Blog number 1001. ಕೃಷಿ ವಿಜ್ಞಾನಿ ಎಂದೇ ನಾನು ಕರೆಯುವ, ಜೇನು ಮಿತ್ರ - ಎರೆಹುಳದ ಗೊಬ್ಬರದ ಉತ್ಪಾದಕ - ಪಶು ಆಹಾರ ತಯಾರಕ ನಾಗೇಂದ್ರ ಸಾಗರ್ ಕಳಿಸಿದೆ ದೇಸಿ ಕೆಂಪಕ್ಕಿ
ಇವತ್ತು ಗೆಳೆಯ ನಾಗೇಂದ್ರ ಸಾಗರ್ ತಂದು ಕೊಟ್ಟ ಸಾವಯವ ಆಕ್ಕಿ ಅನ್ನ ಮಾಡಿ ಊಟ ಮಾಡಿದಾಗ ಆದ ಪರಮಾನಂದ ವಣಿ೯ಸಲು ಸಾಧ್ಯವಿಲ್ಲ.
ಇವರು ಈ ಭಾಗದ ಕೃಷಿ ವಿಜ್ಞಾನಿ, ಜೇನು ಸಾಗಾಣಿಕೆ ತರಬೇತುದಾರರು, ಎರೆಹುಳದ ಗೊಬ್ಬರ ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಉದ್ದಿಮೆದಾರರು, ಡೈರಿ ಮಾಲಿಕರು, ಪಶು ಆಹಾರ ತಯಾರಕರು, ಹನಿ ನೀರಾವಾರಿ, ನಸ೯ರಿ, ಅಪರೂಪದ ಹೂವು, ಹಣ್ಣಿನ ತಳಿ ಸಂರಕ್ಷರು.
ಇವರ ಹತ್ತಿರ ಸಾವಯವ ಅಕ್ಕಿ, ಎರೆಹುಳ ಗೊಬ್ಬರ, ಸೂಜಿ ಮೆಣಸು, ಮಲೆನಾಡು ಗಿಡ್ಡದ ಪರಿಶುದ್ಧ ತುಪ್ಪಾ, ತುಡುವೆ ಜೇನುತುಪ್ಪಾ, ಕೆಂಪು ಜೋಳಗದ ಅಕ್ಕಿ, ಮಲೆನಾಡಿನ ಅಪರೂಪದ ಮಾವಿನ ಮಿಡಿ ಉಪ್ಪಿನ ಕಾಯಿ ಹೀಗೆ ಮಾರುಕಟ್ಟೆಯಲ್ಲಿ ಸಿಗದ ವಸ್ತುಗಳಿಗೆ ನಾನು ಅವರನ್ನ ಪೀಡಿಸುತ್ತೇನೆ, ಎಲ್ಲಿಂದಲೋ ಸಂಗ್ರಹಿಸಿ ಕೊಡುತ್ತಾರೆ.
ಆದರೆ ಇವರ ಹಿನ್ನೆಲೆ ಕೇಳಿ ಒಂದು ಕಾಲದ ಖ್ಯಾತ ಪತ್ರಕತ೯ರಾದ ವಿ.ಎನ್.ಸುಬ್ಬರಾವ್ರರ ಶಿಷ್ಯ, ಇವತ್ತಿನ ಪಬ್ಲಿಕ್ ಟಿವಿ ರಂಗನಾಥ, ಸುದ್ದಿ ಟಿವಿ ಸ೦ಪಾದಕರು, ರವಿ ಬೆಳೆಗೆರೆ, ನಟ ಪ್ರಕಾಶ್ ರೈ ರ ಗೆಳೆಯರಾದವರು, ಬೆಂಗಳೂರು ಬೇಡ ಅನ್ನಿಸಿ ಹಳ್ಳಿಗೆ ಬಂದವರು ಆನಂದಪುರದ ಸಮೀಪದಲ್ಲಿ ಅವರ ಪಿತ್ರಾಜಿ೯ತ ಜಮೀನಿನಲ್ಲಿ ರಬ್ಬರ್ ಬೇಸಾಯ ಪ್ರಾರಂಬಿಸಿ ಸಾಗರದ ಮಾರಿಕಾಂಬ ದೇವಾಲಯದ ಹಿಂಬಾಗದಲ್ಲಿ ಸಾಗರ್ ಅಗ್ರಿ ಕೋ ಎಂಬ ರೈತರ ಅವಶ್ಯಕತೆಯ ನೀರಿನ ಪಂಪ್, ಡ್ರಿಪ್ ನೀರಾವರಿ ಇತ್ಯಾದಿ ಸಲಕರಣೆ ಮಾರಾಟ ಮಳಿಗೆ ಸಾಗರದಲ್ಲಿ ಮೊಟ್ಟ ಮೊದಲಿಗೆ ಪ್ರಾರ೦ಬಿಸಿದರು.
ಪ್ರಾರಂಭದಲ್ಲಿ ದೊಡ್ಡ ನಷ್ಟ ಅನುಭವಿಸಿದರು, ಗೆಳೆಯರು ಮತ್ತು ಕುಟುಂಬದಲ್ಲೇ ವಿಶ್ವಾಸ ದ್ರೋಹದಿಂದ ಎಲ್ಲಾ ಕಳೆದು ಕೊಂಡು ವರದಾ ನದಿ ಮೂಲ ಸಮೀಪದ ಚಿಪ್ಪಳಿ ಎಂಬಲ್ಲಿ ಹೊಸ ಜೀವನ ಪ್ರಾರಂಬಿಸಿ ಈಗ ಆಥಿ೯ಕವಾಗಿ, ಸಾಮಾಜಿಕವಾಗಿ ಪ್ರಗತಿ ಕಂಡಿದ್ದಾರೆ.
ಇವರ ಪತ್ನಿ ವಿಜ್ಞಾನದಲ್ಲಿ ಸ್ನಾತಕೊತರ ಪದವಿಧಾರರು ಗಂಡನ ಸಂಕಟಷ್ಟಕ್ಕಾಗಿ ಡಾಕ್ಟರೇಟ್ ಪದವಿಯ ಆಸೆ ಕೈಬಿಟ್ಟು ಎಲ್ಲಾ ಕೃಷಿ ಪ್ರಯೋಗದಲ್ಲಿ ಬಾಗಿಯಾಗಿ ಯಶಸ್ವಿಯಾಗಿದ್ದಾರೆ.
ದುರಾಸೆ ಇಲ್ಲದ, ಸಮಾಜದಲ್ಲಿ ಎಲ್ಲರೊಡನೆ ಮಾಹಿತಿ ಹಂಚಿಕೊಳ್ಳುವ ಅತ್ಯುತ್ತಮ ಓದು ಬರಹ ಜೀವನ ಅನುಭವ ಇರುವ ನಾಗೇಂದ್ರ ಸಾಗರ್ ಒಬ್ಬ ಕೃಷಿ ವಿಜ್ಞಾನಿ ಆಗಿ ಹಳ್ಳಿಯಲ್ಲಿ ಸ್ವಗ೯ ನಿಮಿ೯ಸಿಕೊಂಡಿದ್ದಾರೆ.
Comments
Post a Comment