Skip to main content

Blog number 1015. ಸಾಗರ ತಾಲ್ಲೂಕಿನ ಒಂದು ನೇಗಿಲಿನಿಂದ ರಾಜ್ಯದ ಸಾವಿರಾರು ಕೋಟಿ ಕೃಷಿ ಇಲಾಖೆ ಅವ್ಯವಹಾರ ಬಯಲಾಯಿತು, ಕೃಷಿ ಸಚಿವ ಬೈರೇಗೌಡರೇ ಸ್ಥಳ ಪರಿಶೀಲನೆ ಮಾಡಿ ಅವತ್ತೇ ಕೃಷಿ ಅಧಿಕಾರಿಗಳನ್ನು ಜೈಲಿಗೆ ಕಳಿಸಿದ ವಿಶೇಷ ಪ್ರಸಂಗ

ಮೊನ್ನೆ ಮಿತ್ರರಾದ ನಾಗೇ೦ದ್ರ ಸಾಗರ್ ಈ ಹೋರಾಟ ಉಲ್ಲೇಖಿಸಿ ಆವನಿಹಳ್ಳಿ ನೇಗಿಲು ಬಗ್ಗೆ ಬರೆದಿದ್ದರು ಆಗ ನೆನಪಾಗಿ ಈ ದೀಘ೯ ಲೇಖನ ಬರೆಯಬೇಕಾಯಿತು.
    ಸಕಾ೯ರದ ಕೃಷಿ ಇಲಾಖೆಯ ಸಾವಿರಾರು ಕೋಟಿ ಹಣದ ಲೂಟಿ ಬಯಲಾದ ನನ್ನ ಹೋರಾಟ.
  ಹೊಸದಾಗಿ ಜಿಲ್ಲಾ ಪಂಚಾಯತ ಸದಸ್ಯನಾದ ಹುಮ್ಮಸ್ಸು, ಗ್ರಾಮ ಪಂಚಾಯತನಲ್ಲಿ ಉಪಾಧ್ಯಕ್ಷನಾಗಿದ್ದಾಗ ರಾಜ್ಯದ ಮೊದಲ ಬಗರ್ ಹುಕುಂ ಹಕ್ಕು ಪತ್ರ ವಿತರಣೆಗೆ ಕಾರಣ ಕತ೯ನಾಗಿ ಕಾಗೋಡು ತಿಮ್ಮಪ್ಪರಿಂದ ಸದಾ ಹೊಗಳಿಕೆಗಳಿಂದ ನನ್ನ ಕಾಲು ನೆಲದ ಮೇಲೆ ಇರಲಿಲ್ಲ.
  ಇದೇ ಸಂದಭ೯ದಲ್ಲಿ ಕಾಗೋಡು ಜೊತೆ ಹಳ್ಳಿ ಬೇಟೆಗಳಲ್ಲಿ ಎಲ್ಲಿ ಹೋದರೂ ಕೃಷಿ ಇಲಾಖೆ, ಭೂ ಸಾರ ಸಂರಕ್ಷಣಾ ಇಲಾಖೆಯ ಮೇಲೆ ರೈತರ ದೂರು ಆದರೆ ಸ್ಥಳಿಯ ಪಕ್ಷದ ಮುಖಂಡರು ಮಾತ್ರ ಕಾಗೋಡು ಹತ್ತಿರ ದೂರು ನೀಡಿದವರ ಮೇಲೆಯೇ ಆಪಾದನೆ ಮಾಡಿ ಇದು ಸುಳ್ಳು ಎನ್ನುತ್ತಿದ್ದರು.
  ಒಂದು ದಿನಾ ಆಚಾಪುರ ಗ್ರಾಮ ಪಂಚಾಯತ ಭೇಟಿಯಲ್ಲಿ ಪುನಃ ಇದೇ ವಿಚಾರ ಮರುಕಳಿಸಿದಾಗ ಕಾಗೋಡು ನನಗೆ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಬೇಗ್ ಗೆ ಈ ಬಗ್ಗೆ ಸ್ಥಳ ಪರಿಶೀಲಿಸಿ ವರದಿ ನೀಡಲು ಹೇಳಿದ್ದರು.
  ಈ ಬಗ್ಗೆ ಕಾಯ೯ ನಿರತರಾದ ನಾವು ಇಲಾಖೆಯಿಂದ ನಿಮಿ೯ಸಲ್ಪಟ್ಟ ಪಿಕ್ ಅಪ್ ಗಳು ಎಷ್ಟು ಅಂತ ಮಾಹಿತಿ ಕೇಳಿದಾಗ ತಾಲ್ಲೂಕಿನಲ್ಲಿ 5 ವಷ೯ದಲ್ಲಿ ಸುಮಾರು 220 ನಿಮಿ೯ಸಿದ್ದನ್ನ ತಿಳಿಸಿದರು, ಈ ಬಗ್ಗೆ ತುಂಬಾ ಒತ್ತಾಯ ಮಾಡಿದ ನಂತರ ನಕ್ಷೆ ನೀಡಿದರು ಸದರಿ ನಕ್ಷೆ ಹಿಡಿದು ಸ್ಥಳಕ್ಕೆ ಹೋದರೆ ಅಲ್ಲಿ ಪಿಕ್ ಅಪ್ ಗಳೆ ಇಲ್ಲ!? ಒಂದೆರಡು ಕಡೆ ಇದ್ದರು ಕಳಪೆ.
