Blog number 1339.ಶ್ರೀಧರ ಹುಲ್ತಿಕೊಪ್ಪ ಮುಖ್ಯಮಂತ್ರಿ ಬಂಗಾರಪ್ಪರ ಕಾಲದಲ್ಲಿ ಕಂಪ್ಯೂಟರ್ ನಂತಹ ನೆನಪಿನ ಶಕ್ತಿಯ ಅತ್ಯಂತ ಬುದ್ದಿವಂತ ಪಿ.ಎ. ಆಗಿದ್ದವರು.
#ಶ್ರೀಧರ್_ಹುಲ್ತಿಕೊಪ್ಪ
#ಅಧ್ಯಕ್ಷರು
#ಶಿವಮೊಗ_ಜಿಲ್ಲಾ_ಆರ್ಯ_ಈಡಿಗರ_ಸಂಘ
#ಬ೦ಗಾರಪ್ಪನವರು_ಮುಖ್ಯಮಂತ್ರಿ_ಆಗಿದ್ದಾಗ_ಅವರ_PA_ಆಗಿದ್ದವರು.
#ಅಪಾರ_ನೆನಪಿನ_ಶಕ್ತಿಯ_ನಡೆದಾಡುವ_ಕಂಪ್ಯೂಟರ್
#ಪುತ್ರಿಯ_ವಿವಾಹ_ಆಮಂತ್ರಣ_ನೀಡಲು_ಇವತ್ತು_ಬಂದಿದ್ದರು.
ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಅವರ ಆಪ್ತ ಬಳಗದಲ್ಲಿ ಶ್ರೀಧರ್ ಅತ್ಯಂತ ಕಿರಿಯ ವಯಸ್ಸಿನ ಯುವಕ ಆದರೆ ಮುಖ್ಯಮಂತ್ರಿ ಬಂಗಾರಪ್ಪನವರು ತಮ್ಮ ಆಡಳಿತದಲ್ಲಿ, ರಾಜ್ಯದಾದ್ಯಂತ ಪಕ್ಷ ಸಂಘಟನೆಯಲ್ಲಿ, ಕ್ಯಾಬಿನೆಟ್ ಮಂತ್ರಿಗಳ ಕೋಆರ್ಡಿನೇಟ್ ಮಾಡುವಲ್ಲಿ, ತಮ್ಮ ಸ್ವಕ್ಷೇತ್ರ ಸೊರಬದ ನಿತ್ಯ ಆಗು ಹೋಗುಗಳಲ್ಲಿ ಮತ್ತು ಅವರ ದೈನಂದಿನ ಪ್ರವಾಸ - ಸಭೆ - ಸಮಾರಂಭಗಳಿಗೆ ಯುವಕ ಶ್ರೀಧರ್ ಗೆ ಹೆಚ್ಚು ಅವಲಂಬಿಸಿದ್ದರು.
ಈಗೆಲ್ಲಾ ಕಂಪ್ಯೂಟರ್ ಗಳಿದೆ, ಮೊಬೈಲ್ ಪೋನ್ ಗಳು ಬಂದಿದೆ ಆದರೆ 1990 ರ ದಶಕದಲ್ಲಿ ಅಧ್ಯಾವುದು ಇಲ್ಲದ ಕಾಲ ಅದರಲ್ಲೂ ಬಂಗಾರಪ್ಪನವರದ್ದು ಆಡಳಿತ- ರಾಜಕಾರಣಗಳಲ್ಲಿ ವಿಪರೀತ ವೇಗದ ಮಲ್ಟಿಟಾಸ್ಕ್ ಇರುವಂತ ಮುಖ್ಯಮಂತ್ರಿ ಆದ್ದರಿಂದ ಅವರ ವೇಗಕ್ಕೆ ಹೊಂದುವ ಸಾಮರ್ಥ್ಯ ಇರುವಂತವರು ವಿರಳಾತಿವಿರಳ ಅದರಲ್ಲಿ ಶ್ರೀಧರ್ ಹುಲ್ತಿಕೊಪ್ಪ ಅವರಲ್ಲಿ ಅಂತಹ ಸಾಮರ್ಥ್ಯ ಇತ್ತು.
