ಗೆದ್ದವರ ಕಡೆ ವಿಜೃ೦ಬಣೆ, ಸೋತವರ ಅವಹೇಳನ ಸಹಜ ಆದರೆ ನನಗೆ ಶ್ರೀನಿವಾಸ ಪ್ರಸಾದರು ಗೆಲ್ಲಬೇಕೆಂದು ಬಯಸಿದ್ದೆ, ಅವರ ತಿಳುವಳಿಕೆ, ರೀತಿ ನೀತಿ ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತು, ಅವರನ್ನ ಅವಮಾನಕರವಾಗಿ ಮಂತ್ರಿ ಸ್ಥಾನದಿಂದ ತೆಗೆದು ಖಗೆ೯ಯವರ ಮಗನಿಗೆ ಮಂತ್ರಿ ಮಾಡಿದ್ದು ಅವರಿಗೆ ಸಹಜವಾಗಿ ಮುನಿಸಾಗಿತ್ತು, ಮುಂದಿನ ಚುನಾವಣೆವರೆಗೆ ಕಾದು ರಾಜಕೀಯ ತೀಮಾ೯ನ ಮಾಡಬೇಕಿತ್ತು.
ಶ್ರೀನಿವಾಸ ಪ್ರಸಾದರ ಬೆಂಬಲ ಸಹಕಾರದಿಂದ ಶಿವಮೊಗ್ಗ ತಾಳಗುಪ್ಪ ರೈಲು ಉಳಿಯಿತು ಹಾಗಾಗಿ ನನಗೆ ಅವರ ಮೇಲೆ ಅಭಿಮಾನ.
ಬಹುಶಃ ಇದು ಅವರ ಕೊನೆಯ ಚುನಾವಣೆ ಮುಂದಿನ ಚುನಾವಣೆಗೆ ಸ್ಪದಿ೯ಸುವುದು ಅನುಮಾನ, ನಿರಂತರ ಓದು, ಆಳ ಚಿಂತನೆಯ ದಲಿತ ಶ್ರೀನಿವಾಸ ಪ್ರಸಾದರನ್ನ ಬಿ.ಜೆ.ಪಿ. ಬಳಸಿಕೊಳ್ಳುವುದು ಅನುಮಾನ.
ಏನೇ ಆಗಲಿ ಸೋತವರನ್ನ ಗೆದ್ದವರು ಮತ್ತು ಗೆದ್ದ ಪಕ್ಷದವರು ಗೌರವದಿಂದ ಕಾಣಲಿ ಎಂದು ಹಾರೈಸುತ್ತೇನೆ.
Comments
Post a Comment