Blog number 1030. ಪಶ್ಚಿಮ ಘಟ್ಟದ ವಿಶೇಷ ಕಾಮದೇನು ಗೋತಳಿ ಮಲೆನಾಡು ಗಿಡ್ಡ ನಶಿಸುತ್ತಿರುವ ಗೋವಿನ ತಳಿಯಿಂದ ಗೋಮಯ ದೀಪಾವಳಿ ಹಣತೆ ದೀಪದ ತಯಾರಿಯಿಂದ ಮಲೆನಾಡು ಗಿಡ್ದ ಗೋ ತಳಿ ಸಂರಕ್ಷಣೆ ಮತ್ತು ದೀಪಾವಳಿ ಮುಗಿದ ನಂತರ ಈ ಹಣತೆ ಹೂವಿನ ಗಿಡಕ್ಕೆ ಗೊಬ್ಬರ ಆಗುವ ಪರಿಸರದ ಚಕ್ರ.
#ಹಚ್ಚೇವು_ಈಸಾರಿ__ಗೋಮಯದ_ಹಣತೆಯ_ದೀಪ
#ಪಶ್ಚಿಮಘಟ್ಟದ_ವಿಶೇಷ_ಗೋಸಂತತಿ_ಮಲೆನಾಡುಗಿಡ್ಡದಿಂದ
#ಪರಿಸರ_ಪ್ರೇಮಿ_ಕೃಷಿವಿಜ್ಞಾನಿ_ನಾಗೇಂದ್ರಸಾಗರ್_ನೀಡಿದ_ದೀಪಾವಳಿ_ಉಡುಗೊರೆ.
#ದೀಪಾವಳಿ_ನಂತರ_ಹೂವಿನಗಿಡಗಳಿಗೆ_ಗೊಬ್ಬರವಾಗುವ_ಗೋಮಯದ_ದೀಪದ_ಹಣತೆಗಳು
#ಇದರಲ್ಲಿ_ಎರೆಡು_ಉದ್ದೇಶದ_ಆಂದೋಲನ_ಅವರದ್ದು
#ಮಲೆನಾಡು_ದೇಸಿ_ಗಿಡ್ಡ_ಸಂತತಿ_ಉಳಿಸುವುದು
#ಪಿಂಗಾಣಿ_ಗಾಜಿನ_ಹಣತೆಯ_ಪರಿಸರ_ಮಾಲಿನ್ಯ_ತಡೆಯುವುದು.
#ಗೋಮಯ_ಹಣತೆ_ದೀಪಾ_ಬೇಕಾದವರು_ಅವರನ್ನು_ಸಂಪರ್ಕಿಸಬಹುದು
#ಅವರ_ಸೆಲ್_ನಂಬರ್_8147299353.
ನಾನು ನನ್ನ ವೈಯಕ್ತಿಕ ಆಹಾರೋದ್ಯಮದ ಪ್ರಯೋಗದಲ್ಲಿ ನಾಗೇಂದ್ರ ಸಾಗರ್ ಅವರನ್ನು ಗೋಳುಹೊಯ್ದುಕೊಳ್ಳುವ ಸ್ನೇಹ ಸಲಿಗೆಗೆ 27 ವರ್ಷದ ದೀರ್ಘ ಕಾಲದ ಸಂಬಂದವೂ ಇದೆ.
ಪ್ರತಿ ದೀಪಾವಳಿ - ಯುಗಾದಿಗೆ ನನ್ನ ಸಿಬ್ಬಂದಿಗಳಿಗೆ ಮತ್ತು ಆತ್ಮೀಯರಿಗೆ ಹೋಳಿಗೆ ತುಪ್ಪ ತಲುಪಿಸುವ ನನ್ನ ಪದ್ಧತಿ ನಿರಂತರವಾಗಿ ನಡೆದಿದೆ ಆದರೆ ಹೋಳಿಗೆ ಮಾಡುವ ಹದ- ಕ್ರಮ ಮತ್ತು ಅದರ ಪ್ಯಾಕಿಂಗ್ ವಿಬಿನ್ನವಾದರೂ ನನಗೆ ತೃಪ್ತಿ ನೀಡುವ ಹೋಳಿಗೆ ತಯಾರಕರು ಅಥವ ಸರಬರಾಜುದಾರರು ಸಿಕ್ಕಿಲ್ಲ ಆದ್ದರಿಂದ ಈ ಸಾರಿ ನಾಗೇಂದ್ರ ಸಾಗರರಿಗೆ ವಿನಂತಿಸಿದ್ದೆ.
