#ಅವಿವಾಹಿತ_ಯುವಕರ_ಸಂಖ್ಯೆ_ಹೆಚ್ಚುತ್ತಿದೆ
#ವರದಕ್ಷಿಣೆ_ಅಚರಣೆಯಲ್ಲಿ_ಇಲ್ಲವಾಗುತ್ತಿದೆ
#ಅಂತರ್ಜಾತಿ_ವಿವಾಹಕ್ಕೆ_ಸಮಾಜದಲ್ಲಿ_ಸಿಕ್ಕಿದೆ_ಮಾನ್ಯತೆ
#ಸ್ಟರ್ಗದಲ್ಲಿ_ವಿವಾಹ_ಒಂದು_ಹೆಣ್ಣಿಗೆ_ಒಂದು_ಗಂಡು_ಎಂಬ_ಗಾದೆಗಳೂ_ಸುಳ್ಳಾಯಿತು
#ಮು೦ದಿನ_ಕೆಲ_ದಶಕ_ಪುರುಷರಿಗೆ_ವಿವಾಹ_ಬಾಗ್ಯ_ಇರದ_ಕಹಿ_ಸತ್ಯ_ಅರಗಿಸಿ_ಕೊಳ್ಳುವುದು_ಕಷ್ಟ.
#ಶತಮಾನಗಳಿಂದ_ಹೆಣ್ಣನ್ನು_ಮಾರಾಟದ_ಸರಕಿನಂತೆ_ಕಾಣುತ್ತಿದ್ದ_ಪುರುಷ_ಸಮಾಜಕ್ಕೆ_ಶಿಕ್ಷೆಯಾ?
#ಇದಕ್ಕೆ_ಕಾರಣಗಳು_ಏನು?
ಎಲ್ಲಾ ಜಾತಿ ದರ್ಮಗಳಲ್ಲೂ ಅವಿವಾಹಿತ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ, ಮುಂದಿನ ದಿನಗಳಲ್ಲಿ ಇದೊಂದು ಸಾಮಾಜಿಕ ಸಮಸ್ಯೆ ಆಗಿ ಪರಿಗಣಿಸಲೂ ಬಹುದು, ಇದಕ್ಕೆ ಕಾರಣ ಏನು?.
ಮೊದಲೆಲ್ಲ ಅವಿವಾಹಿತ ಯುವತಿಯರ ಸಂಖ್ಯೆ ಹೆಚ್ಚಾಗಿತ್ತು, ಆಗ ವಿವಾಹ ಆಗುವ ಯುವಕರು ವರದಕ್ಷಿಣೆ, ಬ೦ಗಾರ, ಬೈಕ್, ಕಾರ್ ಗಳ ವಿಪರೀತ ಬೇಡಿಕೆ ಇಡುತ್ತಿದ್ದರು.
ವರದಕ್ಷಿಣೆ ಪಡೆಯುವುದು ಮತ್ತು ನೀಡುವುದು ಎರೆಡೂ ಆ ಕಾಲದಲ್ಲಿ ಪ್ರತಿಷ್ಟಿತ ಗೌರವದ ವಿಷಯಗಳಾಗಿತ್ತು ಅಲ್ಲದೆ ವರದಕ್ಷಿಣೆ ಪಡೆಯದೇ ವಿವಾಹ ಆದ ಯುವಕನನ್ನ ಅನುಮಾನದಿಂದ ಏನೋ ಹುಡುಗನಲ್ಲಿ ಐಬಿದೆ ಎಂದು ನೋಡುವ ಕಾಲವಿತ್ತು.
ಮೊದ ಮೊದಲು ಪುರೋಹಿತರಿಗೆ ಮಾತ್ರ ಮದುವೆ ಆಗಲು ಕನ್ಯೆ ಸಿಗುತ್ತಿಲ್ಲ ಎಂಬುದು ಈಗ ಎಲ್ಲಾ ಜಾತಿಯಲ್ಲೂ ಕನ್ಯೆ ಸಿಗುವುದಿಲ್ಲ ಎಂಬಲ್ಲಿಗೆ ತಲುಪಿದೆ.
ಕೃಷಿ, ವ್ಯವಹಾರ, ಸ್ವಯಂ ಉದ್ಯೋಗದ ಯುವಕರಿಗೆ, ಗ್ರಾಮೀಣ ಪ್ರದೇಶದ ವಾಸಿಗಳಿಗೆ, ಅಪ್ಪ-ಅಮ್ಮಂದಿರ ಸೇವೆ ಮಾಡುವ ಯುವಕರಿಗೆ ಕನ್ಯೆಯರ ಹುಡುಕುವುದು ತುಂಬಾ ಕಷ್ಟವೇ ಆಗಿದೆ.
