Blog number 1012. ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಬಳೆಯ ಅನಂತಪುರದ ಅನಂತಪದ್ಮನಾಭ ದೇವಾಲಯದ ಕೊಳದಲ್ಲಿನ ಬಬಿಯಾ ಎಂಬ ಮೊಸಳೆಯ ಮೃತ್ಯುವಿನ ಸುದ್ದಿ ವೈರಲ್
#ನಿನ್ನೆ_ಕೇರಳದ_ಕಾಸರಗೋಡು_ಜಿಲ್ಲೆಯಲ್ಲಿ_ಶೋಕಾಚಾರಣೆ
#ಬಬಿಯಾ_ಸಾವಿನ_ಸುದ್ದಿ_ವಿಶ್ವದಾದ್ಯಂತ_ವೈರಲ್
#ಬಬಿಯಾ_ಹೆಸರಿನ_ಅರ್ಥ?
#ಮು೦ದಿನ_ಬಬಿಯಾಳ_ಆಗಮನದ_ನಿರೀಕ್ಷೆ_ಹುಸಿಯಾಗದಿರಲಿ
ಬಬಿಯಾ ಎಂದರೆ ಇಂಗ್ಲೀಷ್ ನಲ್ಲಿ ಲಿಟಲ್ ಗರ್ಲ್, ಸ್ವೀಟ್ ಗರ್ಲ್, ಯಂಗ್ ಗರ್ಲ್ ಅಂತ ಈ ಹೆಸರು 80 ವಷ೯ದ ಹಿಂದಿನ ಈ ದೇವಾಲಯದಲ್ಲಿದ್ದ ಮೊಸಳೆಗೂ ಇದೇ ಹೆಸರು ಇತ್ತು ಅಂದರೆ ಈ ಹೆಸರು ಬ್ರಿಟಿಷರೇ ಕರೆದಿರಬೇಕು.
1945 ಕ್ಕೆ ಪೂರ್ವದಲ್ಲಿ ಬ್ರಿಟಿಷ್ ಅಧಿಕಾರಿ ಹಿಂದಿನ ಈ ದೇವಾಲಯದ ಮೊಸಳೆ ಬಬಿಯಾಕ್ಕೆ ಗುಂಡಿಕ್ಕಿ ಸಾಯಿಸಿದ್ದ ಅದರ ಮರುದಿನವೇ ಈ ಕೊಳದಲ್ಲಿ ಇನ್ನೊಂದು ಮೊಸಳೆ ಪ್ರತ್ಯಕ್ಷ ಆಯಿತು ಇದು ಭಕ್ತರಿಗೆ ಪವಾಡದಂತೆ ಕಂಡು ಬಂದು ಹರ್ಷ ವ್ಯಕ್ತವಾಯಿತು ಮತ್ತು ಅದಕ್ಕೆ ಬಬಿಯಾ ಅಂತಲೇ ನಾಮಕರಣ ಮಾಡಿದರು.
ಸಾಮನ್ಯವಾಗಿ ಮೊಸಳೆಗಳ ಆಯಸ್ಸು 70 ರಿಂದ 120 ವರ್ಷ ತನಕ ಇದೆ, ನಿನ್ನೆ ಮೃತವಾದ ಬಬಿಯಾಕ್ಕೆ ಸುಮಾರು 80 ವರ್ಷ ಆಗಿದೆ ಎನ್ನುತ್ತಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ಕುಂಬಳೆ ಸಮೀಪದ ಅನಂತಪುರ (ಕೆಲ ದಾಖಲೆಯಲ್ಲಿ ಆನಂದಪುರಂ ಅಂತಲೂ ಕರೆಯುವ) ದ ಅನಂತಪದ್ಮನಾಭ ದೇವಸ್ಥಾನದ ಹಾಲಿ ಅರ್ಚಕರು ಹವ್ಯಕರು.
ಈ ದೇವಾಲಯ ವಿಷ್ಣುವಿನ ದೇವಾಲಯ ಇಲ್ಲಿನ ಕೆರೆಯ ಗುಹೆ ತಿರುವನಂತಪುರದ ಶ್ರೀಮಂತ ಅನಂತಪದ್ಮನಾಭ ದೇವಾಲಯಕ್ಕೆ ಇಲ್ಲಿಂದ ವಿಷ್ಣು ಅಲ್ಲಿಗೆ ಹೋದರೆಂಬ ಪ್ರತೀತಿ ಇದೆ.
