Blog number 1008. ದಕ್ಷಿಣ ಗೋವಾದಿಂದ ಉತ್ತರ ಕನ್ನಡ ಜಿಲ್ಲೆಗೆ ವಲಸೆ ಬಂದ ಹಬ್ಬು ಕುಟುಂಬದ ಕನ್ನಡ ಸಾಹಿತ್ಯ ಕ್ಷೇತ್ರದ ಸಾದನೆ ಗಿನ್ನೆಸ್ ದಾಖಲೆಗೆ ಸೇರುವಂತದ್ದು ಬಹುಶಃ ಒಂದು ಕುಟುಂಬದಲ್ಲಿ ಸ್ವತಃ ತಂದೆ ಮತ್ತು ಅವರ ಆರೂ ಮಕ್ಕಳು ಸಾಹಿತಿಗಳಾಗಿ ನೂರಾರು ಪುಸ್ತಕ ಪ್ರಕಟಿಸಿರುವುದು ಭಾರತದಲ್ಲೇ ಅಪರೂಪ ಅಂತಹ ಬೇರಾವುದೇ ಕುಟುಂಬದ ಮಾಹಿತಿ ಇಲ್ಲ.
#ಒ೦ದೇ_ಕುಟುಂಬದ_ಎಲ್ಲರೂ_ಸಾಹಿತ್ಯ_ಕ್ಷೇತ್ರದ_ಅತಿರಥ_ಮಹಾರಥರು
#ಬಹುಶಃ_ಕನ್ನಡ_ಸಾಹಿತ್ಯ_ಕ್ಷೇತ್ರದಲ್ಲೇ_ಬಲು_ಅಪರೂಪದ_ಕುಟುಂಬ
#ಗೋವಾದಿಂದ_ವಲಸೆ_ಬಂದ_ಹಬ್ಬು_ವಂಶಸ್ಥರು.
#ಗಿನ್ನೆಸ್_ದಾಖಲೆಗೆ_ಇವರ_ಸಾಧನೆ_ಸೇರಿಸಬೇಕು
ಹುಬ್ಬು ವಂಶಸ್ಥರ ಬೇರುಗಳು ದಕ್ಷಿಣ ಗೋವಾ ಮೂಲದವರು, ಹಬ್ಬು ವಂಶವನ್ನೆ ನಿರ್ವಂಶ ಮಾಡುವ ಸ್ವಾತಂತ್ರ್ಯ ಪೂರ್ವದ ಚಿತಾವಣೆಯಲ್ಲಿ ತಪ್ಪಿಸಿಕೊಂಡು ವಲಸೆ ಬಂದವರು ಎಂಬ ಇತಿಹಾಸ ಇರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿದ ಹಬ್ಬು ವಂಶದ ಶ್ರೀ ಸುಗುಣ ಶಂಕರ ಹಬ್ಬು ಮತ್ತು ಶ್ರೀಮತಿ ಕುಸುಮಾ ಬಾಯಿ ದಂಪತಿಗಳಿಗೆ ಆರು ಪುತ್ರರು.
ಸುಭಾಷ್ ಚಂದ್ರ ಹುಬ್ಬು, ಎರಡನೆ ಮೋಹನ ದಾಸ್ ಹಬ್ಬು, ಮೂರನೆಯವರು ರಾಮಚಂದ್ರ ಹಬ್ಬುರವರು, ನಾಲ್ಕನೆಯವರು ಅರುಣ ಕುಮಾರ್ ಹಬ್ಬು, ಐದನೆಯವರು ಉದಯ ಕುಮಾರ್ ಹಬ್ಬು ಮತ್ತು ಕೊನೆಯ ಆರನೇ ಪುತ್ರ ಜಯಪ್ರಕಾಶ್ ಹಬ್ಬು.
