Skip to main content

Blog number 1040. ಸಾಗರದ ಜೀವವಿಮಾ ಕ್ಷೇತ್ರದಲ್ಲಿ ದಾಖಲೆ ಮಾಡಿದ್ದ ಗಂಗಾದರ್ ನಾಯಕರಿಗೆ ಅಶ್ರುತರ್ಪಣಗಳು.

#ಸಾಗರದ_ಜೀವವಿಮಾ_ಗಂಗಾಧರ್_ನಾಯಕರಿಗೆ_ಅಶ್ರು_ತರ್ಪಣಗಳು.

#ಅವರ_ಕೊನೆಯ_ಆಸೆ_ಈಡೇರಿಸದ_ಅಸಾಹಯಕತೆ_ನನ್ನದು.

#ಕುಂದಾಪುರದ_ಬಸ್ರೂರಿನಿಂದ_ಸಾಗರಕ್ಕೆ_ಬಂದು_ಜೀವನ_ಕಟ್ಟಿಕೊಂಡ_ಶ್ರಮಿಕರು.

#ಪೇಸ್_ಬುಕ್_ಮೂಲಕ_ಸಾಮಾಜಿಕ_ಜಾಲತಾಣದಲ್ಲಿ_ಸಕ್ರಿಯರಾಗಿದ್ದರು.
  
