Blog number 1014. ನಟ ಸುದೀಪರು ಅವರ ಸಂಸ್ಥೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ (ರಿ) ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಸಂತ್ರಸ್ಥರ ಆವಿಗೆ ಗ್ರಾಮ ದತ್ತು ಪಡೆದು ಎರೆಡು ವಷ೯ ಆಯಿತು ಆದರೆ ಯಾವುದೇ ರೀತಿಯ ಅಭಿವೃದ್ಧಿ ಪ್ರಾರಂಭವಾಗದ ಬಗ್ಗೆ ಜನ ನಿರಾಶರಾಗಿದ್ದಾರೆ.
#ನಿಮ್ಮ_ಟ್ರಸ್ಟ್_ದತ್ತು_ತೆಗೆದುಕೊಂಡ_ಸಾಗರ_ತಾಲ್ಲೂಕಿನ_ಮುಳುಗಡೆ_ಪ್ರದೇಶದ_ಆವಿಗೆ_ಊರವರ_ವಿನಂತಿ
#ಎರೆಡು_ವರ್ಷದ_ಹಿಂದೆ_ದತ್ತು_ಸ್ವೀಕರಿಸಿ_ಬೋರ್ಡ್_ಲಗತ್ತಿಸಿದ_ನಂತರ_ಯಾರು_ಬಂದಿಲ್ಲ.
#ನಿಮ್ಮ_ಅಭಿಮಾನಿಗಳೇ_ಇರುವ_ನಿಮ್ಮ_ಜಿಲ್ಲೆ_ಶಿವಮೊಗ್ಗದ_ಸಾಗರ_ತಾಲ್ಲೂಕಿನ_ಆವಿಗೆಯ_ಅಭಿವೃದ್ದಿಗೆ_ಕೈಜೋಡಿಸಿ.
#ನಿಮ್ಮ_ಸಂಸ್ಥೆ_ದತ್ತು_ಪಡೆದ_ಆವಿಗೆ_ಶರಾವತಿ_ನದಿಯ_ಹಿನ್ನೀರಿನ_ಜನ.
ಎರೆಡು ವರ್ಷದ ಹಿಂದೆ ನಮ್ಮ ಶಿವಮೊಗ್ಗ ಜಿಲ್ಲೆಯವರೇ ಆದ ಬೆಂಗಳೂರಿನ ಪ್ರಖ್ಯಾತ ರೆಸ್ಟೋರೆಂಟ್ ಸರೋವರದ ಮಾಲಿಕರಾದ ಸಂಜೀವಣ್ಣರ ಪುತ್ರ ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಸುದೀಪರ ಟ್ರಸ್ಟ್ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಸಿಗಂದೂರು ಸಮೀಪದ ಆವಿಗೆ ಎಂಬ ಊರನ್ನು ದತ್ತು ಪಡೆದ ಸುದ್ದಿ ಪತ್ರಿಕೆಗಳಲ್ಲಿ ಓದಿ ಸಂತೋಷ ಪಟ್ಟಿದ್ದೆ.
ಈ ಊರಲ್ಲಿ ಜೈನರು ಮತ್ತು ಕುಣುಬಿ ಜನರು ಹೆಚ್ಚಿದ್ದಾರೆ ಇಲ್ಲಿನವರೇ ಆದ ಜೈನ ಮುನಿಗಳು ಪ್ರಖ್ಯಾತರಾಗಿದ್ದಾರೆ ಮತ್ತು ಈ ಊರಲ್ಲಿ ಜೈನ ಮಂದಿರ ಕೂಡ ನಿರ್ಮಾಣ ಆಗಿದೆ.
1999 - 2000 ಇಸವಿಯಲ್ಲಿ ಈ ಊರಿನಲ್ಲಿ ಅಬ್ಬಿ ನೀರಿನ ಸರಬರಾಜು ಕಾಮಗಾರಿಯಲ್ಲಿ ಅವ್ಯವಹಾರ ಆದಾಗ ನಾನು ಹೋಗಿ ನೋಡಿದಾಗ 4 ಇಂಚು ಪೈಪ್ ಎಸ್ಟಿಮೇಟ್ ನಲ್ಲಿ ಇದ್ದು ಭೂಮಿಯಿಂದ 4 ಅಡಿ ಆಳದಲ್ಲಿ ಅಳವಡಿಸುವ ಕಾಮಗಾರಿ ಅಂತಿಮವಾಗಿ ಅದ೯ ಇಂಚು ಕಳಪೆ ಪೈಪು ಊರವರಿಗೆ ನೀಡಿ ಗುತ್ತಿಗೆದಾರ ಮತ್ತು ಇಂಜಿನಿಯರ್ ಗುಳುಂ ಮಾಡಿದ್ದರು.