ಇವರ ಮೊದಲ ಪುತ್ರ ದಿವಂಗತ ಸುಬಾಷ್ ಚಂದ್ರ ಹಬ್ಬು ಸಾಗರದಲ್ಲಿ ಅದ್ಯಾಪಕರಾಗಿ ಇಲ್ಲೇ ಅಂತಿಮ ದಿನ ಕಳೆದವರು ಇವರ ಆತ್ಮವೃತ್ತಾಂತ #ವ್ಯಕ್ತ ಪ್ರಕಟವಾಗಿದೆ.
#ಕವನ_ಸಂಕಲನಗಳು: 1.ತೆಂಕನ ಹಸಿರು ನಿಶಾನೆ. 2.ಕುಸುರಿಯೊಳಗೊಂದು ಕಸರು. 3. ಲಾಘವದ .4.ನಾಗ ಮುರಿ.
#ಕಥಾ_ಸಂಕಲನಗಳು: 1.ವೈಶಾಖದ ಮಳೆ 2. ವೃತ್ತದೊಳಗೊಂದು ವೃತ್ತ 3. ಸತಯದ ಕದಪಿಗೆ ಸುಳ್ಳಿನ ಮಚ್ಚೆ.
#ನಾಟಕ: 1.ಕರ್ಣ 2. ಸಾವ ಸುತ್ತ (ಬೀದಿ ನಾಟಕ) 3. ಏಕಲವ್ಯ ಮತ್ತು ಇತರ ಏಕಾಂಕಗಳು 4. ಉತ್ತರಣ (ಹವಿಗನ್ನಡ ನಾಟಕ ) 5. ಆ ಕರಾಳ ರಾತ್ರಿ (ಚಲನಚಿತ್ರ ಆಗಿದೆ).
#ವಿಜ್ಞಾನ : 1. ಬೆಳಕು (ವೈಜ್ಞಾನಿಕ ವಿವೇಚನೆ) 2. ವಿಜ್ಞಾನದ ಸಂಕತನಗಳು.
#ಅನುವಾದ:1.ಏಕಾಂಕ ಪಂಚಕ (ಐದು ಏಕಾಂಕ ನಾಟಕಗಳ ಸಂಕಲನಗಳು) 2. ಕನ್ನಡದಲ್ಲಿ ಉರ್ದು ಶಾಯರಿಗಳು 3. ನಿದಾನಸಿ ಕಾಯ (ಬೌದ್ದ ಧರ್ಮಗ್ರಂಥ ಮೂಲ - ಪಾಳಿ / ಇಂಗ್ಲೀಷ್) 4.ಒಂದು ಕತ್ತೆಯ ಕಥೆ (ಮೂಲ ಮರಾಠಿ).
#ವಿಚಾರ_ವಿಮರ್ಶೆ: 1. ಚುಟುಕು ಪ್ರಪಂಚ 2. ಚಿತ್ರ ಮಾಲೆ 3. ಅನುಸ್ವರ -
#ಪ್ರಬಂದ:A Case study of a rural college.
#ಸಂಪಾದನೆ: 1. ಮುಸ್ಸಂಜೆಯ ಆಲಾಪ (ಆತ್ಮಕಥನ) 2. ಉತ್ತರ ಕನ್ನಡದ ಕವನಗಳು 3. ಹಿಂಗಾರ (ಏಕಾಂಕ ನಾಟಕಗಳು) 4. ನುಡಿಸುಗ್ಗಿ (ಅಂಕೋಲ ತಾಲ್ಲೂಕ್ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ) 5. ವಜ್ರ ಕವಚ (ಅಂಕೋಲೆಯ ಕನಾ೯ಟಕ ಸಂಘದ ವಜ್ರ ಮಹೋತ್ಸವದ ಸ್ಮರಣ ಸಂಚಿಕೆ) 6. ಸಾಹಿತ್ಯ ದೀವಿಗೆ (18 ನೆ ಉ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ) 7. 80 ರ ಪಯಣ (ಡಾ.ಬಿ.ಎ. ಸನದಿಯವರ ಅಭಿನಂದನಾ ಗ್ರಂಥ) 8. ವ್ಯಾಸ ದೇಶಪಾಂಡೆ ಅವರ ಸಮಗ್ರ ನಾಟಕಗಳು.
