https://www.facebook.com/share/p/15rwQsz4H4/
*#ಭೈರಣ್ಣದಂಪತಿಗಳು.*
*ಶತಾಯುಷಿಗಳಾಗಲಿ ಎಂದು ಹಾರೈಸುತ್ತೇನೆ.*
*ಬೈರಣ್ಣನಿಗೆ 90 ವರ್ಷ ದಾಟಿರಬಹುದು, ನಿನ್ನೇ ಇವರ ಊರಿನ ಯೋಗೇಂದ್ರ ಎಂಬ ಗೆಳೆಯ ಬಂದಾಗ ಬೈರಣ್ಣನ ಸುದ್ದಿ ಮಾತಾಡಿದಾಗ ಅವರಿಗೆ ಬೈರಣ್ಣ ದಂಪತಿಗಳ ಫೋಟೋ ತೆಗೆದು ವಾಟ್ಸಪ್ ಮಾಡಲು ಹೇಳಿದ್ದೆ.*
*ಯೋಗೇಂದ್ರ ರಾತ್ರಿಯೇ ಬೈರಣ್ಣ ದಂಪತಿಯನ್ನು ಭೇಟಿ ಮಾಡಿ ಈ ಫೋಟೋ ಕಳಿಸಿದ್ದಾರೆ.*
*ಸದ್ಯದಲ್ಲೇ ಈ ದಂಪತಿಗಳನ್ನ ಭೇಟಿ ಮಾಡಬೇಕು ಅನಿಸುತ್ತಿದೆ.*
#Anandapuram #yadehalli #shivamogga #arrak
#ExciseDepartment #koralikoppa #navaturu #andasura #agedcare #couples #couplegoals
*ನಮ್ಮ ಊರು ಆನಂದಪುರಂನಿಂದ ರಿಪ್ಪನಪೇಟೆ ಮಾರ್ಗದಲ್ಲಿ ಎರಡು ಕಿಲೋಮೀಟರ್ ದೂರದಲ್ಲಿರುವ ಕೊರಲಿಕೊಪ್ಪ ಎಂಬ ಯಡೇಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮದಲ್ಲಿ ತನ್ನ ಮನೆಯಲ್ಲಿ ಸರಾಯಿ ವ್ಯಾಪಾರ ಮಾಡುತ್ತಿದ್ದರು.*
*ಬೈರಣ್ಣ ನನ್ನ ಹಿರಿಯ ಮಿತ್ರರು ಇವರಿಗೆ ನಮ್ಮ ಊರಲ್ಲಿ ಜನ ಕರಿಯುವುದು ಸರಾಯಿ ಭೈರಣ್ಣ ಅಂತ ಇದಕ್ಕೆ ಕಾರಣವೂ ಇದೆ, ಏನೆಂದರೆ ಯಾವಾಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದಾಗ ಸರಾಯಿ ಅಂಗಡಿ ಪ್ರಾರಂಭವಾಯಿತೋ ಅವತ್ತಿನಿಂದ ಸರಾಯಿ ರದ್ದಾಗುವ ತನಕ ಬೈರಣ್ಣ ಆನಂದಪುರಂನಿಂದ ರಿಪ್ಪನ್ ಪೇಟೆ ಮಾರ್ಗದಲ್ಲಿ ಎರಡು ಕಿಲೋಮೀಟರ್ ದೂರದಲ್ಲಿರುವ ಕೊರಲಿಕೊಪ್ಪ ಎಂಬ ಯಡೇಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮದಲ್ಲಿ ತನ್ನ ಮನೆಯಲ್ಲಿ ಸರಾಯಿ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದರು.*