ಈ ಅವ್ಯವಹಾರ ಬಯಲು ಮಾಡಿದ ಉತ್ಸಾಹಿ ಜೈನ ಯುವಕ ಚಂದ್ರಕುಮಾರ್ ಜೈನ್ ನಂತರ ಒಂದು ಅವದಿಗೆ ಗ್ರಾಮ ಪಂಚಾಯಿತಿ ಸದಸ್ಯರೂ ಆಗಿದ್ದರು ಅವರೇ ನಟ ಸುದೀಪರ ಟ್ರಸ್ಟ್ ಅಧ್ಯಕ್ಷ ಕಿಟ್ಟಿ ಮತ್ತು ಗ್ರಾಮ ಪಂಚಾಯತ್ಉಪಾದ್ಯಕ್ಷ ಕೋದಂಡ #ಕಿಚ್ಚ_ಸುದೀಪ್_ಚಾರೀಟೀಬಲ್_ಸೊಸೈಟಿ(ರಿ) #_ಗ್ರಾಮ_ಆವಿಗೆ ಬೋರ್ಡ್ ಅಳವಡಿಸಿ ಈ ಗ್ರಾಮದ ಸವಾ೯ಂಗೀಣ ಅಭಿವೃದ್ಧಿಯ ಯೋಜನೆ ಘೋಷಿಸಿದ್ದರು ಆ ಸಂದರ್ಭದಲ್ಲಿ ಆವಿಗೆಯ ಸರ್ಕಾರಿ ಶಾಲೆ ಮುಖ್ಯೋಪಾದ್ಯಯರಾದ ಚಂದ್ರಪ್ಪ ಮತ್ತು ಗ್ರಾಮ ಪಂಚಾಯತ್ ಸದಸ್ಯ ಮೋಹನರು ವೇದಿಕೆಯಲ್ಲಿದ್ದರು ಮತ್ತು ಸದರಿ ದತ್ತು ಗ್ರಾಮದ ಬೋರ್ಡ್ ಅಳವಡಿಸುವ ಪೂಜೆ ನಿರ್ವಹಿಸಿದವರು ಇದೇ ಚಂದ್ರಕುಮಾರ್ ಜೈನರು ಇದು ರಾಜ್ಯ ಮಟ್ಟದಲ್ಲಿ ಪತ್ರಿಕೆ - ಟೀವಿ - ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.
ಆದರೆ ಎರೆಡು ವರ್ಷದಲ್ಲಿ ಈ ಊರಿನ ಅಭಿವೃದ್ಧಿ ಬಗ್ಗೆ ಸದರಿ ಚಾರೀಟೆಬಲ್ ಸೊಸೈಟಿ ಯಾವುದೇ ರೀತಿಯ ಕೆಲಸ ಪ್ರಾರಂಬಿಸದಿದ್ದರಿಂದ ಆವಿಗೆ ಗ್ರಾಮಸ್ಥರಿಗೆ ನಿರಾಶೆ ಆಗಿದೆ.
ನಿಜಕ್ಕೂ ಈ ಚಾರಿಟೇಬಲ್ ಸೊಸೈಟಿ ನಟ ಸುದೀಪರದ್ದು ಹೌದಾ? ಹೌದಾದರೆ ದತ್ತು ತೆಗೆದುಕೊಂಡ ಕುಗ್ರಾಮದ ಅಭಿವೃದ್ಧಿ ಯಾಕೆ ವಿಳಂಭ? ಅನ್ನುವ ಪ್ರಶ್ನೆಗಳಿದೆ.
ಇದು ನಟ ಸುದೀಪರ ಗಮನಕ್ಕೆ ಬರದ ಅವರ ಹೆಸರಿನ ಸಂಸ್ಥೆ ಆಗಿದ್ದರೆ ನಟ ಸುದೀಪರು ತಕ್ಷಣ ಈ ಬಗ್ಗೆ ಪ್ರತಿಕ್ರಿಯಿಸಬೇಕು.
Comments
Post a Comment