  ಈ ಸಂದಭ೯ದಲ್ಲೇ ಸಾಗರದ ಕೃಷಿ ಇಲಾಖೆ ಸಾಗರದ ರೈತರ ಬೇಡಿಕೆಯ ಆವಿನಳ್ಳಿ ಮಾದರಿ ನೇಗಿಲು ರೈತರಿಗೆ ನೀಡದೆ ಬೇರೆ ಮಾದರಿ ನೇಗಿಲು ಪೂರೈಸುತ್ತಿತ್ತು ಇದಕ್ಕೆ ಕಾರಣ ಆವಿನಹಳ್ಳಿ ನೇಗಿಲು ಪೂರೈಸುವ ನೇಗಿಲ ಕಾಖಾ೯ನೆಯವರು ಅಧಿಕಾರಿಗಳಿಗೆ ಹೊಂದಾಣಿಕೆ ಆಗಲಿಲ್ಲ ಅಂತ.
ಈ ಬಗ್ಗೆ ರೈತರನ್ನ ಒಗ್ಗೂಡಿಸಿ ಕುಂಟಗೋಡು ಸೀತಾರಾಂ ನೇತೃತ್ವದಲ್ಲಿ ಕಳಪೆ ನೇಗಿಲ ಪ್ರದಶ೯ನದ ಮೆರವಣಿಗೆ ಆಯಿತು, ನಾನು ಭಾಗವಹಿಸಿದ್ದೆ.
   ನಂತರ ಕೃಷಿ ಇಲಾಖೆ ಮತ್ತು ನನಗೂ ಇಲಾಖಾ ತನಿಖೆಗಾಗಿ ಜಟಾಪಟಿ ಬಿತ್ತು ಆಗ ತಾಲ್ಲೂಕ್ ಪಂಚಾಯತ್ ಅಧ್ಯಕ್ಷರಾಗಲು ಬೀಮನೇರಿ ಶಿವಪ್ಪನವರಿಗೆ ಸ್ವಪಕ್ಷದವರೆ ಅಡಗಾಲು, ಆಗ ನಾನು ಬೀಮನೇರಿಗೆ ತಾಲ್ಲೂಕ್ ಪಂಚಾಯತ್ ಅಧ್ಯಕ್ಷರಾಗಲು ಎಲ್ಲಾ ರೀತಿಯ ಬೆಂಬಲ ನೀಡಿದ್ದೆ  ಹಾಗಾಗಿ ಬೀಮನೇರಿ ನನಗೆ ಬೆಂಬಲಿಸಿದ್ದನ್ನ ಸ್ವಪಕ್ಷದವರು ರಾಜಕೀಯ ದ್ವೇಶಕ್ಕಾಗಿ ಬಳಸಿಕೊಂಡರು.
  ಸಾಗರ ತಾಲ್ಲೂಕಿನ ಕೃಷಿ ಇಲಾಖೆಯ ಅವ್ಯವಹಾರದಲ್ಲಿ ನಮ್ಮ ಪಕ್ಷದವರೆ(ಅವತ್ತಿನ ಕಾಂಗ್ರೆಸ್ ) ದೊಡ್ಡ ಪಾಲುದಾರರು ಅಂತ ಹೇಳಲು ನನಗೆ ಯಾವತ್ತೂ ಬೇಸರದ ಸಂಗತಿ, ಆದರೆ ಇದೆಲ್ಲ ಕಾಗೋಡರಿಂದ ಮರೆಮಾಚುವ ಬುದ್ದಿವಂತಿಕೆ ಇವತ್ತಿಗೂ ಆ ಗುಂಪಿಗೆ ಇದೆ ಹಾಗಂತ ಕಾಗೋಡು ಈ ಭ್ರಷ್ಟಾಚಾರಕ್ಕೆ ಬೆಂಬಲಿಸಿದವರಲ್ಲ ಪಾಲುದಾರರೂ ಅಲ್ಲ.
  ಕೃಷಿ ಇಲಾಖೆಯ ಭ್ರಷ್ಟಾಚಾರ ಬೆಂಬಲಿಸಿ, ಅದನ್ನ ತನಿಖೆಗೆ ಒತ್ತಾಯಿಸಿದ ನಮ್ಮ ಮೇಲೆ ಭ್ರಷ್ಟಾಚಾರಿಗಳು ಎಂಬಂತ ಕರ ಪತ್ರ ಬಂದಾಗ ನಮಗೆ ಮತ್ತು ನಮ್ಮ ಗು೦ಪಿಗೆ ತಡೆಯಲಾಗಲಿಲ್ಲ.
  ಕೃಷಿ ಇಲಾಖೆ ಭ್ರಷ್ಟಾಚಾರದ ಬಗ್ಗೆ ಪ್ರತಿಭಟನಾ ಮೆರವಣಿಗೆಗೆ ತಯಾರಿ ನಡೆಸಿದೆವು, ಸಾಗರದ ಕಾಂಗ್ರೇಸ್ ಕಚೇರಿ ಗಾಂಧಿ ಮಂದಿರದಲ್ಲಿ ಸಭೆ ನಡೆಸಿದೆವು.

    ಅವತ್ತಿನ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಜಿ.ಕೃಷ್ಣಮೂತಿ೯, ಸದಾಶಿವಪ್ಪ ಗೌಡರು, ಆಗಿನ ಪುರಸಭಾ ಸದಸ್ಯರಾದ ತೀನಾ.ಶ್ರೀನಿವಾಸ್ ಎಲ್ಲಾ ಜೊತೆಯಲ್ಲಿದ್ದರು.
