Skip to main content

Posts

Showing posts with the label In 1999 Professor Nanjundaswamy told about paddy cultivation will not be supported by farmers bcz it's loss

Blog number 1437. ರೈತ ನಾಯಕ ಪ್ರೋಪೆಸರ್ ನಂಜುಂಡ ಸ್ವಾಮಿ ಅವರು 1999ರಲ್ಲಿ ಹೇಳಿದ್ದ ಭತ್ತ ಬೆಳೆಯುವ ಜಮೀನು ಬೀಳುತ್ತದೆ ಎಂಬುದು ಈಗ ನಾವೇ ನಮ್ಮ ಕಣ್ಣೆದುರು ನೋಡುತ್ತಿದ್ದೇವೆ.

#ಕ್ಷೀಣಿಸುತ್ತಿರುವ ಭತ್ತದ ಬೆಳೆ #ಬೀಳು ಬಿಡುತ್ತಿರುವ ಮಲೆನಾಡಿನ ಗದ್ದೆಗಳು #ಮಳೆ ಆಶ್ರೀತ ಭತ್ತದ ಬೇಸಾಯ ಚೇತರಿಸಿಕೊಳ್ಳುವ ಸಂಭವ ತುಂಬಾ ಕಡಿಮೆ #ಇದನ್ನು 1999ರಲ್ಲಿಯೇ ರೈತ ನಾಯಕ ಪ್ರೋಪೆಸರ್ ನಂಜುಂಡ ಸ್ಟಾಮಿ ಈ ಬಗ್ಗೆ ಎಚ್ಚರಿಸಿದ್ದರು. #ಭತ್ತದ ಬೆಳೆ ಲಾಭದಾಯಕವಾಗುತ್ತಿಲ್ಲ.     1999 ರಲ್ಲಿ ಒಂದು ಬೆಳಿಗ್ಗೆ ಹಸಿರು ದೀಪದ ದೊಡ್ಡ ಕಾರು ನಮ್ಮ ಮನೆ ಅಂಗಳದಲ್ಲಿ ಬಂದು ನಿಂತಿತು, ಕೆಂಪು ದೀಪ ಮಂತ್ರಿ ಮಹೋದಯರದ್ದು ಎಂಬುದು ಗೊತ್ತಿತ್ತು ಆದರೆ ಇದು ಹಸಿರು ದೀಪ ಪತ್ರಿಕೆ ಓದುತ್ತಿದ್ದ ನನಗೆ ಕುತೂಹಲ, ಕಾರಿಂದ ಇಳಿದ ವರು ಹಸಿರು ಶಾಲು ಹೊದ್ದ ಪ್ರೊಪೆಸರ್ ನಂಜುಂಡಸ್ವಾಮಿ, ಕೋಡಿ ಹಳ್ಳಿ ಚಂದ್ರಶೇಖರ್ ಮತ್ತು ಸಾಗರದ ರೈತ ಹೋರಾಟ ಪತ್ರಿಕೆ ಸಂಪಾದಕರಾದ ವಸಂತ ಕುಮಾರ್.   ಅವತ್ತು ನನಗಾದ ಸಂತೋಷ ಹೇಳಲಿಕ್ಕೆ ಸಾಧ್ಯವಿಲ್ಲ, ನನ್ನ ತಂದೆ ರೈತ ಹೋರಾಟದ ಹಸಿರು ಶಾಲು ಹೊದ್ದವರು, ಪೋಪೆಸರ್ ಜೈಲ್ ಬರೋ ಕರೆಯಿಂದ ಪ್ರೇರೇಪಿತರಾಗಿ ಜೈಲಿಗೆ ಹೋಗಿ ಬಂದವರು, ಅವರು ಜಿಲ್ಲೆಯಲ್ಲಿ ನಂಜುOಡಸ್ವಾಮಿಯವರ ಸಭೆ ಎಲ್ಲೇ ಇದ್ದರು ಹೋಗಿ ಕೇಳಿ ಬಂದು ಅದನ್ನ ಬಹಳ ದಿನ ವಿಮಷೆ೯ ಮಾಡುತ್ತಿದ್ದರು ಇದೆಲ್ಲ 1983ರ ಹಾಗೂ 1986ರ ಘಟನೆಗಳು.   ನನ್ನ ತಂದೆಯ ಆರಾಧ್ಯ ರೈತ ನಾಯಕರು ಮನೆಗೆ ಬಂದದ್ದು ಕಾಯಿಲೆ ಮತ್ತು ವೃದ್ದಾಪ್ಯದ ಅವರಿಗೆ ಲವಲವಿಕೆ ಉತ್ಸಾಹ ಉಂಟು ಮಾಡಿತು, ಗಣ್ಯರು ಬಂದಾಗ ಅವರಿಗೆ ಅಪಿ೯ಸುವ ಹಾರ ತಂದು ಪ್ರೊಪೆಸರ್ಗ...