ಮೊನ್ನೆ ಮಗಳ ವಿವಾಹ ಆಮಂತ್ರಣ ಪತ್ರಿಕೆಯೊಂದಿಗೆ ಬಂದಿದ್ದರು, ತ್ಯಾಗತಿ೯ಯ ರಬ್ಬರ್ ತೋಟ ಮಾರಿ ಸಾಗರ ಮುಖ್ಯ ಬಸ್ ನಿಲ್ದಾಣದ ಎದರು ಉಡುಪಿ ಸಸ್ಯಹಾರಿ ರೆಸ್ಟೋರOಟ್ ಪ್ರಾರಂಬಿಸಿದ್ದಾರೆ.
1978 ರಲ್ಲಿ ನಾವೆಲ್ಲ ಆನಂದಪುರದಿಂದ ರೈಲಿನಲ್ಲಿ ಸಾಗರಕ್ಕೆ ಶಾಲೆಗೆ ಬರುತ್ತಿದ್ದಾಗ ಸಾಗರ ರೈಲು ನಿಲ್ದಾಣದ ಎದರು ವಿಶಾಲವಾದ ಪುಟ್ಬಾಲ್ ಮೈದಾನದಲ್ಲಿ ಅಮೃತ್ರಾಸ್ ಜಾವಲಿನ್ ಪ್ರಾಕ್ಟೀಸ್ ಮಾಡುತ್ತಿದ್ದರು ನಂತರ ಭಾರತ ಪ್ರತಿನಿದಿಸಿ ಅಂತರಾಷ್ಟ್ರಮಟ್ಟದಲ್ಲಿ ಪದಕ ಪಡೆದರು.
ಕೆಲ ಕಾಲ ಮಧ್ಯಪ್ರದೇಶದ ಮೊರೆನೋ ಜಿಲ್ಲೆಯ ಗಾಂಧಿ ಆಶ್ರಮದಲ್ಲಿ ಚಂಬಲ್ ಕಣಿವೆಯ ಡಕಾಯಿತರ ಪುನರ್ ವಸತಿ ಕೇಂದ್ರದಲ್ಲಿ ಸ್ವಯಂ ಸೇವಕರಾಗಿ ಸೇವೆ ಮಾಡಿದ್ದರು.
ಇವರ ತಂದೆ ಸಾಗರದ ಕೆ.ಇ.ಬಿ. ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು ತಾಯಿ ಶಿಕ್ಷಕಿಯಾಗಿದ್ದರು, ನಮ್ಮ ತಂದೆ 1975ರಲ್ಲಿ ಸಣ್ಣ ಅಕ್ಕಿ ಗಿರಣಿ ಪ್ರಾರಂಬಿಸಿದ್ದರು ಅದರ ವಿದ್ಯುತ್ ಸಂಪಕ೯ ಕೊಡಿಸಲು ಇವರ ತಂದೆ ಬರುತ್ತಿದ್ದರು ಆಗ ಅವರ ಸಂಗಡ ವೈರಿಂಗ್ ಮಾಡಲು ಬರುತ್ತಿದ್ದ ಒಬ್ಬರು ಶಬರಿಮಾಲಾ ದಾರಿ ಅವರ ದಮ೯ ಕ್ರಿಶ್ಚಿಯನ್ ನಮಗೆ ಇದು ತುಂಬಾ ವಿಚಿತ್ರ ಅನ್ನಿಸುತ್ತಿತ್ತು.
ಅಮೃತ್ ರಾಸ್ ಆಗಿನಿಂದ ಈಗಿನವರೆಗೂ ನೊಂದವರ ಪಕ್ಷಪಾತಿ, ಸಾಗರದ ದಲಿತರ ರೈತರ ಪರವಾಗಿ ಅನೇಕ ಹೋರಾಟ ಮಾಡಿದವರು ಇವರ ಹೋರಾಟ ಸಹಿಸದ ಆಡಳಿತರೂಡರು ಇವರನ್ನ ಜೈಲಿಗೂ ಕಳಿಸಿದ್ದರು ಆದರೆ ಚಂಬಲ್ ಕಣಿವೆ ಡಕಾಯಿತರ ಪುನರ್ ವಸತಿ ಸೇವೆ ಮಾಡಿದ ಇವರಿಗೆ ಜೈಲು ಏನೇನು ಅಲ್ಲ ಅಂತ ಅವರಿಗೆ ಗೊತ್ತಿರಲಿಲ್ಲ.
ಜಾತ್ಯಾತೀತ, ಮಾನವೀಯ ಸಂಸ್ಕಾರವಂತ, ಹಿಡಿದ ಕೆಲಸ ದಡ ಸೇರಿಸುವ ತನಕ ವಿಶ್ರಮಿಸದ ಅಮೃತ್ರಾಸ್ ಈಗ 62 ವಷ೯ದಲ್ಲೂ ಸ್ವಲ್ಪವೂ ಬದಲಾಗಿಲ್ಲ, ಸಾಗರದ ಕ್ರೈಸ್ತ ಸಮಾಜದಲ್ಲಿ ಇವರಂತವರು ಅತ್ಯಂತ ವಿರಳ.
ಇವರ ಹೊಸ ಹೋಟೆಲ್ ಉದ್ಯಮ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
Comments
Post a Comment