ದೊಡ್ಡ ದೊಡ್ಡ ಹಿರಿಯ ಐಎಸ್ - ಐಪಿಸ್ ಅಧಿಕಾರಿಗಳ, ಮಂತ್ರಿ ಮಹೋದಯರುಗಳ, ವಿರೋದ ಪಕ್ಷದ ಮುಖಂಡರುಗಳ, ಕಾಂಗ್ರೇಸ್ ಪಕ್ಷದ ದುರೀಣರುಗಳ ಪೋನ್ ನಂಬರ್ ಗಳನ್ನು ಮುಖ್ಯಮಂತ್ರಿಗಳು ಕೇಳಿದ ತಕ್ಷಣ ಸಂಪರ್ಕಿಸಬೇಕೆಂದರೆ ಶ್ರೀಧರ್ ನೆನಪಿನ ಶಕ್ತಿ ಐಕ್ಯೂ ಸಾಮರ್ಥ್ಯ ಎಷ್ಟು ಎಂದು ಅಂದಾಜಿಸಬಹುದಾಗಿದೆ.
ಆಗ ಬಂಗಾರಪ್ಪರ ಮಕ್ಕಳಾದ ಕುಮಾರ್ ಬಂಗಾರಪ್ಪ, ಮದು ಬಂಗಾರಪ್ಪ ವಿದ್ಯಾಬ್ಯಾಸ ಮಾಡುತ್ತಿದ್ದ ಕಾಲ.
ನಂತರ ಶ್ರೀಧರ್ ಶಿವಮೊಗ್ಗದಲ್ಲಿ ಸಂದೇಶ್ ಮೋಟಾರ್ ಸೈಕಲ್ ಶೋರೂಂ ತೆರೆದರು, ಸೊರಬದ ರಾಜಕಾರಣದಲ್ಲಿ ಬಿಜೆಪಿ ಪಕ್ಷ ಸೇರಿ ಹರತಾಳು ಹಾಲಪ್ಪರ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು ಈಗ ಪುನಃ ಕಾಂಗ್ರೇಸ್ ಪಕ್ಷದಲ್ಲಿ ಕ್ರಿಯಾಶೀಲರಾಗಿದ್ದಾರೆ.
ಶಿವಮೊಗ್ಗದಲ್ಲಿ ಜಿಲ್ಲಾ ಆರ್ಯ ಈಡಿಗ ಸಂಘದ ಸುಸಜ್ಜಿತ ಈಡಿಗರ ಭವನ ಮತ್ತು ಈಡಿಗರ ವಿದ್ಯಾರ್ಥಿನಿಲಯಗಳ ನಿರ್ಮಾಣದಲ್ಲಿ ಶ್ರೀಧರರ ಪಾತ್ರ ದೊಡ್ಡದಿದೆ.
ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಇವರ ಬುದ್ದಿವಂತಿಕೆ ಸರಿಯಾಗಿ ಯಾರೂ ಬಳಸಿಕೊಳ್ಳಲಿಲ್ಲ ಮತ್ತು ಇವರಿಗೆ ಸಿಗಬೇಕಾದ ರಾಜಕೀಯ ಸ್ಥಾನಮಾನಗಳನ್ನು ಉದ್ದೇಶ ಪೂರ್ವಕವಾಗಿ ತಪ್ಪಿಸಲಾಯಿತು.
ತಮ್ಮ ಮೊದಲ ಪುತ್ರಿಯ ವಿವಾಹ ಆಹ್ವಾನ ನೀಡಲು ಶ್ರೀಧರ್ ಹುಲ್ತಿಕೊಪ್ಪ ಬಂದಿದ್ದರು ಈ ಸಂದರ್ಭದಲ್ಲಿ ಬಂಗಾರಪ್ಪನವರ ಮುಖ್ಯಮಂತ್ರಿ ಅವದಿಯ ಅನೇಕ ಸ್ವಾರಸ್ಯ ಘಟನೆಗಳನ್ನು ಅವರು ನೆನಪಿಸಿಕೊಂಡರು.
ನೂತನ ವದು ವರರಿಗೆ ಶುಭ ಹಾರೈಸುತ್ತಾ ಶ್ರೀಧರ್ ಅವರ ಮುಂದಿನ ರಾಜಕಾರಣದ ಜೀವನದಲ್ಲಿ ಸೂಕ್ತ ಸ್ಥಾನ ಮಾನ ದೇವರು ನೀಡಲಿ ಎಂದು ಹಾರೈಸಿ ಬಿಳ್ಕೊಟ್ಟೆ.
Comments
Post a Comment