Blog number 1869. ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯ ಸ್ಮಾರಕ ಆನಂದಪುರಂನ ಚಂಪಕ ಸರಸ್ಸುವಿನ 400 ನೆ ವರ್ಷಾಚಾರಣೆ ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ನೇತೃತ್ವ ವಹಿಸಲಿ ನಾಡಿನ ಮುಖ್ಯಮಂತ್ರಿ ಕರೆತಂದು ಉದ್ಘಾಟಿಸಲಿ ಎಂದು ಆಶಿಸುತ್ತೇನೆ.
#ಗೋಪಾಲಕೃಷ್ಣ_ಬೇಳೂರು #ಮೂರನೆ_ಅವಧಿಯಲ್ಲಿ_ಶಾಸಕರಾಗಿ_ಮಂತ್ರಿ_ಆಗುವ_ನಿರೀಕ್ಷೆಯಲ್ಲಿದ್ದಾರೆ. #ಕೆಳದಿ_ರಾಜ_ವೆಂಕಟಪ್ಪನಾಯಕರು_ನಿರ್ಮಿಸಿದ_ಪಟ್ಟಣ_ಸದಾಶಿವಸಾಗರವೇ #ಈಗಿನ_ಸಾಗರ_ಪಟ್ಟಣ_ಸಾಗರ_ವಿಧಾನಸಭಾ_ಕ್ಷೇತ್ರದ_ಶಾಸಕರು #ಅವರದೇ_ವಿದಾನಸಭಾ_ಕ್ಷೇತ್ರದ_ಸ್ಮಾರಕ_ಚಂಪಕ_ಸರಸ್ಸುವಿಗೆ_400ನೇ_ವಷಾ೯ಚಾರಣೆ. #ಬರುವ_2024_ಮತ್ತು_2025_ಪೂರ್ತಿ_ವರ್ಷಾಚಾರಣೆ_ನಡೆಸ_ಬಹುದು #ರಾಜ್ಯದ_ಮುಖ್ಯಮಂತ್ರಿ_ಕರೆಸಿ_ಅದ್ದೂರಿ_ಕಾರ್ಯಕ್ರಮ_ಹಮ್ಮಿಕೊಳ್ಳ_ಬಹುದು #ಕೆಳದಿ_ಅರಸರ_ಮೂಲ_ದೀವರಾ_ಈ_ಬಗ್ಗೆ_ಸಂಶೋದನೆಗಳಾಗಲಿ. ಕೆಳದಿ ಸಾಮ್ರಾಜ್ಯದಲ್ಲಿ ದೀರ್ಘ ಅವದಿ ಅಂದರೆ 43 ವರ್ಷ ಆಡಳಿತ ಮಾಡಿ ಸಾಮ್ರಾಜ್ಯ ವಿಸ್ತರಿಸಿದ ರಾಜ ವೆಂಕಟಪ್ಪ ನಾಯಕರು ನಿರ್ಮಿಸಿದ ಸದಾಶಿವ ಸಾಗರ ಎಂಬ ಪಟ್ಟಣವೇ ಈಗಿನ ಸಾಗರ ಪಟ್ಟಣ. ಕೆಳದಿ ರಾಜ ವೆಂಕಟಪ್ಪ ನಾಯಕ ತನ್ನ ಅಜ್ಜ ಸದಾಶಿವ ನಾಯಕರ ಹೆಸರಲ್ಲಿ ಈ ಪಟ್ಟಣ ನಿರ್ಮಿಸಿದ್ದು ಈಗಿನ ಗಣಪತಿ ಕೆರೆಯೆ ಸದಾಶಿವ ಸಾಗರ. ಯುದ್ಧದಲ್ಲಿ ಗೆದ್ದು ಬಂದಾಗ ಊರ ಮಧ್ಯದಲ್ಲಿ ಮಾರಿಕಾಂಬಾ ಗದ್ದಿಗೆ ಸ್ಥಾಪಿಸುತ್ತಾರೆ ಅದೇ ಸಾಗರದ ಈಗಿನ ಪ್ರಸಿದ್ಧವಾದ ಮಾರಿಕಾಂಬಾ ದೇವಿಯ ದೇವಾಲಯ ಮತ್ತು ಮೂರು ವರ್ಷಕೊಮ್ಮೆ ಈ ಜಾತ್ರೆ ರಾಜ್ಯದಲ್ಲೇ ಪ್ರಸಿದ್ದಿ ಪಡೆದಿದೆ. ಈ ಐತಿಹಾಸಿಕ ಮಹತ್ವದ ಸಾಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವವರು ಇಡೀ ರಾಜ್ಯದ ಗಮನ ಸೆಳೆಯುವ ನಡೆ - ನುಡಿ - ವೇಷಭೂಷಣಗಳ ಗೋಪ...