Blog number 1437. ರೈತ ನಾಯಕ ಪ್ರೋಪೆಸರ್ ನಂಜುಂಡ ಸ್ವಾಮಿ ಅವರು 1999ರಲ್ಲಿ ಹೇಳಿದ್ದ ಭತ್ತ ಬೆಳೆಯುವ ಜಮೀನು ಬೀಳುತ್ತದೆ ಎಂಬುದು ಈಗ ನಾವೇ ನಮ್ಮ ಕಣ್ಣೆದುರು ನೋಡುತ್ತಿದ್ದೇವೆ.
#ಕ್ಷೀಣಿಸುತ್ತಿರುವ ಭತ್ತದ ಬೆಳೆ
#ಬೀಳು ಬಿಡುತ್ತಿರುವ ಮಲೆನಾಡಿನ ಗದ್ದೆಗಳು
#ಮಳೆ ಆಶ್ರೀತ ಭತ್ತದ ಬೇಸಾಯ ಚೇತರಿಸಿಕೊಳ್ಳುವ ಸಂಭವ ತುಂಬಾ ಕಡಿಮೆ
#ಇದನ್ನು 1999ರಲ್ಲಿಯೇ ರೈತ ನಾಯಕ ಪ್ರೋಪೆಸರ್ ನಂಜುಂಡ ಸ್ಟಾಮಿ ಈ ಬಗ್ಗೆ ಎಚ್ಚರಿಸಿದ್ದರು.
#ಭತ್ತದ ಬೆಳೆ ಲಾಭದಾಯಕವಾಗುತ್ತಿಲ್ಲ.
1999 ರಲ್ಲಿ ಒಂದು ಬೆಳಿಗ್ಗೆ ಹಸಿರು ದೀಪದ ದೊಡ್ಡ ಕಾರು ನಮ್ಮ ಮನೆ ಅಂಗಳದಲ್ಲಿ ಬಂದು ನಿಂತಿತು, ಕೆಂಪು ದೀಪ ಮಂತ್ರಿ ಮಹೋದಯರದ್ದು ಎಂಬುದು ಗೊತ್ತಿತ್ತು ಆದರೆ ಇದು ಹಸಿರು ದೀಪ ಪತ್ರಿಕೆ ಓದುತ್ತಿದ್ದ ನನಗೆ ಕುತೂಹಲ, ಕಾರಿಂದ ಇಳಿದ ವರು ಹಸಿರು ಶಾಲು ಹೊದ್ದ ಪ್ರೊಪೆಸರ್ ನಂಜುಂಡಸ್ವಾಮಿ, ಕೋಡಿ ಹಳ್ಳಿ ಚಂದ್ರಶೇಖರ್ ಮತ್ತು ಸಾಗರದ ರೈತ ಹೋರಾಟ ಪತ್ರಿಕೆ ಸಂಪಾದಕರಾದ ವಸಂತ ಕುಮಾರ್.
ಅವತ್ತು ನನಗಾದ ಸಂತೋಷ ಹೇಳಲಿಕ್ಕೆ ಸಾಧ್ಯವಿಲ್ಲ, ನನ್ನ ತಂದೆ ರೈತ ಹೋರಾಟದ ಹಸಿರು ಶಾಲು ಹೊದ್ದವರು, ಪೋಪೆಸರ್ ಜೈಲ್ ಬರೋ ಕರೆಯಿಂದ ಪ್ರೇರೇಪಿತರಾಗಿ ಜೈಲಿಗೆ ಹೋಗಿ ಬಂದವರು, ಅವರು ಜಿಲ್ಲೆಯಲ್ಲಿ ನಂಜುOಡಸ್ವಾಮಿಯವರ ಸಭೆ ಎಲ್ಲೇ ಇದ್ದರು ಹೋಗಿ ಕೇಳಿ ಬಂದು ಅದನ್ನ ಬಹಳ ದಿನ ವಿಮಷೆ೯ ಮಾಡುತ್ತಿದ್ದರು ಇದೆಲ್ಲ 1983ರ ಹಾಗೂ 1986ರ ಘಟನೆಗಳು.
