#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_21
#ದಿನಾ0ಕ_24_ಏಪ್ರಿಲ್_2020
*ದೇಶದಾದ್ಯ೦ತ ಆಶಾ ಕಾಯ೯ಕತೆ೯ಯರ ಸೇವೆ ಸುದ್ದಿ ಮಾಡುತ್ತಿದೆ.
*ಅವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
*ಕೊರಾನಾ ವೈರಸ್ ನಿಯ೦ತ್ರಣದಲ್ಲಿ ಬುಡಮಟ್ಟದಲ್ಲಿ ಅವರ ಕೆಲಸ ಪ್ರಶಂಸನೀಯ ಅಷ್ಟೇ ಅಪಾಯಕಾರಿ.
ಆಶಾ ಅಂದರೆ ಕನ್ನಡದ ಹೆಸರOತಲೇ ಎಲ್ಲಾ ಬಾವಿಸಿದ್ದಾರೆ
ಆದರೆ ಇದು ಇಂಗ್ಲೀಷ್ ನ
ACCRIDITED SOCIAL HEALTH ACTIVIST(ASHA) ನ ಶಾಟ್೯ ಪಾರಂ.
ಇವರನ್ನ ನ್ಯಾಷನಲ್ ಹೆಲ್ತ್ ಮಿಷನ್ ನ ಅಡಿಯಲ್ಲಿ 2005ರ ರಲ್ಲಿ ಕೇ೦ದ್ರ ಸಕಾ೯ರ ಪ್ರಾರಂಬಿಸಿದ ಯೋಜನೆಯಿಂದ ಗ್ರಾಮಗಳ 1000ದಿಂದ 2000 ಜನಸಂಖ್ಯೆ ಇರುವ ಪ್ರದೇಶಕ್ಕೆ ಒಬ್ಬರಂತೆ ಸ್ಥಳಿಯ ANM ಮತ್ತು ಅಂಗನವಾಡಿ ಕಾಯ೯ಕತೆ೯ಯರ ಜೊತೆಯಲ್ಲಿ ಕಾಯ೯ ನಿವ೯ಹಿಸುತ್ತಾರೆ.
ಅಂದಿನ ಪ್ರದಾನ ಮಂತ್ರಿ ಮನಮೊಹನ್ ಸಿಂಗ್ 2005ರಲ್ಲಿ ಉದ್ಘಾಟಿಸಿದ್ದರು ಈ ಯೋಜನೆ 20 I2 ರಲ್ಲಿ ಪೂಣ೯ ಪ್ರಮಾಣದಲ್ಲಿ ಕಾಯ೯ನಿವ೯ಹಿಸಬೇಕೆಂಬ ಕಾಲ ಮಿತಿ ಇಡಲಾಗಿತ್ತು.
ಈಗ ದೇಶದಾದ್ಯಂತ ಸುಮಾರು 10 ಲಕ್ಷ ಆಶಾ ಕಾಯ೯ಕತೆ೯ಯರು ಕಾಯ೯ ನಿವ೯ಹಿಸುತ್ತಿದ್ದಾರೆ.
ಜನವಸತಿ ಕೇಂದ್ರದ ವ್ಯಾಪ್ತಿಯ ವಿವಾಹಿತ / ವಿದವೆ/ವಿಚ್ಚೇದಿತ 10ನೆ ತರಗತಿವರೆಗೆ ವಿದ್ಯಾಬ್ಯಾಸ ಇರುವ ಸ್ಥಳಿಯ ಸಮೂದಾಯಕ್ಕೆ ಸೇರಿದ ಮಹಿಳೆಯರನ್ನ ಸ್ಥಳಿಯ ಗ್ರಾ.ಪಂ.ಆಯ್ಕೆ ಮಾಡಬೇಕು ಅವರು ವಾರದಲ್ಲಿ ಪ್ರತಿ ಬುಧವಾರ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಸಂಬಂದ ಪಟ್ಟ ಆರೋಗ್ಯಾಧಿಕಾರಿ ಬೇಟಿ ಮಾಡಬೇಕು.
ಇವರ ಹತ್ತಿರ ಹೆರಿಗೆ ಕಿಟ್, 0RS,IFA ಗುಳಿಗೆಗಳು, ಮಲೇರಿಯ ನಿಯOತ್ರಣದ ಮಾತ್ರೆ, ಗಭ೯ ನಿರೋದಕ ಗುಳಿಗೆ ಮತ್ತು ಕಾ೦ಡೊಮುಗಳನ್ನ ಸಕಾ೯ರ ಇವರ ಹತ್ತಿರ ನೀಡಿರುತ್ತದೆ.