ಕರಪತ್ರ ಹಾಕಿ ದಿನಾ೦ಕ ನಿಗದಿ ಮಾಡಿದಾಗ ಆಗಿನ ತಾಲ್ಲೂಕ ಕಾಂಗ್ರೆಸ್ ಅಧ್ಯಕ್ಷರಾದ ಆಹಮದ್ ಆಲೀಖಾನ್ ಸಾಹೇಬರಿಂದ ನನಗೆ ಮತ್ತು ಶಿವಣ್ಣನಿಗೆ ಕರೆ ಬಂತು ಹೋದಾಗ ಅವರು ಹೇಳಿದ್ದು ಕೃಷಿ ಇಲಾಖೆ ಹೋರಾಟ ಯಾವ ಕಾರಣಕ್ಕೂ ಮುಂದುವರಿಸಲು ಅವಕಾಶವಿಲ್ಲ ಇದು ಕಾಗೋಡು ಆದೇಶ ಅಂದರು.
  ನಮಗೆ ಉಭಯ ಸಂಕಟ ಪ್ರತಿಭಟನೆ ನಿಲ್ಲಿಸಿದರೆ ಸಾವ೯ಜನಿಕವಲಯದಲ್ಲಿ ಬರಬಹುದಾದ ಗುಮಾನಿ, ಮಾಡಿದರೆ ಕಾಗೋಡರನ್ನ ವಿರುದ್ದ ಮಾಡಿ ಕೊಂಡ೦ತೆ.
  ಅಂತಿಮವಾಗಿ ನಾವು ಪ್ರತಿಭಟನೆಯನ್ನೆ ಆಯ್ಕೆ ಮಾಡಿಕೊಂಡೆವು, ಒಂದು ಸಂಜೆ ಸುದ್ದಿ ಬಂತು ಕಾಗೋಡರಿಗೆ ಪೋನ್ ಮಾಡಬೇಕಂತೆ ಅಂತ.
   ಆಗ ಮೊಬೈಲ್ ಇರಲಿಲ್ಲ, ಗಾಂಧಿ ಮಂದಿರದ ಎದುರು ಕಾಂಗ್ರೇಸ್ ಕಾಯ೯ಕತ೯ ಜೇಮ್ಸರ STD ಬೂತಿನಿಂದ ಮೊದಲಿಗತೀನಾ ಶ್ರೀನಿವಾಸ್, ನಂತರ M.G. ಕೃಷ್ಣ ಮೂತಿ೯, ಆಮೇಲೆ ಬೀಮನೇರಿ ಮಾತಾಡಿದರು ಆ ಕಡೆಯಿ೦ದ ಕಾಗೋಡರ ರುದ್ರ ಅವತಾರಕ್ಕೆ ಹೆದರಿ ಇವರ ಮಾತು ತಣ್ಣಗಾಗಿ ಹೋಯಿತು.
  ನಂತರ ನನ್ನ ಸರದಿ, ಕಾಗೋಡು ಕೇಳಿದರು ಯಾರನ್ನ ಕೇಳಿ ಈ ಮೆರವಣಿಗೆ ?ಅಂತ,ನಾನು ಆಚಾಪುರದಲ್ಲಿ ನೀವೇ ಹೇಳಿದಂತೆ ತನಿಖೆ ಮಾಡಿದಾಗ ಅಕ್ರಮ ಗೋತ್ತಾಯಿತು, ನಂತರ ಆವಿನಳ್ಳಿ ನೇಗಿಲು ಹೋರಾಟಕ್ಕೆ ನಾವು ಬೆಂಬಲಿಸಿದ್ದರಿಂದ ನಮ್ಮ ಕಾಂಗ್ರೇಸ್ ಪಕ್ಷದವರಲ್ಲಿ ಕೆಲವರು ಈ ಅವ್ಯವಹಾರದಲ್ಲಿ ಶಾಮೀಲಾಗಿದವರು ತನಿಖೆಗೆ ಒತ್ತಾಯಿಸುತ್ತಿರುವ ನಮ್ಮ ವಿರುದ್ಧವೇ ಕರಪತ್ರ ಹಾಕಿದ್ದಾರೆ, ಹಾಗಾಗಿ ನಾವು ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದೆ.       ಅದಕ್ಕೆ ಕಾಗೋಡು ಯಾವುದೇ ಕಾರಣಕ್ಕೂ ಈ ಪ್ರತಿಭಟನೆ ನಡೆಯಬಾರದೆಂದರು.
  ಅದಕ್ಕೆ ನಾನು ಪ್ರತಿಭಟನೆ ದಿನಾಂಕ ನಿಗದಿ ಮಾಡಿ ಕರ ಪತ್ರ ಹಾಕಿದೆ, ಪ್ರಚಾರ ಆಗಿದೆ ಈಗ ನಾವು ಹಿಂತೆಗೆದರೆ ಸಾವ೯ಜನಿಕವಾಗಿ ಅಪರಾದ ಮತ್ತು ಅಪವಾದ ಬರುತ್ತೆ , 15 ದಿನ ಮೊದಲೇ ನೀವು ಹೀಗೆ ಹೇಳಿದ್ದರೆ ಮುಂದುವರಿಯುತ್ತಿರಲಿಲ್ಲ ಹಾಗಾಗಿ ನಮ್ಮ ಚಳವಳಿ ಹಿಂತೆಗೆಯಲು ಆಗುವುದಿಲ್ಲ, ನೀವೇ ಬಂದು ನಮ್ಮ ಮನವಿ ಸ್ವೀಕರಿಸಿ, ಇದು ದೊಡ್ಡ ಹಗರಣ ನೀವು ಬಯಲಿಗೆ ತಂದಂತೆ ಆಗುತ್ತೆ ಇದರಿಂದ ನಮ್ಮ ಪಕ್ಷಕ್ಕೂ ಒಳ್ಳೆ ಹೆಸರು ಅಂದೆ, ಆದರೆ ಇದನ್ನ ಒಪ್ಪದ ಕಾಗೋಡು ಸಿಟ್ಟಿನಿಂದ ಪೋನ್ ಕುಕ್ಕಿದರು.
