Blog number 1431. ಸಿಸಿ ಕ್ಯಾಮೆರಾಗಳ ಅತ್ಯುತ್ತಮ ನಿರ್ವಹಣೆ ಮಾಡುವ ಆನಂದಪುರಂನ ಕೈರಾ ಗ್ರಾಮದ ಸಜ್ಜನ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಸಣ್ಣೀರಪ್ಪನವರ ಮೊಮ್ಮಗ ಮಣಿಕಂಠ
#ಆನಂದಪುರಂನಲ್ಲಿ_ಸಿಸಿ_ಕ್ಯಾಮೆರಾ_ಸೇವಾ_ಸಂಸ್ಥೆ_ಪ್ರಾರಂಬಿಸಿರುವ
#ಕೈರಾದ_ಮಣಿಕಂಠ_ಸಾಗರದ_SMP_ಡಿಪ್ಲೋಮ_ಪದವೀದರ
#ಇವರ_ಅಜ್ಜ_ಕೈರಾದ_ಸಣ್ಣೀರಪ್ಪ_ಆಚಾಪುರ_ಗ್ರಾಮಪಂಚಾಯತ್_ಅಧ್ಯಕ್ಷರಾಗಿದ್ದರು.
#ಕನಿಷ್ಟ_ಹತ್ತು_ಸಾವಿರ_ರೂಪಾಯಿ೦ದ_ನಿಮ್ಮ_ಮನೆಗೆ_ಅಂಗಡಿಗೆ_ಇವರು_ಸಿಸಿ_ಕ್ಯಾಮೆರಾ_ಅಳವಡಿಸಿ_ಕೊಡುತ್ತಾರೆ
#ನಮ್ಮ_ಹೊಂಬುಜಲಾಡ್ಜ್_ಮಲ್ಲಿಕಾವೆಜ್_ಕೃಷ್ಣಸರಸ_ಕನ್ವೆನ್ಷನ್_ಹಾಲ್_ಚಂಪಕಾಪ್ಯಾರಡೈಸ್_ವಿಕ್ಟೋರಿಯಾ_ಕಾಟೀಜ್
#ಸಿಸಿ_ಕ್ಯಾಮೆರಾ_ದುರಸ್ತಿ_ಮತ್ತು_ಸರ್ವಿಸ್_ಇವರ_MJ_Secure_Solutions_ಸಂಸ್ಥೆಗೆ_ನೀಡಿದ್ದೇನೆ.
https://youtu.be/Pv9OgxnjFRU
ಸುಮಾರು ಹತ್ತು ವರ್ಷದ ಹಿಂದೆ ನಮ್ಮ ಸಂಸ್ಧೆಯ ಸಿಸಿ ಕ್ಯಾಮೆರಾ ಅಳವಡಿಸಿದ್ದೇನೆ, 16 ಕ್ಯಾಮೆರಾಗಳಿದೆ ಆದರೆ ಈ ಹಿಂದಿನ ಎಲ್ಲಾ ಸಿಸಿ ಕ್ಯಾಮೆರಾ ಸರ್ವಿಸ್ ಮಾಡುವ ಸಂಸ್ಥೆಗಳು ಸೇವೆಗಿಂತ ನಮ್ಮಿಂದ ಹಣ ಪೀಕುವ ಕೆಲಸ ಮಾತ್ರ ನಿರಂತರವಾಗಿ ಮಾಡಿದ್ದಾರೆ.
ಕೆಲವು ಲಕ್ಷ ವಿನಿಯೋಗಿಸಿ ಸಿಸಿ ಕ್ಯಾಮೆರಾ ಅಳವಡಿಸಿದ ನಂತರ ಕನಿಷ್ಟ ಮೂರು ತಿಂಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ, ಪದೇ ಪದೇ ರಿಪೇರಿಗೆ ಬರಲು ಅವರಿಗೆ ದಂಬಾಲು ಬೀಳುವುದು ಅವರ ದುಭಾರಿ ಶುಲ್ಕ, ಅವರು ಹಾಕುವ ಕಳಪೆ ಉಪಕಾರಣ ಅದಕ್ಕೆ ಬ್ರಾಂಡೆಡ್ ಕಂಪನಿಗಿಂತ ಹೆಚ್ಚಿನ ಬಿಲ್ ಗಳಿಂದ ಕಳೆದ ಹತ್ತು ವರ್ಷದಲ್ಲಿ 5 ಲಕ್ಷಕ್ಕೂ ಹೆಚ್ಚಿನ ಹಣ ಕಳೆದುಕೊಂಡಿದ್ದೆ ಆದ್ದರಿಂದ ಒಂದು ವರ್ಷದಿಂದ ನಮ್ಮ ಸ೦ಸ್ಥೆ ಸಿಸಿ ಕ್ಯಾಮೆರಾ ಸರಿ ಪಡಿಸಲು ಆಸಕ್ತಿ ವಹಿಸಿರಲಿಲ್ಲ.
