#ಪ್ರಸಕ್ತ ರಾಜಕಾರಣದ ಒಳಗುಟ್ಟು#
ಲೋಕ ಸಭಾ
ಚುನಾವಣಾ ಅಂಕಣ
ಭಾಗ-8
(ಕೆ.ಆರುಣ್ ಪ್ರಸಾದ್)
ಮಲೆನಾಡಿನ ಸಮಸ್ಯೆಗೆ ಸಕಾ೯ರದ ನಿಲ೯ಕ್ಷ.
ಇವತ್ತು ಮಂಡ್ಯಯದ ಚುನಾವಣೆಯಲ್ಲಿನ ಪ್ರಚಾರದ ಅ೦ತಿಮ ದಿನ ಹೆಚ್ಚು ಚಚೆ೯ ಆದ ವಿಷಯ ಬಸ್ ನಾಲೆಗೆ ಬಿದ್ದು 30 ಜನ ಮೃತರಾದದ್ದು.
ಮುಖ್ಯಮಂತ್ರಿ ಕುಮಾರ ಸ್ವಾಮಿ ತಾವು ತಕ್ಷಣ ಸ್ಥಳಕ್ಕೆ ಬಂದು ಪರಿಹಾರ ಕಾಮಗಾರಿ ಪರಿಶೀಲಿಸಿ ಮೃತರಾದವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಿದ್ದೆ ಆಗ ಪಕ್ಷೇತರ ಅಭ್ಯಥಿ೯ ಸುಮಲತ ಅಂಬರೀಶ್ ಎಲ್ಲಿದ್ದರು ಅಂತ.
ಸುಮಲತರ ಸಭೆಯಲ್ಲಿ, ಅಂದು ಸಂಜೆ 4ರ ಹೊತ್ತಿಗೆ ಟಿವಿ ಚಾನಲ್ ಗೆ ಪೋನ್ ನಲ್ಲಿ ಅಂಬರೀಶ್ ಕೆಮ್ಮುತ್ತಾ ಈ ದುರಂತ ನನ್ನ ಎದೆಯಲ್ಲಿ ಉರಿ ಉಂಟು ಮಾಡಿದೆ ಎಂದವರು ರಾತ್ರಿ 9ಕ್ಕೆ ಇಹಲೋಕ ತ್ಯಜಿಸಿದಾಗ ಸುಮಲತ ಹೇಗೆ ಬರಲು ಸಾಧ್ಯ? ಎಂದು ಬಹಿರಂಗ ಚಚೆ೯ ಆಗಿದೆ.
ಶಿವಮೊಗ್ಗ ಲೋಕ ಸಭಾ ಚುನಾವಣಾ ಪ್ರಚಾರಕ್ಕೆ ನಾಳೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಬರುತ್ತಿದ್ದಾರೆ ಅವರಿಗೆ ಈ ಲೋಕ ಸಭಾ ಕ್ಷೇತ್ರದ ಸಾಗರ ತಾಲ್ಲೂಕಿನ ಅರಲಗೋಡಿನಲ್ಲಿ 20ಕ್ಕೂ ಹೆಚ್ಚು ಜನ ಮೃತರಾಗಿದ್ದಾರೆ ಅವರಿಗೆ ಏನು ಪರಿಹಾರ ನೀಡಿದೀರಿ? ಉಸ್ತುವಾರಿ ಸಚಿವರ ಜವಾಬ್ದಾರಿ ಏನು? ಅಂತ ಯಾರಾದರು ಪ್ರಶ್ನೆ ಮಾಡುತ್ತಾರಾ?
ಮOಗನ ಕಾಯಿಲೆಯ ಚುಚ್ಚುಮದ್ದು ತಯಾರಿಸುವ ಲ್ಯಾಬ್ ಗೆ 5 ಕೋಟಿ ಬಜೆಟ್ ನಲ್ಲಿ ಮೀಸಲಿರಿಸುವ ಕಥೆ ಹೇಳುತ್ತಾರೆ ಆದರೆ ಮುಖ್ಯಮಂತ್ರಿ ಈ ಪ್ರದೇಶಕ್ಕೆ ಏಕೆ ಬೇಟಿ ನೀಡಿಲ್ಲ? ಉಸ್ತುವಾರಿ ಸಚಿವರು ಯಾಕೆ ಬೇಟಿ ನೀಡುತ್ತಿಲ್ಲ?ಮಂಡ್ಯಕ್ಕೆ ಒಂದು ನೀತಿ, ಶಿವಮೊಗ್ಗಕ್ಕೆ ಒಂದು ನೀತಿಯೇ?
ಈ ಎಲ್ಲಾ ಪ್ರಶ್ನೆ ಪತ್ರಕತ೯ರು ಕೇಳಬಹುದು, ವಿರೋದ ಪಕ್ಷಗಳು ಸಾವ೯ಜನಿಕವಾಗಿ ಪ್ರಶ್ನೆ ಮಾಡಬಹುದು ಆದರೆ ಪ್ರಜ್ಞಾವಂತ ಶಿವಮೊಗ್ಗ ಜಿಲ್ಲೆಯಲ್ಲಿ ಅಂತಹ ಪ್ರಯತ್ನ ಕಂಡು ಬರುತ್ತಿಲ್ಲ.
ಕಳೆದ ಉಪ ಚುನಾವಣೆಯಲ್ಲಿ ಸಾಗರ ತಾಲ್ಲೂಕಿನಲ್ಲಿ ಸಮ್ಮಿಶ್ರ ಅಭ್ಯಥಿ೯ಗೆ 6 ಸಾವಿರ ಮತದ ಲೀಡ್ ದೊರಕಿತ್ತು ಆದರೆ ಯಾರೂ ಈ ಭಾಗದ ಸಮಸ್ಯೆಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಮುಖ್ಯ ಮಂತ್ರಿ ಕುಮಾರಸ್ವಾಮಿ ಮಂಗನ ಕಾಯಿಲೆ ಪೀಡಿತ ಮೃತರಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ ನಾಳೆ ವಾಂತಿ ಬೇಧಿ ಆಗಿ ಸತ್ತವರು ಪರಿಹಾರ ಕೇಳುತ್ತಾರೆ ಎಂಬ ಮಾತು ಆಡಿದ್ದು ಕೂಡ ಅವರ ಬಗ್ಗೆ ಭರವಸೆ ಹುಸಿ ಆಗಿದೆ.
ಮಂಗನ ಕಾಯಿಲೆ ಪೀಡಿತರಿಗೆ ಪರಿಹಾರ, ಪುನವ೯ಸತಿ ಹಾಗಾದರೆ ಯಾರ ಜವಾಬ್ದಾರಿ? ಕೇವಲ ಚುನಾವಣೆಯಲ್ಲಿ ಗೆಲ್ಲುವುದು ಮಾತ್ರಕ್ಕೆ ಮುಖ್ಯ ಮಂತ್ರಿಗಳ ಹೊಣೆಯೆ?
ನಾಳೆ ಜಿಲ್ಲೆಗೆ ಬರುವ ಮುಖ್ಯಮಂತ್ರಿಯನ್ನ ಮಂಗನ ಕಾಯಿಲೆ ಪೀಡಿತ ಅರಳುಗೋಡಿಗೆ ಕರೆತರಲು ಜಿಲ್ಲೆಯ ಮುಖಂಡರಿಗೆ ಸಾಧ್ಯವಿಲ್ಲವೆ? ಇದು ಸ್ಥಳಿಯರ ಪ್ರಶ್ನೆ.
Comments
Post a Comment