#ಪ್ರತಿಯೊಬ್ಬರಿಗೂ_ಇಂತಹ_ಆಪ್ತಮಿತ್ರ_ಇದ್ದೇ_ಇರುತ್ತಾರೆ.
ಇದು ನನ್ನ ಆಪ್ತ ಮಿತ್ರನ ಕಥೆ ಇವರ ಹೆಸರು ಚೆನ್ನಪ್ಪ ಊರು ನಮ್ಮ ಮನೆಯಿ೦ದ 3 ಕಿ.ಮಿ.ಗೇರ್ ಬೀಸ್ ಅಂತ, ಇವರ ಅಪ್ಪ ಜೇನುಕಲ್ಲಪ್ಪ ಅಂತ ಈಗಿಲ್ಲ ಜೇನು ಕಲ್ಲಪ್ಪ ನಮ್ಮ ಊರಿಗಿಂತ ಹೊಳೆಆಚೆಯ ಕರೂರು ಬಾರಂಗಿ ಹೋಬಳಿಯಲ್ಲಿನ ಪರಿಶಿಷ್ಟ ಜಾತಿ ಜನರ ಕಾಲೋನಿಯಲ್ಲಿ ಹೆಸರುವಾಸಿ.
ವ್ಯವಹಾರ ವಿಸ್ತರಣೆಗಾಗಿ ನಮ್ಮ ದನದ ಕೊಟ್ಟಿಗೆ ತೆಗೆಯಬೇಕಾಯಿತು ಆಗ ನಮ್ಮಲ್ಲಿದ್ದ ಮಲೆನಾಡು ಗಿಡ್ಡ ದನ ಕರುಗಳನ್ನ ಜೇನುಕಲ್ಲಪ್ಪನಿಗೆ ಮತ್ತು ಸಮೀಪದ ಕೆರೆ ಹಿತ್ತಿಲು ಎoಬ ಹಳ್ಳಿಯಲ್ಲಿರುವ ನಮ್ಮ ಆಸ್ಥಾನ ಜೋತಿಷಿ ಕಲ್ಮಕ್ಕಿ ಬೂದ್ಯಪ್ಪ ಗೌಡರಿಗೆ ಹಂಚಿಕೊಟ್ಟಿದ್ದೆ.
ಚೆನ್ನಪ್ಪನನ್ನ ಇವರ ಅಪ್ಪ ತನ್ನ ಜಮೀನು ವ್ಯಾಜ್ಯ ಬಗೆಹರಿಸಲು ಹಣ ಹೊಂದಿಸಲು ಸಣ್ಣವಯಸ್ಸಲ್ಲಿಯೇ ಎಲ್ಲೆಲ್ಲೊ ಮುಂಗಡ ಪಡೆದು ಬಿಟ್ಟಿದ್ದ.
ಅಂತೂ ಕೊನೆಗೆ ಅಂದರೆ ಸುಮಾರು 25 ವಷ೯ದ ಕಾನೂನು ಹೋರಾಟದಲ್ಲಿ 10 ಎಕರೆ ನೀರಾವರಿ ಜಮೀನು ಪಡೆಯುವುದರಲ್ಲಿ ಯಶಸ್ವಿಯಾದ ಆದರೆ ಜೇನುಕಲ್ಲಪ್ಪನಿಗೆ ಇದ್ದ ಇಬ್ಬರು ಅಣ್ಣOದಿರಿಗೂ ಸೇರಿ ಜಂಟಿ ಖಾತೆ ಆಯಿತು ಆಗ ಮೂವರಿಗೂ ಸಮ ಹಿಸ್ಯೆ ಆಗಬೇಕಾದಾಗ ನಮ್ಮ ಮನೇಲಿ ಪಂಚಾಯಿತಿ ನಡೆಯಿತು ಸಾಗರದಿಂದ ಕುಗ್ವೆ ಶಿವಾನಂದ ಬOದಿದ್ದರು ಅಂತೂ ಅಂತಿಮವಾಗಿ ಜೇನುಕಲ್ಲಪ್ಪನಿಗ 4ಎಕರೆ ಉಳಿದ ಇಬ್ಬರು ಸಹೋದರರಿಗೆ ತಲಾ 3 ಎಕರೆ ಅಂತೆ ಒಪ್ಪಿಸಲಾಯಿತು, ಈ ಜಮೀನು ಪಡೆಯಲು ತನ್ನ ಜೀವಮಾನವನ್ನೆ ಜೇನುಕಲ್ಲಪ್ಪ ಸವಿಸಿದ್ದ ಆದರೆ ಉಳಿದ ಸಹೋದರರು ಸಹಾಯ ಸಹಕಾರ ಮಾಡದಿದ್ದರೂ ಕಾನೂನು ಪ್ರಕಾರ ಸಮಪಾಲಿಗೆ ಹಕ್ಕುದಾರರೇ ಆದರೆ ಜೇನುಕಲ್ಲಪ್ಪನಿಗೆ ಅಸಮದಾನ ಇತ್ತು.
