Blog number 1000 ಆನಂದಪುರಂನ ಬಡ ಕಿನ್ನರ ಜೋಗಿ ನಿಂಗಪ್ಪ ಜೋಗಿಯವರಿಗೆ ಕರ್ನಾಟಕ ಸರ್ಕಾರ 2016ರಲ್ಲಿ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಿತ್ತು ಈ ಮೂಲಕ ಪ್ರಶಸ್ತಿಗೊಂದು ಮೌಲ್ಯ ಬಂದಿತ್ತು
ಇವರ ಹೆಸರು ನಿಂಗಪ್ಪ ಜೋಗಿ ಇವರು ಆನಂದಪುರಂನ ಸಂತೆ ಮಾರ್ಕೆಟ್ ರಸ್ತೆ ನಿವಾಸಿಗಳು, ನಾವು ನೋಡಿದಂತೆ ಮನೆ ಮನೆಗೆ ಹೋಗಿ ಕಿನ್ನರಿಯೊಂದಿಗೆ ಜೋಗಿ ಹಾಡು ಹೇಳಿ ಜೀವನಕ್ಕೆ ಸಂಬಾವನೆ ಪಡೆಯುತ್ತಿದ್ದರು.
1996-1997 ರಲ್ಲಿ ನಾನು ಇವರ ಬಗ್ಗೆ ಚಿತ್ರಲೇಖನ ತರಂಗ, ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಬರೆದಿದ್ದೆ ಆ ಎಲ್ಲಾ ಲೇಖನಗಳ ತುಣುಕುಗಳನ್ನು ಒಟ್ಟು ಮಾಡಿ ನಿಂಗಪ್ಪ ಜೋಗಿಗೆ ಕೊಟ್ಟಾಗ ನಿಂಗಪ್ಪ ಜೋಗಿ ಮುಖದಲ್ಲಿ ಮಿ೦ಚು ಮೂಡುತ್ತಿತ್ತು.
ಆಗೆಲ್ಲ ನಿಂಗಪ್ಪ ಜೋಗಿ ಹೆಚ್ಚು ಹಾಡು ಹಾಡಿ ನಮ್ಮನ್ನ ರಂಜಿಸಬೇಕಿತ್ತು.
ಕಳೆದ ವಷ೯ ಅವರ ಸಂಬಂದಿಯೋಬ್ಬರನ್ನ ನಿಂಗಪ್ಪ ಜೋಗಿ ಬಗ್ಗೆ ಕೇಳಿದಾಗ ವಯಸ್ಸಾಗಿದೆ, ತಿರುಗಾಟ ಕಡಿಮೆ ಅಂದರು.
ಹಾಗಾದರೆ ಕಲಾವಿದರ ಮಾಷಾಸನ ಬರುತ್ತಾ? ಅ೦ದರೆ "ಎಲ್ಲಿ ಸಾರ್ ಅವರು ಕೇಳಿದಷ್ಟು ಹಣ ಕೊಡೋಕೆ ಆಗಿಲ್ಲ ಅದಕ್ಕೆ ಅವರು ನಮಗೆ ಇಲ್ಲದಿದ್ದೆಲ್ಲ ದಾಖಲೆ ಕೇಳತಾರೆ" ಅಂದಿದ್ದರು.
ನಿಂಗಪ್ಪ ಜೋಗಿಯವರಿಗೆ 2016ರಲ್ಲಿ ಕನಾ೯ಟಕ ಸಕಾ೯ರ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು, ಪ್ರಶಸ್ತಿ ಫಲಕಗಳೊಂದಿಗೆ ಬಂದು ನನಗೆ ತೋರಿಸಿ "ಸ್ವಾಮಿ ನೀವೇ ನನಗೆ ಮೊದಲಿಗೆ ಪ್ರಚಾರ ನೀಡಿದವರು" ಅ೦ದಾಗ ನನಗೂ ಸಂತೋಷ ಆಯಿತು.
ಮೊದಲೆಲ್ಲ ಈ ಪ್ರಶಸ್ತಿ ನೋಡಿದರೆ ವಾಕರಿಕೆ ಬರುತ್ತಿತ್ತು ಆದರೆ ಅವತ್ತು ನಮ್ಮ ನಿಂಗಪ ಜೋಗಿಯಿ೦ದ ಈ ಪ್ರಶಸ್ತಿಗೆ ಬೆಲೆ ಬಂತು ಅನ್ನಿಸಿತು.
Comments
Post a Comment