ಅವರು ಅವರಲ್ಲಿ ತರಬೇತಿಪಡೆದ ಒಬ್ಬರಿಗೆ ಜವಾಬ್ದಾರಿ ವಹಿಸಿದ್ದರು ಮತ್ತು ಗುಣಮಟ್ಟ, ಪ್ಯಾಕಿಂಗ್ ಬಗ್ಗೆ ವಿಶೇಷ ತರಬೇತಿ ಕೊಡಿಸಿದ್ದರಿಂದ ಈ ಬಾರಿಯ ಅವರಿಂದ ಖರೀದಿಸಿದ 450 ಹೋಳಿಗೆ ನಂ1 ಆಗಿದೆ ಮತ್ತು ಪ್ರತಿ 5 ಹೋಳಿಗೆಗೆ ಪ್ರತ್ಯೇಕ ಪುಡ್ ಗ್ರೇಡ್ ಪ್ಲಾಸ್ಟಿಕ್ ಕವರಿನಿಂದ ಹೋಳಿಗೆಗೆ ಖದರು ಬ೦ದಿದೆ.
ಈ ಹೋಳಿಗೆ ನಾಗೇಂದ್ರ ಸಾಗರರು ಶಿವಮೊಗ್ಗದ ಅವರ ಬ್ಯಾಂಕಿನ ಮೀಟಿಂಗ್ ಗೆ ಹೋಗುವಾಗ ಅವರ ವಾಹನದಲ್ಲಿ ತಂದುಕೊಟ್ಟರು ಮತ್ತು ಹೊಸದಾಗಿ ಅವರ ಗೋ ಉತ್ಪನ್ನಗಳ ಕೆಲಸದ ಬಗ್ಗೆ ತಿಳಿಸಿದರು.
ಈ ದೀಪಾವಳಿ ಹಬ್ಬಕ್ಕಾಗಿಯೇ ಪಶ್ಚಿಮಘಟ್ಟದ ದೇಸಿ ಮಲೆನಾಡು ಗಿಡ್ಡ ಜಾನುವರುಗಳಿಂದ ಗೋಮಯದ ಹಣತೆಗಳನ್ನು ತಯಾರಿಸಿದ್ದಾರೆ ಇದು ಹಬ್ಬ ಮುಗಿದ ನಂತರ ಹೂವಿನ ಗಿಡದ ಬುಡದಲ್ಲಿ ಹಾಕಿದರೆ ಅದು ಕರಗಿ ಹೂವಿನ ಗಿಡಕ್ಕೆ ಗೊಬ್ಬರ ಆಗಲಿದೆ ಇದರಿಂದ ಈ ಪರಿಸರ ಪ್ರೇಮಿ ಹಣತೆ ಗೊಬ್ಬರದ ಲಾಭವೂ ನೀಡುತ್ತದೆ ಮುಂದಿನ ದಿನದಲ್ಲಿ ಈ ಗೋಮಯ ಹಣತೆ,ಶುದ್ದ ಹತ್ತಿಯ ಬತ್ತಿ ಮತ್ತು ಗಾಣದಿಂದ ತೆಗೆದ ಎಳ್ಳು ಎಣ್ಣೆಯ ಜೊತೆ ಆಕರ್ಷಕ ದೀಪಾವಳಿ ಗಿಫ್ಟ್ ಪ್ಯಾಕ್ ಮಾಡಿ ಮಾರಾಟ ಮಾಡಲು ಅನೇಕ ತಂಡಗಳಿಗೆ ತರಬೇತಿ ನೀಡುವ ಉದ್ದೇಶ ಅವರದ್ದು ಇದೊಂದು ಆಂದೋಲನ ಆಗಬೇಕು ಇದರಿಂದ ಮಲೆನಾಡು ಗಿಡ್ದ ಸಂತತಿ ಸಂರಕ್ಷಣೆ ಕೂಡ ಆಗಬೇಕೆನ್ನುವ ಆಶಯ ಅವರದ್ದು.
ವಿಶೇಷ ಅಂದರೆ ಈ ಗೋಮಯ ದೀಪಾವಳಿಯ ಹಣತೆ ದೀಪಾವಳಿಯ ಉಡುಗೊರೆ ಆಗಿ ಮೊದಲಿಗೆ ನನಗೇ ನೀಡಿದ್ದಾರೆ ಅವರ ಉದ್ಯಮದ ಪವಿತ್ರ ಗೋಮಯ ಹಣತೆ ಪ್ರಥಮ ಬಳಕೆದಾರನಾಗಿ ಸ್ವೀಕರಿಸಿ ಅವರಿಗೆ ಶುಭ ಹಾರೈಸಿದೆ.
ನಾಗೇಂದ್ರ ಸಾಗರ್ ಸಂಪರ್ಕ ಸಂಖ್ಯೆ 81472 99353.
Comments
Post a Comment