ನನ್ನ ತಂದೆಯ ಆರಾಧ್ಯ ರೈತ ನಾಯಕರು ಮನೆಗೆ ಬಂದದ್ದು ಕಾಯಿಲೆ ಮತ್ತು ವೃದ್ದಾಪ್ಯದ ಅವರಿಗೆ ಲವಲವಿಕೆ ಉತ್ಸಾಹ ಉಂಟು ಮಾಡಿತು, ಗಣ್ಯರು ಬಂದಾಗ ಅವರಿಗೆ ಅಪಿ೯ಸುವ ಹಾರ ತಂದು ಪ್ರೊಪೆಸರ್ಗೆ ಹಾಕಿದರು ಆ ಸಂದಭ೯ದಲ್ಲಿ ಹಾರ ಹಾಕಿಸಿಕೊಂಡ ಪ್ರೊಪೆಸರ್ ಹೇಳಿದ್ದು ನಾನು ಯಾರಿಂದಲೂ ಹಾರ ಹಾಕಿಸಿ ಕೊಳ್ಳುವುದಿಲ್ಲ ಆದರೆ ಇವತ್ತು ನಿಮ್ಮ ತಂದೆ ಅಭಿಮಾನಕ್ಕೆ ನಿರಾಕರಿಸಲಾಗಲಿಲ್ಲ.
ಚಹಾ, ಸಿಗರೇಟು ಸೇವನೆಯ ಜೊತೆ ನಡೆದ ಸಂಬಾಷಣೆಯಲ್ಲಿ ಅವರು ಹೇಳಿದ್ದು (1999ರಲ್ಲಿ) "ಇವತ್ತು ಭತ್ತ ಬೆಳೆಯುವ ರೈತ ಎಕರೆಗೆ 2500 ನಷ್ಟ ಮಾಡಿ ಕೊಳ್ಳುತ್ತಿದ್ದಾನೆ ಆದರೆ ಅವನಿಗೆ ಖಚು೯ ವೆಚ್ಚದ ಅರಿವೆ ಇಲ್ಲ, ಅವನ ಕೂಲಿ, ಗೊಬ್ಬರ, ಎತ್ತಿನ ಬೇಸಾಯ ಲೆಖ್ಖ ಮಾಡುತ್ತಿಲ್ಲ ಆದರೆ ಮುಂದಿನ ದಿನದಲ್ಲಿ ರೈತನ ಮಗ ಕಂಪ್ಯೂಟರ್ ಬಳಸುತ್ತಾನೆ ಪ್ರತಿಯೊಂದು ಪೈಸೆಗೂ ಲೆಖ್ಖ ಬರೆಯುತ್ತಾನೆ ಆಗ ಅವನಿಗೆ ಈ ನಷ್ಟ ಅರಿವಾಗುತ್ತದೆ ಆಗ ಅವನು ಭತ್ತ ಬೆಳೆಯುವುದು ನಿಲ್ಲಿಸುತ್ತಾನೆ" ಅಂದಿದ್ದರು.
ಇದು ಇವತ್ತು ನಮ್ಮ ಎದುರು ಸತ್ಯವಾಗಿ ಪ್ರತ್ಯಕ್ಷ ಸಾಕ್ಷಿ ಆಗಿದೆ, ಬಹುತೇಕ ಮಲೆನಾಡಿನ ಮಕ್ಕಿ ಗದ್ದೆಗಳು ಬೀಳು ಬಿದ್ದು ಹತ್ತಾರು ವರ್ಷವೇ ಆಗಿದೆ.
ಇದಕ್ಕೆ ಪರಿಹಾರ?ಅನ್ನುವ ನನ್ನ ಪ್ರಶ್ನೆಗೆ ಅವರ ಉತ್ತರ " ಬೀಳುಬೀಳುವ ಸಾವಿರಾರು ಎಕರೆ ಸಾಗುವಳಿ ಮಾಡುವ ಕಾಪೊ೯ರೇಟ್ ಕಂಪನಿಗಳು ಖರೀದಿಸುತ್ತವೆ ಅಲ್ಲಿ ನಮ್ಮ ರೈತ ಕೂಲಿಯಾಗಿ ಕೆಲಸಕ್ಕೆ ಸೇರುತ್ತಾನೆ ಅದಕ್ಕೆ ಅನುಕೂಲವಾದ ಕಾನೂನು ನಮ್ಮ ಪ್ರತಿನಿದಿಗಳು ಮಾಡುತ್ತಾರೆ".
ಪ್ರೊಪೆಸರ್ ನಂಜುಂಡಸ್ವಾಮಿ ಎಂಬ ರೈತ ನಾಯಕರ ಚಿಂತನೆ ನಿಜವಾಗುತ್ತಿರುವ ಸೂಚನೆಗಳ ನೋಡಿ ನನಗೆ ಭಯ ಆಗುತ್ತಿದೆ.
Comments
Post a Comment