Blog number 1026. ಮಲೆನಾಡಿನಲ್ಲಿ ಊರ ಕಾಯುವ ದೈವ- ಬೂತಗಳಿಗೆ ದೀಪಾವಳಿಯಲ್ಲಿ ಕುರಿ ಕೋಳಿಯ ಬಲಿ ನೈವೇದ್ಯ ನೀಡುವ ನೋನಿ - ಗಾಮದ ಹಬ್ಬ ಎಂದು ಕರೆಯುವ ಗ್ರಾಮದ ಹಬ್ಬಕ್ಕೆ ಜಾತಿ ಬೇದವಿಲ್ಲ ಆದರೆ ಹುಟ್ಟು - ಸಾವು - ಮುಟ್ಟಿನ ಸೂತಕವಿದೆ !
#ಮಲೆನಾಡಿನಲ್ಲಿ ಊರ ಕಾಯುವ ಬೂತಗಳಿಗೆ ನೋನಿ ಎಂಬ ಕುರಿ ಕೋಳಿ ಬಲಿ ನೀಡುವ ಹಬ್ಬದ ಆಚರಣೆ. #ಜಾತಿ ಬೇದ ಇಲ್ಲ ಆದರೆ ಹುಟ್ಟು - ಸಾವು - ಮುಟ್ಟಿನ ಸೂತಕ ಇದೆ. #ಸೂತಕ ಆದರೆ ನೋನಿ ಆಚರಿಸುವಂತಿಲ್ಲ #ನೋನಿ ಸಂಭ್ರಮಕ್ಕೆ ಸೂತಕವನ್ನೆ ನಿವಾರಿಸುವ ಉಪಾಯ #ಮುಟ್ಟಿನ ಸಾಧ್ಯತೆಯ ಹೆಣ್ಣು ಮಕ್ಕಳು ತಾತ್ಕಾಲಿಕವಾಗಿ ಊರು ಬಿಡುವುದು ಶಿವಮೊಗ್ಗ ಜಿಲ್ಲೆಯ ಆನಂದಪುರಂ ಹೋಬಳಿಯಲ್ಲಿ ದೀಪಾವಳಿ ಹಬ್ಬದಲ್ಲಿ ಗ್ರಾಮಗಳಲ್ಲಿ ಗಾಮದ ಹಬ್ಬ / ನೋನಿ ಎಂಬ ಗ್ರಾಮದ ಎಲ್ಲಾ ದೇವಾನು ದೇವತೆಗಳಿಗೆ, ಊರ ಕಾಯುವ ಬೂತಗಳಿಗೆ ಸಾಮೂಹಿಕವಾಗಿ (ಇದು ಕೆಲ ಕಡೆ ನೂರಕ್ಕೂ ಹೆಚ್ಚು ) ಪೂಜೆ ನಂತರ ಬಲಿ ನೀಡುವ ಕ್ರಮ ಇದೆ. ಮೇಲ್ಜಾತಿಯವರು ಈ ಪೂಜೆಗೆ ಸಹಕರಿಸುತ್ತಾರೆ, ಬಲಿಗೆ ತರುವ ಕೋಳಿ ಕುರಿಗೆ ತಮ್ಮ ಪಾಲಿನ ಹಣ ಗ್ರಾಮದ ಜನ ನಿದ೯ರಿಸಿದಂತೆ ನೀಡುತ್ತಾರೆ ಆದರೆ ಬಲಿ ಮಾಂಸದ ಪಾಲು ಅವರ ಮನೆಯ ನಿಷ್ಟ ಕೆಲಸಗಾರನಿಗೆ (ಶೂದ್ರನಿಗೆ) ನೀಡುವಂತೆ ಹೇಳುತ್ತಾರೆ. ದೀಪಾವಳಿ ನಂತರ ಕೆಲ ದಿನ ಈ ನೋನಿ ನಡೆಯುತ್ತದೆ ಇದಕ್ಕೆ ಆಚರಣೆಯ ಕ್ರಮ ಹೇಳುವವ ಊರಿನ ಮುಖಂಡ ಅಥವ ಹಿರಿಯ ಇಲ್ಲಿಯೂ ಬಹುಸಂಖ್ಯಾತ ಜಾತಿಯವರ ಮಾತು ಹೆಚ್ಚು ಕೃತಿಗೆ. ಇಲ್ಲಿ ಜಾತಿ ಮಡಿ ಇಲ್ಲ ಆದರೆ ಹುಟ್ಟು - ಸಾವು - ಮುಟ್ಟುವಿನ ಸೂತಕ ಇದೆ. ಸದರಿ ನೋನಿ ದಿನ ಊರಲ್ಲಿ ಯಾರಾದರೂ ಮುಟ್ಟಾದರೆ ಈ ಪೂಜ ಕಾಯ೯ಕ್ರಮ ಮುಂದೂಡಲಾಗುತ್ತೆ. ...