#ಕೋವಿಡ್_19_ಎರಡನೇ_ಅಲೆ_ಅಪಾಯ_ಎಷ್ಟು ?
( 17- ಏಪ್ರಿಲ್ -2021)
ಇಲ್ಲಿ ಸರಳವಾದ ಒಂದು ಲೆಖ್ಖಾಚಾರ ನೋಡಿ ಹೋದ ವರ್ಷ ಇದೇ ದಿನಾಂಕ ಅಂದರೆ 17- ಏಪ್ರಿಲ್ -2020 ರಂದು ಕರ್ನಾಟಕ ರಾಜ್ಯದಲ್ಲಿ 415 ಪಾಸಿಟಿವ್ ಕೇಸ್ ಮತ್ತು ಸಾವಿನ ಸಂಖ್ಯೆ 17 ವರದಿ ಆಗಿತ್ತು.
ಈ ವರ್ಷ ಅಂದರೆ 17- ಏಪ್ರಿಲ್ -2021 ರ ಇವತ್ತು ಕನಾ೯ಟಕ ರಾಜ್ಯದಲ್ಲಿ ಪಾಸಿಟಿವ್ ಕೇಸ್ ಗಳು 17489 ಮತ್ತು ಸಾವಿನ ಸಂಖ್ಯೆ 80 ವರದಿ ಆಗಿದೆ.
ಹೋದ ವರ್ಷ ಸಂಪೂಣ೯ ಲಾಕ್ ಡೌನ್ ಮಾಚ್೯ 24 ರ ರಾತ್ರಿಯಿಂದ ಪ್ರಾರಂಭ ಆಗಿತ್ತು.
ಈ ವರ್ಷ ಭರಪೂರ ಚುನಾವಣೆ, ಜಾತ್ರೆ, ಸಮಾರಂಭ ಇವತ್ತಿನ ತನಕ ನಿರಾತಂಕವಾಗಿ ನಡೆಸಿದ್ದೇವೆ, ಮುಂದೇನು ಮಾಡುತ್ತಾರೆ ಇನ್ನೂ ತೀಮಾ೯ನ ಆಗಿಲ್ಲ ಆದರೆ ಆಸ್ಪತ್ರೆಯಲ್ಲಿ ಜಾಗ ಇಲ್ಲ, ಶವ ಸಂಸ್ಕಾರಕ್ಕೂ ಸರತಿ ಸಾಲಲ್ಲಿ ಕಾಯಬೇಕಾಗಿದೆ.
ದಯಮಾಡಿ ನಿಮ್ಮ ಕುಟುಂಬದ ರಕ್ಷಣೆಗೆ ನೀವೇ ತಯಾರಾಗಿ ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
Comments
Post a Comment