#ದಂಗೆಯ_ಸುಳಿಯಲ್ಲಿ_ನಾನು
ವಿಷ್ಣು_ಭಟ್_ಗೋಡಶೆ_ವರಸಾಯಿಕರ_ಎಂಬ_ಮರಾಠಿ_ಪುರೋಹಿತರು_ಬರೆದ_ಪ್ರತ್ಯಕ್ಷ_ಅನುಭವ_ಕಥನ
ದಂಗೆಯ_ಸುಳಿಯಲ್ಲಿ_ನಾನು_ಎಂಬ_ಪುಸ್ತಕ
ಸಿಪಾಯಿ_ದಂಗೆ_1857ರನ್ನು_ಪ್ರತ್ಯಕ್ಷವಾಗಿ_ನೋಡಿ_ದಾಖಲಿಸಿದ_ದಾಖಲೆ.
ಈ_ಪುಸ್ತಕ_ಮೂರು_ಬಾರಿ_ಓದಿದ್ದೆ.
ವಿಷ್ಣು ಭಟ್ಟ ಗೋಡಶೆ ವರಸಾಯಿಕರ ಸಂಸ್ಕೃತ ವಿದ್ಯಾ ಪಾರಂಗತ ಯಜ್ಞ ಯಾಗಗಳು, ಪೂಜೆ ಪುನಸ್ಕಾರಗಳನ್ನು ಮಾಡಿಸುವುದರಲ್ಲಿ ನಿಸ್ಸೀಮರು ಇವರು ಮಹಾರಾಷ್ಟ್ರದ ಪುಣೆಯ ಬಳಿಯ ವರಸ ಊರಿನವರು.
ಪೇಷ್ವೆಯಿಂದ ಪತನದ ನಂತರ ತನ್ನ ಪರಿಸರದಲ್ಲಿ ಬ್ರಾಹ್ಮಣ ವೃತ್ತಿಗೆ ಪ್ರೋತ್ಸಾಹ ಸಿಗದ ಕಾರಣ ಬ್ರಹ್ಮಾವರ್ತದಲ್ಲಿ (ಕಾನ್ಪುರದಲ್ಲಿ) ದಿವ೦ಗತ ಪೇಷ್ವೆ ಇಮ್ಮಡಿ ಬಾಜಿ ರಾಯನ ದತ್ತು ಪುತ್ರ ನಾನಾ ಸಾಹೇಬನ ಆಶ್ರಯದಲ್ಲಿದ್ದರೆ ಅಲ್ಲಿದ್ದ ತನ್ನ ಚಿಕ್ಕಪ್ಪನ ಸಹಾಯದಿಂದ ಹಣಗಳಿಸಬಹುದೆಂದು ಉತ್ತರ ಭಾರತದ ತೀರ್ಥಕ್ಷೇತ್ರ ಸಂದರ್ಶಿಸುವ ಉದ್ದೇಶದಿಂದ ತನ್ನ ಇನ್ನೊಬ್ಬ ಚಿಕ್ಕಪ್ಪನ ಜೊತೆ ನಡೆಸಿದ ದೀರ್ಘ ಪ್ರವಾಸ ಕಥನ ಇದು.
ಕಾಲು ನಡಿಗೆಯಲ್ಲೇ ಈ ಪ್ರವಾಸ ಕಾಲದಲ್ಲಿ ಇವರು ಅನುಭವಿಸಿದ ಕಷ್ಟಗಳು, ಕಳ್ಳರ ಹಾವಳಿ, ಆಗಲೇ ಬ್ರಿಟಿಷರ ವಿರುದ್ದ ಸಿಡಿದೆದ್ದ ಸಿಪಾಯಿಗಳ ದಂಗೆ ಈ ಎಲ್ಲಾ ಕಷ್ಟಗಳು ಇದರಲ್ಲಿ ದಾಖಲಿಸಿದ್ದಾರೆ.
ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ನಾನಾ ಸಾಹೇಬ ಇವರನ್ನೆಲ್ಲ ಇವರು ಬೇಟಿ ಮಾಡುತ್ತಾರೆ ಅಕ್ಷರಶಃ ಯುದ್ದದ ಮದ್ಯೆ ಇವರು ಜೀವ ಉಳಿದದ್ದು ಆಶ್ಚರ್ಯವೇ.
ಇವರು ಹೋದಲ್ಲೆಲ್ಲ ದಂಗೆ ಆರಂಭವಾಗುತ್ತದೆ, ಕೊನೆಗೆ ಕಾಶಿಗೆ ಹೋಗಿ ಗಂಗಾಜಲ ತೆಗೆದು ಕೊಂಡು ಬರಿಗೈಯಲ್ಲಿ ಸ್ವಗ್ರಾಮ ತಲುಪುತ್ತಾರೆ.
138 ಪುಟದ ಈ ಪುಸ್ತಕ ಒಮ್ಮೆ ಓದಿದರೆ ಪುನಃ ಪುನಃ ಈ ಪುಸ್ತಕ ಓದದೇ ಬಿಡುವುದಿಲ್ಲ.
ಅಮೃತ್ ಲಾಲ್ ಸಾಗರ್ ಹಿಂದಿಗೆ ಅನುವಾದಿಸಿದ ಪುಸ್ತಕ ಕನ್ನಡಕ್ಕೆ ಅನುವಾದಿಸಿದವರು ಪ್ರೇಮ ಎನ್.ರಾವ್ ಅರಸಿಕೆರೆ .
https://www.totalkannada.com/products/839c8aa4-9dea-4111-b625-45797d93d28f.html?ref=catalogue&product-name=Dangeya%20Suliyalli%20Naanu
☝️ ಈ ಲಿಂಕ್ ನಿಂದ ಪುಸ್ತಕ ತರಿಸಿದ್ದೆ.
Comments
Post a Comment