ಪ್ರಕಾಶ್ ಕುಗ್ವೆ ಸಾಗರ ಸಮೀಪದ ಕುಗ್ವೆಯ ವಿದ್ಯಾವಂತ ಶ್ರಮ ಜೀವಿ ಈಶ್ವರ್ ನಾಯಕರ ಪುತ್ರರು, ಪ್ರಜಾವಾಣಿ ಪತ್ರಿಕೆಯಲ್ಲಿ ದೊಡ್ಡ ಜವಾಬ್ದಾರಿ ಮತ್ತು ಹೊಣೆ ಹೊತ್ತಿದ್ದಾರೆ.
ಈ ಬಾರಿಯ ಶಿವಮೊಗ್ಗ ಲೋಕ ಸಭಾ ಚುನಾವಣೆಗಾಗಿ ಪತ್ರಿಕೆಗೆ 612 ಕಿ.ಮಿ. ಪ್ರಯಣ ಮಾಡಿದ ನಿಷ್ಪಕ್ಷ ವರದಿ ಈ ದಿನ ಪ್ರಜಾವಾಣಿಯಲ್ಲಿ 19- ಏಪ್ರಿಲ್-20 I9 ಶುಕ್ರವಾರ ಪುಟ ಸಂಖ್ಯೆ 4ರಲ್ಲಿ ಪ್ರಕಟ ಆಗಿದೆ.
ಇದರಲ್ಲಿ ನಾನು ವ್ಯಕ್ತಪಡಿಸಿದ ನಮ್ಮ ಸಾಗರ ತಾಲ್ಲೂಕಿನ ಆರಲುಗೋಡಿನ ಮಂಗನ ಕಾಯಿಲೆ ಪೀಡಿತರ ಅಕ್ರಂದನದ ಬಗ್ಗೆ ಕೂಡ ಉಲ್ಲೇಖಿಸಿದ್ದಾರೆ.
ನನಗೂ ಕೂಡ ಇಂತವರೇ ಗೆಲ್ಲ ಬೇಕಂತ ಅಭಿಪ್ರಾಯ ಇಲ್ಲ, ಪ್ರಕಾಶ್ ಕುಗ್ವೆ ಅವರ ವರದಿ ಕೂಡ ನಿಷ್ಪಕ್ಷವಾಗಿದೆ ಗೆಲುವಿನ ಅನುಪಾತ 50:50 ಇರುವುದು ಸತ್ಯ.
ಪ್ರಕಾಶ್ ಕುಗ್ವೆ ಮುಂದಿನ ದಿನದಲ್ಲಿ ನಾಡಿನ ಪ್ರಖ್ಯಾತ ಜನ೯ಲಿಸ್ಟ್ ಆಗಲಿ ಎಂದು ಹಾರೈಸುತ್ತೇನೆ, ನಮ್ಮ ತಾಲ್ಲೂಕಿನವರೆಂಬ ಅಭಿಮಾನದೊಂದಿಗೆ.
ಕೆ.ಅರುಣ್ ಪ್ರಸಾದ್
ಮಾಜಿ ಜಿಪ೦ ಸದಸ್ಯ
ಆನಂದಪುರಂ .
Comments
Post a Comment