ಇವರ ಮುಖ್ಯ ಕೆಲಸ ಮಕ್ಕಳ ಜನನ ಆಸ್ಪತ್ರೆಗಳಲ್ಲೇ ಆಗುವ೦ತೆ ನೋಡಿಕೊಳ್ಳಬೇಕು ಇದರಿOದ ಶಿಶುಮರಣ ಪ್ರಮಾಣ ಕಡಿಮೆ ಮಾಡುವ ಮತ್ತು ಗಬಿ೯ಣಿಯರಿಗೆ ಸೂಕ್ತ ಮಾಗ೯ದಶ೯ನದಿಂದ ಆರೋಗ್ಯಕರ ಜನಾಂಗ ನಿಮಾ೯ಣದ ಗುರಿ ರಾಷ್ಟೀಯ ಹೆಲ್ತ್ ಮಿಷನ್ ನದ್ದು.
ಇದರ ಜೊತೆ ಸಮೂದಾಯದ ಕುಟುಂಬ ನಿಯಂತ್ರಣ, ಪಸ್ಟ್ Aid, ವಿಲೇಜ್ ಸ್ಯಾನಿಟೇಶನ್ ನ ಹೆಚ್ಚುವರಿ ಕೆಲಸ ಇವರದ್ದಾಗಿದೆ.
ಇವರ ಪ್ರದೇಶದ ಪ್ರತಿ ಹೆರಿಗೆಗೆ 600,ಗಭ೯ ನಿರೋದಕ ಚಿಕಿತ್ಸೆಗೆ ಒಳಪಡಿಸಿದರೆ 150,ಮಕ್ಕಳ ರೋಗ ನಿರೋದಕ ಚುಚ್ಚುಮದ್ದಿನ ಚಕ್ರ ಪೂಣ೯ ಮಾಡಿದರೆ 150, ಒಂದು ಹೆರಿಗೆಯಿ೦ದ ಇನ್ನೊಂದು ಹೆರಿಗೆಗೆ 2 ವಷ೯ ಅಂತರವಿದ್ದರೆ ಇಂತಿಷ್ಟು ಹೀಗೆ ಇವರಿಗೆ ಪ್ರೋತ್ಸಾಹ ಧನವಿದೆ.
ವ್ಯಾಪ್ತಿಯ ಪ್ರತಿ ಕುಟುಂಬದ ಆರೋಗ್ಯದ ಮಾಹಿತಿ ಪ್ರತಿಮನೆಗೆ ಹೋಗಿ ಸಂಗ್ರಹಿಸುವ ಇವರು ಸ್ಥಳಿಯರೇ ಸ್ಥಳಿಯ ಸಮುದಾಯಕ್ಕೆ ಸೇರಿದವರೇ ಆದ್ದರಿಂದ ನೂರಕ್ಕೆ ನೂರು ಖಚಿತ ಮಾಹಿತಿ ಸಂಗ್ರಹವಾಗುತ್ತದೆ ಹಾಗಾಗಿಯೇ ಕೊರಾನ ಲಾಕ್ ಡೌನ್ ಸಂದಭ೯ದಲ್ಲಿ ಇವರ ಸೇವೆ ಅತ್ಯಮೂಲ್ಯ ಆಗಿದೆ.
ಇವರಿಗೆ 2 ರಿಂದ 3 ಸಾವಿರ ಅತಿ ಕಡಿಮೆ ಮಾಸಿಕ ಗೌರವ ಧನ ಸಕಾ೯ರ ನೀಡುತ್ತದೆ ಆಂದ್ರ ಪ್ರದೇಶ ಸಕಾ೯ರದಲ್ಲಿ ಮುಖ್ಯಮಂತ್ರಿ ಜಗನ್ ಮಾತ್ರ ಆಶಾ ಕಾಯ೯ಕತೆ೯ಯರಿಗೆ ಮಾಸಿಕ 10 ಸಾವಿರ ಗೌರವ ದನ ನೀಡುತ್ತಿದ್ದಾರೆ.
ಕೊರಾನ ಸಂದಿಗ್ದ ಪರಿಸ್ಥಿತಿ ಆಶಾ ಕಾಯ೯ಕತೆ೯ಯರ ಕೆಲಸದ ಮೌಲ್ಯಮಾಪನಕ್ಕೆ ಮತ್ತು ಪ್ರಶಂಸೆಗೆ ಕಾರಣವಾಗಿದೆ.
Comments
Post a Comment