ಈ ದೇವಾಲಯ ಕೆಳದಿ ಅರಸರ ಕಾಲದಲ್ಲಿ ಪುನರ್ ನಿರ್ಮಿಸಲಾಗಿತ್ತು ಮತ್ತು ಅಲ್ಲಿ ಕೆಳದಿ ಅರಸರ ಕೊನೆಯ ಕಾಲದಲ್ಲಿ ಕೆಳದಿಯ ನಿಧಿ ಸಂಪತ್ತು ಈ ಕೊಳದಲ್ಲಿ ರಹಸ್ಯವಾಗಿ ಅಡಗಿಸಲಾಗಿದೆ ಮತ್ತು ಅದನ್ನು ಕಾಯಲು ಆ ಲಾಗಾಯಿತನಿಂದ ಈ ಕೊಳದಲ್ಲಿ ಮೊಸಳೆಯೊಂದು ಕಾವಲಿಗೆ ಬಿಡಲಾಗಿತ್ತೆಂಬ ನಂಬಿಕೆ ಇದೆ ಅದಕ್ಕೆ ಸಾಕ್ಷಿಯಾಗಿ ಈ ಬಬಿಯಾ.
ಕೆಲ ವರ್ಷಗಳ ಹಿಂದೆ ಈ ದೇವಾಲಯದ ನವೀಕರಣ ಮತ್ತು ಪುನರ್ ಪ್ರತಿಷ್ಟಾಪನೆ ನಂತರದಿಂದ ಬಬಿಯಾಗೆ ದೇವಾಲಯದ ಸಸ್ಯಹಾರ ಪ್ರಸಾದ ಮಾತ್ರ ನಿತ್ಯ ಅಹಾರವಾಗಿದೆ ಅದಕ್ಕೂ ಮು೦ಚೆ ದೇವಾಲಯದಲ್ಲಿನ ಕೊಳದ ಒಂದು ಭಾಗದಲ್ಲಿ ಹರಕೆಯ ಕೋಳಿಗಳನ್ನು ಬಬಿಯಾಗಿ ಅರ್ಪಿಸುತ್ತಿದ್ದ ಅಟ್ಟಣಿಕೆ ಕೂಡ ಇತ್ತು ಮತ್ತು ಹರಕೆ ಕೋಳಿ ತಿನ್ನುತ್ತಿರುವ ಬಬಿಯಾಳ ಪೋಟೋಗಳು ಇದೆ ಆದರೆ ಸಾಮಾಜಿಕ ಜಾಲ ತಾಣದಲ್ಲಿ ಬಬಿಯಾ ಸಸ್ಯಹಾರಿ ಮೊಸಳೆ ಎಂಬಂತೆ ಬಿತ್ತರಿಸುತ್ತಿದ್ದಾರೆ.
ರಾತ್ರಿ ಪೂಜೆ ಮುಗಿಸಿ ಅರ್ಚಕರು ಗರ್ಭಗುಡಿ ಗೇಟುಗಳಿಗೆ ಬೀಗ ಹಾಕಿ ಹೋದ ಮೇಲೆ ಬಬಿಯ ದೇವಸ್ಥಾನದ ಆವರಣದಲ್ಲಿಯೇ ತಿರುಗಾಡುತ್ತಾ ನಿದ್ದೆ ಮಾಡುತ್ತಾ ಕಾಲ ಕಳೆದು ಬೆಳಗಿನ ಪೂಜೆಗೆ ಮೊದಲೇ ಕೊಳದಲ್ಲಿಗೆ ಹೋಗಿ ಬಿಡುತ್ತದೆ.
ಕೊಳದ ಮಧ್ಯದಲ್ಲಿ ದೇವಾಲಯ ಇರುವ ಏಕೈಕ ಕೇರಳ ರಾಜ್ಯದ ಈ ದೇವಾಲಯ ಬಬಿಯಾಳ ಸೌಮ್ಯ ಸ್ವಬಾವದಿಂದಲೇ ದೇಶದಾದ್ಯಂತ ಪ್ರವಾಸಿಗರಿಗೆ ಆಕರ್ಷಣೆ ಆಗಿತ್ತು.
