Blog number 1017. ಸೋಮನ್ ಎಂಬ ಜನಾನುರಾಗಿ ಗೆಳೆಯರು, ಅವರಲ್ಲಿ ಸೇನೆಯಲ್ಲಿ ಸೇವೆ ಮಾಡಿದ ಶಿಸ್ತು ಕೊನೆಯವರೆಗೂ ಜೀವನದಲ್ಲಿ ಅಳವಡಿಸಿಕೊಂಡಿದ್ದರು.
ಪಿ.ಆರ್. ಸೋಮನ್ ನಿವೃತ್ತ ಸೈನಿಕರು, ಕೇರಳ ಮೂಲದವರಾದರೂ ಜೀವನದ ಹೆಚ್ಚಿನ ಅವದಿ ಸಾಗರ ಪಟ್ಟಣದಲ್ಲಿ, ಇವರ ಅಣ್ಣ ಬಾಲ ಕೃಷ್ಣ ಮೇಸ್ತ್ರೀ ಸಾಗರದಲ್ಲಿ ಹೆಸರಾಂತ ಗುತ್ತಿಗೆದಾರರಾಗಿದ್ದರು.
ಸಾಗರದ ತೀ.ನಾ.ಶ್ರೀನಿವಾಸರ ಜೊತೆ 1990ರಲ್ಲಿ ಮೊದಲ ಭೇಟಿ ಅವತ್ತು ಅವರ ಮನೆಯಲ್ಲಿನ ಪ್ರತಿ ವಸ್ತು, ಪೀಟೋ ಪರಣಗಳನ್ನ ಅತ್ಯಂತ ಶಿಸ್ತು ಬದ್ದವಾಗಿ ಜೋಡಿಸಿದ್ದು ನೋಡಿ ಸೋಜಿಗ ಪಟ್ಟಿದ್ದೆ.
ಕಾಂಗ್ರೇಸ್ ಪಕ್ಷವನ್ನ ಪುನರ್ ಸಂಘಟಿಸಿ ಪುನಃ ಬಹಳ ವಷ೯ಗಳ ನಂತರ ಕಾಗೋಡರನ್ನ ಕರೆತರುವ ಆಹಮದ್ ಆಲೀ ಖಾನರ ಯೋಜನೆಯಲ್ಲಿ ಪಿ.ಆರ್.ಸೋಮನ್ ತುಂಬಾ ಶ್ರಮವಹಿಸಿದ್ದರು.
1995ರಲ್ಲಿ ನಾನು ಆನಂದಪುರಂ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಸ್ಪದಿ೯ಸಿದ್ದಾಗ ಬೆಂಬಲಿಸಿ ಅವರ ಟ್ರಾಕ್ಸ್ ಒಂದನ್ನ ಪ್ರಚಾರಕ್ಕಾಗಿ ಉಚಿತವಾಗಿ ನೀಡಿದ್ದನ್ನ ನಾನು ಯಾವತ್ತೂ ಮರೆತಿಲ್ಲ.
ಇವರ ಶ್ರೀಮತಿ ಅತಿಥಿ ಸತ್ಕಾರದಲ್ಲಿ ಪತಿಯ ಆರೈಕೆಯಲ್ಲಿ ಮುಂದು ಈ ಆದಶ೯ ದಂಪತಿಗಳಿಗೆ ಇರುವ ಇಬ್ಬರು ಗಂಡು ಮಕ್ಕಳು ಕೂಡಾ ಸಜ್ಜನರು.
ಸಾಗರದ ರಾಜಕಾರಣದಲ್ಲಿ ಪಿ.ಆರ್.ಸೋಮನ್ ಮತ್ತು ದಿ II ಕೋಯಾರ ಹೆಸರು ಚಿರ ಸ್ಥಾಯಿ ಪಕ್ಷ ಯಾವುದೇ ಇರಲಿ, ಇಬ್ಬರೂ ಕೇರ೪ ಮೂಲದವರಾದರೂ ಅವರ ಕಾಯ೯ಕ್ಷೇತ್ರ ಕನ್ನಡ ನಾಡಾದ ಸಾಗರ ಆಗಿತ್ತು.
ಇವತ್ತಿನ ಪತ್ರಿಕೆಯಲ್ಲಿ ಸೋಮನ್ ವಿದಾಯ ಓದಿ ವಿಷಾದದಿಂದ ಈ ಸಂತಾಪ ಬರೆದೆ, ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ ಹಾಗು ಅವರ ಕುಟುಂಬಕ್ಕೆ ದುಖ: ಬರಿಸುವ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ.
Comments
Post a Comment