Blog number 1426. ನಿವೃತ್ತ AEE ನಂದ್ಯಾಳಕೊಪ್ಪ ಬೊಮ್ಮಯ್ಯ ಪ್ರಸಿದ್ಧ ಭೂದಾನ ಚಳವಳಿಯ ಸರ್ದಾರ್ ಎಣ್ಣೆಕೊಪ್ಪದ ಮಲ್ಲಿಕಾರ್ಜುನಗೌಡರ ಮೊಮ್ಮಗಳ ಪತಿ 25 ವರ್ಷದ ನಂತರ ಇವತ್ತು ಬೇಟಿ
#ಇಪ್ಪತೈದು_ವರ್ಷದ_ನಂತರದ_ಬೇಟಿ
#ಹೊಸನಗರದ_ನಂದ್ಯಾಳಕೊಪ್ಪದ_ಬೊಮ್ಮಯ್ಯ
#ನಿವೃತ್ತ_ಅಸಿಸ್ಟೆಂಟ್_ಎಕ್ಸಿಕ್ಯುಟೀವ್_ಇಂಜಿನಿಯರ್
#ಶರಾವತಿ_ಮುಳುಗಡೆ_ಸಂತ್ರಸ್ಥರು.
#ಸರ್ದಾರ್_ಎಣ್ಣೆಕೊಪ್ಪದ_ಮಲ್ಲಿಕಾರ್ಜುನ_ಗೌಡರ_ಮೊಮ್ಮಗಳ_ವಿವಾಹ_ಆಗಿದ್ದಾರೆ.
N. ಬೊಮ್ಮಯ್ಯ ಸಾಹೇಬರು 1995ರಲ್ಲಿ ನಾನು ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಸಾಗರ ತಾಲ್ಲೂಕ್ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಸಿಸ್ಟೆಂಟ್ ಎಕ್ಸಿಕ್ಯೂಟೀವ್ ಇಂಜಿನಿಯರ್ ಆಗಿದ್ದವರು.
ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಂದ್ಯಾಳಕೊಪ್ಪದ ಶರಾವತಿ ಸಂತ್ರಸ್ತರ ಕುಟುಂಬದವರು, ಇವರ ತಂದೆ ನಂದ್ಯಾಳಕೊಪ್ಪ ವೀರಪ್ಪ ಗೌಡರಿಗೆ ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಹೊಸನಗರದಲ್ಲಿ ನಡೆದ ಸಮಾರಂಭದಲ್ಲಿ ಖಾದಿ ಗಾಂಧಿ ಟೋಪಿ ತೊಡಿಸಿದ್ದರು ಆಗ ವೆಂಕಟರಮಣ ಉಡುಪರು, ರಂಗನಾಥರು ಪುರ ಪ್ರಮುಖರು.
ಹೊಸನಗರದಲ್ಲೇ ಪ್ರೌಡ ಶಿಕ್ಷಣ ಪಡೆದ ಬೊಮ್ಮಯ್ಯನವರು ಇಂಜಿನಿಯರಿಂಗ್ ಓದಿ ಸರ್ಕಾರಿ ಕೆಲಸಕ್ಕೆ ಸೇರಿ 1972 ರಲ್ಲಿ ನಾಡಿನ ಪ್ರಖ್ಯಾತ ಭೂಧಾನ ಚಳವಳಿಯ ನೇತಾರ ಆಚಾಯ೯ ವಿನೋಭಾ ಭಾವೆಯವರ ಶಿಷ್ಯರಾಗಿ ಇಡೀ ಮೈಸೂರು ರಾಜ್ಯದಲ್ಲಿ ಪಾದಯಾತ್ರೆ ನಡೆಸಿ ಭೂದಾನ ಚಳವಳಿ ಮುಂದುವರಿಸಿದ ಎಣ್ಣೆಕೊಪ್ಪದ ಸರ್ದಾರ್ ಮಲ್ಲಿಕಾರ್ಜುನಗೌಡರ ಪುತ್ರಿ ಶ್ರೀಮತಿ ಪಾರ್ವತಮ್ಮ ಮತ್ತು ಹೆಚ್.ಆರ್ ಚನ್ನಯ್ಯ ಸೊರಬ ಇವರ ಪುತ್ರಿ ಗೌರಮ್ಮರ ವಿವಾಹ ಆಗುತ್ತಾರೆ.