ಆಗಲೇ ನನ್ನ ಬೇಟಿ ಆದ ಈ ಹಸನ್ಮುಖಿ ಯುವಕ ಮಣಿಕಂಠ ತನ್ನ M J ಸೆಕ್ಯುರ್ ಸಲ್ಯೂಷನ್ ಎಂಬ ಸಂಸ್ಥೆ ಸಿಸಿ ಕ್ಯಾಮೆರಾ ಅಳವಡಿಸುವ ನಿರಂತರ ಸೇವೆ ಒದಗಿಸುವ ಕರಪತ್ರ ನೀಡಿ ಹೊರಟಾಗ ವಾಪಾಸ್ಸು ಕರೆದು ವಿಚಾರಿಸಿದಾಗ ತಿಳಿದಿದ್ದು ಇವರು ಆಚಾಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ (1993-98) ನನ್ನ ಆತ್ಮೀಯ ಮಿತ್ರರಾದ ಸಜ್ಜನ ಸಣ್ಣೀರಪ್ಪನವರ ಮೊದಲ ಪುತ್ರ ಜನಾರ್ದನರ ಏಕೈಕ ಪುತ್ರ ಅಂತ.
ಸಾಗರದ ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೋಮ ವ್ಯಾಸಂಗ ಮಾಡಿ ಬೆಂಗಳೂರಲ್ಲಿ ಕಂಪ್ಯೂಟರ್ ಕಂಪನಿಗಳಲ್ಲಿ ಕೆಲಸ ಮಾಡಿ ಕೊರಾನಾ ಲಾಕ್ ಡೌನ್ ನಲ್ಲಿ ಊರು ಸೇರಿ ಇಲ್ಲಿ ಸ್ವಂತದ್ದಾದ ಇವರದ್ದೇ ಅಗರಬತ್ತಿ ಉತ್ಪಾದನೆ - ಮಾರಾಟದ ಜೊತೆಗೆ ಎಲೆಕ್ಟ್ರೀಷಿಯನ್ ವೃತ್ತಿ ಜೊತೆಗೆ ಸಿಸಿ ಕ್ಯಾಮೆರಾ ಅಳವಡಿಸುವ ಮತ್ತು ಸರ್ವಿಸ್ ಮಾಡುವುದು ತಿಳಿದು ನಮ್ಮ ಸಂಸ್ಥೆಯ ಎಲ್ಲಾ 16 ಸಿಸಿ ಕ್ಯಾಮೆರಾ ಸರಿಪಡಿಸುವ ಕೆಲಸ ಇವರಿಗೆ ವಹಿಸಿದೆ.
3-4 ದಿನ ಸುಮ್ಮನೆ ಇವರ ಕೆಲಸದ ವೈಕರಿ ಗಮನಿಸುತ್ತಿದ್ದೆ ಇವತ್ತು ಸಂಜೆಗೆ ಸಂಪೂರ್ಣವಾಗಿ ಸಿಸಿ ಕ್ಯಾಮೆರಾಗಳ ಸವಿ೯ಸ್ ಮಾಡಿ ಎಲ್ಲಾ 16 ಕ್ಯಾಮೆರಾಗಳನ್ನು ಚಾಲನೆ ಮಾಡಿದ್ದಾರೆ.
ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವವರು ಅಥವ ಅಳವಡಿಸಿದ ಸಿಸಿ ಕ್ಯಾಮೆರಾ ದುರಸ್ತಿ ಮಾಡಿಸಿಕೊಳ್ಳಬೇಕಾದವರು ಇವರನ್ನು ಸಂಪರ್ಕಿಸಬಹುದಾಗಿದೆ ಇವರ ಸಂಪರ್ಕ ಸಂಖ್ಯೆ 808839 3140.
Comments
Post a Comment