  ನಂತರ ನಮ್ಮ ಒಗ್ಗಟ್ಟಿನಲ್ಲಿ ಒಡಕಾಯಿತು, ನಾನು ಮತ್ತು ಬೀಮನೇರಿ ಮಾತ್ರ ಈ ಚಳವಳಿಯಲ್ಲಿ ಉಳಿಯಬೇಕಾಯಿತು.
   ಅದರ ಮರುದಿನ ತಾಲ್ಲೂಕ್ ಪಂಚಾಯತ್ ಸಭೆಯಲ್ಲಿ ಅಧ್ಯಕ್ಷ ಭೀಮನೇರಿ ವಿರುದ್ಧವೇ ಕೃಷಿ ಇಲಾಖೆ ಉಪನಿದೇ೯ಶಕ ಬಸವರಾಜಪ್ಪ ಲಂಚದ ಆರೋಪ ಮಾಡುತ್ತಿರುವ ಸುದ್ದಿ ಗಾಂಧಿ ಮಂದಿರದಲ್ಲಿದ್ದ ನನಗೆ ಸುದ್ದಿ ಬಂತು, ನಾನು ತಾಲ್ಲೂಕ್ ಪಂಚಾಯತ್ ಸಭಾಂಗಣಕ್ಕೆ ಹೋದಾಗ ಬೀಮನೇರಿ ತಮಗೆ ಆಗಿದ್ದ ಅವಮಾನದಿಂದ ದುಃಖ ವ್ಯಕ್ತಪಡಿಸಿದರು, ಅವರನ್ನ ಬೆಂಬಲಿಸ ಬೇಕಾದ ಕಾಂಗ್ರೇಸ್ ತಾಲ್ಲೂಕ ಪಂಚಾಯಿತಿ ಸದಸ್ಯರು ಭ್ರಷ್ಟ ಅಧಿಕಾರಿಗೆ ಬೆಂಬಲಿಸಿದರು.
  ತಾಳ್ಮೆ ಕಳೆದು ಕೊಂಡ ನಾನು ಹೊರ ಬರುತ್ತಿದ್ದ ಕೃಷಿ ನಿದೇ೯ಶಕರ ಮೇಲೆ ನಿಯಂತ್ರಣ ತಪ್ಪಿ ಹಲ್ಲೆ ಮಾಡಿ ಬಿಟ್ಟಿ, ನಂತರ ನೆರೆದ ಸಾವ೯ಜನಿಕರು ತಾಲ್ಲೂಕ ಪಂಚಾಯಿತಿಗೆ ಕಲ್ಲು ತೂರಿದರು, ಭ್ರಷ್ಟ ಅಧಿಕಾರಿಗಳು, ಅವರಿಗೆ ಬೆಂಬಲಿಸಿದವರು ಹೊರಬರಲಾರದೆ ಅಡಗಿದರು.
  ಈ ಸನ್ನಿವೇಶವನ್ನ ನೋಡುತ್ತಿದ್ದ ಶಿವಮೊಗ್ಗದ ವಕೀಲ ಈಸೂರು ಲೋಕೇಶ್, ಪತ್ರಕತ೯ ಸುನೀಲ್ ಶಿರನೆಲ್ಲಿ (ಯಾವುದೊ ಕೇಸಿಗಾಗಿ ಸಾಗರ ನ್ಯಾಯಯಕ್ಕೆ ಬಂದವರು) ನನಗೆ ತಕ್ಷಣ ಸಾವ೯ಜನಿಕರನ್ನ ಉದ್ದೇಶಿ ಭಾಷಣ ಮಾಡಲು ಹೇಳಿದರು.
  ನಾನು ಸಾಗರದ ತಾಲ್ಲೂಕ್ ಪಂಚಾಯತ್ ಎದುರಿನ ಧ್ವಜ ಕಟ್ಟಿ ಮೇಲೆ ನಿಂತು ಇಡೀ ಹಗರಣದ ಬಗ್ಗೆ ವಿವರಿಸಿದೆ.
  ನಂತರ ಅಧಿಕಾರಗಳ ದೂರಿನ ಮೇಲೆ ನಮ್ಮನ್ನ ಪೋಲಿಸರು ಬಂದಿಸಿದರು, ನಾವು ಜಾಮೀನು ಕೇಳಲಿಲ್ಲ ನ್ಯಾಯಾದೀಶರು ಸೆಲ್ಪ ಬಾಂಡ್ ಮೇಲೆ ಬಿಡುಗಡೆ ಮಾಡಿದರು.
