Blog number 1024. ಕಾಲ ಹಿಮ್ಮಡಿ ಬಿರುಕು ಬಿಡುವ ಕಾಲ, ಈಗಲೇ ಕಾಲಿನ ಅಂಗಾಲಿನ ರಕ್ಷಣೆಗೆ ಮುಂದಾಗಿ, ಹಿಮ್ಮಡಿ ಮೇಲಿನ ಒತ್ತಡ, ದೀರ್ಘಕಾಲ ನಿಲ್ಲುವುದು, ಚಳಿಗಾಲದ ಶುಷ್ಕ ಹವೆ, ಪಾದದಲ್ಲಿ ಕೊಳೆ ಸಂಗ್ರಹಗಳು ಹಿಮ್ಮಡಿ ಬಿರುಕಿಗೆ ಕಾರಣ.
#ಕಾಲ_ಹಿಮ್ಮಡಿ_ಒಡೆಯುವ_ಕಾಲ
#ಈಗಲೇ_ಕಾಲಿನ_ಹಿಮ್ಮಡಿ_ಬಗ್ಗೆ_ಜಾಗೃತೆ_ಮಾಡಿ
#ಚಳಿಗಾಲದಲ್ಲಿಯೇ_ಹಿಮ್ಮಡಿ_ಬಿರುಕು_ಏಕೆ?
#ಮುಖದಷ್ಟೆ_ಕಾಳಜಿ_ಕಾಲಿನ_ಪಾದಕ್ಕೂ_ಇರಲಿ.
ಎಷ್ಟೇ ಜಾಗೃತೆ ಮಾಡಿದರೂ ಕಾಲ ಹಿಮ್ಮಡಿ ಬಿರುಕು ಬೀಳುತ್ತೆ... ಅಯ್ಯೋ ನೋವು..... ರಕ್ತ ಬರುತ್ತದೆ ಅಂತೆಲ್ಲ ಕಾಲಿನ ಪಾದದ ಬಿರುಕು ಉಂಟಾದ ಮೇಲೆ ಪಶ್ಚಾತ್ತಾಪ ಪಡುವವರನ್ನು ನೋಡುತ್ತೇವೆ ಇದರಲ್ಲಿ ಪುರುಷರಿಗಿಂತ ಸ್ತ್ರಿಯರೇ ಹೆಚ್ಚು.
ಕಾಲ ಹಿಮ್ಮಡಿ ಬಿರುಕು ಸ್ವತಃ ನಾನು ಅನುಭವಿಸಿದ್ದೆ ಕಳೆದ 30 ವರ್ಷದಿಂದ ಮಾತ್ರ ನಾನು ಇದರಿಂದ ಬಾದೆ ಪಡಲಿಲ್ಲ ಕಾರಣ ಪ್ರತಿವಷ೯ ದೀಪಾವಳಿಗೆ ಮೊದಲೇ ನಾನು ನನ್ನ ಪಾದದ ಹಿಮ್ಮಡಿ ಗಮನಿಸಲು ಪ್ರಾರಂಬಿಸುತ್ತೇನೆ ಮುಖದಷ್ಟೆ ಕಾಳಜಿ ಪಾದಗಳ ಬಗ್ಗೆ ಕೂಡ ಕಾಳಜಿ ವಹಿಸಬೇಕು.
ಬರಿಗಾಲಿನಲ್ಲಿ ನಡೆಯುವುದು, ಚಪ್ಪಲಿ ದರಿಸಿದರೂ ಹಿಮ್ಮಡಿ ಮುಚ್ಚದೇ ಇರುವುದರಿಂದ ಪಾದದಲ್ಲಿ ಮತ್ತು ಹಿಮ್ಮಡಿಯಲ್ಲಿ ಕೊಳೆ ಸಂಗ್ರಹವಾಗುವುದರಿಂದ ಬಿರುಕು ಬಿಡುವ ಸಾಧ್ಯತೆ ಹೆಚ್ಚು.
ಚಳಿ ಪ್ರಾರಂಭವಾದಾಗ ಪರಿಸರದಲ್ಲಿ ತೇವಾಂಶ ಕಡಿಮೆ ಆದಾಗ ಚರ್ಮ ಒಣಗುತ್ತದೆ, ಹೆಚ್ಚು ಸಮಯ ನಿಂತು ಕೆಲಸ ಮಾಡುವವರಲ್ಲಿ ಹಿಮ್ಮಡಿ ಮೇಲಿನ ಒತ್ತಡ ಜಾಸ್ತಿ ಆಗುವುದರಿಂದ ಚರ್ಮದಲ್ಲಿ ಬಿರುಕು, ಹುಣ್ಣು ಮತ್ತು ರಕ್ತಸ್ರಾವದ ಸಾಧ್ಯತೆ ಜಾಸ್ತಿ.