ಇವತ್ತು ನನ್ನ ಕಛೇರಿಗೆ ಬಂದವರು ಸರ್ದಾರ್ ಮಲ್ಲಿಕಾರ್ಜುನಗೌಡರು ತಮ್ಮ ಸ್ವಂತ ಭೂಮಿ 890 ಎಕರೆ ಜಮೀನು ಭೂದಾನ ಮಾಡಿದ ಬಗ್ಗೆ, ಶಿವಮೊಗ್ಗದ NES ಸಂಸ್ಥೆಗೆ ಅವರ ಹೆಸರು ಬಹಿರಂಗ ಮಾಡದ೦ತೆ ಎಲ್ಲರಿಗಿಂತ ದೊಡ್ಡ ಪ್ರಮಾಣದ ಹಣ ದಾನವಾಗಿ ನೀಡಿದ್ದು, ಬೆಂಗಳೂರಿನ ಗಾಂದಿ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಬಗ್ಗೆ ಮತ್ತು ಅವರ ಜೊತೆ ಒಡನಾಡುವ ಅವಕಾಶ ದೊರೆತ ಬಗ್ಗೆ ಬೊಮ್ಮಯ್ಯ ನೆನಪಿಸಿಕೊಂಡರು.
ಇಂತಹ ಕುಟುಂಬದ ಹಿನ್ನೆಲೆಯ ಬೊಮ್ಮಯ್ಯನವರು ಶುದ್ದ ಹಸ್ತರು, ಭ್ರಷ್ಟಾಚಾರದಿಂದ ಮಾರು ದೂರ ಇದ್ದವರು ಈಗಿನ ವ್ಯವಸ್ಥೆಯಲ್ಲಿ ಇಂತವರು ಇರಲೂ ಸಾಧ್ಯವೇ ಇಲ್ಲ.
80 ರ ವೃದ್ದಾಪ್ಯದಲ್ಲೂ ಆರೋಗ್ಯವಾಗಿರುವ N. ಬೊಮ್ಮಯ್ಯರಿಗೆ ನಾನು ಬರೆದ ಪುಸ್ತಕಗಳು ನೆನಪಿನ ಕಾಣಿಕೆ ಆಗಿ ನೀಡಿದೆ ಆನಂದಪುರಂನಲ್ಲಿರುವ ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ರಂಗೋಲಿ ಕಲಾವಿದೆ ಚಂಪಕಾಳ ದುರಂತ ಪ್ರೇಮದ ಸ್ಮಾರಕ ಚಂಪಕ ಸರಸ್ಸುವಿಗೆ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ 43 ಸಾವಿರ ರೂಪಾಯಿ ಅನುದಾನದಲ್ಲಿ ರಸ್ತೆ - ಮೋರಿ - ಮತ್ತು ಕೊಳದ ಶಿಥಿಲಗೊಂಡ ಕಲ್ಲುಗಳ ದುರಸ್ತಿ ಮತ್ತು ಕೊಳದ ನೀರೊಳಗಿನ ಬಳ್ಳಿಯಂತ ಸಸ್ಯಗಳನ್ನು ತೆಗೆಸುವ ಕಾಮಗಾರಿ ಮಾಡುವಾಗ N. ಬೊಮ್ಮಯ್ಯ ಸಾಗರದ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ AEE ಆದ್ದರಿಂದ ಅವರಿಗೆ ನಾನು ಬರೆದ ಕಾದಂಬರಿ ತಲುಪಿಸಲೇ ಬೇಕಿತ್ತು.
Comments
Post a Comment