*ಒಂದು ವಿಶೇಷ ಎಂದರೆ ಭೈರಣ್ಣ ಯಾವ ಕಾರಣಕ್ಕೂ ಸರಾಯಿ ಕುಡಿದವರಲ್ಲ, ಧೂಮಪಾನ ತುಂಬಾಕು ಕೂಡ ಅವರು ಸೇವಿಸಲಿಲ್ಲ.*
*ಪಿತ್ರಾರ್ಜಿತವಾಗಿ ದೊಡ್ಡ ಜಮೀನಿನ ಖಾತೆದಾರರಾಗಿದ್ದರು ಅವರ ಕುಟುಂಬಕ್ಕೆ ಬಂದ ಕೃಷಿ ಜಮೀನಿನಲ್ಲಿ ಹೆಚ್ಚು ಜಾಗ ಕುಷ್ಕಿ ಜಮೀನಾಗಿತ್ತು, ಅದರಲ್ಲಿ ಯಾವುದೇ ಬೆಳೆ ಬೆಳೆಯುತ್ತಿರಲಿಲ್ಲ, ಭತ್ತ ಬೆಳೆಯುವ ಜಮೀನು ಕೂಡ ಮಳೆ ಆಧಾರಿತ ಜಮೀನು ಅದರಲ್ಲಿ ಬೆಳೆದ ಬತ್ತ ಅವರ ಕುಟುಂಬದ ಊಟಕ್ಕೆ ಸಾಕಾಗುತ್ತಿತ್ತು.*
*ಬೈರಣ್ಣನಿಗೆ ಎರಡು ಹೆಣ್ಣು, ಎರಡು ಗಂಡು ಮಕ್ಕಳು ಎಲ್ಲರನ್ನೂ ಪದವೀ ತನಕ ಕಷ್ಟಪಟ್ಟು ಓದಿಸಿದರು, ಅವರ ಗುರಿ ತನ್ನ ಮಕ್ಕಳು ಓದಿ ಉತ್ತಮ ನಾಗರೀಕರಾಗಿ ಬಾಳಿ ಬದುಕಬೇಕೆಂಬುದು ಆಸೆ.*
*ಅವರ ಆಸೆಗೆ ತಕ್ಕಂತೆ ಮಕ್ಕಳು ವಿದ್ಯಾವಂತರರು, ಉದ್ಯೋಗವಂತರು ಆದರು, ಅವರಲ್ಲಿ ದೊಡ್ಡ ಮಗ ರ್‌ಟಿಓ ಅಧಿಕಾರಿ (RTO) ಆಗಿದ್ದಾರೆ ಅವರು ನನ್ನ ಶಾಲಾ ಸಹಪಾಠಿ.*
*ಹಾಗಂತ ತಂದೆ ತಾಯಿಯನ್ನ ನಿರ್ಲಕ್ಷಿಸುವ ಮಕ್ಕಳಲ್ಲ ಅವರೆಲ್ಲ, ಅಷ್ಟೇ ಪ್ರೀತಿ ವಿಶ್ವಾಸದಿಂದ ತಂದೆ ತಾಯಿಯನ್ನ ಗೌರವದಿಂದ ನೋಡಿಕೊಳ್ಳುತ್ತಿದ್ದಾರೆ.*
*ಬೈರಣ್ಣನಿಗೆ 90 ವರ್ಷ ದಾಟಿರಬಹುದು, ನಿನ್ನೇ ಇವರ ಊರಿನ ಯೋಗೇಂದ್ರ ಎಂಬ ಗೆಳೆಯ ಬಂದಾಗ ಬೈರಣ್ಣನ ಸುದ್ದಿ ಮಾತಾಡಿದಾಗ ಅವರಿಗೆ ಬೈರಣ್ಣ ದಂಪತಿಗಳ ಫೋಟೋ ತೆಗೆದು ವಾಟ್ಸಪ್ ಮಾಡಲು ಹೇಳಿದ್ದೆ.*
*ಯೋಗೇಂದ್ರ ರಾತ್ರಿಯೇ ಬೈರಣ್ಣ ದಂಪತಿಯನ್ನು ಭೇಟಿ ಮಾಡಿ ಈ ಫೋಟೋ ಕಳಿಸಿದ್ದಾರೆ.*
*ಸದ್ಯದಲ್ಲೇ ಈ ದಂಪತಿಗಳನ್ನ ಭೇಟಿ ಮಾಡಬೇಕು ಅನಿಸುತ್ತಿದೆ.*
Comments
Post a Comment