  ಅದರ ಮರುದಿನ ನಡೆದ ಪ್ರತಿಭಟನೆಗೆ ಈ ಎಲ್ಲಾ ಘಟನೆ, ಪ್ರತಿರೋದದಿಂದ ಬಾರಿ ಬೆಂಬಲ ವ್ಯಕ್ತವಾಯಿತು ಸುಮಾರು 5 ಸಾವಿರಕ್ಕಿಂತ ಹೆಚ್ಚು ಜನರ ಪ್ರತಿಭಟನೆ ನಡೆಯಿತು.
  ನಂತರ ನಾವು ಚುನಾಯಿತರಾದ ಪಕ್ಷದವರಿಂದಲೇ ನಾವು ಅಸ್ಪ್ರಶ್ಯರಾದೆವು.
  ನಂತರ ಈ ಬಗ್ಗೆ ಜಿಲ್ಲಾ ಪಂಚಾಯತ್ ಸಭೆ, ಸರಣಿ ಪತ್ರಿಕಾ ಗೋಷ್ಟಿ ಆದರೂ ನಮಗೆ ನ್ಯಾಯ ದೊರೆಯಲಿಲ್ಲ.
ಕಾಗೋಡು ನಮ್ಮನ್ನ ದೂರ ಇಟ್ಟಿದ್ದರಿಂದ ಉಳಿದ ಗೆಳೆಯರು ಹೆದರಿ ದೂರಾದರು, ಅವರಿಗೆ ನಮ್ಮ ಪರವಾಗಿ ಇರುವ ಮನಸ್ಸಿದ್ದರೂ ದೈಯ೯ ಸಾಕಾಗಲಿಲ್ಲ.
  ತಾಳಗುಪ್ಪದ ಸಲೀಂ ಆಗ ವೈಕುಂಟರಾಜುರವರ ವಾರ ಪತ್ರಿಕೆಯ ಪ್ರಮುಖ ವರದಿಗಾರರಾಗಿದ್ದ ಆರ್.ಟಿ. ವಿಠಲ್ ಮೂತಿ೯ ಕರೆ ತಂದರು, ಅವರನ್ನ ಸ್ಥಳ ಪರಿಶೀಲನೆಗೆ ಕರೆದೊಯ್ದಾಗ ಅವರು ಈ ಅವ್ಯವಹಾರದ ಆಗಾದವಾದ ತಳಪಾಯ ನೋಡಿ ದಿಗ್ಭ್ರಮೆ ವ್ಯಕ್ತಪಡಿಸಿದರು.
  ಮುಂದೆ ವೈಕುಂಟರಾಜರು ಮತ್ತು ವಿಠಲ್ ಮೂತಿ೯ ಆಗಿನ ಕೃಷಿ ಸಚಿವ ಬೈರೇಗೌಡರಿಗೆ ಸಾಗರ ತಾಲ್ಲೂಕಿನ ಕೃಷಿ ಇಲಾಖೆ ಅವ್ಯವಹಾರ ಪರಿಶೀಲನೆ ಮಾಡಿದರೆ ರಾಜ್ಯದಲ್ಲಿ ಏನಾಗುತ್ತಿದೆ ಅಂತ ನಿಮಗೆ ಅರಿವಾಗುತ್ತೆ, ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕುತ್ತೀರಿ ಅಂತ ಚೇಡಿಸಿದ್ದರ ಪರಿಣಾಮ ಈ ಎಲ್ಲಾ ಹಗರಣ ರಾಜ್ಯದ ಕೃಷಿ ಇಲಾಖಾ ಮಂತ್ರಿಗಳಾದ ಬೈರೇ ಗೌಡರಿಂದ ತನಿಖೆಗೆ ಒಳಪಟ್ಟಿತು.
  ಆಗಿನ ಜಿಲ್ಲಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ಬಲ್ಕಿಶ್ ಬಾನುರವರು ಒಂದು ದಿನ ರಾತ್ರಿ ಪೋನ್ ಮಾಡಿ ಕೃಷಿ ಸಚಿವರಾದ ಬೈರೇ ಗೌಡರು ಬಂದಿದ್ದಾರೆ ನಾಳೆ ಬೆಳಿಗ್ಗೆ 10ಕ್ಕೆ ನೀವು ದೂರು ನೀಡಿದ ಸ್ಥಳ ಪರಿಶೀಲನೆಗೆ ಬರುತ್ತಿದ್ದಾರೆ ಯಾರಿಗೂ ತಿಳಿಸಬೇಡಿ ಅಂದಿದ್ದರು.
  ಬೆಳಿಗ್ಗೆ ನಾನು ನನ್ನ ಇಂಡ್ ಸುಜುಕಿ ಬೈಕಿನಲ್ಲಿ ಗೆಳೆಯ ಶೇಖ್ ಆಹಮದರನ್ನ ಕರೆದು ಕೊಂಡು ಜೊತೆಗೆ ಒಂದು ಗಂದದ ಹಾರದೊಂದಿಗೆ ಸಾಗರ ತಾಲ್ಲೂಕಿನ ಗಡಿ ಪ್ರದೇಶ ಗಿಳಾಲಗುಂಡಿಗೆ ಹೋದೆವು.
