Skip to main content

Posts

Showing posts with the label Cofeenaadu Chandu now adays very popular in social media toda he met me at

Blog number 1075. ಸಾಮಾಜಿಕ ಜಾಲತಾಣದಲ್ಲಿ ನಾನು ಪುನಿತಣ್ಣ ಶಿವಣ್ಣನ ಅಭಿಮಾನಿ ಕಾಫಿನಾಡು ಚಂದು ಎನ್ನುತ್ತಾ ತಮ್ಮದೇ ಶೈಲಿಯ ಡಯಲಾಗ್ ಮ್ಯಾನರಿಸಂನಿಂದ ರಾಜ್ಯದ ಉದ್ದಗಲದಲ್ಲಿ ವಿಪರೀತ ಜನಪ್ರಿಯತೆ ಪಡೆದ ಕಾಫಿನಾಡು ಚಂದು ಮತ್ತು ನನ್ನ ದಿಡೀರ್ ಬೇಟಿ

ಕಾಫಿನಾಡು_ಚಂದು_ಅಚಾನಕ್_ಬೇಟಿ  #ಈ_ಬಡ_ಕಲಾವಿದನಿಗೆ_ಬೇಕಾಗಿದೆ_ಕನ್ನಡಿಗರ_ಹಾರೈಕೆಗಳು #ಕರೆದುಕೊಂಡು_ಬ೦ದವರು_ರಿಪ್ಪನಪೇಟೆಯ_ಸಿದ್ಧಿವಿನಾಯಕ_ಟ್ರಾವೆಲ್ಸ್_ಶಿವಣ್ಣ #ಇವರದ್ದೇ_ಸ್ಟೈಲ್_ಮತ್ತು_ಮ್ಯಾನರಿಸಂನಿಂದ_ಕರ್ನಾಟಕದ_ಸೆಲೆಬ್ರಿಟಿ.    "ನಾನು ಪುನಿತಣ್ಣ ಶಿವಣ್ಣನವರ ಅಭಿಮಾನಿ ಕಾಫಿ ನಾಡು ಚಂದು" ..... ಎನ್ನುತ್ತಾ ತಮ್ಮದೇ ಶೈಲಿಯಿಂದ ಕರ್ನಾಟಕದ ಜನಪ್ರಿಯ ಸೆಲೆಬ್ರಿಟಿ ಆಗಿರುವ ಕಾಫಿನಾಡು ಚಂದು ಅವರನ್ನು ಇವತ್ತು ದಿಡೀರಾಗಿ ನನ್ನ ಕಛೇರಿ ಒಳಗೆ ಕರೆ ತಂದವರು ರಿಪ್ಪನ್ ಪೇಟೆಯ ಸಿದ್ದಿ ವಿನಾಯಕ ಟ್ರಾವೆಲ್ಸ್ ನ ಶಿವಣ್ಣ.    ಕಾಫಿನಾಡು ಈ ಪರಿ ಜನಪ್ರಿಯತೆಗೆ ಕಾಫಿನಾಡು ಚಂದು ಅವರ ಸೋಷಿಯಲ್ ಮೀಡಿಯಾದ ನಿತ್ಯ ನೂರಾರು ವಿಡಿಯೋಗಳು.    ಪ್ರಾರಂಭದಿಂದ ಕಾಫಿನಾಡು ಚಂದುವನ್ನು ಸಾಮಾಜಿಕ ಜಾಲ ತಾಣದಲ್ಲಿ ನೋಡುತ್ತಾ ಬಂದಿದ್ದೇನೆ ನಂತರ ಇವರು ವೈರಲ್ ಆದರು ಆಗ ಅನ್ನಿಸಿದ್ದು ಈ ಕಲಾವಿದ ಯಾವುದೋ ಉದ್ದೇಶದಿಂದ ದಿಡೀರ್ ಜನಪ್ರಿಯತೆಗಾಗಿ ಹೀಗೆಲ್ಲ ಮಾಡುತ್ತಿರಬಹುದೆನ್ನಿಸಿತು ಜೊತೆಗೆ ಮಾಧ್ಯಮಗಳು ವಿಪರೀತ ಪ್ರಚಾರ ನೀಡಿ ನಂತರ ಈ ಮುಗ್ದ ದುರಂತ ಮಾಡಿಕೊಂಡರೆ ಎಂಬ ಭಯ ಕೂಡ ಅನೇಕರಂತೆ ನಾನು ವ್ಯಕ್ತಪಡಿಸಿದ್ದೆ.   ಆದರೆ ಕಾಫಿನಾಡು ಚಂದು ಹೊಗಳಿಕೆಗೆ ಏರದೆ ತೆಗಳಿಕೆಗೆ ಕುಗ್ಗದೆ ಒಂದೇ ರೀತಿ ಇರುವುದು ಸಮಾದಾನ, ಇವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಸಮೀಪದ ಮಲಂ...