ಐದು ಜನರಲ್ಲಿ ಚೆನ್ನಪ್ಪ ಎರಡನೆಯವನು ಜನರ ಸಂಪಕ೯, ಕಾಡಿನ ಎಲ್ಲಾ ಜಾತಿಯ ಮರಗಳು, ಔಷದಿ ಸಸ್ಯ, ಬೇರು ಎಲ್ಲಾ ಬಲ್ಲಿದವ, ಆಗಾಗ್ಗೆ ನಮ್ಮಲಾಡ್ಜ್ ನಲ್ಲಿ ಜೇನು ದೊಡ್ಡ ದೊಡ್ಡ ಗೂಡು ಕಟ್ಟಿದರೆ ಅದನ್ನ ಹೊಗೆ ಹಾಕಿ ಒಡಿಸಲು, ಮನೆಯಲ್ಲಿ ಮಂಗಳ ಕಾಯ೯ಕ್ಕೆ ಚಪ್ಪರ, ಹೋಮ ಹವನ ಇದ್ದರೆ ಅದಕ್ಕೆ ಬೇಕಾದ ಸಂಹಿತೆ ಚಕ್ಕೆ ಸಂಗ್ರಹಿಸಿ ಕೊಡುವುದರಿಂದ ಹಿಡಿದು ಕಾಲಕಾಲಕ್ಕೆ ಕಾಡಲ್ಲಿ ಬಿಡುವ ಹಣ್ಣು ಕಾಯಿಗಳಿಗೆ ನನಗೆ ಚೆನ್ನಪ್ಪ ಬೇಕೇಬೇಕು.
ಮೊನ್ನೆ ಚೆನ್ನಪ್ಪ ತಂದ ಕವಳಿಕಾಯಿ ಉಪ್ಪಿನ ಕಾಯಿ ಆಯಿತು, ಹಲಸಿನ ಗುಜ್ಜು ಸಾರು ಪಲ್ಯ ಆಯಿತು, ಗೇರು ಹಣ್ಣು ತಿನ್ನುವಷ್ಟು ತಿಂದಾಯಿತು, ಕಾಡು ಗೆಣಸು ಬೇಯಿಸಿ ತಿಂದಾಯಿತು ಇನ್ನು ಈ ವಷ೯ದ ಮುಳ್ಳು ಹಣ್ಣು, ಹಲಸು, ಮಾವು, ಕಳಲೆ ಬರುತ್ತದೆ ಇನ್ನು ಅನೇಕ ಪದಾಥ೯ಗಳು.
ಜೀವನದಲ್ಲಿ ಪರದೆ ಹಿಂದೆ ಮುಖ್ಯ ಪಾತ್ರವಹಿಸುವ ಚೆನ್ನಪ್ಪನOತ ಆಪ್ತಮಿತ್ರರು ಎಲ್ಲಾ ಕುಟುಂಬಗಳಲ್ಲೂ ಒಬ್ಬರು ಇದ್ದೇ ಇರುತ್ತಾರೆ ಬಹಳ ದಿನದಿಂದ ಚೆನ್ನಪ್ಪನ್ನ FB ಗೆಳೆಯರಿಗೆ ಪರಿಚಯಿಸ ಬೇಕೆಂದು ಪೋಟೋ ತೆಗೆಯಲು ಹೋದರೆ ಚೆನ್ನಪ್ಪ ತಪ್ಪಿಸಿಕೊಳ್ಳುತ್ತಿದ್ದ ನಿನ್ನೆ ನನ್ನ ಮನೆ ಬಾಗಿಲಲ್ಲಿ ಅವನಿಗೆ ಗೊತ್ತಿಲ್ಲದಂತೆ ಪೊಟೋ ತೆಗೆದಿದ್ದೆ ಈ ಲೇಖನಕ್ಕೆ.
Comments
Post a Comment