ವಯಸ್ಸಾದಂತೆ ಚರ್ಮದ ಸ್ಥಿತಿ ಸ್ಥಾಪಕ ಗುಣ ಕಳೆದುಕೊಳ್ಳುತ್ತದೆ ಇದರಿಂದ ಹೆಚ್ಚು ಒಣಗುವುದು, ಒರಟಾಗುವುದು, ತೈಲಾಂಶ ಉತ್ಪತ್ತಿ ಕಡಿಮೆ ಆಗುವುದು ಮತ್ತು ಮದುಮೇಹ ರೋಗಿಗಳಲ್ಲಿ ನರಗಳಿಗೆ ಹಾನಿ ಆಗುವುದು, ಪಾದಗಳ ಶುಷ್ಕತೆ ಕೂಡ ಬಿರುಕಿಗೆ ಕಾರಣ.
ವೈದ್ಯಶಾಸ್ತ್ರದಲ್ಲಿ ವಿಟಮಿನ್ C, ವಿಟಮಿನ್ B-3, ವಿಟಮಿನ್ E ಕೊರತೆ, ತೂಕ - ಸ್ಥೂಲಕಾಯ, ಒಣ ಚರ್ಮ, ತೆರೆದ ಚಪ್ಪಲಿ, ಹಿಮ್ಮಡಿ ಸುತ್ತಲೂ ಕಡಿಮೆ ಸಂಖ್ಯೆಯ ಸೆಟಾ ಗ್ರಂಥಿಗಳು ಹೊಂದಿರುವುದರಿಂದ ಚರ್ಮ ಒಣಗಿ ಬಿರುಕಿಗೆ ಕಾರಣ ಅನ್ನುತ್ತದೆ.
ನಾನು ಕಾಲ ಹಿಮ್ಮಡಿ ಬಿರುಕಿಗೆ ಕಂಡುಕೊಂಡ ಪರಿಹಾರ ಚಳಿಗಾಲದ ಪ್ರತಿ ದಿನ ರಾತ್ರಿ ಪಾದಗಳನ್ನು ಕೊಳೆಯಿಂದ ಸಂಪೂರ್ಣ ತೊಳೆದು ಒಣಗಿಸಿ ವ್ಯಾಸಲೀನ್ ಲೇಪಿಸುತ್ತೇನೆ ಇದರಿಂದ ಕಾಲಿನ ಬಿರುಕು ಆಗುವುದೇ ಇಲ್ಲ.
ವಾರಕ್ಕೊಮ್ಮೆ ಬಿಸಿ ನೀರಿನ ಬಕೇಟ್ ನಲ್ಲಿ ಪಾದಗಳನ್ನು 10 ನಿಮಿಷ ಅದ್ದಿಟ್ಟು ನಂತರ ಪಾದದ ಹಿಮ್ಮಡಿಯ ಮೃತ ಚರ್ಮ ಕೋಶಗಗಳನ್ನು ನಿವಾರಿಸುತ್ತೇನೆ ಮತ್ತುನಾನು ತೆರೆದ ಚಪ್ಪಲಿಯನ್ನೆ ಧರಿಸುವುದು ಮತ್ರು ಮನೆಯ ಒಳಗೆ ಮೆತ್ತನೆಯ ಹವಾಯಿ ಚಪ್ಪಲಿ ಧರಿಸುತ್ತೇನೆ.
ಚಳಿಗಾಲದಲ್ಲಿ ಹಿಮ್ಮಡಿ ಮುಚ್ಚುವ ಶೂ ಧರಿಸಿದರೆ ಪಾದದಲ್ಲಿ ಕೊಳೆ ಸೇರುವ ಸಂಭವ ಕಡಿಮೆ.
ಮಳೆಗಾಲದ ಮುಕ್ತಾಯ ಮತ್ತು ಚಳಿಗಾಲದ ಆರಂಭ ಕಾಲದಲ್ಲೇ ಪಾದಗಳ ಆರೈಕೆ ಪ್ರಾರಂಭ ಮಾಡಿದರೆ ಹಿಮ್ಮಡಿ ಬಿರುಕಿನ ನೋವಿನಿಂದ ಸುಲಭವಾಗಿ ಪಾರಾಗಬಹುದು.
#ನಮ್ಮ_ಮುಖದಷ್ಟೇ_ಕಾಳಜಿ_ನಮ್ಮ_ಪಾದಕ್ಕೂ_ವಹಿಸಬೇಕು.
Comments
Post a Comment