ಐಟಿ -ಬಿಟಿ ಕ್ಷೇತ್ರದಲ್ಲಿರುವವರಿಗೆ, ವಿದೇಶದಲ್ಲಿರುವವರಿಗೆ, ಪಟ್ಟಣವಾಸಿಗಳಿಗೆ ಈಗ ಮದುವೆ ಸರಾಗವಾಗುತ್ತದೆ ಕಾರಣ ಈಗಿನ ಯುವತಿಯರ ಆಯ್ಕೆಯ ಮೊದಲ ಪ್ರಾಶಸ್ತ್ಯ ಇಂತ ಯುವಕರೇ ಆಗಿರುವುದರಿಂದ.
ಕಟ್ಟರ್ ಜಾತಿವಾದಿಗಳೂ ಈಗ ಯಾವುದೇ ಜಾತಿಯ ಕನ್ಯೆಯನ್ನು ತಾವೇ ಖರ್ಚು ಮಾಡಿ ಅಂತರ್ಜಾತಿ ವಿವಾಹವಾಗುತ್ತಿದ್ದಾರೆ ಇದಕ್ಕೆ ಅವರ ಕುಟುಂಬಗಳಲ್ಲಿದ್ದ ಹಿಂದಿನ ಪ್ರತಿರೋದ ಈಗ ಇಲ್ಲವಾಗಿದೆ.
ಈಗ ಅಲ್ಲೂ ಇದು ಕಷ್ಟವಾಗಿದೆ, ಯುವಕರು ತಯಾರಿದ್ದರೂ ಕನ್ಯೆಯರು ಅವರ ಆಯ್ಕೆ ಕಾದಿರಿಸುವುದರಿಂದ ಅವಿವಾಹಿತ ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಮುಂದಿನ ದಿನಗಳಲ್ಲಿ ಇದು ಸಮಾಜದಲ್ಲಿ ಏನೆಲ್ಲ ಪರಿಣಾಮಕ್ಕೆ ಕಾರಣವಾಗುವುದೋ ಗೊತ್ತಿಲ್ಲ.
ಸ್ತ್ರೀ-ಪುರುಷ ಅನುಪಾತದ ಅಸಮತೋಲನೆಯಿಂದ ಸ್ತ್ರಿಯರಿಗೆ ಆಯ್ಕೆ ಹಕ್ಕು ಜಾಸ್ತಿ ಆಯಿತು ಇದರಲ್ಲಿ ವಿಕೃತಿ-ಸುಕೃತಿಗಳು ಪ್ರಾರಂಭ ಆಯಿತು, ಅತ್ತೆ ಸೊಸೆ ಜಗಳ-ವರದಕ್ಷಿಣೆ ಹಿಂಸೆ ಇತ್ಯಾದಿಗಳ ಸೇಡು ತೀರಿಸಿ ಕೊಳ್ಳುವ ರೀತಿಯಲ್ಲಿ ಈಗೆಲ್ಲ ಅದು ಇಲ್ಲದಿದ್ದರೂ ಆ ಕಾರಣಗಳಿಗೆ ನಮ್ಮ ಈ ಕರಾರು ಎಂಬ ಡಿಫೆನ್ಸ್ ಅಗೋಚರವಾಗಿ ಪಾಲು ತೆಗೆದುಕೊಂಡಿದೆ.
ಇದರ ಜೊತೆ ಕನ್ಯೆಯರ ಕೊರತೆಗೆ ಪೇಟೆ ಜೀವನದ ಆಕಷ೯ಣೆ, ಮೈಕ್ರೋ ಪ್ಯಾಮಿಲಿಯಲ್ಲಿನ ಅನುಕೂಲ, ಕೃಷಿ ವಾಣಿಜ್ಯವಾಗಿ ಬದಲಾಗಿದ್ದು ಮತ್ತು ಈಗಿನ ಯುವ ಜನಾಂಗದ ಸಿನಿಕತೆಗಳು ಕಾರಣವಾಗಿರಬಹುದು.
ಇದರಿಂದ ಒಂದು ಹೆಣ್ಣಿಗೆ ಒಂದು ಗಂಡು, ಸ್ಟರ್ಗದಲ್ಲಿ ಮದುವೆ, ಹೆಣ್ಣು ಸಂಸಾರದ ಕಣ್ಣು ಎಂಬ ಗಾದೆಗಳೂ ಸುಳ್ಳಾಯಿತು.
ಒಂದು ಕಾಲದಲ್ಲಿದ್ದ ನಂಬಿಕೆಗಳಾದ ಕೃಷಿ ಭೂಮಿ ಇದ್ದಲ್ಲಿ ವಿವಾಹ ಮಾಡಿದರೆ ಉಪವಾಸ ಇರುವುದಿಲ್ಲ, ಆಸ್ತಿ ಇದ್ದಲ್ಲಿ ಕೊಟ್ಟರೆ ಜೀವಮಾನ ಎಲ್ಲಾ ಸುಖವಾಗಿರುತ್ತಾರೆ೦ಬುದೆಲ್ಲಕ್ಕೆ ತೆರೆಬಿದ್ದಿದೆ.
Comments
Post a Comment