Blog number 1028.70 ದಶಕದಲ್ಲಿ ಸಾಗರದ ಕ್ರಿಕೆಟ್ ಜಗತ್ತಿನ ಐಕಾನ್ ನಾಗೇಂದ್ರ ಪಂಡಿತ್ ಸಾಗರದ ಅವರ ಕ್ರಿಕೇಟ್ ಅಕಾಡೆಮಿಯಲ್ಲಿ ಅತ್ಯುತ್ತಮ ತರಬೇತಿ ನೀಡಿ ಉದಯೋನ್ಮುಖ ಕ್ರಿಕೆಟ್ ಆಟಗಾರರನ್ನು ತಯಾರಿ ಮಾಡುತ್ತಿದ್ದಾರೆ.
ನಾಗೇ೦ದ್ರ ಪ೦ಡಿತ್ ಕ್ರಿಕೇಟ್ ಆಕಾಡಮಿ
ಸಾಗರ
ಒಂದು ಕಾಲದಲ್ಲಿ ಅಂದರೆ 1975ರಿಂದ 1980ರಲ್ಲಿ ಸಾಗರದಲ್ಲಿ ಲೆದರ್ ಬಾಲ್ ಕ್ರಿಕೆಟ್ ಹವಾ ಜೋರಾಗಿತ್ತು ಅದರಲ್ಲೂ ಎಲ್.ಬಿ. ಕಾಲೇಜಿನ ನಾಗೇ೦ದ್ರಪಂಡಿತರೆಂದರೆ ಸಾಗರದ ಗಾವಸ್ಕರ್, ಸಿನಿಮಾ ನಟರಂತೆ ಸುಂದರಾಂಗ, ಯುನಿವಸಿ೯ಟಿ ಕೋಟ್ ಪಡೆದ ಏಕೈಕ ಕ್ರಿಕೆಟ್ ಆಟಗಾರ.
ನಾವೆಲ್ಲ 1978 ರಲ್ಲಿ ರೈಲಿನಲ್ಲಿ ಸಾಗರದ ಮುನ್ಸಿಪಲ್ ಹೈಸ್ಕೂಲಿಗೆ 8ನೇ ತರಗತಿಗೆ ಹೋಗುತ್ತಿದ್ದರು ನಾಗೇ೦ದ್ರ ಪಂಡಿತರ ಬ್ಯಾಟಿಂಗ್ ನೋಡಲು ಎಲ್.ಬಿ. ಕಾಲೇಜಿನ ಕ್ರಿಡಾ೦ಗಣಕ್ಕೆ ನಡೆದು ಹೋಗುತ್ತಿದ್ದೆವು, ಅವರ ಬ್ಯಾಟಿಂಗ್ ಸ್ಟೈಲ್ ಹಾಗಿತ್ತು, ಬೌ೦ಡರಿ ಸಿಕ್ಸ್ ರ್ ಗಳ ಸುರಿಮಳೆ.
ಭಾರತದ ರಾಷ್ಟ್ರಿಯ ಕ್ರಿಕೆಟ್ ಆಟಗಾರರಾಗಿ ಆಯ್ಕೆ ಆಗುವಂತ ಅವಕಾಶದಿ೦ದ ವಂಚಿತರಾಗಿದ್ದು ದುರಾದೃಷ್ಟ.
ಈಗ UAE ಯ ಅಬುದಾಬಿಯ Exchage ನಲ್ಲಿ ಉಪಾಧ್ಯಕ್ಷರಾಗಿ ಪ್ರತಿಷ್ಟಿತ ದೊಡ್ದ ಹುದ್ದೆಯಲ್ಲಿದ್ದಾರೆ ಆದರೂ ತಮ್ಮ ಹುಟ್ಟಿದ ಊರು ಸಾಗರದಲ್ಲಿನ ಯುವ ಜನತೆಗೆ ಏನಾದರೂ ಮಾಡಬೇಕೆಂಬ ತುಡಿತ ಅವರಿಗೆ ಈಗಿನ ಅವರ ಸಾಮಥ್ಯ೯ದಲ್ಲಿ ಬೆಂಗಳೂರಿನಲ್ಲಿ ಪ್ರಾರಂಬಿಸ ಬಹುದಾದ ಕ್ರಿಕೆಟ್ ಆಕಾಡಮಿ ಸಾಗರದಲ್ಲಿ ಪ್ರಾರಂಬಿಸಿದ್ದಾರೆ, ಅದೂ ಅವರದ್ದೇ ಹೆಸರಿನ ಬ್ರಾಂಡ್ ನಲ್ಲಿ.
ನಾಗೇ೦ದ್ರ ಪಂಡಿತ್ ಕ್ರಿಕೇಟ್ ಅಕಾಡೆಮಿ ಯಶಸ್ವಿಯಾಗಲಿ ಸಾಗರದ ಯುವಕರಿಗೆ ಕ್ರೀಡೆಯಲ್ಲಿ ಅತ್ಯುತ್ತಮ ಮಾಗ೯ದಶ೯ನ ಅವರಿಂದ ಸಿಗಲಿ ಎಂದು ಹಾರೈಸೋಣ.
ಈಗಾಗಲೇ ಹೆಸರು ನೊ೦ದಾಯಿಸಿ ಕೊಂಡು ತರಬೇತಿ ಪಡೆದ ಕ್ರೀಡಾಪಟುಗಳು ಅನೇಕ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಸಾದನೆ ಮಾಡಿ ಮುಂದಿನ ದಿನದಲ್ಲಿ ರಾಜ್ಯ - ದೇಶವನ್ನು ಪ್ರತಿನಿಧಿಸುವ ನಿರೀಕ್ಷೆ ಇದೆ. ಇವರ ಅಕಾಡಮಿಯಲ್ಲಿ ಭಾಗವಹಿಸಿ ತರಬೇತಿ ಪಡೆಯಲು ಅವಕಾಶ ಕಲ್ಪಿಸಿದ್ದಾರೆ.
ಆಸಕ್ತರು ಹೆಸರು ನೊಂದಾಯಿಸಿಕೊಳ್ಳಲು ಕೆಳಕಂಡ ವೆಬ್ ಸೈಟ್ / ಈ ಮೇಲ್ ಮೂಲಕ ಸಂಪಕಿ೯ಸ ಬಹುದು
www.npca.in.net
cricket@npca.in.net
*Second Innings From Nagendra Pandit - Nagendra Pandit Cricket Academy*
The craze for leather ball cricket was at its peak during 1975 to 1980 in Sagar. Nagendra Pandit, handsome cricket player of L.B College.
While studying in Sagara Municipal Highschool, we used to walk to LB college's grounds to watch him play. His batting was so alluring with rain of sixers and fours, we didn't mind walking that far to watch him play.
Now he is vice President in Abudhabi's Stock exchange. Still his heart thrives to do something good for the youth of Sagar.
He is starting a cricket academy in Sagar in his name so that youngsters of this region could get proper training and guidance.
The registration process has been started. For registration, interested candidates can contact the academy via the following link : http://www.npca.in.net
cricket@npca.in.net
Comments
Post a Comment