#ತರಂಗಿಣಿ: ಮೋಹನದಾಸ ಹಬ್ಬುರವರ ಬದುಕು ಬರಹ
ಸಂ: ಹುಳಗೋಳ ನಾಗಪತಿ ಹೆಗಡೆ, ದೇವದಾಸ ಸುವರ್ಣ.
ತೃತೀಯ ಪುತ್ರ ರಾಮಚಂದ್ರ ಹಬ್ಬು ಅವರು ಬರೆದು ಪ್ರಕಟಿಸಿದ ಕೃತಿ #ಗಾಂಧೀ_ಜೀವನ_ಚರಿತ್ರೆ (ಬಿ.ಆರ್. ನಂದಾ ಅವರ ಇಂಗ್ಲೀಷ್ ಅನುವಾದ)
ನಾಲ್ಕನೆ ಪುತ್ರ ಅರುಣ ಕುಮಾರ್ ಹಬ್ಬು ಅವರು ಬರೆದು ಪ್ರಕಟಿಸಿದ ಕೃತಿಗಳು 1. #ಪತ್ರಿಕೋಧ್ಯಮದ_ತ್ರಿವಿಕ್ರಮ (ಡಿವಿಜಿ ಕುರಿತು). 2.#ನೀವು_ಉತ್ತಮ_ಸಂದಶ೯ಕಲಾಗುವಿರಾ (ಸಾಹಿತ್ಯ ಪ್ರಕಾಶನ) 3.#ವೈವಿಧ್ಯ_ಕಲಾ_ನಿದಿ_ಗೋಪಾಲಕೃಷ್ಣನಾಯಕ (ಜೀವನ ಚರಿತ್ರೆ ) 4.#ಸುದ್ದಿ_ಜಗದಗಲ_ಮುಗಿಲಗಲ (ಮಾಧ್ಯಮ ಅಕಾಡೆಮಿ) 5.#ಮಹಿಳೆ_ಮತ್ತು_ಮಾಧ್ಯಮ (ಆದಿತ್ಯ ಪ್ರಕಾಶನ) 6.#ಅಂಗುತ್ತರ_ನಿಕಾಯ (ಅನುವಾದ ಮಾಹಾ ಬೋದಿ ಸೊಸೈಟಿ 7.#ಬೊಗಸೆ_ನೀರು ( ಆತ್ಮನಿವೇದನೆ - ವಿಕಾಸ ಪ್ರಕಾಶನ).
#ಪ್ರಕಟವಾದ_ಪುಸ್ತಕಗಳು
ಬಿಟ್ಟೇನೆಂದರೂ ಬಿಡದಿ ಮಾಯೆ(ದ್ರೋಣ ಮತ್ತು ಏಕಲವ್ಯ ಕುರಿತು)
ವಿದುರ ಪರ್ವ (ವಿದುರನ ಸಮಗ್ರ ಬದುಕಿನಕುರಿತು ಕಾದಂಬರಿ)
ದ್ರೋಣಲವ್ಯ. ಮಹಾಭಾರತದ ಏಕಲವ್ಯನ ಕುರಿತು ಹೊಸ ವ್ಯಾಖ್ಯಾನದ ಕತೆ
ವಿಮರ್ಶೆ ಗ್ರಂಥಗಳು
ಪುಸ್ತಕ ಪ್ರೀತಿ
ಮೊದಲ ಕಲ್ಲು,..
