#ಶ್ರದ್ದಾ೦ಜಲಿಗಳು.
#ಸಿದ್ದ_ಸಮಾದಿ_ಯೋಗದ_ಕುಮಾರ್_ಗುರೂಜಿ
#ನಮಗೆಲ್ಲ_ಸಿದ್ದಸಮಾದಿ_ಯೋಗ_ಕಲಿಸಿದ_ಗುರುಗಳು.
#ಅತ್ಯುತ್ತಮ_ಜ್ಞಾನಿ_ಆಗಿದ್ದವರು.
ಮೂಲದ ಕುಮಾರ್ ಗುರೂಜಿ (ಕುಮಾರ್ ಸ್ಟಾಮಿ ಹೊಂಡದ ಮಠ) ಸಾಗರ ತಾಲ್ಲೂಕಿನಾದ್ಯಂತ ಚಿರಪರಿಚಿತರು, ಸಾವಿರಾರು ಜನರಿಗೆ ಪ್ರಭಾಕರ ಗುರೂಜಿ ಅವರ ಸಿದ್ದ ಸಮಾದಿ ಯೋಗವನ್ನು ಕಲಿಸಿದ ಗುರುಗಳು ಇವರು.
ರೈತ ಹೋರಾಟ ವಾರಪತ್ರಿಕೆ ಸಂಪಾದಕರಾದ ವಸಂತ್ ಕುಮಾರ್ ರಿಂದ ಕುಮಾರ್ ಗುರೂಜಿ ಪರಿಚಿತರು, ಇವರು 2008ರಲ್ಲಿ ನಮ್ಮ ಕಲ್ಯಾಣ ಮಂಟಪದಲ್ಲಿ ನಿತ್ಯ ಬೆಳಿಗ್ಗೆ 5ರಿಂದ ಪ್ರಾರಂಭಿಸುತ್ತಿದ್ದ ಸಿದ್ಧ ಸಮಾದಿ ಯೋಗ ಶಿಭಿರದಲ್ಲಿ ನಾನು, ನನ್ನ ಪತ್ನಿ, ಮಗಳು, ಮಗ ಮತ್ತು ನನ್ನ ಸಹೋದರನ ಕುಟುಂಬಕ್ಕೆ ಇವರು ಪ್ರಾಣಯಾಮ,ಯೋಗಾ, ದ್ಯಾನಗಳನ್ನು ಕಲಿಸಿದವರು.
ಪ್ರಭಾಕರ ಗುರೂಜಿ ಭಾರತೀಯ ಯೋಗಾ, ಪ್ರಾಣಯಾಮ, ಧ್ಯಾನಗಳ ಜೊತೆ ಅನೇಕ ನೀತಿ ಪಾಠಗಳನ್ನು ಅಳವಡಿಸಿ ಉಪಾವಾಸ , ಮಿತ ಆಹಾರ, ಹಸಿ ತರಕಾರಿಗಳ ನಿತ್ಯ ಬಳಕೆಗಳ ಪಾಠಗಳನ್ನು ಸುಲಭವಾಗಿ ಕಲಿಸುವ ಸಿದ್ದ ಸಮಾದಿ ಯೋಗ ಹೆಚ್ಚು ಜನಪ್ರಿಯವಾಗಿದೆ.
ನಿತ್ಯ ಜೀವನ ಪದ್ಧತಿ, ದ್ವೇಷಾ- ಅಸೂಯೆಗಳಿಂದ ದೂರವಾಗುವ ಜೀವನ ಶೈಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಮೂಲಕ ಆತಂಕ ರಹಿತ ಜೀವನ ಈಗಿನ ದಿನಗಳ ಅಗತ್ಯವಾಗಿದೆ.
ಇದನ್ನು ಬೋದಿಸುತ್ತಿದ್ದ ಕುಮಾರ್ ಗುರೂಜಿ ಅಸಾದಾರಣ ನೆನಪು, ಬುದ್ಧಿ ಶಕ್ತಿ ಉಳ್ಳವರಾಗಿದ್ದರು, ಸುಶ್ರಾವ ಕಂಠದಲ್ಲಿ ಹಾಡುವ ಭಜನೆಗಳಿಂದ ಕುಮಾರ್ ಗುರೂಜಿ ಸಾವಿರಾರು ಭಕ್ತರಿಗೆ ಪ್ರಿಯರಾಗಿದ್ದರು.
