#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನಂ_16.
#ದಿನಾ೦ಕ_16_ಏಪ್ರಿಲ್_2020
*ಕೊರಾನಾ ಕಾಲದಲ್ಲೇ ಎಲ್ಲೆ೦ದರಲ್ಲಿ ಉಗುಳುವವರಿಗೆ ತಿದ್ದಿ ಸರಿ ದಾರಿಗೆ ತರಲು ಒಂದು ಅವಕಾಶ ಆಗಿದೆ.*
ಆಗಿನ ಬಿಜಾಪುರ ಈಗಿನ ವಿಜಯಪುರದ ಗೋಲ್ ಗುಮ್ಮಜ್ ನೋಡಲು ಮೆಟ್ಟಲೇರುವಾಗ ಪ್ರತಿ ಮೂಲೆಯು ಗುಟ್ಕಾ ಪ್ರಿಯರ ಉಗುಳಿನ ಪೀಕುದಾನಿ ಆಗಿದ್ದು ನೋಡಿ ಬೇಸರ ಆಯಿತು ಬರುವಾಗ ಅಲ್ಲಿನ ಪ್ರವೇಶಕ್ಕೆ ಟಿಕೇಟು ನೀಡುವ ಕೌ೦ಟರಿನಲ್ಲಿದ್ದ ಅಧಿಕಾರಿಗೆ ಈ ಬಗ್ಗೆ ಹೇಳಿದಾಗ ಅವರು ಹೇಳಿದ್ದು ಸಕಾ೯ರ ಈ ಪಾನ್ ಬಂದ್ ಮಾಡದೇ ಇದೆಲ್ಲ ಬದಲಿಸಲು ಸಾಧ್ಯವಿಲ್ಲ ಅಂತ, ಅವರೂ ಗುಟ್ಕಾ ಜಗೀತಾ ಇದ್ದರು.
ಶಿವಮೊಗ್ಗದ ಹಳೆ ಜಿಲ್ಲಾಧಿಕಾರಿ ಕಚೇರಿ ಮೆಟ್ಟಲ ಮೂಲೆಗಳಲ್ಲೂ ಇದೇ ಕಥೆ ಈಗ ಹೊಸ ಜಿಲ್ಲಾಧಿಕಾರಿ ಕಚೇರಿ ನಾನು ನೋಡಿಲ್ಲ.
ಬಸ್ಗಳಲ್ಲಿ ರೈಲಿನಲ್ಲಿ ಎಲ್ಲೆ ನೋಡಿದರು ಮೂಲೆ ಮೂಲೆಯೂ ಗುಟ್ಕಾ ಪೀಕುದಾನಿಗಳಾಗಿ ಅಲ್ಲಿ ಕುಳಿತು ಪ್ರಯಾಣ ಮಾಡಲು ಕಷ್ಟ ಆಗಿದೆ.
ಅತಿ ಸಣ್ಣ ವಯಸಿನ ಮಕ್ಕಳೇ ಈ ವ್ಯಸನಕ್ಕೆ ದಾಸರಾಗುತ್ತಿರುವುದು ಒಂದು ಸಾಮಾಜಿಕ ಕಂಟಕವಾಗಿದೆ.
ಇದು ಕ್ಯಾನ್ಸರ್ ಗೆ ಕಾರಣ ರದ್ದಾಗಲಿ ಎಂದರೆ ಅಡಿಕೆ ಬೆಳೆಗಾರರು ಬಿಡುವುದಿಲ್ಲ. ಕೆಲವು ರಾಜ್ಯದಲ್ಲಿ ಇದು ಸಂಪೂಣ೯ ನಿಷೇದವಾದರೂ ಅಡಿಕೆ ಪುಡಿ ಒಂದು ಪಟ್ಟಣದಲ್ಲಿ ಹಾಕಿದ್ದು ಮಾರಾಟ ಮಾಡಲು ಯಾವುದೇ ತೊ೦ದರೆ ಇಲ್ಲ ಇನ್ನೋOದು ಪೊಟ್ಟಣದಲ್ಲಿ ತಂಬಾಕು ಜದಾ೯ ಮಸಾಲೆ ಅಂತ ಗುಟ್ಟಾಗಿ ಕೊಡುತ್ತಾರೆ ಎರೆಡು ಸೇರಿದರೆ ಪುನಃ ಗುಟ್ಕಾ ಆಗುವ ಕಾನೂನಿನ ಚಾಪೆ ಅಡಿ ನುಸುಳುವ ಚಾಲಾಕಿತನ ಚಾಲ್ತಿಯಲ್ಲಿದೆ.
ಕೊರಾನಾ ಮಹಾಮಾರಿ ಮನುಷ್ಯನ ಎಂಜಲು, ಕಫಗಳಲ್ಲಿ ಮತ್ತು ಸಿಂಬಳದಿಂದ ಹೆಚ್ಚು ಪ್ರಸರಣ ಆಗುವುದರಿ೦ದ ಕೇಂದ್ರ ಸಕಾ೯ರ ಎಲ್ಲೆಂದರಲ್ಲಿ ಉಗುಳುವವರ ಮೇಲೆ ಕಾನೂನು ಕ್ರಮ ಬಳಸುವಂತೆ ಉಗುಳದಂತೆ ಜನ ಜಾಗೃತಿ ಮಾಡಿ ವೈರಸ್ ನಿಯಂತ್ರಣಕ್ಕೆ ತಾಕೀತು ಮಾಡಿದೆ.
ಗುಟ್ಕಾ ಜಗಿಯುವುದು ಎಲ್ಲೆಂದರಲ್ಲಿ ಉಗಿಯುವ ಸಾ೦ಕ್ರಮಿಕವಾದ ಕೆಟ್ಟ ಹವ್ಯಾಸ ಭಾರತೀಯರಲ್ಲಿ ಅತಿ ಹೆಚ್ಚಾಗಿದೆ ಕೊರಾನ ಕಾಯಿಲೆ ಸಂದಭ೯ದಲ್ಲಾದರು ಈ ಕೆಟ್ಟ ಹವ್ಯಾಸ ಸಂಪೂಣ೯ ತೊಲಗುವಂತಾದರೆ ಅದೇ ಪುಣ್ಯ.
ಸಾವ೯ಜನಿಕರು ಕೂಡ ಈ ಬಗ್ಗೆ ಹೆಚ್ಚು ನಿಗಾವಹಿಸಿ ಕೊರಾನಾ ವೈರಸ್ ಹರಡಲು ಕಾರಣವಾಗುವ ಗುಟ್ಕಾ ಪೀಕು ದಾನಿಗಳಾಗಿರುವ ಸಾವ೯ಜನಿಕ ಸ್ಥಳಗಳಿಗೆ ಮುಕ್ತಿ ತೋರಿಸಬೇಕು.
ನಿಯ೦ತ್ರಣ ಇಲ್ಲದೆ ಉಗಿಯುವವರನ್ನ ಕಾನೂನಿನ ಬಲ ಪ್ರಯೋಗ ಮಾಡಿ ಆದರೂ ಕೆಟ್ಟ ಹವ್ಯಾಸಕ್ಕೆ ತಡೆಮಾಡಬೇಕಾಗಿದೆ.
Comments
Post a Comment