Skip to main content

Posts

Showing posts with the label This is small frog of western ghats

Blog number 1617. ನಮ್ಮ ಮಲೆನಾಡಿನ ಕೆರೆ ಕಟ್ಟೆಯ ಗೊಜಮೊಟ್ಟೆಯ ಈ ಕಪ್ಪೆಯ ವೈಜ್ಞಾನಿಕ ಹೆಸರೇನು?

#ಮುಂಗಾರು_ಮಳೆ_ಪ್ರಾರಂಭದ_ಈ_ಕಪ್ಪೆ https://youtu.be/I4_DORW7J9k https://youtube.com/shorts/Db-F97P9D7Y?feature=share #ಕೆರೆ_ಕಟ್ಟೆಯಲ್ಲಿ_ಗುಂಪು_ಗುಂಪಾದ_ಗೊಜಮೊಟ್ಟೆಯಿಂದ_ಕಪ್ಪೆ #ಈ_ಕಪ್ಪೆ_ಜಾಸ್ತಿ_ಆದರೆ_ಮಳೆ_ಜಾಸ್ತಿ_ಅನ್ನುವ_ನಂಬಿಕೆ #ಕಳೆದ_ವರ್ಷಗಳಲ್ಲಿ_ಮಳೆ_ಜಾಸ್ತಿ_ಆದಾಗ_ಈ_ಕಪ್ಪೆ_ಇಲ್ಲವೇ_ಇಲ್ಲ #ಈ_ವಷ೯_ಮುಂಗಾರು_ವಿಳಂಬದಲ್ಲಿ_ಈ_ಕಪ್ಪೆ_ಜಾಸ್ತಿ_ಇದೆ_ಏಕೆ?   ಫೆಬ್ರುವರಿ ಕೊನೆಯಿಂದ ಮುಂಗಾರು ಪ್ರಾರಂಭದ ಕಾಲದವರೆಗೆ ನಮ್ಮ ಊರ ಸುತ್ತಮುತ್ತದ ಕೆರೆ ಕಟ್ಟೆಗಳಲ್ಲಿ ಈ  ಕಪ್ಪೆ ಲಾವಾ೯ಗಳು ಕಪ್ಪಾದ ಬಣ್ಣದ ಗುಂಪು ಗುಂಪಾಗಿ ಕಾಣಿಸುತ್ತದೆ ಇದನ್ನು ಸ್ಥಳಿಯರು ಗೊಜ ಮೊಟ್ಟೆ ಅಂತ ಕರೆಯುತ್ತಾರೆ.   ಮುಂಗಾರು ಭೂಮಿಯ ಸ್ಪರ್ಶ ಮಾಡಿದಾಗ ಈ ಗೊಜ ಮೊಟ್ಟೆ ಎಂಬ ಲಾರ್ವಾಗಳು ಕಪ್ಪೆ ಮರಿಗಳಾಗಿ ನೀರಿನಿಂದ ಗುಂಪು ಗುಂಪಾಗಿ ಹೊರ ಬಂದು ಕೆರೆ ಕಟ್ಟೆಯಿಂದ ನೂರು ಅಥವ ಇನ್ನೂರು ಮೀಟರ್ ಕುಪ್ಪಳಿಸಿ ಮರ ಗಿಡದ ನೆರಳಲ್ಲಿ ಸೇರುತ್ತದೆ.   ಕಾಲು ಹೊಟ್ಟೆ ಕಪ್ಪಾಗಿರುವ ಈ ಕಪ್ಪೆಗಳ ಬೆನ್ನು ಮಾತ್ರ ಹಳದಿ ಇದು ಗಿಡ ಮರಗಳ ಬುಡದಲ್ಲಿ ಹೆಚ್ಚು ಇರುವುದರಿಂದ ಮರ ಕಪ್ಪೆ ಅಂತಲೂ ಕರೆಯುತ್ತಾರೆ ಆದರೆ ಇದಕ್ಕೆ ವೈಜ್ಞಾನಿಕವಾದ ಹೆಸರು ಗೊತ್ತಿರುವವರು ತಿಳಿಸಬಹುದು.    ಈ ಕಪ್ಪೆ ಕಳೆದ ಹತ್ತಾರು ವರ್ಷಗಳಿಂದ ಅತ್ಯಂತ ಕಡಿಮೆ ಆಗಿತ್ತು, ಗೊಜಮೊಟ್ಟೆಗಳೂ ಇರಲೇ ಇಲ್ಲ ಆದರೆ ಮಳೆ ಪ್ರಮಾ...