ಆನಂದಪುರಂ ಇತಿಹಾಸ ಭಾಗ_5.
#ವಿದ್ಯಾಮಂತ್ರಿಗೆ_ವಿದ್ಯೆ_ಕಲಿಸಿದ_ಶಾಲೆ
#ರಾಜ್ಯದ_ಶಿಕ್ಷಣಮಂತ್ರಿ_ಆಗಿದ್ದ_ಬದರಿನಾರಾಯಣ_ಆಯ್ಯಂಗಾರರು_ಓದಿದ್ದ
#ಸಕಾ೯ರಿ_ಕಿರಿಯಪ್ರಾಥಮಿಕ_ಶಾಲೆಗೆ_ಈಗ_122_ವರ್ಷ.
#ಆನಂದಪುರದ_ಜಾಮಿಯ_ಮಸೀದಿ_ಎದುರಿನ_ಶಾಲೆ
ಆನಂದಪುರಂನ ಬದರಿನಾರಾಯಣ ಅಯ್ಯಂಗಾರರು ಶಾಸಕರಾಗಿ, ಮಂತ್ರಿಯಾಗಿ, ಸಂಸದರಾಗಿ ರಾಜ್ಯದ ರಾಜಕಾರಣದಲ್ಲಿ ತಮ್ಮ ಚಾಪು ಮೂಡಿಸಿದವರು ಇವರಿಂದ ಇವರ ಹುಟ್ಟೂರು ಆನಂದಪುರಂ ಕೂಡ ಪ್ರಸಿದ್ದಿ ಪಡೆಯಲು ಕಾರಣರಾದರು.
ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಆನಂದಪುರದ ಹಾಲಿ ಜಾಮಿಯ ಮಸೀದಿಯ ಎದುರಿನ ಸಕಾ೯ರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಿದ್ದು ಇತಿಹಾಸ.
ಇದು ಬ್ರಿಟೀಶ್ ಆಡಳಿತ ಕಾಲದಲ್ಲಿ ಯಡೇಹಳ್ಳಿ ಪ್ರವಾಸಿ ಮಂದಿರ ನಿರ್ಮಾಣದ ಸರಿ ಸುಮಾರು ಒಂದೇ ಕಾಲದಲ್ಲಿ ನಿರ್ಮಾಣ ಆಗಿರ ಬಹುದು.
ಈ ಶಾಲೆಗೆ 1999 ರಲ್ಲಿ ನೂರು ವರ್ಷ ಆಗಿತ್ತು ಆಗ ಈ ಶಾಲೆಯ ಶತಮಾನೋತ್ಸವ ಆಚರಿಸಬೇಕು, ವಿಶೇಷ ಅಂದರೆ ಈ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ ನಮ್ಮ ಊರಿನ ಬದರಿನಾರಾಯಣ ಅಯ್ಯಂಗಾರರು ಈ ರಾಜ್ಯದ ವಿದ್ಯಾ ಮಂತ್ರಿ ಆಗಿದ್ದು ಎಂದು ನಾನು ಆಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಪ್ರಯತ್ನ ಮಾಡಿದಾಗ ಅದನ್ನು ಉದ್ದೇಶಪೂರ್ವಕವಾಗಿ ನಡೆಯದಂತೆ ತಡೆಯುವ ಪ್ರಯತ್ನದಿಂದ ನಾನು ಈ ಮಹತ್ತರ ಕಾಯ೯ಕ್ರಮ ನಡೆಸಲು ಸಾಧ್ಯವಾಗಲಿಲ್ಲ.
ಈಗ ಈ ಶಾಲೆಗೆ ಬಹುಶಃ 122 ನೇ ವಷಾ೯ಚಾರಣೆ.
ಈ ಶಾಲೆಯಲ್ಲಿ ಏ.ಕೆ.ಶೇಷಾಚಾರ್ (ಆನಂದಪುರದ ಪ್ರಾಣೇಶ್ ಆಚಾರ್ ತಂದೆ),ಗಾಂಧೀ ವಾದಿ ಕೃಷ್ಣಮೂರ್ತಿ ಮಾಸ್ತರ್ (ಆನಂದಪುರದ ಕನ್ನಡ ಸಂಘದ ಲಕ್ಷ್ಮೀಷ್ ತಂದೆ), ಟೀಕಪ್ಪ ಮಾಸ್ತರ್ (ಪತ್ರಕರ್ತ ಬಿ.ಡಿ. ರವಿ ತಂದೆ) ಬೆಂಗಳೂರಿನ ಲೋಬೋ ಮಾಸ್ತರ್ ಮತ್ತು ಅವರ ಪತ್ನಿ ಲಿಲ್ಲಿ ಬಾಯಿ ಈ ಶಾಲೆಯಲ್ಲಿ ಬೋದಿಸಿದ ಪ್ರಮುಖರು.
ಶಿವಮೊಗ್ಗ ಸಾಗರ ಮುಖ್ಯ ರಸ್ತೆಗೆ ಮುಖವಾಗಿ ಇದ್ದ ಈ ಶಾಲೆಯ ಗೇಟನ್ನು ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಆದ ನಂತರ ಮತ್ತು ವಾಹನ ಸಂಚಾರ ಹೆಚ್ಚು ಆದ್ದರಿಂದ ಹಿಂಭಾಗದಿಂದ ಪ್ರದೇಶ ದ್ವಾರ ಕಲ್ಪಿಸಿದ್ದಾರೆ.
ನಾಳೆ ಭಾಗ-6
Comments
Post a Comment