Blog number 1365. ಎಪ್ಪತ್ತರ ದಶಕದಲ್ಲಿ ಭಾರತದಲ್ಲಿ ಸ್ಕೂಟರ್ ಬುಕ್ ಮಾಡಿ ಆರೇಳು ವರ್ಷಗಳ ಕಾಲ ಕಾಯಬೇಕಿತ್ತು ಈಗ ....
#ಸ್ಕೂಟರ್_ಕಥೆಗಳು_ಅದರ_ಘನತೆ_ಇತ್ಯಾದಿ.
1970 ರ ದಶಕದಲ್ಲಿ ನಮ್ಮ ಊರಲ್ಲಿ ಸ್ಕೂಟರ್ ಓಡಿಸುವವರು ಮೂರು ಮನೆಯವರು ಮಾತ್ರ ಒಬ್ಬರು ಆನಂದಪುರಂ ವಿಲೇಜ್ ಪಂಚಾಯತ್ ಅಧ್ಯಕ್ಷರಾಗಿದ್ದ ಬಾಲ ಗಂಗಾದರ ಗೌಡರು, ಇನ್ನೊಬ್ಬರು ಟಿಪ್ ಟಾಪ್ ಇಬ್ರಾಹಿಂ ಸಾಹೇಬರ ಕುಟುಂಬ ಮತ್ತು ಎಸ್.ಆರ್.ಎಸ್ ರೈಸ್ ಮಿಲ್ ಮಾಲಿಕರು ಮಾತ್ರ.
ಜನ ಸಂಚಾರ ಮತ್ತು ವಾಹನ ಸಂಚಾರವೇ ಇಲ್ಲದ ಆ ಕಾಲದ ರಸ್ತೆಯ ಮೇಲೆ ಈ ಸ್ಕೂಟರ್ ಬಂದರೆ ನಿಂತು ತಿರುಗಿ ನೋಡದ ವ್ಯಕ್ತಿಯೇ ಇರುತ್ತಿರಲಿಲ್ಲ.
ಸ್ಕೂಟರ್ ಆಡ೯ರ್ ಮಾಡಿ ಆರೇಳು ವರ್ಷ ಕಾಯಬೇಕು ಮತ್ತು ಸ್ಕೂಟರ್ ತಂದವರು ಹಾಗೇ ಮಾರಿದರೆ ಅರ್ಧಕ್ಕೂ ಹೆಚ್ಚು ಲಾಭಕ್ಕೆ ಖರೀದಿಸುವವರು ಇದ್ದಾರೆ, ಪಾರ್ಲಿಮೆಂಟ್ ಮೆಂಬರ್ ಅಥವ ಮಂತ್ರಿ ಮಹೋದಯರ ಶಿಪಾರಸ್ಸು ಇದ್ದರೆ ಬೇಗ ಸಿಗುವ ಸಾಧ್ಯತೆ ಬಗ್ಗೆ ಬಹು ಚಚೆ೯ ಆಗುತ್ತಿತ್ತು.
ನಂತರ ಡಾಲರ್ ನಲ್ಲಿ (ವಿದೇಶದಲ್ಲಿ ಕೆಲಸದಲ್ಲಿದ್ದವರು) ಬುಕ್ ಮಾಡಿದರೆ ತಕ್ಷಣ ಸಿಗುವ ಕಾಲವೂ ಬಂತು.
ನಂತರ ದೇಶದಲ್ಲಿ ಆಟೋ ಮೊಬೈಲ್ ನ ಮಾರಾಟ ಉತ್ಪಾದನೆಗಳು ಶೀಘ್ರ ಬದಲಾವಣೆಯಿಂದ ಇವತ್ತು ವಾರದ ಸಂತೆಯಲ್ಲೂ ರೈತರು ಬೆಳೆದು ಮಾರಾಟ ಮಾಡುವ ಕೊತ್ತುಂಬರಿ ಸೊಪ್ಪಿನಂತೆ ತರಹಾವಾರಿ ಸ್ಕೂಟರ್ ಬೈಕ್ ಗಳ ಪ್ರದರ್ಶನ - ಮಾರಾಟ ಮತ್ತು ಸ್ಥಳದಲ್ಲೇ ನಿಮ್ಮ ಹಳೇ ವಾಹನ ಬದಲಿಸಿ ಸಾಲದ ಕರಾರು ಮಾಡಿ ಹೊಸ ವಾಹನ ನೀಡುವ ಪದ್ಧತಿ ಬಂದಿದೆ.
50 ವರ್ಷದ ಹಿಂದಿನ ಈ ಕಥೆ ಈಗಿನ ಜಮಾನದವರಿಗೆ ಹಾಸ್ಯಾಸ್ಪದ ಸಂಗತಿಯೇ.
Comments
Post a Comment