ಕುಮಾರ್ ಗುರೂಜಿ, ವಸಂತ್ ಕುಮಾರ್ ಮತ್ತು ಗಣೇಶ್ ಗುರೂಜಿ ಸೇರಿ ಸಾಗರದಲ್ಲಿ ಗುರುಕುಲ ಶೈಲಿಯ ಶಾಲೆಯನ್ನೂ ಪ್ರಾರಂಬಿಸಿದ್ದರು.
ನಂತರ ಕುಟುಂಬ ಸಮೇತ ಮಂಗಳೂರು ಸೇರಿದ್ದರು ಆಗಲೇ ಅವರಿಗೆ ತೀವ್ರವಾದ ಪಾರ್ಶ್ವವಾಯು ಪೀಡಿತರಾಗಿ ವೀಲ್ ಚೇರ್ ಅವಲ೦ಬಿಸಿದ್ದರು ನಂತರ ತಮ್ಮ ಹುಟ್ಟೂರು ಸಮೀಪದಲ್ಲಿ ಆರೋಗ್ಯ ಚೇತರಿಸಿಕೊಳ್ಳುವ ತೀರ್ಮಾನ ಮಾಡಿ ಬ್ಯಾಡಗಿಯಲ್ಲಿ ವಾಸವಾಗಿದ್ದರು.
ಪೇಸ್ ಬುಕ್ ನಲ್ಲಿ ವೀಲ್ ಚೇರ್ ನಲ್ಲಿದ್ದ ಇವರ ಪೋಟೋ ನೋಡಿ ನಾನೇ ಇವರನ್ನ ಸಂಪರ್ಕಿಸಿದ್ದೆ, ಆಗಾಗ ಮಾತಾಡುತ್ತಿದ್ದೆವು, ಇವರಿಗೆ ಕೋಟೆಕಲ್ ಆಯುರ್ವೇದ ಶಾಲಾ ಔಷದಿ ಕೂಡ ಕಳಿಸಿ ಕೊಡುತ್ತಿದ್ದೆ.
ಕ್ರಮೇಣ ಆರೋಗ್ಯ ಸುದಾರಿಸುವ ಆಶಾ ಬಾವನೆ ಇವರಲ್ಲಿತ್ತು, ಪತ್ನಿ, ಪುತ್ರಿ ಮತ್ತು ಮಗನ ಜೊತೆ ಸಂತೋಷದಿಂದಲೇ ಇದ್ದರು, ಕಳೆದ ಶುಕ್ರವಾರ ವಾಟ್ಸಪ್ ಸಂದೇಶ ಕೂಡ ಕಳಿಸಿದ್ದರು.
ನಿನ್ನೆ ರಾತ್ರಿ ಸುಮಾರು 2 ಗಂಟೆಗೆ ಅವರ ಪತ್ನಿ " ಅಣ್ಣ ಗುರೂಜಿ ನನ್ನ ಬಿಟ್ಟು ಹೋದರು" ಎಂಬ ದುಃಖ ಪೂರಿತವಾದ ವಾಟ್ಸಪ್ ಸಂದೇಶ ನನಗೆ ನಂಬಲಾಗಲಿಲ್ಲ.
ಕುಮಾರ್ ಗುರೂಜಿ ನೀಡುತ್ತಿದ್ದ ಪ್ರವಚನ ಇವತ್ತೂ ನನಗೆ ಕಿವಿಯಲ್ಲಿದೆ "ನೀವು ನಿಮ್ಮ ಸುತ್ತಲಿನ ಜನರಲ್ಲಿ ಅವರಲ್ಲಿ ನೀವು ನೋಡಿರುವ ಕೀಳಾದುದನ್ನು ಗುರುತಿಸುವ ಬದಲು ಅವರಲ್ಲಿನ ಅತ್ಯುತ್ತಮ ವಿಷಯಗಳನ್ನು ಗುರುತಿಸುವ ಮೂಲಕ ಆ ಅತ್ಯುತ್ತಮ ಅಂಶಗಳನ್ನು ಉತ್ತೇಜಿಸಿ, ಪೋಷಿಸಿ ನಿಮ್ಮ ಜೀವನದಲ್ಲಿ ಬರಮಾಡಿಕೊಳ್ಳಬೇಕು" ಎಂಬುದು ನಾನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಕೂಡ.
Comments
Post a Comment