ದೇವನೂರು ಮಹಾದೇವರ ಕತೆಗಳು ಕಾದಂಬರಿಗಳು- ಒಂದು ವಿಶ್ಲೇಷಣೆ
ಜಂಬು ಜೋಂಕಿಣಿ- ವಡ್ಡಗೆರೆ ನಾಗರಾಜಯ್ಯ ಅವರ "ಆಸಾದಿ" ಖಂಡ ಕಾವ್ಯದ ವ್ಯಾಖ್ಯಾನ
#ಕವಿತಾ_ಸಂಕಲನಗಳು
೧. ಅನ್ವೇಷಣೆ
೨. ರಥೋತ್ಸವ
೩. ನನ್ನದೆ ಆಕಾಶ ನನ್ನದೆ ರೆಕ್ಕೆ
#ಸಂಶೋಧನೆ
ನಾಥಪಂಥ -ಸಿದ್ಧಾಂತಗಳು ಮತ್ತು ಅಚರಣೆಗಳು
ಬೌದ್ಧ ಗ್ರಂಥಗಳು
ಬುದ್ಧತ್ವ -ಸಂತೋಷಕ್ಕೆ ಒಂದೆ ದಾರಿ
ವಿಪಶ್ಶನ -ಅರಿವಿನ ದಾರಿ
ಭಗವಾನ್ ಬುದ್ಧ- ಬದುಕು ಮತ್ತು ಬೋಧನೆಗಳು
ನಾಗಾರ್ಜುನ,-ಜೀವನ ಚರಿತ್ರೆ ಮತ್ತು ತತ್ವಗಳು
ಶೂನ್ಯತೆಯ ಶೂನ್ಯತೆ- ಚಂದ್ರಕೀರ್ತಿ ಮತ್ತು ನಾಗಾರ್ಜುನ- ಒಂದು ತಾತ್ವಿಕ ಅನುಸಂಧಾನ
ಬೌದ್ಧ ಧ್ಯಾನ- ಮಾನಸಿಕ ಒತ್ತಡಗಳಿಗೆ ನಿವಾರಣೆ
ಅಂಗುತ್ತರ ನಿಕಾಯ ತಿಕಣಿ ಪಾತಳಿ
ಪಾಲಿಭಾಷೆಯಿಂದ ಕನ್ನಡಕ್ಕೆ ಅನುವಾದ
ರೂಮಿ ಕವಿತೆ- ಅನುವಾದಿತ ಕವನಗಳು
ಬಸವಣ್ಣ ಮತ್ತು ನಾರಾಯಣ ಗುರು- ತೌಲನಿಕ ಅಧ್ಯಯನ
ಬಸವಣ್ಣ ಮತ್ತು ದಯಾನಂದ ಸರಸ್ವತಿ- ತೌಲನಿಕ #
ಬಸವಣ್ಣ ಮತ್ತು ಕನ್ಫ್ಯೂಷಿಯಸ್- ತೌಲನಿಕ ಅಧ್ಯಯನ
ಬಸವಣ್ಣ ಮತ್ತು ಜಾಗತಿಕ ದರ್ಶನಗಳು ತೌಲನಿಕ ಅಧ್ಯಯನ
ಪ್ರಾಚೀನ ಭಾರತೀಯ ತತ್ವದರ್ಶನಗಳು
ಯೋಗ ಮತ್ತು ತಂತ್ರ
ವಾಸ್ತು ಫೆಂಗಶ್ಯೂಯಿ- ಒಂದು ತೌಲನಿಕ ಅಧ್ಯಯನ
ಕಪ್ಪು ದೇವತೆ- ಸಾಮಾಜಿಕ ಕಾದಂಬರಿ
#ಕಥಾ_ಸಂಕಲನಗಳು
೧. ಸಂಬಂಧಗಳು
೨. ಕಣ್ಣುಗಳು
೩. ಬಿಳಿ ಕಾಗೆ ಮತ್ತು ಇತರ ಕತೆಗಳು
.೪. ಮುಸ್ಸಂಜೆಯ ಕತೆಗಳು
ವ್ಯಕ್ತಿತ್ವ ವಿಕಸನ ಗ್ರಂಥಗಳು
೧. ಯಶಸ್ವಿ ಜೀವನದ ರಹಸ್ಯ.