   ಕರಾವಳಿಯಿಂದ ಘಟ್ಟ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿಯಲ್ಲಿ ನೆಲೆಸಿ ಉದ್ಯೋಗ ಮತ್ತು ವ್ಯವಹಾರದಿಂದ ಸ್ಥಳಿಯರೇ ಆದ ಸಾವಿರಾರು ಜನರಿದ್ದಾರೆ.
    ಇದರಲ್ಲಿ  LIC ಗ೦ಗಾಧರ್ ನಾಯಕ್ ಅಂದರೆ ಸಾಗರ ಪೇಟೆ ಮತ್ತು ಸಾಗರ ಗ್ರಾಮಾಂತರದಲ್ಲಿ ಪ್ರಸಿದ್ಧರು, ಗ್ರಾಮೀಣ ಪ್ರದೇಶದ ದೊಡ್ಡ ದೊಡ್ಡ ಅಡಿಕೆ ಬೆಳೆಗಾರರಿಗೆ ಗಂಗಾದರ್ ನಾಯಕ್ ರು ಜೀವ ವಿಮಾ ಯೋಜನೆಗಳಿಂದ ಚಿರಪರಿಚಿತರು, LIC ಚೇರ್ಮನ್ ಕ್ಲಬ್ ಸದಸ್ಯರು.
  ಯಕ್ಷಗಾನ - ಕೃಷಿ- ಉಳಿತಾಯದ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಗಂಗಾದರ್ ನಾಯಕ್ ರು ಕನ್ನಡ ಸಾಹಿತ್ಯಾಸಕ್ತರು ಇವರಿಗೆ ಓದುವ ಹವ್ಯಾಸ ಜಾಸ್ತಿ, ಸಾಮಾಜಿಕ ಜಾಲ ತಾಣದಲ್ಲಿ ತರ್ಕಬದ್ದ ಚರ್ಚೆಯಲ್ಲಿ ಯಾವತ್ತೂ ಮುಂದಿದ್ದರು.
  ಎರೆಡು ಬಾರಿ ನನ್ನ ಕಛೇರಿಗೆ ದಂಪತಿ ಸಮೇತ ಬಂದು ಕುಶಲೋಪರಿ ಜೊತೆ ಅನೇಕ ವಿಚಾರ ವಿನಿಮಯ ಮಾಡಿದ್ದರು.
   ಅವರು ಕುಂದಾಪುರ ಸಮೀಪದ ಬಸ್ರೂರಿನವರು, ತಂದೆ ತಾಯಿಗಳು ನಡೆಸುತ್ತಿದ್ದ ಸಣ್ಣ ಹೋಟೆಲ್, ವಿಧ್ಯಾಬ್ಯಾಸದ ನಂತರ ತಾಯಿ ಒತ್ತಾಯದಿಂದ ಅವರು ನೀಡಿದ ಸ್ವಲ್ಪ ಹಣದಲ್ಲಿ ಸಾಗರ ತಲುಪಿ ತಮ್ಮ ಭವಿಷ್ಯ ರೂಪಿಸಿಕೊಂಡವರು.
   ಮೊದಲು ಸಾಗರದ ಪ್ರತಿಷ್ಟಿತ ಗಜಾನನ ಕಂಪನಿಯಲ್ಲಿ ಉದ್ಯೋಗ ಪ್ರಾರಂಬಿಸಿ ನಂತರ ಜೀವ ವಿಮಾದಲ್ಲಿ ಯಶಸ್ವಿಯಾಗಿ ನಂತರ ಸಹಕಾರಿ ಸೌಹಾರ್ದ ಬ್ಯಾಂಕ್ ಪ್ರಾರಂಬಿಸಿ ಅನೇಕರಿಗೆ ಸ್ವಯ೦ ಉದ್ಯೋಗದ ಮಾರ್ಗದರ್ಶಕರಾಗಿದ್ದರು.
  ಅವರ ಕನಸಿನ ತಾಯಿ ಹೆಸರಿನ ಕಾಂಪ್ಲೆಕ್ಸ್ ಒಂದನ್ನು ಸಾಗರದ ನೂತನ ಖಾಸಾಗಿ ಬಸ್ ನಿಲ್ದಾಣದ ಎದರು ನಿರ್ಮಿಸಿದ್ದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
    ನನ್ನ ಬರವಣಿಗೆ ಬಗ್ಗೆ, ಪ್ರಕಟಿಸಿದ ಪುಸ್ತಕದ ಬಗ್ಗೆ, ನನ್ನ ಹೋಟೆಲ್ ಲಾಡ್ಜ್ ಉಧ್ಯಮದ ಬಗ್ಗೆ ಸಲಹೆ ಸಹಕಾರ ನೀಡುತ್ತಿದ್ದರು.
  ಅವರ ಮಗಳ ಮಗ ಅನಂತನ ಬಗ್ಗೆ, ಮಗ ಆಯುರ್ವೇದ ವೈದ್ಯನಾಗುತ್ತಿರುವ ಬಗ್ಗೆ ಅನೇಕ ಬಾರಿ ಹೇಳಿಕೊಂಡಿದ್ದರು.
