#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನಂ_15.
#ದಿನಾ೦ಕ_15_ಏಪ್ರಿಲ್_2020.
ಲಾಕ್ ಡೌನ್ ಘೋಷಣೆ ಆದ ತಕ್ಷಣ ಸವಿತಾ ಸಮಾಜದ ಸಂಘ ಎಲ್ಲಾ ಸಲೂನ್ಗಳನ್ನ ಮುಚ್ಚುವಂತೆ ಆದೇಶಿಸಿತು ಅದರಂತೆ ರಾಜ್ಯದಾದ್ಯಂತ ಸೆಲೂನ್ ಗಳಿಲ್ಲ.
ಪ್ರಾರ೦ಭದಲ್ಲಿ ಬಾಗಿಲು ಮುಚ್ಚಿದ ಸೆಲೂನ್ ಗಳ ಬಗ್ಗೆ ಯಾರಿಗೂ ಅಷ್ಟಾಗಿ ಗಮನ ಹೋಗಲಿಲ್ಲ 21 ದಿನ ಕಳೆದು ಪುನಃ 2ನೇ ಅವದಿ ಲಾಕ್ ಡೌನ್ ಮುಂದುವರಿಸಿದಾಗಲೇ ಸೆಲೂನ್ ಗೆ ಹೋಗಬೇಕಿತ್ತು ಅಂತ ಪುರುಶರಿಗೆ ಚಟಪಟಿಕೆ ಪ್ರಾರಂಭ ಆಗಿದೆ.
ಇದು ಕೇವಲ ಪುರುಷರಿಗೆ ಮಾತ್ರ ಅಲ್ಲ ಈಗಿನ ಆದುನಿಕ ಸ್ತ್ರಿಯರು ಬ್ಯೂಟಿ ಪಾಲ೯ರ್ ಗಳ ಮೇಲೆ ಅವಲಂಬನೆ ಹೊಂದಿದ್ದಾರೆ.
ಸಾಮಾಜಿಕ ಅಂತರ ಕನಿಷ್ಟ 6 ಅಡಿ ಪಾಲಿಸಬೇಕು ಹಾಗಾದರೆ ಸಲೂನ್ ನಲ್ಲಿ ಕೇಶವಿನ್ಯಾಸ ಸಾಧ್ಯವೆ? ಬರುವ ಗಿರಾಕಿಯಲ್ಲಿ ಕೋವಿಡ್ - 19 ವೈರಸ್ ಇದ್ದರೆ ಮೊದಲ ಬಲಿ ಸಲೂನ್ ಮಾಲಿಕನೆ ಆಗುತ್ತಾನೆ ನಂತರ ಬರುವವರಿಗೂ ಇದು ಹರಡುವುದರಲ್ಲಿ ಅನುಮಾನವಿಲ್ಲ.
ಭಾರತೀಯ ಆರೋಗ್ಯ ಇಲಾಖೆ ಸ್ಥಳಿಯ ಆಡಳಿತ ಇನ್ನೂ ಸೆಲೂನ್ ಬಗ್ಗೆ ನಿದಿ೯ಷ್ಟ ಮಾಗ೯ ಸೂಚಿ ನೀಡಿಲ್ಲ ಆದರೆ ಜನತೆ ಮತ್ತು ಸಲೂನ್ ಮಾಲಿಕರೇ ಸದ್ಯ ಕೇಶವಿನ್ಯಾಸ, ಸ್ತ್ರಿಯರ ಪೇಶಿಯಲ್ ಮುಂತಾದದ್ದು ಬಹಿಷ್ಕರಿಸಿದ್ದಾರೆ.
ಮನೇಯಲ್ಲಿ ಟಾಯಿಲೆಟ್ ಕಿಟ್ ನ ಟ್ರಿಮ್ಮರ್ ಗಳಿ೦ದ ತಾತ್ಕಾಲಿಕ ಕೆಲಸ ಆಗುತ್ತಿದೆ, ಮಕ್ಕಳ ಕೇಶವಿನ್ಯಾಸ ಪೋಷಕರೇ ರಜಾ ಇರುವುದರಿಂದ ಹಾಗೂ ಹೀಗೂ ಮಾಡುತ್ತಿದ್ದಾರೆ.
ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯಷ್ಟೆ ಮುಂಜಾಗೃತ ಕ್ರಮದಲ್ಲಿ ಇರದಿದ್ದರೆ ಸಲೂನ್ ಗಳೇ ಕೊವಿಡ್ - 19 ವೈರಸ್ಗಳ ಪ್ರಸರಣಕ್ಕೆ ಕಾರಣವಾಗಲಿದೆ.
ಇನ್ನೂ ಕೆಲವು ಕಾಲ ಸಲೂನ್ ಬಳಸದೇ ಇರುವುದು ಕ್ಷೇಮ ಕೂಡ.
ಹಾಗಂತ ಸೆಲೂನ್ ನಲ್ಲಿ ಕೆಲಸ ಮಾಡುವವರಿಗೆ ದೈನ೦ದಿನ ಜೀವನ ನಿವ೯ಹಣೆಗೆ ಪಯಾ೯ಯ ವ್ಯವಸ್ಥೆ ಸಕಾ೯ರ ಕೈಗೊಳ್ಳಬೇಕಾದ್ದು ಅನಿವಾಯ೯ ಕೂಡ.
Comments
Post a Comment