Blog number 1396. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗ್ರಾಮೀಣ ಪ್ರದೇಶದ ಉಳ್ಳೂರು ಗ್ರಾಮದಲ್ಲಿ ಸಿಗಂದೂರು ಚೌಡೇಶ್ವರಿ ಟ್ರಸ್ಟ್ ಮೂಲಕ ಸಾಗರ ಗಂಗೋತ್ರಿ ಕಾನೂನು, ನರ್ಸಿ೦ಗ್ ಮತ್ತು ಇತರ ಪದವಿ ಕಾಲೇಜು ನಡೆಸುತ್ತಿರುವ ಬಿಳಿಗಲ್ಲೂರು ಕೃಷ್ಣಮೂತಿ೯ ಎ೦ಬ ಸಾಹಸಿ.
#ಉಳ್ಳೂರಿನ_ಸಾಗರ_ಗಂಗೋತ್ರಿ_ಕಾನೂನು_ಕಾಲೇಜ್
#ನರ್ಸಿ೦ಗ್_ಕಾಲೇಜ್
#ನಡೆಸುತ್ತಿರುವ_ಜೋಗಪಾಲ್ಸ್_ಬಿಳಿಗಲ್ಲೂರು_ಕೃಷ್ಣಮೂರ್ತಿ_ಎಂಬ_ಸಾಹಸಿ
#ಗ್ರಾಮೀಣ_ಪ್ರದೇಶದಲ್ಲಿ_ವಿದ್ಯಾಸಂಸ್ಥೆ_ನಡೆಸುವುದು_ಸುಲಭವಲ್ಲ
#ಶಿವಮೊಗ_ಕೇಂದ್ರಸ್ಥಾನ_ಬಿಟ್ಟರೆ_ಇಲ್ಲಿ_ಮಾತ್ರ_ಕಾನೂನು_ನರ್ಸಿ೦ಗ್_ಕಾಲೇಜು_ಇರುವುದು.
#ವೃತ್ತಿನಿರತರ_ಸ್ಪರ್ದೆ_ಹೊಟ್ಟೆಕಿಚ್ಚಿನ_ಮಂದಿ_ಮದ್ಯೆ_ಶಿಕ್ಷಣ_ಸಂಸ್ಥೆ_ನಡೆಸುವುದು_ಸುಲಭವಲ್ಲ.
ಇವತ್ತು ಬಿಳಿಗಲ್ಲೂರು ಕೃಷ್ಣಮೂರ್ತಿ ಉಳ್ಳೂರಿನಲ್ಲಿರುವ ಅವರ ಸಿಗಂದೂರು ಚೌಡೇಶ್ವರಿ ಟ್ರಸ್ಟ್ ನ ಸಾಗರ ಗ೦ಗೋತ್ರಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬೇಟಿ ನಿಗದಿ ಆಗಿತ್ತು ಆ ಪ್ರಕಾರ ಅಲ್ಲಿಗೆ ತಲುಪುವಾಗ ಒಂದು ಗಂಟೆ ವಿಳಂಬ ಆಗಿತ್ತು.
ನನ್ನ ಮಗಳು ಈ ಸಂಸ್ಥೆಯಲ್ಲಿಯೇ ಕಾನೂನು ಪದವಿ ವ್ಯಾಸಂಗ ಮಾಡಿ ನಂತರ ದಾರವಾಡದಲ್ಲಿ ಎಲ್.ಎಲ್.ಎ೦ ಓದಿದ್ದು ಆದ್ದರಿಂದ ನನಗೆ ಈ ಸಂಸ್ಥೆ ಬಗ್ಗೆ ಗೌರವಾಭಿಮಾನ.
ಇಲ್ಲಿ ನರ್ಸಿಂಗ್ ಕಾಲೇಜಿದೆ, ಪ್ರಾಥಮಿಕ ಶಾಲೆಯಿಂದ ಪದವಿ ತನಕ ವ್ಯಾಸಂಗ ಮಾಡುವ ಅವಕಾಶ ಇದೆ.
ಕಾನೂನು ಪದವಿ, ನರ್ಸಿಂಗ್ ಪದವಿ ಶಿವಮೊಗ್ಗ ಬಿಟ್ಟರೆ ಸಾಗರ ತಾಲ್ಲೂಕಿನ ಉಳ್ಳೂರಿನ ಈ ಸಂಸ್ಧೆಯಲ್ಲಿ ಮಾತ್ರವಿದೆ.
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಇದ್ದರೆ ಅದರಿಂದ ಅನುಕೂಲ ಸಾವಿರಾರು ಜನರಿಗೆ ಆದರೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ನಡೆಸುವುದು ಅಷ್ಟು ಸುಲಭವಲ್ಲ ಅದರ ಜೊತೆಗೆ ವೃತ್ತಿ ನಿರತ ಶಿಕ್ಷಣ ಸಂಸ್ಥೆಗಳ ಜೊತೆ ಸ್ಪರ್ದೆ ಮಾಡುವುದೂ ಅಷ್ಟೇ ಕಷ್ಟ.
ಇದೆಲ್ಲವನ್ನೂ ಎದುರಿಸಿ ಬಿಳಿಗಲ್ಲೂರು ಕೃಷ್ಣಮೂರ್ತಿ ದಶಕಗಳ ಕಾಲ ಈ ಶಿಕ್ಷಣ ಸಂಸ್ಥೆ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.
ಸಾಗರ ತಾಲ್ಲೂಕಿನ ಜೋಗ್ ಪಾಲ್ಸ್ ತಪ್ಪಲಿನ ನಿವಾಸಿ ಬಿಳಿಗಲ್ಲೂರು ಕೃಷ್ಣಮೂರ್ತಿ ಬೆಂಗಳೂರು ನಿವಾಸಿಯೂ ಹೌದು, ಮಿತ ಬಾಷಿ ಆದ ಇವರು ಏಕಾಂಗಿ ಆಗಿ ಈ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದು ಸೋಜಿಗವೇ ಆಗಿದೆ.
ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳಿಗೆ ನರ್ಸಿ೦ಗ್ ಮತ್ತು ಕಾನೂನು ಪದವಿ ನೀಡುವ ಈ ಸಂಸ್ಥೆಗೆ ಮಲೆನಾಡಿನ ನಾವೆಲ್ಲ ಹೆಚ್ಚಿನ ಸಹಕಾರ ನೈತಿಕ ಬೆಂಬಲ ನೀಡಬೇಕಾಗಿದೆ.
Comments
Post a Comment