#ಆನಂದಪುರಂ ಇತಿಹಾಸ ಭಾಗ_4
#ಆನಂದಪುರದ_ಅಯ್ಯಂಗಾರ್_ಕುಟುಂಬದ_ವಿವರ
ಲಕ್ಷೀಪತಿ ಅಯ್ಯಂಗಾರರು ಪಶು ಸಂಗೋಪನೆ ಮಾಡಿಕೊಂಡು ಜೀವನ ಮಾಡುತ್ತಾರೆ ಅವರ ಪುತ್ರ ರಾಮಕೃಷ್ಣ ಅಯ್ಯಂಂಗಾರ್ ಇವರ ಪತ್ನಿ ಕನಕಮ್ಮಾಳ್ ಇವರಿಗೆ ನಾಲ್ಕು ಪುತ್ರರು ದೊಡ್ಡವರು ಜಗನ್ನಾಥ ಅಯ್ಯಂಗಾರ್, ಎರಡನೆ ವೆಂಕಟಚಲಾಯ್ಯಂಗಾರ್, ಮೂರನೆಯ ಬದರಿನಾರಾಯಣ ಅಯ್ಯಂಗಾರ್ ಮತ್ತು ನಾಲ್ಕನೆಯ ಅನಂತರಾಮ ಅಯ್ಯಂಗಾರ್.
ಮೊದಲ ಪತ್ನಿ ಮೃತರಾದಾಗ ಇನ್ನೊಂದು ವಿವಾಹ ಆಗುತ್ತಾರೆ ಸುಂದರಮ್ಮ ಅವರ ಹೆಸರು ಆ ಪತ್ನಿಯಿ೦ದ ಎರೆಡು ಗಂಡು ಮತ್ತು ಒಂದು ಪುತ್ರಿ ಹುಟ್ಟುತ್ತಾರೆ ಅವರ ಹೆಸರು ಶ್ರೀನಿವಾಸ ಅಯ್ಯಂಗಾರ್, ರಾಧಾಕೃಷ್ಣ ಆಯ್ಯಂಗಾರ್, ಮತ್ತು ವನಜಾಕ್ಷಿ.
ಮೊದಲ ಪುತ್ರ ಜಗನಾಥ ಅಯ್ಯಂಗಾರರು ಮೃತರಾಗುತ್ತಾರೆ.
ಎರಡನೆ ಮಗ ವೆಂಕಟಾಚಲಯ್ಯಂಗಾರರಿಗೆ ರಾಮ ಪ್ರಸಾದ್, ರಂಗನಾಥ, ಶ್ಯಾಮಪ್ರಸಾದ್, ಜಯಪ್ರಕಾಶ್, ತಿರುನಾರಾಯಣ್, ಜಯರಾಮ ಎಂಬ ಆರು ಗಂಡು ಮಕ್ಕಳು ಮತ್ತು ಪುಷ್ಪಾ, ಕನಕ ಎಂಬ ಎರೆಡು ಹೆಣ್ಣು ಮಕ್ಕಳು.
ವೆಂಕಟಾಚಲಯ್ಯಂಗಾರರ ಮಕ್ಕಳು ಮಾತ್ರ ಆನಂದಪುರದ ರಂಗನಾಥ ಸ್ವಾಮಿ ಜಾತ್ರೋತ್ಸವಕ್ಕೆ ಬಂದು ತಮ್ಮ ಭಕ್ತಿ ಸಮಪಿ೯ಸುತ್ತಾರೆ ಮತ್ತು ಇದಕ್ಕಾಗಿ ಕೆಲ ಲಕ್ಷ ರೂಪಾಯಿ ವ್ಯಯಿಸುತ್ತಾರೆ.
ವೆಂಕಟಚಲಯ್ಯಂಗಾರರ ಮಕ್ಕಳು ಮೊಮ್ಮಕ್ಕಳು ಕುಟುಂಬ ಸಮೇತ ಪ್ರತಿ ತಿಂಗಳು ಆನಂದಪುರಂಗೆ ಬರುತ್ತಾರೆ ಮತ್ತು ವಾರಗಟ್ಟಲೆ ಇಲ್ಲೇ ಉಳಿಯುತ್ತಾರೆ,ಮೂಲ ಮನೆ ಮತ್ತು ದೇವಾಲಯ ತುಂಬಾ ಅಭಿವೃದ್ಧಿ ಮಾಡಿದ್ದಾರೆ ಅವರಿಗೆಲ್ಲ ಅವರು ಹುಟ್ಟಿದ ಊರಿನ ಬಗ್ಗೆ ತುಂಬಾ ಅಭಿಮಾನ ಅಂತ ರಂಗನಾಥ ದೇವಾಲಯದ ಎದುರಿನ ಆಂಜನೇಯ ದೇವಾಲಯದ ಪುನರ್ ಪ್ರತಿಷ್ಟಾಪನೆ ಮತ್ತು ನಿಮಾ೯ಣದ ನೇತೃತ್ವವಹಿಸಿದ್ದ ಪ್ರಾಣೇಶ್ ಆಚಾರ್ ನನ್ನ ಲೇಖನದ ಮೊದಲ ಭಾಗ ಓದಿದ ಮೇಲೆ ತಿಳಿಸಿದ್ದಾರೆ.
ಬದರಿನಾರಾಯಣ್ ಆಯ್ಯಂಗಾರ್ ಜನುಮ ದಿನ 21 ನವೆಂಬರ್ 1906. ಬದರಿ ನಾರಾಯಣ್ ಅಯ್ಯಂಗಾರ್ ಶ್ರೀಮತಿ ರತ್ನಮ್ಮ ದಂಪತಿಗೆ ಖ್ಯಾತ ವೈದ್ಯ ಡಾ. ಸೀತಾರಾಮ್ ಎಂಬ ಏಕೈಕ ಪುತ್ರ ಮತ್ತು ಏಕೈಕ ಪುತ್ರಿ ಪ್ರಮೀಳಾ ಇದ್ದಾರೆ.
ನಾಲ್ಕನೆ ಪುತ್ರ ಅನಂತರಾಮರಿಗೆ ಕೂಡ ಒಂದು ಗಂಡು ಮತ್ತು ಒ0ದು ಹೆಣ್ಣು ಸಂತಾನ.
( ನಾಳೆ ಭಾಗ-5)
Comments
Post a Comment