#ಪ್ರಸಕ್ತ ರಾಜಕಾರಣದ ಒಳಗುಟ್ಟು#
ಲೋಕ ಸಭಾ ಚುನಾವಣಾ ಅಂಕಣ
ಭಾಗ-14.
(ಕೆ.ಅರುಣ್ ಪ್ರಸಾದ್)
ಚಾಮರಾಜ ನಗರ ಲೋಕಸಭಾ ಕ್ಷೇತ್ರದಿಂದ ಶ್ರೀನಿವಾಸ್ ಪ್ರಸಾದ್ ಸ್ಪದಿ೯ಸಬಾರದಿತ್ತು.
ಶ್ರೀನಿವಾಸ್ ಪ್ರಸಾದರ ಮೈಸೂರಿನಿ೦ದ ದೆಹಲಿ ತನಕದ ರಾಜಕಾರಣವೇ ರೋಚಕ, ಅವರು ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಗಾಗಿ ನಡೆದ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪಾರ ನೇತೃತ್ವದ ಹೋರಾಟಕ್ಕೆ ಬೆಂಬಲಿಸಿದವರು, ಆಗಿನ ಉಪ ಪ್ರಧಾನಿ ಲಾಲ್ ಕೃಷ್ಣ ಅಧ್ವಾನಿಯವರಿಗೆ ಸಾಗರ ರೈಲು ನಿಲ್ದಾಣದ ಹೆಸರನ್ನ ರಾಮ ಮನೋಹರ ಲೋಹಿಯ ರೈಲು ನಿಲ್ದಾಣ ಎಂದು ಪುನರ್ ನಾಮಕರಣಕ್ಕೆ ಕಾರಣರಾದವರು (ಅಂತಿಮ ಆಗಿದ್ದರು ಜಾರಿ ಆಗಿಲ್ಲ) ಈ ಬಾರಿ ರಾಜಕಾರಣದಿಂದ ನಿವೃತ್ತರಾದವರನ್ನ ಪುನಃ ಲೋಕಸಭೆಗೆ ಅಭ್ಯಥಿ೯ ಆಗಿ ಸ್ಪದಿ೯ಸಿದ್ದಾರೆ.
ಈ ಕ್ಷೇತ್ರದ ಹಾಲಿ ಸಂಸದ ದೃವ ನಾರಾಯಣ್ ಇವರ ಶಿಷ್ಯ ಇವರ ವಿರುದ್ಧ ಬಿಜೆಪಿಯಿಂದ ಸ್ಪದಿ೯ಸಲು ನಿವೃತ್ತಾ ಕನ್ನಡದಲ್ಲಿ ಐಎಎಸ್ ಮಾಡಿದ್ದ ಚಲನ ಚಿತ್ರ ನಟ ಕೆ.ಶಿವರಾಂಗೆ ಯಡೂರಪ್ಪ ತಯಾರಿ ಮಾಡಿದ್ದರು, 6 ತಿಂಗಳಲ್ಲಿ ಶಿವರಾಂ ಹವಾ ಹೆಚ್ಚಾಗಿ ದೃವ ನಾರಾಯಣ್ ಕಂಗಾಲಾಗಿದ್ದರು.
ಆಗಲೇ ದೃವನಾರಾಯಣರ ಆಪ್ತರು ಮತ್ತು ಶ್ರೀನಿವಾಸ ಪ್ರಸಾದರ ಆಪ್ತರು ದೃವ ನಾರಾಯಣ್ ಗೆಲ್ಲಬೇಕು ಮತ್ತು ಕೆ.ಶಿವರಾಂ ಸ್ಪದಿ೯ಸ ಬಾರದೆಂದು ನಾಟಕ ಒಂದನ್ನ ನಡೆಸಿದರು, ಶ್ರೀನಿವಾಸ ಪ್ರಸಾದರು ಸ್ಪದಿ೯ಸಿದರೆ ಸಲೀಸಾಗಿ ಗೆಲ್ಲುತ್ತಾರೆ ಮತ್ತು ಒಂದು ಕಾಲದಲ್ಲಿ ಶ್ರೀನಿವಾಸ್ ಪ್ರಸಾದರಿಂದ ಸಂಸದರಾದ ದೃವ ನಾರಾಯಣರನ್ನ ಸೋಲಿಸಿ ಸೇಡು ತೀರುಸಿ ಕೊಳ್ಳಬಹುದೆಂಬ ಹುಸಿ ಯೋಜನೆ ಮುಂದು ಮಾಡಿದರು.
6 ತಿಂಗಳಿಂದ ಕ್ಷೇತ್ರದಲ್ಲಿ ಗೆಲುವಿಗಾಗಿ ಶ್ರಮಿಸಿದ್ದ ಶಿವರಾಂರನ್ನ ಸ್ಪದಿ೯ಸದ೦ತೆ ಮಾಡುವ ಯೋಜನೆ ಇದಾಗಿದ್ದರು ಹಿರಿಯರಾದ ಶ್ರೀನಿವಾಸ್ ಪ್ರಸಾದರ ಸ್ಪದೆ೯ಗಾಗಿ ಶಿವರಾಂ ಹಿಂದೆ ಸರಿದರು.
ಶ್ರೀನಿವಾಸ್ ಪ್ರಸಾದ್ರನ್ನ ಬೆಂಬಲಿಸಿ ನಿಲ್ಲಿಸಿದವರೆ ಇವರಿಗೆ ವಯಸ್ಸಾಯಿತು, ಕಣ್ಣು ಕಾಣುವುದಿಲ್ಲ, ಕಿವಿ ಕೇಳುವುದಿಲ್ಲ ಅಂತೆಲ್ಲ ಅಪ ಪ್ರಚಾರ ಮಾಡಿ ದೃವ ನಾರಾಯಣರನ್ನ ಗೆಲ್ಲಿಸುವ ಪ್ರಯತ್ನ ನಡೆಸಿದ್ದಾರೆ.
ಕೆಲವು ಬಾರಿ ಅಹ೯ತೆಯೇ ಅನಹ೯ತೆ ಎಂಬOತೆ ಕೆ.ಶಿವರಾಂ ಸಂಸದರಾಗಿ ಸಂಸತ್ ಪ್ರವೇಶ ಮಾಡುವ ಅವಕಾಶದಿಂದ ವ್ಯವಸ್ಥಿತವಾಗಿ ವಂಚಿಸಲಾಯಿತು.
Comments
Post a Comment