1995ರಲ್ಲಿ ಕಾಗೋಡರ ಜೊತೆ ತುಮರಿ ಬಾಗದಲ್ಲಿ ಕಾಮಗಾರಿ ವೀಕ್ಷಣೆಗೆ ಹೋದಾಗ ಸಾಗರಕ್ಕೆ ವಾಪಾಸು ಬರುವಾಗ ಪ್ರಥಮ ಬಾರಿಗೆ ಇಲ್ಲಿಗೆ ಹೋಗಿದ್ದೆ.
1997 ರಲ್ಲಿ ಬಂಗಾರಪ್ಪನವರು ಶಿವಮೊಗ್ಗದಿಂದ ಸಂಸದರಾದಾಗ ಅವರ ಜೊತೆ ಎರಡನೇ ಬಾರಿ ಹೋಗಿದ್ದೆ.
ನಂತರ ಎರೆಡು ಬಾರಿ ಅಲ್ಲೇ ಉಳಿದು ಬೆಳಗಿನ ಪ್ರಥಮ ಪೂಜೆಯಲ್ಲಿ ಬಾಗಿ ಆಗಿದ್ದೆ.
ಆಸ್ತಿಕರಿಗೆ ಇಲ್ಲಿ ವಿಶೇಷ ನೆಮ್ಮದಿ ಸಿಗುತ್ತದೆ, ನಾಸ್ತಿಕರಿಗೂ ಇಲ್ಲಿನ ನೀರು, ಅರಣ್ಯ ಮತ್ತು ವಿರಳ ಜನಸಂಖ್ಯೆ ಒಂದು ರೀತಿ ಅಲೌಕಿಕ ಲೋಕಕ್ಕೆ ಕರೆದೊಯ್ಯುತ್ತದೆ.
ಸಿಗಂದೂರು ಚೌಡೇಶ್ವರಿ ಹೆಸರು ದೂರ ದೂರಿನಲ್ಲೂ ಪಸರಿಸಿದೆ.
ಭಕ್ತರೂ ಕೈ ಬಿಚ್ಚಿ ಕಾಣಿಕೆ ಸಲ್ಲಿಸುತ್ತಾರೆ ಟ್ರಸ್ಟ್ ಅಧ್ಯಕ್ಷರೂ, ಪ್ರದಾನ ಅಚ೯ಕರೂ ಕೊಡುಗೈ ದಾನಿ ಅನ್ನಿಸಿ ಕೊಂಡಿದ್ದಾರೆ.
ಈಗ ಇವರಿಬ್ಬರ ವೈಯಕ್ತಿಕ ಬಿನ್ನಾಬಿಪ್ರಾಯ ಪರಸ್ಪರ ದ್ವೇಷಕ್ಕೆ ಬದಲಾಗಿದೆ ಇವತ್ತು ದೇವರ ಸನ್ನಿದಿಯಲ್ಲಿ ಹೊಡೆದಾಟ ಬೈಯ್ಗುಳ ಮತ್ತು ಪೋಲಿಸರ ಪ್ರವೇಶ ನಡೆದಿದೆ, ಆಡಳಿತ ಕಚೇರಿ ಪುಡಿಗೈಯಲಾಗಿದೆ.
ಇಲ್ಲಿನ ದೇವಿಯ ನಾಮ ಮಾತ್ರದಿಂದ ನಾಡಿನಾದ್ಯಂತ ಭಕ್ತರು ಭಯ ಪಡುತ್ತಿದ್ದರು ಆದರೆ ದೇವರ ಸನ್ನಿದಿಯಲ್ಲೇ ಇವತ್ತಿನ ಮಾರಾಮಾರಿ ದೇವಿಯ ವಾರಸುದಾರರಿಗೆ ದೇವಿಯ ಮೇಲೆ ಭಯವೂ ಇಲ್ಲ ಮತ್ತು ಭಕ್ತಿಯೂ ಇಲ್ಲ ಎನ್ನುವುದು ಸಾಬೀತು ಮಾಡಿದೆ.
ಶ್ರದ್ದೆ ಭಕ್ತಿಯಿಂದ ದೇವರು ಒಲಿಯುತ್ತಾರೆ,ದೈವ ಸನ್ನಿದಿ ಅನಾಚಾರ ಅಪಚಾರ ಮುಕ್ತವಾಗಿರಬೇಕೆಂಬ ಸನಾತನ ದಮ೯ದ ದಮಾ೯ಚಾರಣೆಗೆ ಇಲ್ಲಿ ಭಂಗ ಬಂದಿರುವುದಂತು ಸತ್ಯ.
Comments
Post a Comment