  ಮಾಜಿ ಶಾಸಕ ದಮ೯ಪ್ಪರ ಜಮೀನು ತಿರುವು ದಾಟಿದಾಗ ನನಗೇ ಆಶ್ಚಯ೯ ಅಲ್ಲಿ ಸಾಲಾಗಿ 10-20 ವಾಹನಗಳು, ಕೃಷಿ ಇಲಾಖೆಯ ಎಲ್ಲಾ ಭ್ರಷ್ಟ ಅಧಿಕಾರಿಗಳು ಅವರ ಜೊತೆ ಕಾಗೋಡು ನಿಂತಿದ್ದರು, ನನಗೆ ಇಲ್ಲಿಗೆ ಯಾಕೆ ಬಂದೆ ಅನ್ನಿಸಿತು ಯಾಕೆಂದರೆ  ಇವರೆಲ್ಲರ ಮಾಹಿತಿ ಬೈರೇಗೌಡರು ಪಡೆದರೆ ಇನ್ನೆಂತಹ ತನಿಖೆ ಆದೀತು? ಕಾಗೋಡು ಮತ್ತು ಬೈರೆಗೌಡರದ್ದು ಹಳೇ ಸಮಾಜವಾದಿ ಗೆಳೆತನ ಬೇರೆ.
ಅನಿವಾಯ೯ವಾಗಿ ವಿರೋದಿ ಗುಂಪಿನ ನಡುವೆ ನನ್ನ ಬೈಕು ಹೋಗಿ ನಿಲ್ಲಿಸಿದೆ, ಕಾಗೋಡರಿಗೆ ವಂದಿಸಿದೆ ಆದರೆ ಅವರಿಗೆ ನನ್ನ ಆಗಮನ ಸಹಿಸಲಾಗಲಿಲ್ಲ, ಅಧಿಕಾರಿಗಳOತು ನನ್ನ ಹರಿದು ಹಸಿಯಾಗಿ ತಿನ್ನುವಂತೆ ದಿಟ್ಟಿಸುತ್ತಿದ್ದರು, ನಿಮಗೆ ಯಾರು ಕರೆದರು ಇಲ್ಲಿಗೆ? ಅಂತ ಕಾಗೋಡು ಪ್ರಶ್ನೆ ಹಾಕಿದರು, ಜಿಲ್ಲಾ ಪಂಚಾಯತನ ಅಧ್ಯಕ್ಷರು ಬರಲು ಹೇಳಿದರು ಅಂದೆ.
  ಅಷ್ಟರಲ್ಲಿ ಸೈರನ್ ಶಬ್ದದೊಂದಿಗೆ ಮಂತ್ರಿಗಳ ಕ್ಯಾರವಾನ್ ಬಂದು ನಿಂತಿತು, ಕಾಗೋಡರ ಹಾರ ಸಮಪ೯ಣೆ ನಂತರ ನನ್ನ ಹಾರ ಸಮಪ೯ಣೆ ಸಂದಭ೯ದಲ್ಲಿ ಮಂತ್ರಿಗಳ ಕಾರಿನ ಒಳಗಿನಿಂದ ಒಂದು ಧ್ವನಿ ಕೇಳಿ ಬಂತು ಇವರೇ ನಮ್ಮ ಹೀರೋ ಅಂತ ಅದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಬಲ್ಕಿಶ್ ಬಾನು ರವರದ್ದು, ನಂತರ ಕೃಷಿ ಅಧಿಕಾರಿಗಳು ಗೌರವ ಸಮಪಿ೯ಸಿದರು.
     ಬೈರೇಗೌಡರು ನನಗೆ ಮೊದಲಿಗೆ ಎಲ್ಲಿಗೆ ಹೋಗೋಣ ಅಂದರು, ಇಲ್ಲೇ ಎಡಕ್ಕೆ ತಿರುಗಿ ಹೋದರೆ ಹೊಳ್ಳುರು ಅಂತ ಇದೆ ಅಲ್ಲಿ ಅದ೯ ಪಿಕ್ ಅಪ್ ನಿಮಿ೯ಸಿದ್ದಾರೆ ಅದೂ ಕಳಪೆ ಆದರೆ ಪೂಣ೯ ಹಣ ಪಡೆದಿದ್ದಾರೆ ಎಂದೆ.ಅಷ್ಟರಲ್ಲಿ ಅಧಿಕಾರಿಗಳ ವಾಹನ ಎಡಕ್ಕೆ ತಿರುಗದೆ ಸಾಗರ ಮಾಗ೯ಕ್ಕೆ ಹೊರಟವು ಇದರಿಂದ ಬೈರೇಗೌಡರಿಗೆ ಸಿಟ್ಟು ಬಂದು ಕೃಷಿ ಅಧಿಕಾರಿ ಬಸವರಾಜರನ್ನ ಕರೆಸಿ ನೀವೆಲ್ಲ ಎಲ್ಲಿಗೆ ಹೊರಟಿದ್ಧಿರಿ? ಅಂದಾಗ ಆತ ಬೇರೆ ಸ್ಥಳ ಹೇಳಿದಾಗ, ಬೈರೇಗೌಡರು ನಿಮ್ಮ ಸ್ಥಳ ನೋಡಲು ಬಂದಿಲ್ಲ ನಮ್ಮ ಹುಡುಗ ಹೇಳುವ ಸ್ಥಳ ನೋಡಬೇಕು ನನ್ನ ಪಾಲೋ ಮಾಡಿ ಅಂದರು.
            ನಂತರ ನನ್ನ ಬೈಕು ಅದರ ಹಿಂದೆ ಪೋಲಿಸರ ಎಸ್ಕಾಟ೯ ವಾಹನ, ಅದರ ಹಿಂದೆ ಬೈರೆಗೌಡರ ಕಾರು, ಅದರ ಹಿಂದೆ ಸುಮಾರು 20 ಕ್ಕೂ ಹೆಚ್ಚು ವಾಹನಗಳ ಸಾಲು.