೨. ನಿಮ್ಮ ಹಣ ನಿಮ್ಮ ಕೈಯಲ್ಲಿ
ಮಕ್ಕಳ ಸಾಹಿತ್ಯ
೧ಕಪ್ಪೆ ರಾಜಕುಮಾರಿ ಮತ್ತು ಇತರ ಕತೆಗಳು
೨ ಲುಂಡೀರಿಯಾ- ಮಕ್ಕಳ ಕಾದಂಬರಿ
ಜಾನಪದ
ಭೂಮಿಯ ಸುತ್ತ
ಈಶಾನ್ಯ ಗಡಿ ರಾಜ್ಯಗಳ ಜಾನಪದ ಕತೆಗಳು...
ಶಿಕ್ಷಣ- ಶಿಕ್ಷಣ ತಜ್ಞರ ಅಭಿಪ್ರಾಯಗಳ ಒಂದು ಚಿಂತನೆ
#ಇಂಗ್ಲೀಷ್_ನಲ್ಲಿ
Niyoga ಮತ್ತು Lingering Illusions- ಇದು ತ್ಯಕ್ತ ಕಾದಂಬರಿಯ ಅನುವಾದ.
ಕನ್ನಡಿ- ಇದು ಮೊದಲ ಕಲ್ಲು ಪುಸ್ತಕದ ಬಗ್ಗೆ ವಿವಿಧ ಲೇಖಕರು ಬರೆದ ವಿಮರ್ಶಾ ಬರಹಗಳ ಸಂಗ್ರಹ
ಅಚ್ಚಿನಲ್ಲಿ ಬಸವಣ್ಣ ಮತ್ತು ಕನಕದಾಸ
ಕೊನೆಯ ಮುಘಲ್ ಸಾಮ್ರಾಟನ ಅಂತಿಮ ದಿನಗಳು
ನನ್ನದೆ ಆಕಾಶ ಮತ್ತು ನನ್ನದೆ ರೆಕ್ಕೆಗಳು
ಸಿಟ್ಟಿಂಗ್ ಬುಲ್- ಅನುವಾದಿತ ಜನಾಂಗೀಯ ಅಧ್ಯಯನ
ದಾರಾ ಶುಕೊಹ್ ನ ಕನಸುಗಳು ಐತಿಹಾಸಿಕ ಕಾದಂಬರಿ.
"ಬೆಳಕು ಮಾರುವ ಹುಡುಗ" ಕವಿತಾ ಸಂಕಲನ.
ಅಚ್ಚಿನಲ್ಲಿ ಬಸವಣ್ಣ ಮತ್ತು ಕನಕದಾಸ
ಕೊನೆಯ ಮುಘಲ್ ಸಾಮ್ರಾಟನ ಅಂತಿಮ ದಿನಗಳು
ನನ್ನದೆ ಆಕಾಶ ಮತ್ತು ನನ್ನದೆ ರೆಕ್ಕೆಗಳು
ಸಿಟ್ಟಿಂಗ್ ಬುಲ್- ಅನುವಾದಿತ ಜನಾಂಗೀಯ ಅಧ್ಯಯನ
ದಾರಾ ಶುಕೊಹ್ ನ ಕನಸುಗಳು ಐತಿಹಾಸಿಕ ಕಾದಂಬರಿ.
"ಬೆಳಕು ಮಾರುವ ಹುಡುಗ" ಕವಿತಾ ಸಂಕಲನ.