ಇಲ್ಲಿನ ಕುಳಿತ ಭಂಗಿಯ ವಿಷ್ಣುವಿಗ್ರಹ ಮಣ್ಣು ಮತ್ತು ವಿವಿದ ಗಿಡಮೂಲಿಕೆಗಳ ಶರ್ಕರ ಮಿಶ್ರಣದ ವಿಗ್ರಹವಾಗಿತ್ತು ನಂತರ ಕಂಚಿ ಸ್ವಾಮಿಗಳು ನೀಡಿದ ಪಂಚಲೋಹದ ವಿಷ್ಣು ವಿಗ್ರಹ ಇಲ್ಲಿ ಪ್ರತಿಷ್ಟಾಪಿಸಲಾಗಿದೆ ಆದರೂ ಈಗ ಪುನಃ ಮೊದಲಿನ ರೀತಿಯ ಮಣ್ಣು ಗಿಡಮೂಲಿಕೆಗಳ ವಿಗ್ರಹ ಮಾಡಬೇಕು ಎನ್ನುವ ಒತ್ತಡ ಭಕ್ತರಿಂದ ಇದೆ.
ಮೊನ್ನೆ ಬಾನುವಾರ ರಾತ್ರಿ ಪೂಜೆಯ ನಂತರ ಬಬಿಯಾ ಗರ್ಭಗುಡಿಯ ಬಾಗಿಲ ಎದುರಿಗೇ ಬಂದು ಅಲ್ಲಿ ಜೀವ ತ್ಯಾಗ ಮಾಡಿದೆ, ಬೆಳಿಗ್ಗೆ ಅರ್ಚಕರು ಬಂದು ನೋಡಿದಾಗ ಅವರು ಬಬಿಯಾ ಮೃತಳಾದಳೆಂದು ಬಾವಿಸಿರಲಿಲ್ಲ ನೀರು ಚಿಮುಕಿಸಿ ಹೊರ ಹೋಗಲು ಶಬ್ದ ಮಾಡಿದರೂ ಬಬಿಯಾಳ ಚಲನೆಯೇ ಇರದಿದ್ದು ನೋಡಿದ ಮೇಲೆಯೇ ಗೊತ್ತಾಗಿದ್ದು ಬಬಿಯಾ ಇನ್ನಿಲ್ಲ ಅಂತ.
ಇಡೀ ಊರಿಗೆ ಸುದ್ದಿ ಆಗಿ ನಂತರ ಇಡೀ ದೇಶದಾದ್ಯಂತ ವೈರಲ್ ಆಯಿತು ಈ ಸುದ್ದಿ ನಂತರ ಜನ ಸಾಗರವೇ ನೆರೆಯಿತು ಸಕಲ ಗೌರವದೊಂದಿಗೆ ಶಾಸ್ತ್ರೋಕ್ತವಾಗಿ ದೇವಾಲಯದ ಆವರಣದ ಪಕ್ಕದಲ್ಲೇ ಬಬಿಯಾ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಮುಂದಿನ ದಿನಗಳಲ್ಲಿ ಬಬಿಯಾ ಸಮಾದಿ ವೀಕ್ಷಿಸಲು ಪ್ರವಾಸಿಗಳು ಬರುತ್ತಾರೆ.
ಈ ಕೊಳದಲ್ಲಿ ಬಬಿಯಾಳ ಖಾಲಿಯಾದ ಸ್ಥಾನಕ್ಕೆ ಹೊಸ ಬಬಿಯಾಳ ಆಗಮನದ ನಿರೀಕ್ಷೆಯಲ್ಲಿ ಭಕ್ತರು ಕಾಯುತ್ತಿದ್ದಾರೆ ಮತ್ತು ಇಲ್ಲಿನ ಇತಿಹಾಸ ಗೊತ್ತಿದ್ದವರೂ ಕೂಡ ಅನಂತಪುರದ ಅನಂತ ಪದ್ಮನಾಭ ದೇವಾಲಯದ ಕೊಳದಲ್ಲಿ ಯಾವತ್ತೂ ಬಬಿಯಾ ಇದ್ದೇ ಇರುತ್ತಾಳೆಂಬ ನಂಬಿಕೆ ಇದೆ.
ಇದಕ್ಕೆ ಕಾರಣ ನಿರಂತರವಾಗಿ ಮೊಸಳೆ ಇಲ್ಲಿ ಇರುವ ನಾನೂರು ವಷ೯ದ ಇತಿಹಾಸ.
https://arunprasadhombuja.blogspot.com/2022/10/blog-number-1012-83.html
Comments
Post a Comment