     ಹೊಳ್ಳುರಿನ ಹೊಳೆ ಹತ್ತಿರ ಬೈಕ್ ನಿಲ್ಲಿಸಿ ಬೈರೆಗೌಡರಿಗೆ ಇಲ್ಲಿ ಸ್ವಲ್ಪ ನಡಿಯಬೇಕು ಅಂದೆ ಯೋಚಿಸಬೇಡ ನಡೀ ಅಂದವರೇ ವಿಡಿಯೋದವರಿಗೆ ಕರೆಯಿರಿ ಅಂದರು, ಅಲ್ಲಿ ಕೃಷಿ ಸೇವಕರಿಂದ ಜಿಲ್ಲಾ ಜಂಟಿ ನಿದೇ೯ಶಕರವರೆಗೆ ಅಧಿಕಾರಿಗಳನ್ನ ಹೊಳೆಯಲ್ಲಿ ನಿಮಿ೯ಸಿದ ಅದ೯೦ಬದ೯ ಪಿಕ್ ಅಪ್ನ ಸಮೀಪ ನಿಲ್ಲಿಸಿ ತನಿಖೆ ಮಹಜರ್ ಮಾಡಿದರು.
       ಅಲ್ಲಿಂದ ಮುಂದಕ್ಕೆ ಎಲ್ಲಿಗೆ ಅಂದರು ಅಡೂರು ಅಂತ 5 ಕಿ.ಮಿ ಆಗುತ್ತೆ ಅಲ್ಲಿಗೆ ಹೋಗೋಣ ಅಲ್ಲಿ ಪಿಕ್ ಅಪ್ ಕಟ್ಟದೆ ಹಣ ತೆಗೆದುಕೊಂಡಿದ್ದಾರೆ ಅಂದಾಗ ಕಾಗೋಡಿಗೆ ಸಿಟ್ಟು ಬಂದು ಅದು ಹೇಗೆ ನಿಮಾ೯ಣ ಮಾಡದೆ ಹಣ ಡ್ರಾ ಮಾಡಲು ಸಾಧ್ಯ? ಅಂತ ತೀಕ್ಷಣವಾಗಿ ನನ್ನನ್ನ ಪ್ರಶ್ನೆ ಮಾಡಿದರು, ನಾನು ಮಾತಾಡಲಿಲ್ಲ ಆಗ ಸನ್ನಿವೇಶ ಅಥ೯ ಮಾಡಿಕೊಂಡ ಬೈರೆಗೌಡರು ಅಧಿಕಾರಿಗಳನ್ನ ಕರೆದು ಸತ್ಯ ಹೇಳಿ ಅಂದಾಗ ಅವರೆಲ್ಲ ತಲೆ ತಗ್ಗಿಸಿ ಹೌದೆಂದಾಗ ಕಾಗೋಡು ಅವಕ್ಕಾದರು.
        ಅಡೂರು ಹೊಳೆಯಲ್ಲಿ ಯಾವುದೇ ಪಿಕ್ ಅಪ್ ನಿಮಿ೯ಸಿರಲಿಲ್ಲ ದಾಖಲೆಯಲ್ಲಿ ನಿಮಿ೯ಸಿದಂತೆ ಮಾಡಿ ಹಣ ಪಡೆದಿದ್ದರು.
      ಬೈರೇ ಗೌಡರಿಗೆ ಆಗಲೇ ಅಥ೯ ಆಯಿತು ವಾರಪತ್ರಿಕೆ ಸಂಪಾದಕ ವೈಕುಂಟ ರಾಜು ಮತ್ತು ವರದಿಗಾರ ಆರ್.ಟಿ.ವಿಠಲಮೂತಿ೯ ಹೇಳಿದ ಸತ್ಯ.
     ನನಗೆ ಮುಂದೇನು ಅಂದರು ಸುಮಾರು 5 ವಷ೯ದಿಂದ ಸಾಗರ ತಾಲ್ಲೂಕಿನಲ್ಲಿ 240 ಪಿಕ್ ಅಪ್ ನಿಮಾ೯ಣ ಆಗದೆ ಹಣ ದುರುಪಯೋಗ ಆಗಿದೆ, ಇಡೀ ರಾಜ್ಯದಲ್ಲಿ ತನಿಖೆ ಮಾಡಿದರೆ 50 ಸಾವಿರ ಇಂತಹ ಪಿಕ್ ಅಪ್ ಅವ್ಯವಾಹಾರ ಆಗಿರಬಹುದು ಇದು ಸಾವಿರಾರು ಕೋಟಿ ಸಕಾ೯ರದ ಹಣದ ಲೂಟಿ ಅಂದೆ.
      ಆಗ ಬೈರೇ ಗೌಡರು ಕಾಗೋಡಿಗೆ ಕೇಳಿದ ಪ್ರಶ್ನೆ ಇನ್ನೂ ನನ್ನ ಕಿವಿಯಲ್ಲಿದೆ " ತಿಮ್ಮಪ್ಪ ನಿನ್ನ ಕ್ಷೇತ್ರದ ಪ್ರಾರಂಭದಲ್ಲೆ ಹೀಗಿದೆ ಒಳಗೆ ಹೋದರೆ ಹೇಗೆ?" ಅಂದದ್ದು.