#ಪ್ರಶಸ್ತಿಗಳು
೧. ರಾಜ್ಯಮಟ್ಟದ ಉತ್ತಮ ಕಥೆಗೆ ಪ್ರಥಮ ಪ್ರಶಸ್ತಿ- ಮೈಸೂರು ಮಕ್ಕಳ ಸಂಗಮ
೨. ರಾಜ್ಯಮಟ್ಟದ ಪ್ರಥಮ ಪ್ರಶಸ್ತಿ ಸಣ್ಣ ಕಥೆಗೆ- ಅವಸ್ಥೆ- ಹಣತೆ ವೇದಿಕೆ,ಹೊನ್ನಾವರ
೩. ರಾಜ್ಯಮಟ್ಟದ ಕವಿತಾ ಸ್ಪರ್ಧೆಯಲ್ಲಿ ತುಮುಕೂರಿನ ಜನ ಮಿತ್ರ ಪತ್ರಿಕೆಯ ಆಶ್ರಯದಲ್ಲಿ ನಡೆದದ್ದು ಪ್ರಥಮ ಪ್ರಶಸ್ತಿ
೪. ಕಾಂತಾವರ ಕನ್ನಡ ಸಂಘ- ಸಾಹಿತ್ಯ ಪುರಸ್ಕಾರ
೫. ಸಿದ್ದರಾನ ಹೊನ್ಕಲ್ ರಾಜ್ಯ ಪ್ರಶಸ್ತಿ. ಬೊಪ್ಪ ನನ್ನನ್ನು ಕ್ಷಮಿಸು- ಆತ್ಮಚರಿತ್ರೆ ಗಾಗಿ
ದೇವನೂರು ಮಹಾದೇವರ ಕತೆಗಳು ಮತ್ತು ಕಾದಂಬರಿಗಳು- ಒಂದು ಅವಲೋಕನ- ವಿಮರ್ಶೆ ಕೃತಿಗೆ, ಬೆಂಗಳೂರು ಕಲಾ ಸಾಂಸ್ಕೃತಿಕ ಸಾಹಿತ್ಯ ಸಾಮಾಜಿಕ ವೇದಿಕೆ, ಚಾಮರಾಜ ಪೇಟೆ, ಇವರಿಂದ ರಾಜ್ಯಮಟ್ಟದ ಪ್ರಶಸ್ತಿ
ಕಪ್ಪು ದೇವತೆ ಕಾದಂಬರಿಗೆ ೨೦೦೦ ನ ವರ್ಷದ ಯುವ ಕಾದಂಬರಿಕಾರ ಪ್ರಶಸ್ತಿ- ಉದಯವಾಣಿ
ಮಿಂಚುಳ್ಳಿ ಪ್ರಕಾಶನ- ಉತ್ತಮ ರಾಜ್ಯಮಟ್ಟದ ಕವಿತಾ ಪ್ರಶಸ್ತಿ
ಮಕ್ಕಳ ಸಾಹಿತ್ಯ ಅಕಾಡೆಮಿ ಇವರ ಹಿರಿಯರು ಬರೆದ ಮಕ್ಕಳ ಕಥಾ ಪ್ರಶಸ್ತಿ.
#ನೆನಪಿನ_ಜರಡಿಯಲ್ಲಿ.
ಇಡೀ ಕುಟುಂಬದ ಈ ಪುಸ್ತಕಗಳೆ ಒಂದು ಸಣ್ಣ ಗ್ರಂಥಾಲಯವಾದೀತು ಇಷ್ಟೇ ಅಲ್ಲ ಇವರುಗಳು ಬರೆದ ಅನೇಕ ಲೇಖನಗಳು ದಿನ ಪತ್ರಿಕೆ - ವಾರಪತ್ರಿಕೆ - ಮಾಸ ಪತ್ರಿಕೆಗಳಲ್ಲೂ ಪ್ರಕಟವಾಗಿದೆ.
ಈ ವಿಶೇಷ ಕುಟುಂಬದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬೇಕು ಮತ್ತು ಈ ಕುಟುಂಬದ ಸಾದನೆ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿ ಈ ಸಾಧನೆಯನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಿಸಲೇಬೇಕು.
Comments
Post a Comment