ಳುವ ಸಾಧ್ಯತೆ ಇರುತ್ತದೆಂದು ವನ್ಯಜೀವಿ ಸಂಶೋದಕರು ಹೇಳಿದ್ದರು.*
*ಅವರ ಮಾತು ಸತ್ಯ ಅನ್ನಿಸುವಂತೆ ನಿನ್ನೆ ಈ ಮಾರ್ಗದ ಸಮೀಪ ಕಾಡಾನೆಗಳು ಪ್ರತ್ಯಕ್ಷವಾಗಿದೆ.*
Comments
Post a Comment