  ನಂತರ ಸಾಗರ ಪ್ರವಾಸಿ ಮಂದಿರದಲ್ಲಿ ನಡೆದದ್ದು ಒಂದು ಇತಿಹಾಸ, ವಿ.ಐ.ಪಿ ರೂಮಿನಲ್ಲಿ ಸಂಬಂದಪಟ್ಟ 7 ಅಧಿಕಾರಿಗಳಿಗೆ ಕುಳಿತಿರಲು ಹೇಳಿ ಕಾಗೋಡರ ಜೊತೆ ಅಣ್ಣಾಜಿ ಮನೆಗೆ ಹೋಗಿ ಊಟ ಮಾಡಿದ ಬೈರೆಗೌಡರು ಅಷ್ಟರಲ್ಲಿ ಯಾರಿಗೂ ಗೊತ್ತಾಗದಂತೆ ಅವರ ಪಿ.ಎಸ್ ರಿಂದ ಪೋಲಿಸರಿಗೆ ದೂರು ನೀಡಿದ ಪ್ರಕಾರ 7 ಜನ ಅಧಿಕಾರಿಗಳನ್ನ ಪೋಲಿಸರು ಬಂದಿಸಿದರು ಮತ್ತು ಜೈಲಿಗೆ ಕಳಿಸಿದರು.
      ಬೈರೇಗೌಡರು ಮರುದಿನ ವಿದಾನ ಸಭೆಯಲ್ಲಿ ಮಾಡಿದ ಪತ್ರಿಕಾ ಗೋಷ್ಟಿಯಲ್ಲಿ ಸಾಗರ ತಾಲ್ಲೂಕಿನ ಹಗರಣ ಬೇಧಿಸಿದ್ದು, ಅಧಿಕಾರಿಗಳ ಜೈಲಿಗೆ ಕಳಿಸಿದ್ದು ವಿವರಿಸಿ ಇಡೀ ರಾಜ್ಯದಲ್ಲಿ ಸಾವಿರಾರು ಕೊಟಿ ಹಣ ದುರುಪಯೋಗ ಆಗಿರುವುದು ಸಾಬೀತಾಗಿದೆ ಎಂದು, ಭೂ ಸಾರ ಸಂರಕ್ಷಣಾ ಇಲಾಖೆ ಈ ಕಾರಣದಿಂದ ತಕ್ಷಣ ರದ್ದು ಮಾಡಿ ಕೃಷಿ ಇಲಾಖೆಯಲ್ಲಿ ವಿಲೀನಗೊಳಿಸಲಾಗಿದೆ ಎಂದ ಸುದ್ದಿ ಅದರ ಮರು ದಿನ ಎಲ್ಲಾ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಪ್ರಕಟವಾಯಿತು.

  ಆಗ ಟಿವಿ ಮಾಧ್ಯಮ ಇರಲಿಲ್ಲ ಇದ್ದಿದ್ದರೆ ಇದು ದೊಡ್ಡ ಬ್ರೇಕಿಂಗ್ ನ್ಯೂಸ್ ಆಗುತ್ತಿತ್ತು.
  ಈ ಬಗ್ಗೆ ಅವರು ನನಗೆ ಬರೆದ ಪ್ರಶಂಸ ಪತ್ರ ನನ್ನ ಹತ್ತಿರ ಇದೆ.ಇವರ ಮಗ ಕೃಷ್ಣ ಬೈರೇಗೌಡರು ಕೃಷಿ ಸಚಿವರಾಗಿ ನಮ್ಮ ಮನೆಯಿಂದ 3 ಕಿ.ಮಿ. ದೂರದ ಇರುವಕ್ಕಿ ಎಂಬಲ್ಲಿ ಇತ್ತೀಚಿಗೆ 777 ಎಕರೆ ಭೂಮಿಯಲ್ಲಿ ಕೃಷಿ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ಮಾಡಿದ್ದು ಒಂದು ಕಾಕತಾಳಿಯ ಘಟನೆ ಆದರೂ ಹೋರಾಟದ ಕವಲುಗಳು ಎಲ್ಲೋ ಒಂದು ಕಡೆ ಹೋರಾಟದ ಸಾಗರಕ್ಕೆ ಪುನಃ ಸೇರುತ್ತದೆ ಅನ್ನಿಸುತ್ತದೆ.

  ಈ ನೇಗಿಲ ಹೋರಾಟ ನನಗೂ ಮತ್ತು ಕಾಗೋಡರಿಗೆ ಮುಂದಿನ ದಿನದಲ್ಲಿ ದೊಡ್ಡ ಬಿನ್ನಾಭಿಪ್ರಾಯಕ್ಕೆ ವಿರೋದಕ್ಕೆ ಕಾರಣವಾಯಿತು, ಕಾಂಗ್ರೆಸ್‌ ಪಕ್ಷದ ಅನೇಕ ಮುಖಂಡರು ಈ ಪರಿಸ್ಥಿತಿಯ ಲಾಭ ಪಡೆದು ಭ್ರಷ್ಟಾಚಾರ ವಿರೋದಿಸಿದರೆ ಪರಿಣಾಮ ಏನಾಗುತ್ತದೆ ಎನ್ನುವ ಪಾಠ ಹೇಳಿದರು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ಸೀನಿಯರ್ ಗಳು ಹೇಳುತ್ತಿದ್ದರು, ಬಹುಶಃ ಆಗಿನ ಸಿನಿಮಾದಲ್ಲಿ ವಿಲನ