   ಕಳೆದ ಮೂರು ವರ್ಷಗಳಿಂದ ಅವರಿಗೆ ಮಾನಸಿಕವಾಗಿ ಡಿಪ್ರೆಷನ್ ಲಕ್ಷಣಗಳಿದ್ದವು, ಅನೇಕ ವೈದ್ಯರನ್ನು ಬದಲಿಸುತ್ತಿದ್ದರು ಯಾವುದೇ ಅಂತಹ ದೈಹಿಕ ಸಮಸ್ಯೆ ಕಂಡು ಬಂದಿಲ್ಲ ಆದರೆ ಒ0ದು ರೀತಿಯ ನರ ದೌರ್ಬಲ್ಯ ಅನ್ನಿಸುತ್ತೆ ಅನ್ನುತ್ತಿದ್ದರು.
   ಕಳೆದ ವರ್ಷ ಒಳ್ಳೆಯ ಅನಾಥ ಆಶ್ರಮ ಸಜೆಸ್ಟ್ ಮಾಡಿ ಅಂದಾಗ ನಾನು ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಿದ್ದೆ ಅದು ಪ್ರಾರಂಭದ ಡಿಪ್ರೆಷನ್.
   ನಂತರ ಸಂಸಾರ ತ್ಯಜಿಸಿ ಬೇರೆಲ್ಲಾದರೂ ಆಶ್ರಯ ಬೇಕೆಂದು ಹಠ ಹಿಡಿದಾಗಲೂ ಅವರಿಗೆ ಆ ರೀತಿ ಮಾಡದಂತೆ ವಿನಂತಿಸಿದ್ದೆ.
  ಅಂತಿಮವಾಗಿ ಆತ್ಮಹತ್ಯಾ ಅಂತ ಯೋಚನೆ ವ್ಯಕ್ತಪಡಿಸಿದಾಗ ಅವರಿಗೂ ಸಾಮಾಜಿಕ ಜಾಲ ತಾಣದಲ್ಲಿ ಮಿತ್ರರಾಗಿದ್ದ ತುಮರಿಯ GT ಸತ್ಯನಾರಾಯಣರಿಗೆ ಇದನ್ನೆಲ್ಲ ತಿಳಿಸಿದ್ದೆ,ಗಂಗಾಧರ್ ನಾಯಕರ ಜೊತೆ GT ಸತ್ಯನಾರಾಯಣರು ಕೌನ್ಸೆಲಿಂಗ್ ಮಾಡಿ "ನಾಯಕರೆ ನಿಮಗೆ ಸ್ವಲ್ಪ ಕಾಲ ಹವೆ ಬದಲಾಗಬೇಕಾದರೆ ನನ್ನ ಮನೆಗೆ ಬಂದು ಕೆಲ ಕಾಲ ತಂಗಿರಿ " ಎಂದಿದ್ದರೆಂದು ನಾಯಕರು GT ಯವರ ಒಳ್ಳೆತನ ಹೊಗಳಿದ್ದರು.
   ನಂತರ ನನಗೆ ನಿಮ್ಮ ಲಾಡ್ಜ್ ನಲ್ಲಿ ಖಾಯಂ ಉಳಿಯುತ್ತೇನೆ ವಸತಿ - ಊಟೋಪಚಾರದ ಹಣ ಪ್ರತಿ ತಿಂಗಳೂ ಪಾವತಿಸುತ್ತೇನೆ ಅಂತ ಒತ್ತಾಯಿಸಿದ್ದರು ಆದರೆ ಅವರನ್ನು ಈ ಡಿಪ್ರೆಶನ್ ಕಾರಣದಿಂದ ಅವರ ಪ್ರೀತಿಯ ಪತ್ನಿ - ಮಗ - ಮಗಳು ಅಳಿಯ - ಮೊಮ್ಮಗನಿಂದ ದೂರ ಮಾಡಲು ನನ್ನ ಅಸಹಾಯಕತೆ ವ್ಯಕ್ತಪಡಿಸಿದ್ದೆ ಅದಕ್ಕೆ ಕಟು ಮಾತಿನಿಂದ ಅವರ ಪ್ರತಿಕ್ರಿಯೆ ನೀಡಿದ್ದರು.
  ನಂತರ ಪೋನಿಗೆ ಸಿಗಲಿಲ್ಲ, ಕಳೆದ ಡಿಸೆಂಬರ್ ನಂತರ ಸಾಮಾಜಿಕ ಜಾಲ ತಾಣದಲ್ಲೂ ಕಾಣಲಿಲ್ಲ ನನಗೆ ಅವರ ಕುಟುಂಬದವರಾರು ಸಂಪರ್ಕದಲ್ಲಿಲ್ಲದ ಕಾರಣ ಗಂಗಾಧರ್ ನಾಯಕ್ ಸರಿ ಆಗಿರಬಹುದು ಎಂದೇ ಬಾವಿಸಿದ್ದೆ ಆದರೆ ಇವತ್ತು ಅವರು ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದ ಸುದ್ದಿ ಕೇಳಿ ಬೇಸರ ಅನ್ನಿಸಿತು.
  ಅವರ ಆತ್ಮಕ್ಕೆ ಶಾಂತಿ ಸದ್ಗತಿ ಸ್ವಗ೯ ಪ್ರಾಪ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...