Blog number 1026. ಮಲೆನಾಡಿನಲ್ಲಿ ಊರ ಕಾಯುವ ದೈವ- ಬೂತಗಳಿಗೆ ದೀಪಾವಳಿಯಲ್ಲಿ ಕುರಿ ಕೋಳಿಯ ಬಲಿ ನೈವೇದ್ಯ ನೀಡುವ ನೋನಿ - ಗಾಮದ ಹಬ್ಬ ಎಂದು ಕರೆಯುವ ಗ್ರಾಮದ ಹಬ್ಬಕ್ಕೆ ಜಾತಿ ಬೇದವಿಲ್ಲ ಆದರೆ ಹುಟ್ಟು - ಸಾವು - ಮುಟ್ಟಿನ ಸೂತಕವಿದೆ !
#ಜಾತಿ ಬೇದ ಇಲ್ಲ ಆದರೆ ಹುಟ್ಟು - ಸಾವು - ಮುಟ್ಟಿನ ಸೂತಕ ಇದೆ.
#ಸೂತಕ ಆದರೆ ನೋನಿ ಆಚರಿಸುವಂತಿಲ್ಲ
#ನೋನಿ ಸಂಭ್ರಮಕ್ಕೆ ಸೂತಕವನ್ನೆ ನಿವಾರಿಸುವ ಉಪಾಯ
#ಮುಟ್ಟಿನ ಸಾಧ್ಯತೆಯ ಹೆಣ್ಣು ಮಕ್ಕಳು ತಾತ್ಕಾಲಿಕವಾಗಿ ಊರು ಬಿಡುವುದು
ಶಿವಮೊಗ್ಗ ಜಿಲ್ಲೆಯ ಆನಂದಪುರಂ ಹೋಬಳಿಯಲ್ಲಿ ದೀಪಾವಳಿ ಹಬ್ಬದಲ್ಲಿ ಗ್ರಾಮಗಳಲ್ಲಿ ಗಾಮದ ಹಬ್ಬ / ನೋನಿ ಎಂಬ ಗ್ರಾಮದ ಎಲ್ಲಾ ದೇವಾನು ದೇವತೆಗಳಿಗೆ, ಊರ ಕಾಯುವ ಬೂತಗಳಿಗೆ ಸಾಮೂಹಿಕವಾಗಿ (ಇದು ಕೆಲ ಕಡೆ ನೂರಕ್ಕೂ ಹೆಚ್ಚು ) ಪೂಜೆ ನಂತರ ಬಲಿ ನೀಡುವ ಕ್ರಮ ಇದೆ.
ಮೇಲ್ಜಾತಿಯವರು ಈ ಪೂಜೆಗೆ ಸಹಕರಿಸುತ್ತಾರೆ, ಬಲಿಗೆ ತರುವ ಕೋಳಿ ಕುರಿಗೆ ತಮ್ಮ ಪಾಲಿನ ಹಣ ಗ್ರಾಮದ ಜನ ನಿದ೯ರಿಸಿದಂತೆ ನೀಡುತ್ತಾರೆ ಆದರೆ ಬಲಿ ಮಾಂಸದ ಪಾಲು ಅವರ ಮನೆಯ ನಿಷ್ಟ ಕೆಲಸಗಾರನಿಗೆ (ಶೂದ್ರನಿಗೆ) ನೀಡುವಂತೆ ಹೇಳುತ್ತಾರೆ.
ದೀಪಾವಳಿ ನಂತರ ಕೆಲ ದಿನ ಈ ನೋನಿ ನಡೆಯುತ್ತದೆ ಇದಕ್ಕೆ ಆಚರಣೆಯ ಕ್ರಮ ಹೇಳುವವ ಊರಿನ ಮುಖಂಡ ಅಥವ ಹಿರಿಯ ಇಲ್ಲಿಯೂ ಬಹುಸಂಖ್ಯಾತ ಜಾತಿಯವರ ಮಾತು ಹೆಚ್ಚು ಕೃತಿಗೆ.
ಇಲ್ಲಿ ಜಾತಿ ಮಡಿ ಇಲ್ಲ ಆದರೆ ಹುಟ್ಟು - ಸಾವು - ಮುಟ್ಟುವಿನ ಸೂತಕ ಇದೆ. ಸದರಿ ನೋನಿ ದಿನ ಊರಲ್ಲಿ ಯಾರಾದರೂ ಮುಟ್ಟಾದರೆ ಈ ಪೂಜ ಕಾಯ೯ಕ್ರಮ ಮುಂದೂಡಲಾಗುತ್ತೆ.
ಇಲ್ಲಿ ಬಾಡೂಟದ ಗಮ್ಮತ್ತು ಇರುವುದರಿಂದ ಈ ಕಾಯ೯ಕ್ರಮ ಮುಂದೂಡಲು ಹೆಚ್ಚಿನವರಿಗೆ ಇಷ್ಟ ಇರುವುದಿಲ್ಲ ಅದಕ್ಕಾಗಿ ಸೂತಕಗಳನ್ನೇ ನಿವಾರಿಸಿಕೊಳ್ಳುವ ಹೊಸ ಯೋಜನೆ ಆಚರಣೆಯಲ್ಲಿದೆ.
ಅದೇನೆ೦ದರೆ ಮುಟ್ಟಾಗುವ ಮುನ್ನವೆ ಹೆಣ್ಣು ಮಕ್ಕಳು ಹಳ್ಳಿ ತೊರೆದು ನೋನಿ ಇಲ್ಲದ ಹಳ್ಳಿಯ ನೆಂಟರ ಮನೆಗೆ ಹೋಗಬೇಕು.
ಮುಟ್ಟು ಮೌಡ್ಯವಲ್ಲ ಸಹಜ ಕ್ರಿಯೆ, ಮುಟ್ಟು ಸೂತಕ ಎಂಬುದು ಮೂಡನಂಬಿಕೆ,ಮೊದಲೆಲ್ಲ ಮುಟ್ಟಾದರೆ ಮೂರು ದಿನ ಮನೆಯಲ್ಲೇ ಪ್ರತ್ಯೇಕವಾಗಿ ಅಸ್ಪೃಶ್ಯರಾಗಿರಬೇಕಾದ ಆಚರಣೆ ಈಗಿಲ್ಲ ಆದರೂ ಇದು ವ್ಯೆಜ್ಞಾನಿಕ ಯುಗದಲ್ಲಿ ಸಂಪೂರ್ಣವಾಗಿ ನಿಂತಿಲ್ಲ.
ಇಂತಹ ಆಚರಣೆ ಸಂಪೂರ್ಣ ನಿಲ್ಲಿಸಲು ಮಹಿಳೆಯರಲ್ಲಿಯೇ ಜಾಗೃತಿ ಆಗಬೇಕು ಆದ್ದರಿಂದ
ಇದನ್ನ ಸಾಗರದ ಖ್ಯಾತ ರಂಗಭೂಮಿ ಕಲಾವಿದೆ, ಕಡಿದಾಳು ಶಾಮಣ್ಣರ ಶಿಷ್ಯೆ ಪ್ರತಿಬಾ ರಾಘವೇಂದ್ರ ಅವರು ಕೆಲ ವರ್ಷದ ಹಿಂದೆ ವಿವಿದ ಸಂಘಟನೆಗಳ ನೆರವಿನಿಂದ ಜಾಗೃತಿಗಾಗಿ ಕರಪತ್ರ, ಹಾಡು ಸಭೆ ಮೂಲಕ ಕಾಯ೯ಕ್ರಮ ನಡೆಸಿದ್ದರು.
Comments
Post a Comment